ವೀ ಫಾರ್ ವೆಂಡೆಟ್ಟಾ

ಟೆಂಪ್ಲೇಟು:Comics infobox sec/genrecat

V for Vendetta
V for Vendetta collected edition cover, art by David Lloyd
Publication information
ಪ್ರಕಾಶಕUK
Quality Comics
USA
Vertigo (DC Comics)
France
Delcourt
ಸ್ವರೂಪLimited series
ಪ್ರಕಾರ/ಶೈಲಿ
ಪ್ರಕಟಣೆ ದಿನಾಂಕMarch 1982-May 1989
ಪ್ರಕಟಣೆಗೊಂಡ ಸಂಖ್ಯೆ10
ಪ್ರಮುಖ ಪಾತ್ರಗಳು)V
Evey Hammond
Eric Finch
Creative team
ಬರಹಗಾರ (ರು)Alan Moore
ಕಲಾವಿದ (ರು)David Lloyd
ಪೆನ್ಸಿಲ್ಲರ್ (ಗಳು)David Lloyd
Tony Weare
ಇಂಕರ್ (ಗಳು)David Lloyd
Tony Weare
ಪತ್ರಕರ್ತ (ರು)Steve Craddock
ಬಣ್ಣಕಾರSteve Whitaker
Siobhan Dodds
David Lloyd
ಸೃಷ್ಟಿಕರ್ತ (ರು)Alan Moore
David Lloyd
ಸಂಪಾದಕ(ರು)Karen Berger
Scott Nybakken
Collected editions
'ISBN 0-930289-52-8
'ISBN 0-930289-52-8

V ಫಾರ್ ವೆಂಡೆಟ್ಟಾ ಎಂಬುದು ಹತ್ತು-ಸಂಚಿಕೆಗಳ ಒಂದು ಸಚಿತ್ರ ಹಾಸ್ಯ-ಪುಸ್ತಕ ಸರಣಿಯಾಗಿದೆ. ಇದನ್ನು ಅಲನ್‌ ಮೂರ್‌ ಬರೆದಿದ್ದು, ಹೆಚ್ಚಿನ ಭಾಗಕ್ಕೆ ಡೇವಿಡ್‌ ಲಾಯ್ಡ್‌ ಚಿತ್ರಗಳನ್ನು ಬರೆದಿದ್ದಾನೆ. 1980ರ ದಶಕದಿಂದ ಪ್ರಾರಂಭಿಸಿ ಸುಮಾರು 1990ರ ದಶಕದವರೆಗಿನ ಅವಧಿಗೆ ಕಲ್ಪಿಸಿಕೊಳ್ಳಲ್ಪಟ್ಟ ಭವಿಷ್ಯದ ನರಕರೂಪಯುನೈಟೆಡ್‌ ಕಿಂಗ್‌ಡಂ ಕಾಲಘಟ್ಟದಲ್ಲಿ ಇದರ ಕಥೆಯನ್ನು ಹೆಣೆಯಲಾಗಿದೆ. ತನ್ನನ್ನು ತಾನು "V" ಎಂದು ಕರೆದುಕೊಳ್ಳುವ ಓರ್ವ ನಿಗೂಢ ಕ್ರಾಂತಿಕಾರಿಯು, ತನಗೆ ಮುಖಾಮುಖಿಯಾಗುವ ಜನರ ಮೇಲೆ ಗಂಭೀರವಾಗಿ ಪರಿಣಾಮವನ್ನುಂಟುಮಾಡುತ್ತಿರುವ ಸರ್ವಾಧಿಕಾರಿತ್ವದ ಸರ್ಕಾರವನ್ನು ನಾಶಪಡಿಸಲು ಅವನು ಕೆಲಸ ಮಾಡುತ್ತಾನೆ.

ವಿಶ್ವದ ಬಹುಭಾಗವು ನಾಶವಾಗಲು ಕಾರಣವಾದ ಒಂದು ಸೀಮಿತ ಪರಮಾಣು ಯುದ್ಧದ ನಂತರ ಬ್ರಿಟನ್‌ನಲ್ಲಿ ಕಂಡುಬರಲಿರುವ ತೀರ ಸನಿಹದ ಪರಿಸ್ಥಿತಿಯೊಂದನ್ನು ಈ ಸರಣಿಯು ಚಿತ್ರಿಸುತ್ತದೆ. ಈ ಭವಿಷ್ಯ ಸ್ಥಿತಿಯಲ್ಲಿ, "ನೋರ್ಸ್‌ಫೈರ್‌" ಎಂದು ಕರೆಯಲಾಗುವ ಒಂದು ಬಲಪಂಥೀಯ ಪಕ್ಷವು ಆಡಳಿತ ಶಕ್ತಿಯಾಗಿ ಹುಟ್ಟಿಕೊಂಡಿರುತ್ತದೆ. ಗೈ ಫಾಕ್ಸ್‌ ಮುಖವಾಡವೊಂದನ್ನು ಧರಿಸಿರುವ "V" ಎಂಬ ಈ ಅರಾಜಕತೆಯ ಕ್ರಾಂತಿಕಾರಿಯು, ಸರ್ಕಾರವನ್ನು ಉರುಳಿಸಲು ಒಂದು ವ್ಯಾಪಕವಾದ, ತೀವ್ರವಾದ ಮತ್ತು ಪ್ರಭಾವಬೀರುವ ಉದ್ದೇಶವನ್ನೊಳಗೊಂಡ ಆಂದೋಲನವೊಂದನ್ನು ಪ್ರಾರಂಭಿಸುತ್ತಾನೆ. 2006ರಲ್ಲಿ ಇದರ ಚಲನಚಿತ್ರ ರೂಪಾಂತರವೊಂದನ್ನು ವಾರ್ನರ್‌ ಬ್ರದರ್ಸ್‌ ಸಂಸ್ಥೆಯು ಬಿಡುಗಡೆ ಮಾಡಿತು.

ಪ್ರಕಟಣೆಯ ಇತಿಹಾಸ

ಬದಲಾಯಿಸಿ

ಕ್ವಾಲಿಟಿ ಕಾಮಿಕ್ಸ್‌‌ನಿಂದ ಪ್ರಕಟಿಸಲ್ಪಟ್ಟ ವಾರಿಯರ್‌ ಎಂಬ ಒಂದು ಬ್ರಿಟಿಷ್‌ ಸಚಿತ್ರ ಪುಸ್ತಕ ಸಂಕಲನದಲ್ಲಿ 1982 ಮತ್ತು 1985ರ ನಡುವಣ ಕಪ್ಪು-ಬಿಳುಪು ಸ್ವರೂಪದಲ್ಲಿ V ಫಾರ್ ವೆಂಡೆಟ್ಟಾ ದ ಮೊದಲ ಅಧ್ಯಾಯಗಳು ಮೂಲತಃ ಕಾಣಿಸಿಕೊಂಡವು. ಆ ಶೀರ್ಷಿಕೆಯಲ್ಲಿ ಈ ಚಿತ್ರಸರಣಿಯು ಅತ್ಯಂತ ಜನಪ್ರಿಯವಾದವುಗಳ ಪೈಕಿ ಒಂದೆನಿಸಿತು; ವಾರಿಯರ್‌‌ ನ 26 ಸಂಚಿಕೆಗಳ ಅವಧಿಯಲ್ಲಿ ಹಲವಾರು ಮುಖಪುಟಗಳು V ಫಾರ್ ವೆಂಡೆಟ್ಟಾ ವನ್ನು ಪ್ರದರ್ಶಿಸಿದವು.

1985ರಲ್ಲಿ ಪ್ರಕಾಶಕರು ವಾರಿಯರ್‌‌‌ ನ ಪ್ರಕಟಣೆಯನ್ನು ರದ್ದುಗೊಳಿಸಿದಾಗ (ರದ್ದುಗೊಳಿಸಲ್ಪಟ್ಟ ಕಾರಣದಿಂದಾಗಿ ಸಂಪೂರ್ಣಗೊಳಿಸಲ್ಪಟ್ಟ ಎರಡು ಅಧ್ಯಾಯಗಳು ಅಪ್ರಕಟಿತವಾಗಿ ಉಳಿದವು), ಪ್ರಕಟಣೆಯನ್ನು ಮುಂದುವರಿಸಿ ಕಥೆಯನ್ನು ಸಂಪೂರ್ಣಗೊಳಿಸಲು ತಮಗೆ ಅವಕಾಶ ನೀಡಬೇಕೆಂದು ಹಲವಾರು ಕಂಪನಿಗಳು ಮೂರ್‌ ಮತ್ತು ಲಾಯ್ಡ್‌ರ ಮನವೊಲಿಸಲು ಪ್ರಯತ್ನಿಸಿದವು. 1988ರಲ್ಲಿ DC ಕಾಮಿಕ್ಸ್‌ ಸಂಸ್ಥೆಯು, ಹತ್ತು-ಸಂಚಿಕೆಯ ಸರಣಿಯೊಂದರಲ್ಲಿ ವಾರಿಯರ್‌ ಕಥೆಗಳನ್ನು ವರ್ಣದಲ್ಲಿ ಮರುಮುದ್ರಿಸಿ ಪ್ರಕಟಿಸಿತು ಹಾಗೂ ಮುಕ್ತಾಯವಾಗುವವರೆಗೆ ಆ ಸರಣಿಯನ್ನು ಮುಂದುವರೆಸಿತು. ಸಂಚಿಕೆ #7ರಲ್ಲಿ ಮೊಟ್ಟಮೊದಲ ಹೊಸ ಕಥಾಸಾಮಗ್ರಿಯು ಕಾಣಿಸಿಕೊಂಡಿತು. ವಾರಿಯರ್‌‌‌ ನ #27 ಮತ್ತು #28ನೇ ಸಂಚಿಕೆಗಳಲ್ಲಿ ವಾಸ್ತವವಾಗಿ ಕಾಣಿಸಿಕೊಳ್ಳಬೇಕಿದ್ದ ಅಪ್ರಕಟಿತ ಅಧ್ಯಾಯಗಳನ್ನು ಇದು ಒಳಗೊಂಡಿತ್ತು. ಒಂದು ಅಧ್ಯಾಯಕ್ಕೆ ("ವಿನ್ಸೆಂಟ್‌") ಚಿತ್ರಗಳನ್ನು ಬರೆದ ಟೋನಿ ವಿಯರ್‌ ಇತರ ಎರಡು ಅಧ್ಯಾಯಗಳಿಗೂ ("ವ್ಯಾಲರೀ" ಮತ್ತು "ದಿ ವೆಕೇಷನ್‌") ಹೆಚ್ಚುವರಿ ಚಿತ್ರಗಳ ಕೊಡುಗೆಯನ್ನು ನೀಡಿದ; ಸಂಪೂರ್ಣ ಸರಣಿಯಾದ್ಯಂತ ಸ್ಟೀವ್‌ ವೈಟೇಕರ್‌ ಮತ್ತು ಸಿಯೋಭಾನ್‌ ಡಾಡ್ಸ್‌ ಎಂಬಿಬ್ಬರು ವರ್ಣಚಿತ್ರಕಾರರಾಗಿ ಕೆಲಸ ಮಾಡಿದರು.

