ವೈ.ಸಿ.ಭಾನುಮತಿ

ಭಾರತೀಯ ಸಂಶೋಧಕಿ, ಸಂಪಾದಕಿ

ವೈ.ಸಿ.ಭಾನುಮತಿ ಕನ್ನಡ ಭಾಷೆಯ ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ , ಗ್ರಂಥ ಸಂಪಾದನೆ[೧] ಹಾಗೂ ಸಂಶೋಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಮಹತ್ದ ಸಾಧನೆ ಮಾಡಿದ್ದಾರೆ.

ಜನನ ಬದಲಾಯಿಸಿ

ಇವರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಎಂಬ ಊರಿನಲ್ಲಿ. ತಂದೆ ವೈ.ಬಿ. ಚೆನ್ನೇಗೌಡರು, ತಾಯಿ ಎಚ್.ಎಸ್. ಜಯಮ್ಮನವರ ಮಗಳಾಗಿ ಜನಿಸಿದರು.

ಶಿಕ್ಷಣ ಬದಲಾಯಿಸಿ

ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಬೇಲೂರಿನ ಸರಕಾರಿ ಪಾಠಶಾಲೆಯಲ್ಲಿ. ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ.ಎಸ್‌ಸಿ. ಹಾಗೂ ಮಂಗಳೂರಿನ ಮಂಗಳ ಗಂಗೋತ್ರಿಯಿಂದ ಪಡೆದ ಎಂ.ಎ. ಪದವಿ, ‘ಕನ್ನಡದಲ್ಲಿ ವರ್ಧಮಾನ ಸಾಹಿತ್ಯ’ ಪ್ರೌಢಪ್ರಬಂಧ ರಚಿಸಿ ಆ.ನೇ.ಉಪಾಧ್ಯೆ ಚಿನ್ನದ ಪದಕದೊಡನೆ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್. ಡಿ. ಪದವಿ ವಿಜ್ಞಾನದಲ್ಲಿ ಬಿ.ಎಸ್‌ಸಿ ಪದವಿಯಾದರೂ ಸ್ನೇಹಿತೆಯೊಬ್ಬಳ ಪತ್ರದಿಂದ ಪ್ರೇರಿತರಾಗಿ ಕನ್ನಡ ಸಾಹಿತ್ಯದತ್ತ ಆಸಕ್ತಿ ವಹಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ನಂತರ ಸಂಶೋಧನೆ ಹಾಗೂ ಗ್ರಂಥ ಸಂಪಾದನ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಸಂಪಾದಿಸಿದ್ದು ಹಲವಾರು ಹಳಗನ್ನಡದ ಕೃತಿಗಳು.

ಉದ್ಯೋಗ ಬದಲಾಯಿಸಿ

ಉದ್ಯೋಗಕ್ಕೆ ಸೇರಿದ್ದು ಮೈಸೂರು ವಿಶ್ವವಿದ್ಯಾಲಯಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥ ಸಂಪಾಧನ ವಿಭಾಗದಲ್ಲಿ. ಮೊದಲ ದರ್ಜೆಯ ಸಂಶೋಧನ ಸಹಾಯಕಿಯಾಗಿ ಕಾರ‍್ಯ ನಿರ್ವಹಣೆ.

ಪಿ.ಎಚ್.ಡಿ ಮಹಾಪ್ರಬಂಧ ಬದಲಾಯಿಸಿ

  • ಕನ್ನಡದಲ್ಲಿ ವರ್ಧಮಾನ ಸಾಹಿತ್ಯ

ಸಂಪಾದಿತ ಕೃತಿಗಳು ಬದಲಾಯಿಸಿ

  1. ವಿಜಯ ಕುಮಾರಿ ಚರಿತೆ
  2. ಷಟ್ಟ್ಸ್ಥಲ ತಿಲಕ
  3. ಪುರಾತನರ ಚರಿತೆ
  4. ಏಕೋ ರಾಮೇಶ್ವರ ಪುರಾಣ
  5. ಕನ್ನಡ ಶ್ರಾವಕಾಚಾರ ಗ್ರಂಥಗಳು,
  6. ಸೌಂದರ್ಯ ಕಾವ್ಯ,
  7. ಮಡಿವಾಳೇಶ್ವರ ಕಾವ್ಯ,
  8. ಬಸವ ಮಹತ್ವದ ಸಾಂಗತ್ಯ,
  9. ಅರಸರ ಚರಿತ್ರೆಗಳು,
  10. ಸಹ್ಯಾದ್ರಿ ಖಂಡ
  11. ಮಡಿವಾಳೇಶ್ವರರ ಲಘುಕೃತಿಗಳು

