ವೃಷಭಾನು ಇವನನ್ನು ಬ್ರೂಷಭಾನು ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಇವನು ಯಾದವ ಮುಖ್ಯಸ್ಥ. [] [] [] ಇವನನ್ನು ರಾಧೆಯ ತಂದೆ ಎಂದು ಹೇಳಲಾಗುತ್ತದೆ. ರಾಧೆಯು ಕೃಷ್ಣ ದೇವರ ಮುಖ್ಯ ಪತ್ನಿ ಮತ್ತು ದ್ವಾಪರ ಯುಗದಲ್ಲಿ ಲಕ್ಷ್ಮಿ ದೇವಿಯ ಅವತಾರವೆಂದು ಪರಿಗಣಿಸಲಾಗಿರುತ್ತದೆ. [] []

ವೃಷಭಾನು
ಮಕ್ಕಳುರಾಧೆ
ಗ್ರಂಥಗಳುಪದ್ಮಪುರಾಣ, ಬ್ರಹ್ಮ ವೈವರ್ತ ಪುರಾಣ,
ಪ್ರದೇಶವ್ರಜ
ತಂದೆತಾಯಿಯರು
  • ವೃಷಭಾನು (ತಂದೆ)

ಪದ್ಮ ಪುರಾಣದಲ್ಲಿ, ವೃಷಭಾನು ಬರ್ಸಾನದ ಮುಖ್ಯಸ್ಥನಾಗಿರುತ್ತಾನೆ ಮತ್ತು ೧೦ ಲಕ್ಷ ಗೋವುಗಳ ಮಾಲೀಕರಾಗಿದ್ದನು. ರಾಜ ಸುಚಂದ್ರನಾಗಿ ತನ್ನ ಹಿಂದಿನ ಜನ್ಮದಲ್ಲಿ, ವೃಷಭಾನು, ದ್ವಾಪರ ಯುಗದಲ್ಲಿ ಲಕ್ಷ್ಮಿಯ ತಂದೆಯಾಗಲು ದೇವತೆಯಾದ ಬ್ರಹ್ಮನಿಂದ ವರವನ್ನು ಪಡೆದುಕೊಂಡನು ಎಂಬುದಾಗಿ ಹೇಳಲಾಗುತ್ತದೆ.[][]

ದಂತಕಥೆ

ಬದಲಾಯಿಸಿ

ವರಮಹಾಲಕ್ಷ್ಮಿ

ಬದಲಾಯಿಸಿ

ಅವನ ಹಿಂದಿನ ಜನ್ಮದಲ್ಲಿ, ವೃಷಭಾನುವಿಗೆ ಸುಚಂದ್ರ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಅವನು ದಕ್ಷ ಪ್ರಜಾಪತಿ ಅವರ ಮೊಮ್ಮಗಳಾದ ಕಲಾವತಿಯನ್ನು ವಿವಾಹವಾಗುತ್ತಾನೆ. ಕಲಾವತಿಯೊಂದಿಗೆ ದೀರ್ಘಕಾಲ ವೈವಾಹಿಕ ಸಂಬಂಧವನ್ನು ಹೊಂದಿದ್ದನು . ನಂತರದ ದಿನಗಳಲ್ಲಿ ಸುಚಂದ್ರನು ತನ್ನ ಕೌಟುಂಬಿಕ ಜೀವನದಿಂದ ನಿವೃತ್ತನಾಗಿ ಅಗಸ್ತ್ಯ ಋಷಿಯ ಆಶ್ರಮಕ್ಕೆ ತೆರಳಿದನು. ಆದರೆ ತನ್ನ ಪತಿಯಿಂದ ಪರಿತ್ಯಕ್ತಳಾದ ಕಾರಣ ಕಲಾವತಿ ಅಳಲು ಪ್ರಾರಂಭಿಸಿದಾಗ, ಬ್ರಹ್ಮನು ಆಕೆಗೆ ತನ್ನ ಮುಂದಿನ ಜೀವನದಲ್ಲಿ ತನ್ನ ಗಂಡನೊಂದಿಗೆ ಮರುಜನ್ಮ ಪಡೆಯುವುದಾಗಿ ವರವನ್ನು ನೀಡಿದನು. ಅವರಿಬ್ಬರಿಗೂ ಲಕ್ಷ್ಮಿ ದೇವಿ (ರಾಧೆ)ಯನ್ನು ತಮ್ಮ ಮಗಳಾಗಿ ಪಡೆಯುವ ವರವನ್ನು ನೀಡಿದನು.[]