ಮೂರ್‌ನ "ಬಿಹೈಂಡ್‌ ದಿ ಪೈಂಟೆಡ್‌ ಸ್ಮೈಲ್‌" ಎಂಬ ಲಘುಲೇಖನ ಹಾಗೂ ಪ್ರಧಾನ ಅನುಕ್ರಮ ವಿವರಣೆಯಿಂದ ಆಚೆಗಿದ್ದ ಎರಡು "ಉಪಪ್ರಸಂಗಗಳನ್ನು" ಒಳಗೊಂಡ ಸರಣಿಯು ನಂತರ ಒಂದು ವ್ಯಾಪಾರೀ ಕಾಗದ ಕವಚದ ಪುಸ್ತಕವಾಗಿ ಸಂಕಲಿತ ಸ್ವರೂಪದಲ್ಲಿ ಕಾಣಿಸಿಕೊಂಡಿತು. ಇದು USನಲ್ಲಿ DC ಕಾಮಿಕ್ಸ್‌ ಸಂಸ್ಥೆಯ ವರ್ಟಿಗೋ ಇಂಪ್ರಿಂಟ್‌ನಿಂದಲೂ (ISBN 0-930289-52-8), UKಯಲ್ಲಿ ಟೈಟನ್‌ ಬುಕ್ಸ್‌‌‌‌ನಿಂದಲೂ (ISBN 1-85286-291-2) ಪ್ರಕಟಿಸಲ್ಪಟ್ಟಿತು.

ಹಿನ್ನೆಲೆ

ಬದಲಾಯಿಸಿ

ವಾರಿಯರ್‌‌ ನಲ್ಲಿನ V ಫಾರ್ ವೆಂಡೆಟ್ಟಾ ಗಾಗಿ ಡೇವಿಡ್‌ ಲಾಯ್ಡ್‌ ನೀಡಿದ ಚಿತ್ರಗೆಲಸವು ಮೂಲತಃ ಕಪ್ಪು-ಬಿಳುಪಿನಲ್ಲಿ ಕಾಣಿಸಿಕೊಂಡಿತು. ಬಣ್ಣದ ಬಳಪಗಳಲ್ಲಿ "ಬಣ್ಣಗೊಳಿಸಲಾದ" ಚಿತ್ರಗೆಲಸವನ್ನು DC ಕಾಮಿಕ್ಸ್‌ ರೂಪಾಂತರವು ಪ್ರಕಟಿಸಿತು. ತನ್ನ ಚಿತ್ರಗೆಲಸವು ವರ್ಣರಂಜಿತವಾಗಿ ಕಾಣಿಸಿಕೊಳ್ಳಬೇಕು ಎಂದು ತಾನು ಯಾವಾಗಲೂ ಉದ್ದೇಶಿಸಿದುದಾಗಿಯೂ, ಆದರೆ ವರ್ಣರಂಜಿತವಾಗಿ ಪ್ರಸ್ತುತಪಡಿಸಬೇಕೆಂದರೆ ಅದು ತುಂಬಾ ವೆಚ್ಚವಾಗುತ್ತಿದ್ದುದರಿಂದ ಹಣಕಾಸಿನ ಕಾರಣಗಳಿಂದಾಗಿ ಆರಂಭಿಕ ಪ್ರಕಟಣೆಯು ಕಪ್ಪು-ಬಿಳುಪಿನಲ್ಲಿ ಹೊರಬಂದಿತು ಎಂದು ಲಾಯ್ಡ್‌ ಹೇಳಿಕೆ ನೀಡಿದ್ದ ( ಆದರೆ ಈ ಮಾಹಿತಿಯ ಕುರಿತು ವಾರಿಯರ್‌ ಪ್ರಕಾಶಕ ಡೆಝ್‌ ಸ್ಕಿನ್‌ ಆಶ್ಚರ್ಯ ವ್ಯಕ್ತಪಡಿಸಿದ. ಸದರಿ ಚಿತ್ರಸರಣಿಯನ್ನು ತಾನು ಕಪ್ಪು-ಬಿಳುಪಿನಲ್ಲೇ ನಿಯೋಜಿಸಿದ್ದು ಯಾವುದೇ ಚಿತ್ರೀಕರಿಸಿದ ಬಣ್ಣದಲ್ಲಿ ವಾರಿಯರ್‌ ನ್ನು ಪ್ರಕಟಿಸುವ ಉದ್ದೇಶವನ್ನು ತಾನೆಂದೂ ಹೊಂದಿರಲಿಲ್ಲ, ಹಾಗೂ ವೆಚ್ಚವನ್ನು ತಾನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ ಎಂಬುದು ಅವನ ಅಭಿಪ್ರಾಯವಾಗಿತ್ತು).

ಚಿತ್ರ:Warrior19.jpg
ಕ್ರಾಂತಿಕಾರಿ ಮತ್ತು ಬಲಪಂಥೀಯ ದಾರ್ಶನಿಕರ ನಡುವಿನ ಸಚಿತ್ರ ಪುಸ್ತಕದ ಘರ್ಷಣೆಯನ್ನು ಎತ್ತಿ ತೋರಿಸುತ್ತಿರುವ ವಾರಿಯರ್‌ ಸಂಚಿಕೆ #19ರ ಮುಖಪುಟ.

V ಫಾರ್ ವೆಂಡೆಟ್ಟಾ ವನ್ನು ಬರೆಯುವಾಗ ದಿ ಡಾಲ್‌ ಎಂಬ ಶೀರ್ಷಿಕೆಯ ಚಿತ್ರಸರಣಿಯೊಂದಕ್ಕಾಗಿರುವ ಪರಿಕಲ್ಪನೆಯೊಂದನ್ನು ಮೂರ್‌ ಆಕರವಾಗಿ ಅವಲಂಬಿಸಿದ್ದು, ಇದನ್ನು ಆತ ತನ್ನ 22ನೇ ವಯಸ್ಸಿನಲ್ಲೇ DC ಥಾಮ್ಸನ್‌ ಸಂಸ್ಥೆಗೆ ಸಲ್ಲಿಸಿದ್ದ. "ಬಿಹೈಂಡ್‌ ದಿ ಪೈಂಟೆಡ್‌ ಸ್ಮೈಲ್‌"ನಲ್ಲಿ[] ಮೂರ್‌ ಈ ಕುರಿತು ವಿಷಯವನ್ನು ಹೊರಗೆಡವಿ, ಓರ್ವ "ಲೈಂಗಿಕವ್ಯತ್ಯಯದ ಭಯೋತ್ಪಾದಕ"ನ ಪರಿಕಲ್ಪನೆಯ ಕುರಿತು DC ಥಾಮ್ಸನ್‌ ಸಂಸ್ಥೆಯು ಹಿಂಜರಿಕೆಯನ್ನು ವ್ಯಕ್ತಪಡಿಸಿದ್ದರಿಂದ ಈ ಪರಿಕಲ್ಪನೆಯು ತಿರಸ್ಕರಿಸಲ್ಪಟ್ಟಿತು ಎಂದು ತಿಳಿಸಿದ. ಹಲವು ವರ್ಷಗಳ ನಂತರ ಹೇಳಲಾದಂತೆ, ವಾರಿಯರ್‌ ಸಂಪಾದಕ ಡೆಝ್‌ ಸ್ಕಿನ್‌ ಕಲಾವಿದ ಡೇವಿಡ್‌ ಲಾಯ್ಡ್‌ನೊಂದಿಗೆ ಒಂದು ನಿಗೂಢ ರಹಸ್ಯದ ಚಿತ್ರಸರಣಿಯನ್ನು ಸೃಷ್ಟಿಸಲು ಮೂರ್‌ನನ್ನು ಆಹ್ವಾನಿಸಿದ.[]. ವಾಸ್ತವವಾಗಿ ತಮ್ಮ UKಯ ಅದ್ಭುತ ದೃಷ್ಟಾಂತವಾದ ನೈಟ್‌-ರೇವನ್‌ ಎಂಬ ಜನಪ್ರಿಯ ಚಿತ್ರಸರಣಿಯನ್ನು ಹೋಲುವಂತಿರುವ ಏನನ್ನಾದರೂ ಮರುಸೃಷ್ಟಿಮಾಡಲು ಅವನು ಡೇವಿಡ್‌ ಲಾಯ್ಡ್‌ನನ್ನು ಕೇಳಿಕೊಂಡಿದ್ದ. ಈ ನೈಟ್‌-ರೇವನ್‌ ಚಿತ್ರಸರಣಿಯು 1930ರ ದಶಕದಲ್ಲಿನ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸಿದ್ಧಗೊಳಿಸಲಾದ ಒಂದು ನಿಗೂಢವಾದ ಮುಖವಾಡವನ್ನು ಧರಿಸಿದ ಶಾಂತಿಪಾಲಕನೊಬ್ಬನೊಂದಿಗಿನ ಒಂದು ಕಥೆಯಾಗಿತ್ತು. ತನ್ನೊಂದಿಗೆ ಬಂದು ಸೇರಿಕೊಳ್ಳುವಂತೆ ಬರಹಗಾರ ಅಲನ್‌ ಮೂರ್‌ನನ್ನು ಲಾಯ್ಡ್‌ ಕೇಳಿಕೊಂಡ, ಮತ್ತು ಅವರ ನಡುವಿನ ಚರ್ಚೆಗಳ ಮೂಲಕ ಕಥೆಯ ಸನ್ನಿವೇಶವು ಬೆಳವಣಿಗೆಯಾಗಿ 1930ರ ದಶಕದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಅತ್ಯಂತ ಸನಿಹದ ಬ್ರಿಟನ್‌ಗೆ ಕಥೆಯು ಚಲಿಸಿತು. ಕಥೆಯ ಸನ್ನಿವೇಶವು ಮುಂದುವರಿದಂತೆ, ಪಾತ್ರದ ಬೆಳವಣಿಗೆಯೂ ಮುಂದುವರಿಯಿತು; ನೈಟ್‌-ರೇವನ್‌ನ ಒಂದು "ವಾಸ್ತವಿಕ ದೃಷ್ಟಿಯ" ದರೋಡೆಕೋರ-ಪೀಳಿಗೆಯ ರೂಪಾಂತರವಾಗಿ ಒಮ್ಮೆ ಆ ಪಾತ್ರವು ಪರಿಗ್ರಹಿಸಲ್ಪಟ್ಟು, ಮೊದಲಿಗೆ ತಾನು ಸೇವೆ ಸಲ್ಲಿಸಿದ ಸರ್ವಾಧಿಕಾರಿತ್ವದ ಸಂಸ್ಥಾನದ ವಿರುದ್ಧ ದಂಗೆಯೇಳುವ ಓರ್ವ ಆರಕ್ಷಕನಾಗಿ ಆತ ಕಾಣಿಸಿಕೊಂಡ, ನಂತರ ಓರ್ವವೀರೋಚಿತ ಕ್ರಾಂತಿಕಾರಿಯಾದ.

