ಶಂಕು ಎನ್ನುವುದು ಸರಳರೇಖೆಯ (l) ಒಂದು ಕೊನೆ (V) ಸ್ಥಿರವಾಗಿದ್ದು ಇನ್ನೊಂದು ಕೊನೆ V ಯನ್ನು ಒಳಗೊಳ್ಳದ ಸ್ಥಿರ ಸಂವೃತ ಸಮತಲೀಯ ವಕ್ರರೇಖೆಯೊಂದರ (fixed closed planar curve) (S) ಮೇಲೆ ಮುಕ್ತವಾಗಿ ಸರಿಯುತ್ತಿರುವಾಗ ಆ ಚರರೇಖೆ ರೂಪಿಸುವ ಮೂರು ಆಯಾಮಗಳ ಆಕೃತಿ (ಕೋನ್). l ಗೆ ಶಂಕುವಿನ ಜನಕರೇಖೆ (generating line) ಅಥವಾ ಸರಳವಾಗಿ ಜನಕ ಎಂದೂ, V ಗೆ ಶೃಂಗವೆಂದೂ, S ಗೆ ತಳವೆಂದೂ (base) ಹೆಸರು. ವಾಸ್ತವವಾಗಿ ಜನಕಗಳನ್ನು ಶೃಂಗದ ಉಭಯ ಪಾರ್ಶ್ವಗಳಲ್ಲಿಯೂ ವಿಸ್ತರಿಸಬಹುದು. ಹೀಗೆ ಮಾಡಿದಾಗ ದೊರೆಯುವ ಆಕೃತಿ ಪರಿಪೂರ್ಣ ಶಂಕು (ಕಂಪ್ಲೀಟ್ ಕೋನ್).

ಲಂಬವೃತ್ತೀಯ ಶಂಕು

ಈಗ S ಒಂದು ವೃತ್ತವೂ O ಇದರ ಕೇಂದ್ರವೂ ಆಗಿರಲಿ. O ನಲ್ಲಿ S ಗೆ ಎಳೆದ ಲಂಬ V ಯನ್ನು ಒಳಗೊಂಡಿರಲಿ. ಈ ಸಂದರ್ಭದಲ್ಲಿ ದೊರೆಯುವ ವಿಶಿಷ್ಟ ಆಕೃತಿಯೇ ಲಂಬವೃತ್ತೀಯ ಶಂಕು (ರೈಟ್ ಸರ್ಕ್ಯುಲರ್ ಕೋನ).[] OV ಇದರ ಅಕ್ಷ (axis). ಈ ಶಂಕು ತನ್ನ ಅಕ್ಷ ಕುರಿತಂತೆ ಸಮಮಿತೀಯವಾಗಿದೆ (ಸಿಮೆಟ್ರಿಕಲ್).

ಈ ಮೇಲಿನ ಚಿತ್ರದಲ್ಲಿ S=ವೃತ್ತ, O=ವೃತ್ತಕೇಂದ್ರ, V=ಶೃಂಗ, l=ಜನಕರೇಖೆ

ದೀರ್ಘವೃತ್ತರೂಪದ ಶಂಕು

ಮೇಲಿನ ಚಿತ್ರದಲ್ಲಿ ತಳ ಒಂದು ದೀರ್ಘವೃತ್ತವಾಗಿದೆ. S=ಸಮತಲೀಯ ವಕ್ರರೇಖೆ, V=ಶೃಂಗ, A,B,C,D ಇದರ ಪರಿಧಿ ಮೇಲಿನ ಕೆಲವು ಬಿಂದುಗಳು, VA,VB,VC,VD ಕೆಲವು ಜನಕ ರೇಖೆಗಳು.

ಉಲ್ಲೇಖಗಳು

ಬದಲಾಯಿಸಿ
  1. James, R. C.; James, Glenn (1992-07-31). The Mathematics Dictionary (in ಇಂಗ್ಲಿಷ್). Springer Science & Business Media. pp. 74–75. ISBN 9780412990410.


ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಶಂಕು&oldid=1232059" ಇಂದ ಪಡೆಯಲ್ಪಟ್ಟಿದೆ