ಸರಳರೇಖೆಯು ಎರಡು ಬಿಂದುಗಳನ್ನು ಜೋಡಿಸುವ ಕನಿಷ್ಠ ದೀರ್ಘತೆಯ ರೇಖೆ (ಸ್ಟ್ರೇಟ್ ಲೈನ್). ಛೇದಿಸುವ ಎರಡು ಸಮತಲಗಳ ಸಾಮಾನ್ಯ ರೇಖೆ. ಸಂಧಿಸುವ ಎರಡು ಸರಳರೇಖೆಗಳು (l,m) ನಾಲ್ಕು ಪ್ರತ್ಯೇಕ ಕೋನಗಳನ್ನು ರಚಿಸುವುದು ಸರಿಯಷ್ಟೆ: u, v, w, x. ಇಲ್ಲಿ u = w, v = x.

see caption
ಎರಡು ಆಯಾಮದ ಕಾರ್ಟೀಸಿಯನ್ ನಿರ್ದೇಶಾಂಕ ವ್ಯವಸ್ಥೆಯಲ್ಲಿ ಮೂಲಬಿಂದುವಿನ ಹತ್ತಿರ ಒಂದು ಕೆಂಪು ಸರಳರೇಖೆ
ಚಿತ್ರ 1


ಇವುಗಳಿಗೆ ಶಿರೋಅಭಿಮುಖ ಕೋನಗಳೆಂದು (ವರ್ಟಿಕಲ್ಲಿ ಆಪೊಸಿಟ್ ಆ್ಯಂಗಲ್ಸ್) ಹೆಸರು.[] ಅಲ್ಲದೇ ಇಲ್ಲಿ ಯಾವುವೇ ಒಂದು ಜೊತೆ ಆಸನ್ನ ಕೋನಗಳ ಮೊತ್ತ 1800 - ಇದರ ಹೆಸರು ಸರಳಕೋನ.[] u + v = u + x =  v + w = w + x = 1800. ಆದ್ದರಿಂದ u, v; u, x; v, w; w, x ಜೊತೆಗಳನ್ನು ಸರಳಪೂರಕ ಕೋನಗಳು (ಸಪ್ಲಿಮೆಂಟರಿ ಆ್ಯಂಗಲ್ಸ್) ಎನ್ನುತ್ತೇವೆ.[]

ಉಲ್ಲೇಖಗಳು

ಬದಲಾಯಿಸಿ
  1. Wong & Wong 2009, pp. 161–163
  2. Moser 1971, p. 41.
  3. "Supplementary Angles". www.mathsisfun.com. Retrieved 2020-08-17.

ಗ್ರಂಥಸೂಚಿ

ಬದಲಾಯಿಸಿ
  • Wong, Tak-wah; Wong, Ming-sim (2009), "Angles in Intersecting and Parallel Lines", New Century Mathematics, vol. 1B (1 ed.), Hong Kong: Oxford University Press, pp. 161–163, ISBN 978-0-19-800177-5
  • Moser, James M. (1971), Modern Elementary Geometry, Prentice-Hall
"https://kn.wikipedia.org/w/index.php?title=ಸರಳರೇಖೆ&oldid=1231924" ಇಂದ ಪಡೆಯಲ್ಪಟ್ಟಿದೆ