1960ರ ದಶಕದ ಬ್ರಿಟಿಷ್‌ ಸಚಿತ್ರ ಪುಸ್ತಕ ಪಾತ್ರಗಳಿಂದ ಪ್ರಭಾವಿತರಾಗಿ ಒಂದು ನಿಗೂಢ ಸಾಹಸದ-ಚಿತ್ರಸರಣಿಯಾಗಿ ಸದರಿ ಸರಣಿಯನ್ನು ಮೂರ್‌ ಮತ್ತು ಲಾಯ್ಡ್‌ ಗ್ರಹಿಸಿಕೊಂಡರು. ಅಷ್ಟೇ ಅಲ್ಲ, ಈ ಹಿಂದೆ ಬರಹಗಾರ ಸ್ಟೀವ್‌ ಪಾರ್ಕ್‌ಹೌಸ್‌‌ನೊಂದಿಗೆ ಕೆಲಸ ಮಾಡುತ್ತಿದ್ದ ನೈಟ್‌ ರೇವನ್‌ ಎಂಬ UKಯ ಅದ್ಭುತ ದೃಷ್ಟಾಂತದ ಚಿತ್ರಸರಣಿಯಿಂದಲೂ ಸದರಿ ಸರಣಿಯು ಪ್ರಭಾವಿತಗೊಂಡಿತ್ತು. ತನ್ನ ಸಹೋದ್ಯೋಗಿ ಗ್ರಹಾಂ ಮಾರ್ಷ್‌ ಊಟಮಾಡುತ್ತಿದ್ದ ಸಮಯದಲ್ಲಿ ಸಂಪಾದಕ ಡೆಝ್‌ ಸ್ಕಿನ್‌ಗೆ "ವೆಂಡೆಟ್ಟಾ" ಎಂಬ ಹೆಸರು ಹೊಳೆಯಿತಾದರೂ, ಅದು ಹೆಚ್ಚು ಇಟಾಲಿಯನ್‌ ಶೈಲಿಯಲ್ಲಿರುವಂತೆ ಧ್ವನಿಸುತ್ತದೆ ಎಂಬ ಕಾರಣದಿಂದ ಕ್ಷಿಪ್ರವಾಗಿ ಅದನ್ನು ತಿರಸ್ಕರಿಸಿದ. ಆಗ V ಫಾರ್ ವೆಂಡೆಟ್ಟಾ ಎಂಬ ಹೆಸರು ಹೊರಹೊಮ್ಮಿ, "ವೆಂಡೆಟ್ಟಾ"ಕ್ಕಿಂತ ಹೆಚ್ಚಾಗಿ "V" ಎಂಬುದರ ಮೇಲೆ ಹೆಚ್ಚಿನ ಒತ್ತುನೀಡಿದಂತಾಯಿತು. ಸಾಂಪ್ರದಾಯಿಕ ಸೂಪರ್‌ಹೀರೋನ ಬಾಹ್ಯರೂಪವನ್ನು ಹಿಂದಿನ ವಿನ್ಯಾಸಗಳು ಅನುಸರಿಸಿದ ನಂತರ, ಗೈ ಫಾಕ್ಸ್‌‌‌ನ ಸ್ವರೂಪದಲ್ಲಿ Vಯನ್ನು ಸಿಂಗರಿಸುವ ಪರಿಕಲ್ಪನೆಯನ್ನು ಡೇವಿಡ್‌ ಲಾಯ್ಡ್‌ ಅಭಿವೃದ್ಧಿಪಡಿಸಿದ.

ಕಥೆಯ ಸಿದ್ಧತೆಯ ಅವಧಿಯಲ್ಲಿ ಕಥಾವಸ್ತುವಿನೊಳಗೆ ಏನೆಲ್ಲಾ ತರಬೇಕೆಂದು ತಾನು ಬಯಸಿದ್ದನೋ ಅದರ ಪಟ್ಟಿಯನ್ನು ಮೋರ್‌ ಸಿದ್ಧಪಡಿಸಿದ, ಹಾಗೂ "ಬಿಹೈಂಡ್‌ ದಿ ಪೈಂಟೆಡ್‌ ಸ್ಮೈಲ್‌"ನಲ್ಲಿ ಅದನ್ನು ಪುನರ್‌ಸೃಷ್ಟಿಸಿದ:

ಆರ್ವೆಲ್‌. ಹಕ್ಸ್ಲಿ. ಥಾಮಸ್‌ ಡಿಷ್‌. ಜಡ್ಜ್‌ ಡ್ರೆಡ್‌ . ಹರ್ಲಾನ್‌ ಎಲಿಸನ್‌"ರಿಪೆಂಟ್‌, ಹರ್ಲೆಕ್ವಿನ್‌!" ಇದೇ ಲೇಖಕನಿಂದ ಬರೆಯಲ್ಪಟ್ಟ ಸೆಡ್‌ ದಿ ಟಿಕ್‌ಟಾಕ್‌ಮನ್‌ , ಕ್ಯಾಟ್‌ಮನ್‌ ಮತ್ತು ದಿ ಪವರ್‌ ಇನ್‌ ದಿ ಸಿಟಿ ಅಟ್‌ ದಿ ಎಡ್ಜ್‌ ಆಫ್‌ ದಿ ವರ್ಲ್ಡ್‌ . ವಿನ್ಸೆಂಟ್‌ ಪ್ರೈಸ್‌‌ಡಾ. ಫೈಬ್ಸ್‌ ಮತ್ತು ಥಿಯೇಟರ್‌ ಆಫ್‌ ಬ್ಲಡ್‌ . ಡೇವಿಡ್‌ ಬೋವೀ. ದಿ ಷ್ಯಾಡೋ . ನೈಟ್‌ ರೇವನ್‌ . ಬ್ಯಾಟ್‍ಮ್ಯಾನ್ ಫ್ಯಾರೆನ್‌ಹೀಟ್‌ 451 . ನ್ಯೂ ವರ್ಲ್ಡ್ಸ್‌ ಸ್ಕೂಲ್‌ ಆಫ್‌ ಸೈನ್ಸ್‌ನ ಬರಹಗಳು. ಮ್ಯಾಕ್ಸ್‌ ಅರ್ನ್ಸ್ಟ್‌ ಎಂಬಾತನ "ಯುರೋಪ್‌ ಆಫ್ಟರ್‌ ದಿ ರೇನ್‌" ಎಂಬ ವರ್ಣಚಿತ್ರಕೃತಿ. ಥಾಮಸ್ ಪಿಂಕೊನ್ ಎರಡನೇ ಜಾಗತಿಕ ಯುದ್ಧದ ಕುರಿತಾದ ಬ್ರಿಟಿಷ್‌ ಚಲನಚಿತ್ರಗಳ ಪರಿಸರ. ದಿ ಪ್ರಿಸನರ್‌ . ರಾಬಿನ್‌ ಹುಡ್‌. ಡಿಕ್‌ ಟರ್ಪಿನ್‌...[]

ಮಾರ್ಗರೇಟ್‌ ಥ್ಯಾಚರ್‌‌ಕನ್ಸರ್ವೇಟಿವ್‌ ಸರ್ಕಾರವು "1983"ರ ಚುನಾವಣೆಗಳಲ್ಲಿ ನಿಸ್ಸಂಶಯವಾಗಿ ಸೋಲಲಿದೆ", ಮತ್ತು ನಂತರ ಬರಲಿರುವ ಮೈಕೇಲ್‌ ಫೂಟ್‌-ನೇತೃತ್ವದ ಲೇಬರ್‌ ಸರ್ಕಾರವು ಸಂಪೂರ್ಣ ಪರಮಾಣು ನಿರಸ್ತ್ರೀಕರಣದೆಡೆಗೆ ಬದ್ಧತೆಯನ್ನು ಹೊಂದಿದ್ದು, ಒಂದು ಸೀಮಿತವಾದ ಪರಮಾಣು ಯುದ್ಧದ ನಂತರ ಯುನೈಟೆಡ್‌ ಕಿಂಗ್‌ಡಂ ಅದಕ್ಕೆ ಸಂಬಂಧಿಸಿದಂತೆ ಗಾಯವಾಗದೆ ತಪ್ಪಿಸಿಕೊಳ್ಳುವಲ್ಲಿ ಲೇಬರ್‌ ಸರ್ಕಾರವು ಅವಕಾಶ ಮಾಡಿಕೊಡಲಿದೆ ಎಂದು ಮೂರ್‌ ಆಧಾರವಾಗಿ ಗ್ರಹಿಸುವುದರೊಂದಿಗೆ ಅಥವಾ ಸ್ಥಾಪಿಸುವುದರೊಂದಿಗೆ, 1980ರ ದಶಕದ ಆರಂಭದಲ್ಲಿನ ಬ್ರಿಟನ್‌ನ ರಾಜಕೀಯ ವಾತಾವರಣವೂ ಸದರಿ ಕೃತಿಯ[] ಮೇಲೆ ಪ್ರಭಾವ ಬೀರಿತು. ಆದಾಗ್ಯೂ, ಸಾಮೂಹಿಕ ಹತ್ಯಾಕಾಂಡದ-ನಂತರದ ಬ್ರಿಟನ್‌ನ್ನು ಬಲಪಂಥೀಯರು ಕ್ಷಿಪ್ರವಾಗಿ ಬುಡಮೇಲು ಮಾಡಲಿದ್ದಾರೆ ಎಂದು ಮೂರ್‌ ಭಾವಿಸಿದ.[] ಮೂರ್‌ನ ಭವಿಷ್ಯ ಘಟನಾವಳಿಯು ಒರೆಹಚ್ಚಿ ನೋಡಲ್ಪಡದೆ ಅಥವಾ ಅಪರೀಕ್ಷಿತವಾಗಿ ಉಳಿದುಕೊಂಡಿದೆ. DC ಸಂಸ್ಥೆಯು ಸದರಿ ಕೃತಿಯನ್ನು ಪುನಃ ಪ್ರಕಟಿಸಿದಾಗ, ಐತಿಹಾಸಿಕ ಬೆಳವಣಿಗೆಗಳನ್ನು ಉದ್ದೇಶಿಸುತ್ತಾ ಅವನು ಹೀಗೆ ಟಿಪ್ಪಣಿ ಬರೆದ:

ಉಗ್ರ ಬಲಪಂಥೀಯ ದೃಷ್ಟಿಕೋನದೆಡೆಗೆ ಬ್ರಿಟನ್‌ನ್ನು ಮುಂದಕ್ಕೆ ತಳ್ಳುವುದಕ್ಕಾಗಿರುವ, ಸ್ವಲ್ಪದರಲ್ಲೇ ಗುರಿತಪ್ಪಿದ ಒಂದು ಪರಮಾಣು ಘರ್ಷಣೆಯಷ್ಟು ಅತಿ ನಾಟಕೀಯವಾಗಿರುವ ಏನೋ ಒಂದನ್ನು ಇದು ತೆಗೆದುಕೊಳ್ಳಲಿದೆ ಎಂಬ ಅಕೃತ್ರಿಮತೆಯನ್ನು ನನ್ನ ಗ್ರಹಿಕೆಯಲ್ಲಿ ಪತ್ತೆಹಚ್ಚಬಹುದು... 1982ರ ಸಾರ್ವತ್ರಿಕ ಚುನಾವಣೆಯಲ್ಲಿನ ಕನ್ಸರ್ವೇಟಿವ್‌ ಪಕ್ಷದ ಒಂದು ಮುನ್ನುಡಿಯಲ್ಪಟ್ಟ ಸೋಲಿನಿಂದ ಕಥೆಯ ಐತಿಹಾಸಿಕ ಹಿನ್ನೆಲೆಯ ಬಹುಭಾಗವು ಮುಂದುವರಿಯುತ್ತದೆ ಎಂಬ ಸರಳ ಅಂಶವು, ಕೇಡುಸೂಚಿಸುವ ಕಣಿಗಾರರಾಗಿರುವ ಅಥವಾ ವಿಪತ್ಸೂಚಕ ಭವಿಷ್ಯಕಾರರಾಗಿರುವ ನಮ್ಮ ಪಾತ್ರದಲ್ಲಿ ನಾವು ಎಷ್ಟರಮಟ್ಟಿಗೆ ವಿಶ್ವಾಸಕ್ಕೆ ಅರ್ಹರಾಗಿದ್ದೇವೆ ಎಂಬುದನ್ನು ನಿಮಗೆ ಹೇಳಬೇಕು.[]

ದಿ ಕಾಮಿಕ್ಸ್‌ ಜರ್ನಲ್‌‌ ನ 1999ರ ಫೆಬ್ರವರಿಯ ಸಂಚಿಕೆಯು "ಶತಮಾನದ ಅತ್ಯುನ್ನತ 100 (ಇಂಗ್ಲಿಷ್‌-ಭಾಷೆ) ಸಚಿತ್ರ ಪುಸ್ತಕಗಳ" ಕುರಿತಾಗಿ ಒಂದು ಜನಮತಸಂಗ್ರಹವನ್ನು ಕೈಗೊಂಡಾಗ, V ಫಾರ್ ವೆಂಡೆಟ್ಟಾ ಪುಸ್ತಕಕ್ಕೆ 83ನೇ ಸ್ಥಾನವು ಸಿಕ್ಕಿತು.