ರಾಧೆಯ ತಂದೆ

ಬದಲಾಯಿಸಿ

ಬ್ರಹ್ಮನ ವರದ ಪ್ರಕಾರ, ರಾಜ ಸುಚಂದ್ರನು ದ್ವಾಪರ ಯುಗದ ಕಾಲದಲ್ಲಿ ವ್ರಜ ಭೂಮಿಯಲ್ಲಿ ರಾಜ ವೃಷಭಾನು ಆಗಿ ಮರುಜನ್ಮ ಪಡೆಯುತ್ತಾನೆ. ಆತನು ಕೀರ್ತಿದಾ (ಕಲಾವತಿ)ಳನ್ನು ವಿವಾಹವಾಗುತ್ತಾನೆ. ರಾಧೆ ಅವರ ಮಗಳಾಗಿ ಜನಿಸುತ್ತಾಳೆ.[][೧೦]

ಬೇರೆ ದಂತಕಥೆಯ ಪ್ರಕಾರ, ರಾಧೆಯ ಪುರ್ನಜನ್ಮದ ಕಥೆಯು ಲಕ್ಷ್ಮಿ ಮತ್ತು ಸೀತೆಯನ್ನು ಹೋಲುತ್ತದೆ.[೧೧] ರಾಜ ವೃಷಭಾನು ಕೊಳಕ್ಕೆ ಸ್ನಾನ ಮಾಡಲು ಹೋದಾಗ, ಆ ಕೊಳದಲ್ಲಿ ಕಮಲದ ಹೂವಿನ ಮೇಲೆ ಒಂದು ಹೆಣ್ಣು ಮಗುವನ್ನು ನೋಡುತ್ತಾನೆ ಹಾಗ ವೃಷಭಾನು ಆ ಹೆಣ್ಣು ಮಗುವನ್ನು ತನ್ನ ಮನೆಗೆ ಕರೆದುಕೊಂಡು ಬರುತ್ತಾನೆ. ಆ ಹೆಣ್ಣು ಮಗುವಿಗೆ ರಾಧಾ ಎಂದು ನಾಮಕರಣ ಮಾಡುತ್ತಾನೆ ಮತ್ತು ಅದನ್ನು ವೃಷಭಾನು ಮತ್ತು ಕೀರ್ತಿದಾ ತಮ್ಮ ಮಗಳಾಗಿ ಸ್ವೀಕರಿಸುತ್ತಾರೆ.[೧೨][೧೩]

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Trilochan Dash. Krishna Leeela in Brajamandal a Retrospect. Soudamini Dash. pp. 192–. GGKEY:N5C1YTUK5T3.
  2. R. K. Das (1990). Temples of Vrindaban. Sandeep Prakashan. ISBN 978-81-85067-47-6.
  3. The Vedanta Kesari. Sri Ramakrishna Math. 1970.
  4. Prakashanand Saraswati (2001). The True History and the Religion of India: A Concise Encyclopedia of Authentic Hinduism. Motilal Banarsidass Publ. pp. 666–. ISBN 978-81-208-1789-0.
  5. Pavan K. Varma (July 2009). The Book of Krishna. Penguin Books India. pp. 46–. ISBN 978-0-14-306763-4.
  6. Paramahamsa Sri Swami Vishwananda (12 January 2017). Shreemad Bhagavad Gita: The Song of Love. Bhakti Marga Publications. pp. 1472–. ISBN 978-3-940381-70-5.
  7. Anu Julka (8 October 2014). SHRINATH JI. PartridgeIndia. pp. 23–. ISBN 978-1-4828-2286-1.
  8. Surya N. Maruvada (2 March 2020). Who is Who in Hindu Mythology - VOL 1: A Comprehensive Collection of Stories from the Pur??as. Notion Press. pp. 528–. ISBN 978-1-64805-684-0.
  9. June McDaniel; Associate Professor in the Department of Philosophy and Religious Studies June McDaniel (1 January 2003). Making Virtuous Daughters and Wives: An Introduction to Women's Brata Rituals in Bengali Folk Religion. SUNY Press. pp. 89–. ISBN 978-0-7914-5565-4.
  10. Namita Gokhale; Malashri Lal (10 December 2018). Finding Radha: The Quest for Love. Penguin Random House India Private Limited. pp. 14–. ISBN 978-93-5305-361-1.
  11. Swami Mukundananda (4 January 2015). Festivals of India. Jagadguru Kripaluji Yog. pp. 76–. GGKEY:NQPDB6TQQBK.
  12. Steven Rosen (2012). The Agni and the Ecstasy: Collected Essays of Steven J. Rosen. Arktos. pp. 160–. ISBN 978-1-907166-79-2.
  13. Dev Prasad (27 January 2015). Krishna: A Journey through the Lands & Legends of Krishna. Jaico Publishing House. pp. 61–. ISBN 978-81-8495-170-7.


"https://kn.wikipedia.org/w/index.php?title=ವೃಷಭಾನು&oldid=1229770" ಇಂದ ಪಡೆಯಲ್ಪಟ್ಟಿದೆ