ಜಾನಪದ ಕೃತಿಗಳು ಬದಲಾಯಿಸಿ

  1. ಇಬ್ಬೀಡಿನ ಜನಪದ ಕಥೆಗಳು,
  2. ಮಲೆನಾಡ ಶೈವ ಒಕ್ಕಲಿಗರು,
  3. ಬತ್ತೀಸ ಪುತ್ತಳಿ ಕಥೆ
  4. ಜಾನಪದೀಯ ಅಧ್ಯಯನ,
  5. ಜಾನಪದ ಭಿತ್ತಿ,
  6. ಜನಪದ ಅಡುಗೆ[೨],
  7. ಜಾನಪದ ಆಂತರ್ಯ
  8. ಮಕ್ಕಳ ಹಾಡುಗಳು,

ನಾಟಕ ಬದಲಾಯಿಸಿ

  1. ಚಂದ್ರಹಾಸನ ಕಥೆ,

ಸ್ವತಂತ್ರ ಕೃತಿಗಳು ಬದಲಾಯಿಸಿ

  1. ಆಲಿ ನುಂಗಿದ ನೋಟ,
  2. ಗ್ರಂಥ ಸಂಪಾದನೆಯ: ಕೆಲವು ಅಧ್ಯಯನಗಳು,
  3. ಗ್ರಂಥ ಸಂಪಾದನೆ ವಿವಕ್ಷೆ,
  4. ಗ್ರಂಥ ಸಂಪಾದನೆ ಎಳೆಗಳು,
  5. ಸಮಾಗತ.

ಶಿಶು ಸಾಹಿತ್ಯ ಬದಲಾಯಿಸಿ

  1. ವಿಕ್ರಮಾದಿತ್ಯನ ಸಿಂಹಾಸನ
  2. ಪುಟ್ಟ ಮಲ್ಲಿಗೆ ಹಿಡಿ ತುಂಬ

ಪ್ರಶಸ್ತಿ ಬದಲಾಯಿಸಿ

  1. ತೀ.ನಂ. ಶ್ರೀ ಸಂಶೋಧನಾ ಪ್ರಶಸ್ತಿ
  2. ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ
  3. ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ
  4. ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ,
  5. ಕನ್ನಡ ಸಾಹಿತ್ಯ ಪರಿಷತ್ತುನ ದತ್ತಿ ಬಹುಮಾನ
  6. ಫ.ಗು,ಹಳಕಟ್ಟಿ ಸಂಶೋಧನ ಪ್ರಶಸ್ತಿ,
  7. ಹ.ಕ.ರಾಜೇಗೌಡ ಗ್ರಂಥ ಸಂಪಾದನ ಪ್ರಶಸ್ತಿ[೩],
  8. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ
  9. ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ.

ನಿರ್ವಹಣೆ ಮಾಡಿದ ಹುದ್ದೆಗಳು ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. http://kanaja.in/?tribe_events=%E0%B2%A1%E0%B2%BE-%E0%B2%B5%E0%B3%88-%E0%B2%B8%E0%B2%BF-%E0%B2%AD%E0%B2%BE%E0%B2%A8%E0%B3%81%E0%B2%AE%E0%B2%A4%E0%B2%BF[ಶಾಶ್ವತವಾಗಿ ಮಡಿದ ಕೊಂಡಿ]
  2. http://www.kahale.gen.in/2016/11/20-Nov.html
  3. .https://www.prajavani.net/amp/district/bengaluru-city/datti-awards-660779.html
  4. https://www.udayavani.com/district-news/mysore-news/district-womens-literary-conference-is-tomorrow
  5. https://kannada.news18.com/news/state/government-released-presidents-and-members-appointed-for-various-academies-hk-267875.html