ಕಥಾವಸ್ತು

ಬದಲಾಯಿಸಿ

1997ರ ನವೆಂಬರ್‌ 5ರಂದು ಲಂಡನ್‌‌ನಲ್ಲಿ, ಗೈ ಫಾಕ್ಸ್‌ ಮುಖವಾಡವನ್ನು ಧರಿಸಿರುವ ಮತ್ತು "V" ಎಂದು ಹೆಸರಾಗಿರುವ ನಿಗೂಢವಾದ ಛದ್ಮವೇಷದ ಆಕೃತಿಯೊಂದು ಎವೆರಿ ಹ್ಯಾಮಂಡ್‌ ಎಂಬ ಕಿರಿಯ ಹೆಂಗಸನ್ನು ಆರಕ್ಷಕ ಗುಪ್ತಚಾರರ ಒಂದು ಗುಂಪಿನಿಂದ ("ಫಿಂಗರ್‌ಮೆನ್‌" ಎಂದು ಅವರು ಚಿರಪರಿಚಿತರಾಗಿರುತ್ತಾರೆ) ರಕ್ಷಿಸುತ್ತದೆ. ವೈಶ್ಯಾವೃತ್ತಿಗೆ ಸಂಬಂಧಿಸಿದಂತೆ ಅವಳನ್ನು ದಸ್ತಗಿರಿ ಮಾಡಿದ ನಂತರ, ಅತ್ಯಾಚಾರ ಮಾಡಿ ಅವಳನ್ನು ಕೊಲ್ಲುವುದು ಅವರ ಉದ್ದೇಶವಾಗಿರುತ್ತದೆ. ಫಿಂಗರ್‌ಮೆನ್‌ ಗುಂಪಿನ ಬಹುಪಾಲು ಜನರನ್ನು ಸಾಯಿಸಿದ ನಂತರ, ಎವೆಯೊಂದಿಗೆ ಒಂದು ಚಾವಣಿಯ ಹೊರಮೇಲ್ಮೈಗೆ V ಮುಂದಡಿಯಿಡುತ್ತಾನೆ ಹಾಗೂ 1605ರ ವಿಫಲಗೊಂಡ ಗನ್‌ಪೌಡರ್‌ ಪಿತೂರಿಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು, ತೊರೆಯಲ್ಪಟ್ಟಿರುವ ವೆಸ್ಟ್‌ಮಿನಿಸ್ಟರ್‌ ಅರಮನೆಯೊಳಗೆ ಬಾಂಬ್‌ ಒಂದನ್ನು ಆಸ್ಫೋಟಿಸುತ್ತಾನೆ. "ದಿ ಷ್ಯಾಡೋ ಗ್ಯಾಲರಿ" ಎಂದು ತಾನು ಕರೆಯುವ, ತನ್ನ ರಹಸ್ಯ ಭೂಗತ ಅಡಗುದಾಣಕ್ಕೆ ಎವೆಯನ್ನು V ಕರೆದೊಯ್ಯುತ್ತಾನೆ. V ಸಮ್ಮುಖದಲ್ಲಿ ಎವೆ ತನ್ನ ಜೀವನ ಚರಿತ್ರೆಯನ್ನು ಹೇಳಲು ತೊಡಗುತ್ತಾಳೆ. 1980ರ ದಶಕದ ಅಂತ್ಯದ ಪರಮಾಣು ಯುದ್ಧವು ಅಂತಿಮವಾಗಿ ಗ್ರೇಟ್‌ ಬ್ರಿಟನ್‌ನಲ್ಲಿ ಬಲಪಂಥೀಯ ಕ್ಷಿಪ್ರಕ್ರಾಂತಿಗೆ ಕಾರಣವಾದದ್ದು, ಅದಾದ ನಂತರ ಅಧಿಕಾರಿ ವರ್ಗದವರು ಆಕೆಯ ತಂದೆಯನ್ನು ಒಬ್ಬ ರಾಜಕೀಯ ಸೆರೆಯಾಳಾಗಿ ವ್ಯವಸ್ಥಿತವಾಗಿ ಕೂಡಿಹಾಕಿ ಸಂಭಾವ್ಯವಾಗಿ ಅವನನ್ನು ಕೊಂದಿದ್ದು ಇವೆಲ್ಲವನ್ನೂ ಎವೆ V ಸಮ್ಮುಖದಲ್ಲಿ ವಿವರಿಸುತ್ತಾಳೆ.

Vಯ ಬಾಂಬ್‌ದಾಳಿಯ ಕುರಿತು ತನಿಖೆಯನ್ನು ನಡೆಸುವ ಹೊಣೆಗಾರಿಕೆಯು ಎರಿಕ್‌ ಫಿಂಚ್‌ ಮೇಲೆ ಬೀಳುತ್ತದೆ. ಈತ "ದಿ ನೋಸ್‌" ಎಂಬ ಕ್ರಮಬದ್ಧವಾದ ಆರಕ್ಷಕ ಪಡೆಯ ಮುಖ್ಯಸ್ಥನಾಗಿದ್ದು, ಓರ್ವ ಅನುಭವಸ್ಥ ತನಿಖೆಗಾರನಾಗಿರುತ್ತಾನೆ. ರಾಜಕೀಯ ನಿಶ್ಚಿತಾಭಿಪ್ರಾಯದಿಂದ ಎಂಬುದಕ್ಕಿಂತ ಹೆಚ್ಚಾಗಿ ಸುವ್ಯವಸ್ಥೆಯನ್ನು ಕಾಪಾಡುವುದರ ಕುರಿತಾದ ಒಂದು ಪ್ರೀತಿಯ ಕಾರಣದಿಂದ ಎರಿಕ್‌ ಫಿಂಚ್‌ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುತ್ತಾನೆ. ಅವನ ಮೂಲಕ ಪಕ್ಷದಲ್ಲಿನ ಇತರ ವ್ಯಕ್ತಿಗಳನ್ನು ಓದುಗರು ಭೇಟಿ ಮಾಡುತ್ತಾರೆ. ಅವರೆಂದರೆ, ಸರ್ಕಾರದ ಕಂಪ್ಯೂಟರ್‌ ವ್ಯವಸ್ಥೆಯಾದ ಫೇಟ್‌ ಎಂಬುದರೊಂದಿಗೆ ಒಂದು ಸ್ಥಾಯೀಕರಣವನ್ನು ಹೊಂದಿರುವ ನಾಯಕನಾದ ಆಡಂ ಸುಸಾನ್‌; ಫಿಂಚ್‌ನ ಪಾಲುದಾರನಾದ ಡೊಮಿನಿಕ್‌ ಸ್ಟೋನ್; "ದಿ ಫಿಂಗರ್‌" ಎಂಬ ರಹಸ್ಯ ಆರಕ್ಷಕ ದಳದ ಮುಖ್ಯಸ್ಥನಾದ ಡೆರೆಕ್‌ ಆಲ್ಮಂಡ್; "ದಿ ಐ" ಎಂಬ ದೃಷ್ಟಿಗೋಚರ ಕಣ್ಗಾವಲು ಶಾಖೆಯ ಮುಖ್ಯಸ್ಥನಾದ ಕೊನ್ರಾಡ್‌ ಹೇಯರ್‌; "ದಿ ಇಯರ್‌" ಎಂಬ ಶ್ರವ್ಯ ಕಣ್ಗಾವಲು ಶಾಖೆಯ ಮುಖ್ಯಸ್ಥನಾದ ಬ್ರಿಯಾನ್‌ ಎಥೆರಿಡ್ಜ್‌; ಮತ್ತು ಬಿತ್ತರಿಸುವಿಕೆಯ ಪ್ರಚಾರ ಯೋಜನೆಯ ಅಧೀನದಲ್ಲಿರುವ, "ದಿ ಮೌತ್‌" ಶಾಖೆಯ ಮೇಲ್ವಿಚಾರಣೆ ಹೊಂದಿರುವ ರೋಜರ್‌ ಡಾಸ್‌ಕೊಂಬ್‌.

ನಂತರ ಓಲ್ಡ್‌ ಬೇಲಿಯನ್ನು (ಲಂಡನ್ನಿನ ಕೇಂದ್ರ ಅಪರಾಧ ನ್ಯಾಯಾಲಯವನ್ನು) ಸಿಡಿಸಿ ಹಾರಿಸುವ V, ಪಕ್ಷದ ಮೂವರು ಗಣ್ಯವ್ಯಕ್ತಿಗಳನ್ನು ಎದುರಿಸುತ್ತಾನೆ. ತಾವು ಮಾಡಿದ ಹಳೆಯ ದುಷ್ಕೃತ್ಯಗಳಿಗಾಗಿ ಅವರ ಮೇಲೆ ಅಪವಾದವನ್ನು ಹೊರಿಸಿ ಗಲ್ಲಿಗೇರಿಸಲೆಂದು ಅವರನ್ನು ಆತ ಎದುರಿಸುತ್ತಾನೆ. "ಫೇಟ್‌ನ ಧ್ವನಿಯಾಗಿ" ಸೇವೆ ಸಲ್ಲಿಸುವ, ಪ್ರಚಾರ ಯೋಜನೆ ಪ್ರಸಾರಕರ್ತನಾದ ಲೆವಿಸ್‌ ಪ್ರೊಥೆರೊ; ಕ್ರೈಸ್ತ ಪುರೋಹಿತ ವರ್ಗದಲ್ಲಿ ಪಕ್ಷವನ್ನು ಪ್ರತಿನಿಧಿಸುವ ಓರ್ವ ಶಿಶುಕಾಮಿ ಪಾದ್ರಿಯಾಗಿರುವ ಬಿಷಪ್‌ ಆಂಟನಿ ಲಿಲಿಮನ್; ಮತ್ತು ಫಿಂಚ್‌ನೊಂದಿಗೆ ಹಿಂದೊಮ್ಮೆ ಒಂದು ಸಂಬಂಧವಿರಿಸಿಕೊಂಡಿದ್ದ, ರಾಜಕೀಯದಿಂದ ದೂರವಿರುವ ಓರ್ವ ವೈದ್ಯೆಯಾದ ಡೇಲಿಯಾ ಸರಿಡ್ಜ್‌ ಇವರೇ ಆ ಮೂವರು ಗಣ್ಯವ್ಯಕ್ತಿಗಳಾಗಿರುತ್ತಾರೆ. ಪ್ರೊಥೆರೊನ ಅಮೂಲ್ಯವಾದ ಬೊಂಬೆಯ-ಸಂಗ್ರಹವನ್ನು ಅವನ ಕಣ್ಣೆದುರಿಗೇ ಸುಟ್ಟು ಭಸ್ಮಮಾಡಿದ ನಂತರ ಅವನನ್ನು V ಹುಚ್ಚುಹಿಡಿದ ಸ್ಥಿತಿಗೆ ತಳ್ಳುತ್ತಾನೆ; ಸೈನೈಡ್-ಬೆರೆಸಿದ ಪ್ರಭುಭೋಜನ ಸಂಸ್ಕಾರದಲ್ಲಿ ಬಳಸುವ ಒಂದು ಬ್ರೆಡ್ಡಿನ-ಬಿಲ್ಲೆಯನ್ನು ಸೇವಿಸುವಂತೆ ಒತ್ತಾಯಿಸುವ ಮೂಲಕ ಆತ ಲಿಲಿಮನ್‌ನನ್ನು ಸಾಯಿಸುತ್ತಾನೆ; ಮತ್ತು ಒಂದು ಮಾರಣಾಂತಿಕ ಚುಚ್ಚುಮದ್ದಿನಿಂದ ಡಾ. ಸರಿಡ್ಜ್‌ ಸಾಯುತ್ತಾಳೆ (ಅದೇನೇ ಇದ್ದರೂ, ತನ್ನ ಹಿಂದಿನ ಕೃತ್ಯಗಳಿಗಾಗಿ ತೀವ್ರ ಪಶ್ಚಾತ್ತಾಪವನ್ನು ಸರಿಡ್ಜ್‌ ವ್ಯಕ್ತಪಡಿಸುವುದರಿಂದಾಗಿ, ಆಕೆಗೆ ಒಂದು ನೋವಿಲ್ಲದ ಸಾವಿನ ಅನುಭವವಾಗುತ್ತದೆ). ಸರಿಡ್ಜ್‌ಳನ್ನು V ಕೊಲ್ಲುವ ಹೊತ್ತಿಗೆ, Vಯಿಂದ ಹಾನಿಗೊಳಗಾದ ಎಲ್ಲಾ ವ್ಯಕ್ತಿಗಳೂ ಸಹ ಲಾರ್ಕ್‌ಹಿಲ್‌ ಹಳ್ಳಿಯ ಸಮೀಪದಲ್ಲಿರುವ ಒಂದು ಸೆರೆಶಿಬಿರದಲ್ಲಿ ಕೆಲಸ ಮಾಡಿದ್ದರು ಎಂಬುದನ್ನು ಪತ್ತೆಹಚ್ಚುವ ಫಿಂಚ್‌, Vಯ ಯೋಜನೆಗಳ ಕುರಿತಾಗಿ ಡೆರೆಕ್‌ ಆಲ್ಮಂಡ್‌ನನ್ನು ಎಚ್ಚರಿಸುತ್ತಾನೆ. ಸರಿಡ್ಜ್‌ಳ ಮನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ಆಲ್ಮಂಡ್‌ Vಗೆ ಅಚ್ಚರಿಯನ್ನುಂಟುಮಾಡುತ್ತಾನೆ. ಆದರೆ ದುರದೃಷ್ಟವಶಾತ್‌, ಮುಂಚಿತವಾಗಿ ಅದೇ ರಾತ್ರಿಯಂದು ತನ್ನ ಬಂದೂಕನ್ನು ಚೊಕ್ಕಟಗೊಳಿಸಿದ ನಂತರ ಅದರಲ್ಲಿ ಮದ್ದನ್ನು ಮರುತುಂಬಿಸಲು ಆಲ್ಮಂಡ್‌ ಮರೆತಿರುತ್ತಾನೆ, ಹೀಗಾಗಿ ಅವನನ್ನು V ಸಾಯಿಸುತ್ತಾನೆ.

ಡಾ. ಸರಿಡ್ಜ್‌‌ಳ ಮನೆಯಲ್ಲಿ ಪತ್ತೆಯಾದ, ಅವಳಿಂದ ದಾಖಲಿಸಲ್ಪಟ್ಟ ದಿನಚರಿಯೊಂದನ್ನು ಫಿಂಚ್‌ ಓದಲು ಶುರುಮಾಡುತ್ತಾನೆ. ಲಾರ್ಕ್‌ಹಿಲ್‌ ಶಿಬಿರದಲ್ಲಿ V ಓರ್ವ ನಿವಾಸಿಯಾಗಿದ್ದಾಗಿನ ಅವಧಿಯಲ್ಲಿನ ಅವನೊಂದಿಗಿನ ಎಲ್ಲಾ ಬಲಿಪಶುಗಳ ಹಿಂದಿನ ಚರಿತ್ರೆಗಳನ್ನೂ ಅದು ಹೊರಗೆಡವುತ್ತದೆ. ಡಾ. ಸರಿಡ್ಜ್‌ ನಡೆಸುತ್ತಿದ್ದ ಒಂದು ವೈದ್ಯಕೀಯ ಪ್ರಯೋಗದಲ್ಲಿ V ಒತ್ತಾಯಪೂರ್ವಕವಾಗಿ ಭಾಗವಹಿಸಿರುತ್ತಾನೆ ಮತ್ತು "ಬ್ಯಾಚ್‌ 5" ಎಂದು ಕರೆಯಲಾದ ಒಂದು ಔಷಧದೊಂದಿಗಿನ ಹಾರ್ಮೋನಿನ ಚುಚ್ಚುಮದ್ದುಗಳನ್ನು ಅವನಿಗೆ ಆ ಸಮಯದಲ್ಲಿ ನೀಡಲಾಗಿರುತ್ತದೆ. "ಐದನೇ ಕೋಣೆಗೆ ಸೇರಿರುವ ಮನುಷ್ಯ" ಎಂಬುದಾಗಿ ಶಿಬಿರದ ಸಿಬ್ಬಂದಿಗೆ ಚಿರಪರಿಚಿತನಾಗಿದ್ದ V ಅಂತಿಮವಾಗಿ ಶಿಬಿರದ ಆಜ್ಞಾಪಕನಾದ ಪ್ರೊಥೆರೊನ ಅನುಮೋದನೆಯೊಂದಿಗೆ ತೋಟವೊಂದರ ಮೇಲ್ವಿಚಾರಣೆಯನ್ನು ಶುರುಮಾಡುತ್ತಾನೆ. ನಂತರ ಶಿಬಿರದಿಂದ ಬಿಡಿಸಿಕೊಂಡು ಓಡಲು ಸಂಬಂಧಿತ ರಾಸಾಯನಿಕಗಳನ್ನು ಬಳಸುತ್ತಾನೆ ಹಾಗೂ ಶಿಬಿರದ ಭದ್ರತಾಪಡೆಯವರ ಮೇಲೆ ಆಕ್ರಮಣ ಮಾಡಲು ಮನೆಯಲ್ಲಿ ತಯಾರಿಸಿದ ಸಾಸಿವೆ ಅನಿಲ ಹಾಗೂ ನೇಪಾಮ್‌‌‌ನ್ನು ಬಳಸುತ್ತಾನೆ. ಮೃತ್ಯುಶಿಬಿರದಿಂದ ತಪ್ಪಿಸಿಕೊಂಡು ಉಳಿದವರಲ್ಲಿ ಏಕಮಾತ್ರ ಸೆರೆಯಾಳಾಗಿದ್ದ V, ತನ್ನ ನಿಜವಾದ ಗುರುತನ್ನು ಸರ್ಕಾರವು ಒತ್ತೆಹಚ್ಚಬಾರದೆಂಬ ಕಾರಣದಿಂದ ಶಿಬಿರದ ಬದುಕುಳಿದಿರುವ ಅಧಿಕಾರಿಗಳನ್ನು ಹೊರದೂಡಲು ನಿರ್ಧರಿಸುತ್ತಾನೆ. ಸರಿಡ್ಜ್‌‌ಳ ದಿನಚರಿ ಪುಸ್ತಕವನ್ನು ಹುಡುಕುವುದು ಸುಲಭವಾಗಿತ್ತು ಎಂಬುದು Vಗೆ ಖಾತ್ರಿಯಿದ್ದುದರಿಂದಲೋ ಏನೋ ಅವನ ಗುರುತಿನ ಕುರಿತಾದ ಮಾಹಿತಿಯನ್ನು ಒಳಗೊಂಡಿರಬಹುದಾದ ಪುಟಗಳನ್ನು ಅದರಿಂದ ಆತ ಕಿತ್ತುತೆಗೆದಿದಿದ್ದಾನೆ ಎಂಬುದನ್ನು ಫಿಂಚ್‌ನ ಗಮನಿಸುತ್ತಾನೆ. ಅವನ ನಿಜವಾದ ಗುರುತಿನ ಕುರಿತು ಯಾವುದೇ ದಾಖಲೆಯು ಅಸ್ತಿತ್ವದಲ್ಲಿಲ್ಲದ ಕಾರಣದಿಂದ ರಹಸ್ಯವಾಗಿ ಕಾರ್ಯಾಚರಣೆ ಮಾಡುವುದು Vಗೆ ಸಾಧ್ಯವಾಗಿರುತ್ತದೆ.

ನಾಲ್ಕು ತಿಂಗಳ ನಂತರ, ಜನರು ತಮ್ಮ ಜೀವಗಳ ರಕ್ಷಣೆಯನ್ನು ತಾವೇ ನೋಡಿಕೊಳ್ಳಬೇಕು ಎಂಬ ಕರೆಯನ್ನು ನೀಡುವ ಭಾಷಣವೊಂದನ್ನು ಪ್ರಸಾರ ಮಾಡಲು, ದಿ ಮೌತ್‌ನ ನೆಲೆಯಾದ ಜೋರ್ಡಾನ್‌ ಗೋಪುರಕ್ಕೆ V ಇದ್ದಕ್ಕಿದ್ದಂತೆ ನುಗ್ಗುತ್ತಾನೆ. ರೋಜರ್‌ ಡಾಸ್‌ಕೊಂಬ್‌ನನ್ನು ತನ್ನ ಫಾಕ್ಸ್‌ ವೇಷಭೂಷಣಗಳ ಪೈಕಿ ಒಂದರೊಳಗೆ ಒತ್ತಾಯಪೂರ್ವಕವಾಗಿ ನೂಕಿ, ಕೋಣೆಯೊಳಗೆ ನುಗ್ಗಿಬರುವ ಆರಕ್ಷಕರಿಂದ ಅವನು ಗುಂಡಿನೇಟಿಗೆ ಬಲಿಯಾಗುವಂತೆ ಮಾಡುವ ಆತ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಅಪರಾಧದ ದೃಶ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾ ಹೋಗುವಾಗ ಎರಿಕ್‌ ಫಿಂಚ್‌, ಪೀಟರ್‌ ಕ್ರೀಡಿಗೆ ಪರಿಚಯಿಸಲ್ಪಡುತ್ತಾನೆ. ಈತನೊಬ್ಬ ಸಣ್ಣ ಅಪರಾಧಿಯಾಗಿದ್ದು ದಿ ಫಿಂಗರ್‌ನ ಮುಖ್ಯಸ್ಥನಾಗಿ ಆಲ್ಮಂಡ್‌ನ ಜಾಗಕ್ಕೆ ಬರುತ್ತಾನೆ. Vಯ ಸಾಮರ್ಥ್ಯದ ಕುರಿತು ಕ್ರೀಡಿಯು ಮೆಚ್ಚುಗೆಯನ್ನು ಸೂಚಿಸದಿರುವುದಕ್ಕಾಗಿ ಹಾಗೂ ಡಾ. ಸರಿಡ್ಜ್‌ ಕುರಿತಾಗಿ ಕ್ರೀಡಿಯು ಒಂದು ವೈಯಕ್ತಿಕವಾದ ಟೀಕೆಯನ್ನು ಮಾಡಿದ್ದಕ್ಕಾಗಿ ಫಿಂಚ್‌ ಕೆರಳುತ್ತಾನೆ ಹಾಗೂ ತನ್ನ ಉದ್ದೇಶಭಂಗವಾಗಿ ನಿರಾಶೆಗೊಂಡ ಹಿನ್ನೆಲೆಯಲ್ಲಿ ಕ್ರೀಡಿಯ ಮೇಲೆ ಆಕ್ರಮಣ ಮಾಡುತ್ತಾನೆ. ಈ ಘಟನೆ ನಡೆದ ನಂತರ ಫಿಂಚ್‌ನ ನಾಯಕನು ಅವನನ್ನು ಒಂದು ಬಲವಂತದ ರಜೆಯಮೇಲೆ ಕಳಿಸುತ್ತಾನೆ.

V ಕಡೆಗೆ ಎವೆ ಒಂದು ಬಲವಾದ ಆಸಕ್ತಿಯನ್ನು ಬೆಳೆಸಿಕೊಂಡಿರುತ್ತಾಳಾದರೂ (ಆರಂಭದ ಹಂತದವರೆಗೆ, ಬಹಳ ವರ್ಷಗಳ ಹಿಂದೆ ದಸ್ತಗಿರಿ ಮಾಡಲ್ಪಟ್ಟಿದ್ದ ತನ್ನ ಸ್ವಂತ ತಂದೆ ಎಂದು Vಯನ್ನು ತಪ್ಪಾಗಿ ಕಲ್ಪಿಸಿಕೊಂಡಿರುತ್ತಾಳೆ) ಅವನ ವಿಧಾನಗಳನ್ನು ಆಕ್ಷೇಪಿಸಲು ಅಥವಾ ನಿರಾಕರಿಸಲು ಆಕೆ ಶುರುಮಾಡಿಕೊಂಡಿರುತ್ತಾಳೆ. ಷ್ಯಾಡೋ ಗ್ಯಾಲರಿಯಲ್ಲಿ ಒಂದು ಮುಖಾಮುಖಿಯಾದ ನಂತರ, Vಯನ್ನು ಹುಡುಕಲು ಅಸಮರ್ಥಳಾಗಿ ಬೀದಿಯೊಂದರಲ್ಲಿ ಪರಿತ್ಯಕ್ತಳಾಗಿ ಅವಳು ತನ್ನನ್ನು ತಾನು ಕಂಡುಕೊಳ್ಳುತ್ತಾಳೆ. ಓರ್ವ ಸಣ್ಣಮಟ್ಟದ ಅಪರಾಧಿಯಾದ ಗೋರ್ಡಾನ್‌ ಡೀಟ್ರಿಕ್ ಅವಳನ್ನು ಕರೆದುಕೊಂಡು ಹೋಗುತ್ತಾನೆ ಹಾಗೂ ಆಕೆ ಅವನೊಂದಿಗೆ ಪ್ರಣಯ ಪ್ರವೃತ್ತಿಯ ಸ್ವರೂಪದಲ್ಲಿ ತೊಡಗಿಸಿಕೊಳ್ಳುತ್ತಾಳೆ. ತಮಗೆ ಅರಿವಿಲ್ಲದೆಯೇ ಅವರು ಡೆರೆಕ್‌ ಆಲ್ಮಂಡ್‌ನ ವಿಧವೆಯಾದ ರೋಸ್‌ಳನ್ನು ಅನಿರೀಕ್ಷಿತವಾಗಿ ಸಂಧಿಸುತ್ತಾರೆ; ಅವಳ ಪತಿ ಹಾಗೂ ಡಾಸ್‌ಕೊಂಬ್‌ರ (ಹಣಕಾಸಿನ ಕಾರಣಗಳಿಗಾಗಿ ಇವನೊಂದಿಗೆ ಅವಳು ಒಂದು ಒತ್ತಾಯದ ಸಂಬಂಧವನ್ನು ಹೊಂದಬೇಕಾಗಿ ಬಂದಿರುತ್ತದೆ) ಸಾವುಗಳ ನಂತರ, ಪ್ರೇಕ್ಷಕರ ಮುಂದೆ ಉಡುಗೆಗಳನ್ನು ಕಳಚಿ ನೃತ್ಯಮಾಡುವ ಓರ್ವ ಅಣಕಶೈಲಿಯ ನರ್ತಕಿಯಾಗಿ ಬಲವಂತವಾಗಿ ಅವಳು ಕೆಲಸ ಮಾಡಬೇಕಾಗಿ ಬಂದಿರುತ್ತದೆ, ಮತ್ತು ಇದರ ಪರಿಣಾಮವಾಗಿ ಅವಳಲ್ಲಿ ಪಕ್ಷಕ್ಕೆ ಸಂಬಂಧಿಸಿದಂತೆ ಒಂದು ಬಲವಾದ ದ್ವೇಷವು ಬೆಳೆದಿರುತ್ತದೆ. ಪಕ್ಷವನ್ನು ಅಸ್ಥಿರೀಕರಣ ಮಾಡುವ Vಯ ಪ್ರಯತ್ನವನ್ನು ನಾಯಕನ ವಿರುದ್ಧದ ಒಂದು ದಿಢೀರ್‌ ಕಾರ್ಯಾಚರಣೆಯಾಗಿ ತೀವ್ರಗೊಳಿಸಲು ಬಳಸಿಕೊಳ್ಳುವ ಭರವಸೆಯೊಂದಿಗೆ ಒಂದು ಖಾಸಗಿ ಸಹಾಯಕ ಸೇನೆಯನ್ನು ಸಂಘಟಿಸಲು ಕ್ರೀಡಿ ಶುರುಮಾಡುತ್ತಾನೆ.

ಅಲಿಸ್ಟೇರ್‌ ಹಾರ್ಪರ್‌ ಎಂಬ ಸ್ಕಾಟಿಷ್‌ ದರೋಡೆಕೋರ ಗೋರ್ಡಾನ್‌ನನ್ನು ಕೊಲೆಮಾಡಿದಾಗ, ಅದಕ್ಕೆ ಪ್ರತೀಕಾರವಾಗಿ ಹಾರ್ಪರ್‌ನನ್ನು ಕೊಲ್ಲಲು ಎವೆ ಪ್ರಯತ್ನಿಸುತ್ತಾಳೆ. ಆದರೆ, ಅವಳನ್ನು ಅಪಹರಿಸಲಾಗುತ್ತದೆ ಮತ್ತು ಪೀಟರ್‌ ಕ್ರೀಡಿಯು ಹಾರ್ಪರ್‌‌ನನ್ನು ಭೇಟಿಮಾಡುತ್ತ ಇದ್ದುದರಿಂದಾಗಿ, ಪೀಟರ್‌ ಕ್ರೀಡಿಯನ್ನು ಕೊಲ್ಲಲು ಪ್ರಯತ್ನಿಸಿದ ಆರೋಪವನ್ನು ಅವಳ ಮೇಲೆ ಹೊರಿಸಲಾಗುತ್ತದೆ. ಹಲವು ಸುತ್ತುಗಳ ವಿಚಾರಣೆ ಹಾಗೂ ಚಿತ್ರಹಿಂಸೆಯ ನಡುವೆ, ವ್ಯಾಲರಿ ಎಂಬ ಅಲ್ಲಿನ ಓರ್ವ ನಿವಾಸಿಯಿಂದ ಬಂದ ಪತ್ರವೊಂದನ್ನು ಎವೆ ತನ್ನ ಸೆರೆಮನೆಯ ಕಿರುಕೊಠಡಿಯಲ್ಲಿ ಕಂಡುಕೊಳ್ಳುತ್ತಾಳೆ. ವ್ಯಾಲರೀ ಓರ್ವ ನಟಿಯಾಗಿದ್ದು, ಓರ್ವ ಸಲಿಂಗ ಕಾಮಿನಿಯಾಗಿರುವ ಕಾರಣಕ್ಕೆ ಅವಳನ್ನು ಅಲ್ಲಿ ಬಂಧಿಸಿಡಲಾಗಿರುತ್ತದೆ. ಎವೆಯನ್ನು ಪ್ರಶ್ನೆ ಮಾಡುವವ ಅಂತಿಮವಾಗಿ ಹಗೆಯೊಡನೆ-ಸಹಕಾರ ಅಥವಾ ಸಾವು ಈ ಎರಡರ ನಡುವಿನ ಒಂದು ಆಯ್ಕೆಯನ್ನು ಅವಳಿಗೆ ನೀಡುತ್ತಾನೆ; ವ್ಯಾಲರೀಯ ಧೈರ್ಯ ಹಾಗೂ ಶಾಂತ ಪ್ರತಿಭಟನೆಯಿಂದ ಸ್ಫೂರ್ತಿ ಪಡೆಯುವ ಆಕೆ, ಸೋಲೊಪ್ಪಿಕೊಳ್ಳಲು ನಿರಾಕರಿಸುತ್ತಾಳೆ. ಅವಳೀಗ ಮುಕ್ತಳು ಎಂದು ಅವಳಿಗೆ ತಿಳಿಸಲಾಗುತ್ತದೆ. ತನಗೇ ಆಘಾತವಾಗುವಂತೆ, ತನ್ನ ಸೆರೆಮನೆ ವಾಸವು Vಯಿಂದ ರೂಪಿಸಲ್ಪಟ್ಟಿದ್ದ, ಒಂದು ತಮಾಷೆಗಾಗಿ ಮಾಡಿದ ಕಿತಾಪತಿ ಎಂಬುದು ಎವೆಗೆ ಗೊತ್ತಾಗುತ್ತದೆ. ಅವನನ್ನು ರೂಪಿಸಿದ್ದ ಸನ್ನಿವೇಶದ ರೀತಿಯಲ್ಲೇ ಇದ್ದ ಒಂದು ವಿಷಮ ಪರೀಕ್ಷೆಯ ಮೂಲಕ ಅವಳು ಹಾದುಹೋಗುವಂತೆ ಮಾಡಲು V ಇದನ್ನು ವಿನ್ಯಾಸಗೊಳಿಸಿರುತ್ತಾನೆ. ವ್ಯಾಲರೀಯು ಮತ್ತೋರ್ವ ಲಾರ್ಕ್‌ಹಿಲ್‌ ಸೆರೆವಾಸಿಯಾಗಿದ್ದು, ತಾನಿದ್ದ ಸೆರೆಯ ಕಿರುಕೋಣೆಯ ಪಕ್ಕದ ಕೋಣೆಯಲ್ಲಿ ಸತ್ತಳು ಎಂದು ಅವನು ಬಹಿರಂಗಪಡಿಸುತ್ತಾನೆ. ಎವೆಯು ಓದಿದ ಪತ್ರವು ಹಿಂದೆ ವ್ಯಾಲರಿಯಿಂದ Vಗೆ ವರ್ಗಾಯಿಸಲ್ಪಟ್ಟ ಅದೇ ಪತ್ರವಾಗಿರುತ್ತದೆ. ತನ್ನ ಗುರುತು ಹಾಗೂ ಸ್ವಾತಂತ್ರ್ಯವನ್ನು ಅನುಮೋದಿಸಲು ಎವೆಯ ಕೋಪವು ಅಂತಿಮವಾಗಿ ದಾರಿಮಾಡಿಕೊಡುತ್ತದೆ.

ತರುವಾಯದ ನವೆಂಬರ್‌ನಲ್ಲಿ, ಸಂಸತ್ತಿನ ಮೇಲೆ ಬಾಂಬ್‌ ದಾಳಿಮಾಡಿದ ನಿಖರವಾದ ಒಂದು ವರ್ಷದ ನಂತರ, ಅಂಚೆ ಕಚೇರಿ ಗೋಪುರ ಹಾಗೂ ಜೋರ್ಡಾನ್‌ ಗೋಪುರಗಳನ್ನು V ನಾಶಪಡಿಸುತ್ತಾನೆ. ಇದರ ಪರಿಣಾಮವಾಗಿ ಎಥರಿಡ್ಜ್ ಸಾಯುವುದರ ಜೊತೆಗೆ, ದಿ ಐ, ದಿ ಇಯರ್‌, ಮತ್ತು ದಿ ಮೌತ್‌ ಪರಿಣಾಮಕಾರಿಯಾಗಿ ಮುಚ್ಚಲ್ಪಡುತ್ತವೆ. ತರುವಾಯದ ಸರ್ಕಾರದ ಕಣ್ಗಾವಲಿನ ಕೊರತೆಯಿಂದಾಗಿ ಹಿಂಸೆ ಹಾಗೂ ಭೋಗವಾದದ ಆಚರಣೆಯ ಒಂದು ಅಲೆಯೇ ಸೃಷ್ಟಿಯಾಗಿ, ಅದು ಕ್ರೀಡಿ ಮತ್ತು ಹಾರ್ಪರ್‌ನ ಬೀದಿ ಪಟಾಲಂಗಳಿಂದ ಹಿಂಸಾತ್ಮಕ ವಿಧಾನದಲ್ಲಿ ನಿಗ್ರಹಿಸಲ್ಪಡುತ್ತದೆ. ಈ ಮಧ್ಯೆ, "ದಿ ಲ್ಯಾಂಡ್‌ ಆಫ್‌ ಡೂ-ಆಸ್‌-ಯು-ಪ್ಲೀಸ್‌" (ನಿಮಗಿಷ್ಟವಾದಂತೆ ಬದುಕುವುದರ ಪ್ರದೇಶ) ಎಂಬುದರ ಅಂತಿಮ-ಫಲಿತಾಂಶವನ್ನು ತಾನಿನ್ನೂ ಸಾಧಿಸಿಲ್ಲ, ಅದರ ಬದಲಿಗೆ "ದಿ ಲ್ಯಾಂಡ್‌ ಆಫ್‌ ಟೇಕ್‌-ವಾಟ್‌-ಯು-ವಾಂಟ್‌" (ನಿಮಗೇನು ಬೇಕೋ ಅದನ್ನು ತೆಗೆದುಕೊಳ್ಳುವದರ ಪ್ರದೇಶ) ಎಂಬ ಸ್ಥಿತಿಯಲ್ಲಿನ ಕೇವಲ ಅಸ್ತವ್ಯಸ್ತತೆಯಷ್ಟೇ ತನಗೆ ದೊರಕಿದೆ ಎಂಬುದನ್ನು V ಎವೆಯ ಗಮನಕ್ಕೆ ತರುತ್ತಾನೆ. ಇದು ನಿಜವಾದ ಅರಾಜಕತೆಯಾದ ಒಂದು ಸ್ವಯಂಪ್ರೇರಿತವಾಗಿ ವ್ಯವಸ್ತೆಗೊಳಿಸಿದ ಸಮಾಜದ ಸ್ಥಾಪನೆಯೊಂದಿಗೆ ಅನುಸರಿಸಲು ಆತ ಬಯಸಿರುವ ಒಂದು ಮಧ್ಯಂತರ ಅವಧಿಯಾಗಿರುತ್ತದೆ. ಅತ್ಯಂತ ಆರಂಭದಿಂದಲೇ ಫೇಟ್‌ ಕಂಪ್ಯೂಟರ್‌ಗೆ V ಪ್ರವೇಶಾವಕಾಶವನ್ನು ಹೊಂದಿದ್ದ, ಇದು Vಯ ಮುನ್ನರಿವನ್ನು ವಿವರಿಸುತ್ತದೆ ಎಂಬುದನ್ನು ಫಿಂಚ್‌ನ ಸಹಾಯಕ ಡೊಮಿನಿಕ್‌ ಮನಗಾಣುತ್ತಾನೆ; ಈ ಸುದ್ದಿಯು ನಾಯಕನ ಮಾನಸಿಕ ಕುಸಿತದ ವೇಗವನ್ನು ಹೆಚ್ಚಿಸುತ್ತದೆ.

ಲಾರ್ಕ್‌ಹಿಲ್‌ನ ಪರಿತ್ಯಕ್ತ ನಿವೇಶನಕ್ಕೆ ತೆರಳುವ ಫಿಂಚ್‌, ಅಲ್ಲಿ LSDಯನ್ನು ತೆಗೆದುಕೊಳ್ಳುತ್ತಾನೆ. ಅವನ ಭ್ರಾಂತಿಗಳು Vಯ ಕುರಿತಾದ ಒಂದು ಅಂತರ್ಬೋಧೆಯ ಗ್ರಹಿಕೆಗೆ ಅವನನ್ನು ಕರೆದೊಯ್ಯುತ್ತವೆ, ಮತ್ತು ಲಂಡನಿಗೆ ಮರಳುತ್ತಿರುವಾಗ ಆತ, ಪರಿತ್ಯಕ್ತ ವಿಕ್ಟೋರಿಯಾ ನಿಲ್ದಾಣ‌ದ ಒಳಗಡೆಯೇ Vಯ ಅಡಗುದಾಣವಿದೆ ಎಂಬುದನ್ನು ತಾರ್ಕಿಕವಾಗಿ ಊಹಿಸುತ್ತಾನೆ. ಫಿಂಚ್‌ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ ಅವನಿಗೆ V ಮುಖಾಮುಖಿಯಾಗುತ್ತಾನೆ, ಮತ್ತು ತನ್ನ ಸ್ವಂತ ಹುತಾತ್ಮತೆಯ ಕುರಿತು ಸೂಚನೆಯನ್ನು ಪಡೆದಿದ್ದ ಆತ, ತನ್ನಗೆ ಗುಂಡುಹೊಡೆಯಲು ಫಿಂಚ್‌ಗೆ ಅನುವುಮಾಡಿಕೊಡುತ್ತಾನೆ. ಗಾಯಗೊಂಡ V, ಷ್ಯಾಡೋ ಗ್ಯಾಲರಿಗೆ ಮರಳುತ್ತಾನೆ ಹಾಗೂ ಎವೆಯ ತೋಳುಗಳಲ್ಲಿ ಮರಣಹೊಂದುತ್ತಾನೆ. Vಯ ಮುಖವಾಡವನ್ನು ಕಳಚಲು ಎವೆ ಆಲೋಚಿಸುತ್ತಾಳಾದರೂ ಹಾಗೆ ಮಾಡದಿರಲು ನಿರ್ಧರಿಸುತ್ತಾಳೆ; ಅದರ ಬದಲಿಗೆ, ಅವನ ಹೆಚ್ಚುವರಿ ವೇಷಭೂಷಣಗಳ ಪೈಕಿ ಒಂದನ್ನು ತೊಟ್ಟುಕೊಳ್ಳುವ ಮೂಲಕ ಅವನ ಗುರುತನ್ನು ತಾನು ತಳೆಯುತ್ತಾಳೆ.

ಈ ಮಧ್ಯೆ, ಸುಸಾನ್‌ನ ಕೆಲಸವನ್ನು ಪಡೆಯಲು ಪ್ರಯತ್ನಿಸುತ್ತಿರುವ ಕ್ರೀಡಿ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತೆ ನಾಯಕನ ಮೇಲೆ ಒತ್ತಾಯ ಹೇರುತ್ತಾನೆ. ತಾನು ವಸ್ತ್ರಹೀನ ಅಣಕಶೈಲಿಯ ನರ್ತನಕ್ಕೆ ಇಳಿಯುವಂತೆ ತನ್ನನ್ನು ಬಲವಂತವಾಗಿ ತಳ್ಳು ಕಾರಣವಾದ, ತನ್ನ ಗಂಡನ ಸಾವಿನಿಂದ ಕೋಪಗೊಂಡಿದ್ದ ರೋಸ್‌ ಆಲ್ಮಂಡ್‌ ನಾಯಕನನ್ನು ಮೋಸದಿಂದ ಕೊಲ್ಲುತ್ತಾಳೆ. ಕ್ರೀಡಿ ತನ್ನ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಹೆಲೆನ್‌ ಹೇಯರ್‌ಳಿಂದ (ಅವಳೊಂದಿಗೆ ಆತ ಮಲಗುತ್ತಿರುತ್ತಾನೆ) ಲಂಚವನ್ನು ಪಡೆದಿದ್ದ ಹಾರ್ಪರ್‌, ಕ್ರೀಡಿಯನ್ನು ಕೊಲ್ಲುತ್ತಾನೆ. ಅವರಿಬ್ಬರು ಲೈಂಗಿಕ ಸುಖವನ್ನು ಹೊಂದುತ್ತಿರುವುದರ ಒಂದು ಕಣ್ಗಾವಲಿನ ಧ್ವನಿಮುದ್ರಿತ ಟೇಪ್‌ನ್ನು ಅವಳ ಗಂಡನಾದ ಕೊನ್ರಾಡ್‌ ಹೇಯರ್‌ಗೆ (ದಿ ಐ ಗುಂಪಿನ ಮುಖ್ಯಸ್ಥ) V ಕಳಿಸಿಕೊಡುತ್ತಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕೊನ್ರಾಡ್‌ ಒಂದು ತಿರುಚುಳಿಯಿಂದ ಹಾರ್ಪರ್‌ಗೆ ಸಾಯುವಂತೆ ಹೊಡೆಯುತ್ತಾನಾದರೂ, ಹಾರ್ಪರ್‌ ಒಂದು ಕ್ಷೌರದ ಕತ್ತಿಯಿಂದ ಕೊನ್ರಾಡ್‌ಗೆ ಪ್ರಾಣಾಂತಿಕ ಗಾಯವನ್ನುಂಟುಮಾಡುತ್ತಾನೆ. ಇದು ಪಕ್ಷದ ಪ್ರಮುಖ ಪದಾಧಿಕಾರಿಗಳೆಲ್ಲರ (ನಾಯಕ‌, ಫೇಟ್‌, ಮತ್ತು ದಿ ಫಿಂಗರ್‌, ದಿ ಐ, ದಿ ಇಯರ್‌ ಮತ್ತು ದಿ ಮೌತ್‌ ಗುಂಪುಗಳ ಮುಖ್ಯಸ್ಥರ) ಸಾವಿಗೆ ಕಾರಣವಾಗುತ್ತದೆ. ಕೇವಲ ಫಿಂಚ್‌ (ದಿ ನೋಸ್‌ ಗುಂಪಿನ ಮುಖ್ಯಸ್ಥ) ಉಳಿದುಕೊಳ್ಳುತ್ತಾನೆ.

Vಯ ರೂಪದಲ್ಲಿ ಒಂದು ಜನಸಮೂಹದ ಮುಂದೆ ಕಾಣಿಸಿಕೊಳ್ಳುವ ಎವೆ, ಆನಂತರದ ದಿನದಂದು ಡೌನಿಂಗ್‌ ಸ್ಟ್ರೀಟ್‌ ಧ್ವಂಸವಾಗುತ್ತದೆ ಎಂದು ಘೋಷಿಸುವುದರ ಜೊತೆಗೆ ಜನಜಂಗುಳಿಗೆ ಹೀಗೆ ಹೇಳುತ್ತಾಳೆ: ".... ಮುಂದೆ ಏನು ಬರುತ್ತದೆ ಎಂಬುದನ್ನು ನೋಡಿಕೊಂಡು ಆಯ್ಕೆಮಾಡಿ. ನಿಮ್ಮದೇ ಆದ ಜೀವಗಳು ಬೇಕೋ, ಅಥವಾ ಸೆರೆವಾಸಕ್ಕೆ ಮರಳುತ್ತೀರೋ". ಅದಾದ ಮರುಕ್ಷಣವೇ ಒಂದು ಸಾರ್ವತ್ರಿಕ ಬಂಡಾಯ ಪ್ರಾರಂಭವಾಗುತ್ತದೆ. ಒಂದು ಕಲ್ಲಿನಿಂದ ತಲೆಗೆ ಪೆಟ್ಟು ತಿನ್ನುವ ಡೊಮಿನಿಕ್‌ ರಕ್ಷಣೆಗಾಗಿ ಓಡುತ್ತಿರುವಾಗ ಪ್ರಜ್ಞೆ ತಪ್ಪುತ್ತಾನೆ. ಅವನ ಕೊನೆಯ ಪ್ರಜ್ಞೆಯು ಎವೆಯು Vಯಂತೆ ವೇಷಮರೆಸಿಕೊಂಡಿರುವುದನ್ನು ಚಿತ್ರಿಸುತ್ತದೆ. ಸ್ಫೋಟಕ-ಹೇರಿದ, ಅವನ ಕಳೇಬರವನ್ನು ಒಳಗೊಂಡಿರುವ ಒಂದು ಭೂಗತ ಟ್ರೇನನ್ನು ಬಯಸಿದ ತಾಣದ ಕೆಳಭಾಗದಲ್ಲಿ ಆಸ್ಫೋಟವಾಗಲು ಕಳಿಸುವುದರೊಂದಿಗೆ, ತನ್ನ ಆಪ್ತ ಸಲಹೆಗಾರನಿಗೆ ಒಂದು "ವೈಕಿಂಗ್‌ ಶೈಲಿಯ ಅಂತ್ಯಕ್ರಿಯೆ"ಯನ್ನು ನೀಡುವ ಮೂಲಕ, V ಅಂದುಕೊಂಡಿದ್ದ ಬುಡಮೇಲು ಮಾಡುವ ಅಂತಿಮ ಕೃತ್ಯವನ್ನು ಎವೆ ಸಂಪೂರ್ಣಗೊಳಿಸುತ್ತಾಳೆ ಮತ್ತು 10 ಡೌನಿಂಗ್‌ ಸ್ಟ್ರೀಟ್‌‌‌ನ್ನು[] ನಾಶಪಡಿಸುತ್ತಾಳೆ. ಎವೆಯು (V ಆಗಿ) ತನ್ನನ್ನು ಅವಳ ಸ್ವಂತ ಉತ್ತರಾಧಿಕಾರಿಯಾಗಿ ತರಬೇತು ನೀಡುವ ಉದ್ದೇಶ ಹೊಂದಿದ್ದಾಳೆ ಎಂಬುದನ್ನು ಪರೋಕ್ಷವಾಗಿ ಸೂಚಿಸುವಂತೆ ಷ್ಯಾಡೋ ಗ್ಯಾಲರಿಯಲ್ಲಿ ಡೊಮಿನಿಕ್‌ ಎಚ್ಚರಗೊಳ್ಳುತ್ತಾನೆ. ರಾತ್ರಿಯುರುಳುತ್ತಿದ್ದಂತೆ, ನಗರದಲ್ಲಿ ಉಲ್ಬಣವಾಗುತ್ತಿರುವ ಅಸ್ತವ್ಯಸ್ತತೆಯನ್ನು ಫಿಂಚ್‌ ವೀಕ್ಷಿಸುತ್ತಾನೆ ಮತ್ತು ಹೆಲೆನ್‌ ಹೇಯರ್‌ಳನ್ನು ಆಕಸ್ಮಿಕವಾಗಿ ಸಂಧಿಸುತ್ತಾನೆ. ತನ್ನ ಕಾರು ತಲೆಕೆಳಗಾದ ನಂತರ ಮತ್ತು ತನ್ನ ಸಾಮಗ್ರಿಗಳು ಕಳುವಾದ ನಂತರ, ತನ್ನ ಉಳಿವಿಗಾಗಿ ಆಕೆ ಸ್ಥಳೀಯ ಅಲೆಮಾರಿಗಳ ಒಡನಾಟವನ್ನು ಪಡೆದಿರುತ್ತಾಳೆ. ಇಬ್ಬರೂ ಪರಸ್ಪರರ ಗುರುತು ಹಿಡಿದಾಗ, ಹೆಲೆನ್‌ ಫಿಂಚ್‌ನನ್ನು ತಬ್ಬಿಕೊಂಡು ತಾವು ಒಂದು ಸಣ್ಣ ಸೇನೆಯನ್ನು ಹುಟ್ಟುಹಾಕಿ ಸುವ್ಯವಸ್ಥೆಯನ್ನು ಮರಳಿ ಸ್ಥಾಪಿಸಲು ಸಾಧ್ಯ ಎಂದು ಹೇಳುತ್ತಾಳೆ. ಫಿಂಚ್‌ ಹೆಲೆನ್‌ಳನ್ನು ಮೌನವಾಗಿ ದೂರತಳ್ಳುತ್ತಾನೆ ಮತ್ತು ಇದಕ್ಕೆ ಕೋಪಗೊಂಡ ಆಕೆ ಬದ್ಧದ್ವೇಷದ ನಿಂದನೆಗಳ ಸುರಿಮಳೆಯನ್ನೇ ಸುರಿಸುವ ಮೂಲಕ ಪ್ರತಿಕ್ರಿಯಿಸುತ್ತಾಳೆ. ಅವನು ಅವಳನ್ನು ಮತ್ತು ಅಲ್ಲಿನ ಅಲೆಮಾರಿಗಳನ್ನು ಅಲ್ಲಿಯೇ ಬಿಟ್ಟು, ಏರಿಯೊಂದನ್ನು ಇಳಿದು, ಒಂದು ತೊರೆದಿರುವ ಮೋಟಾರುಹಾದಿಗೆ ತಲುಪುತ್ತಾನೆ ಮತ್ತು "ಹ್ಯಾಟ್‌ಫೀಲ್ಡ್‌ ಅಂಡ್‌ ದಿ ನಾರ್ತ್‌" ಎಂದು ಬರೆದಿರುವ ಸೂಚನಾಫಲಕವನ್ನು ನೋಡುತ್ತಾನೆ. ತೊರೆಯಲಾಗಿರುವ ಮೋಟಾರುಹಾದಿಯ ಕೆಳಗೆ ಫಿಂಚ್‌ ನಡೆದುಕೊಂಡು ಹೋಗುತ್ತಿರುವುದನ್ನು, ಎಲ್ಲಾ ಬೀದಿದೀಪಗಳೂ ಮಬ್ಬಾಗಿರುವುದನ್ನು ಅಂತಿಮ ಅಂಕಣವು ತೋರಿಸುತ್ತದೆ. ಬ್ರಿಟನ್ನಿನ ಭವಿಷ್ಯತ್ತನ್ನು ಅನಿಶ್ಚಿತತೆಗೆ ದೂಡುವ ಮೂಲಕ, ಅಲ್ಲಿನ ಅಧಿಕಾರದ ಎಲ್ಲಾ ಸ್ವರೂಪಗಳೂ ಈಗ ಕಣ್ಮರೆಯಾಗುತ್ತವೆ.

ಪಾತ್ರಗಳು

ಬದಲಾಯಿಸಿ

ಪ್ರಮುಖ ಪಾತ್ರಗಳು

ಬದಲಾಯಿಸಿ

ಈತ ಮುಖವಾಡ ಧರಿಸಿರುವ ಓರ್ವ ಕ್ರಾಂತಿಕಾರಿ;

ಒಂದು ಪ್ರಳಯ ಸೂಚಕದ--ನಂತರದ ಯುನೈಟೆಡ್‌ ಕಿಂಗ್‌ಡಂನ್ನು ಆಳುತ್ತಿರುವ ಬಲಪಂಥೀಯ ನಿರಂಕುಶ ಪ್ರಭುತ್ವವಾದ ನೋರ್ಸ್‌ಫೈರ್‌‌ನ ನಾಯಕರನ್ನು ವ್ಯವಸ್ಥಿತವಾಗಿ ಕೊಲ್ಲಲು ಈತ ಪ್ರಯತ್ನಿಸುತ್ತಿರುತ್ತಾನೆ. ಸ್ಫೋಟಕಗಳು, ಕುತಂತ್ರ, ಮತ್ತು ಕಂಪ್ಯೂಟರ್‌ ಮೂಲಕ ಅಕ್ರಮ ಮಾಹಿತಿ ಸಂಗ್ರಹಿಸುವಿಕೆ ಇವೇ ಮೊದಲಾದವುಗಳ ಕಲೆಗಳಲ್ಲಿ ಅವನು ಪರಿಣತಿಯನ್ನು ಪಡೆದಿರುತ್ತಾನೆ, ಮತ್ತು ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಅಗಾಧವಾದ ಬುದ್ಧಿಮತ್ತೆಯನ್ನು ಹೊಂದಿರುತ್ತಾನೆ. ಪ್ರಯೋಗವೊಂದರ ಏಕೈಕ ಜೀವಂತ ವ್ಯಕ್ತಿಯಾಗಿ ಆತ ಹೊರಹೊಮ್ಮಿರುತ್ತಾನೆ. ಈ ಪ್ರಯೋಗದಲ್ಲಿ ಬಳಸಿಕೊಳ್ಳಲಾಗಿದ್ದ ನಾಲ್ಕು ಡಜನ್‌ನಷ್ಟು ಸೆರೆಯಾಳುಗಳಿಗೆ "ಬ್ಯಾಚ್‌ 5" ಎಂದು ಕರೆಯಲಾಗುವ ಒಂದು ಪಿಟ್ಯುಯೇರಿನ್‌/ಪೈನಿಯೇರಿನ್‌ ಸಂಯುಕ್ತದ ಚುಚ್ಚುಮದ್ದುಗಳನ್ನು ನೀಡಲಾಗಿರುತ್ತದೆ. ಈ ಸಂಯುಕ್ತವು ವ್ಯಾಪಕವಾದ ಕೋಶೀಯ ವೈಪರೀತ್ಯಗಳನ್ನುಂಟುಮಾಡಿ, ಅಂತಿಮವಾಗಿ Vಯನ್ನು ಹೊರತುಪಡಿಸಿ ಅಧ್ಯಯನಕ್ಕೊಳಪಡಿಸಿದ ಇತರೆಲ್ಲರ ಸಾವಿಗೂ ಕಾರಣವಾಗುತ್ತದೆ. ಈ ಸಂಯುಕ್ತವು Vಗೆ ವರ್ಧಿಸಲ್ಪಟ್ಟ ಬಲ, ಪ್ರತಿವರ್ತನಗಳು, ಸಹಿಷ್ಣುತೆ ಮತ್ತು ನೋವನ್ನು ತಡೆದುಕೊಳ್ಳುವ ಶಕ್ತಿ ಇವೇ ಮೊದಲಾದವುಗಳನ್ನು ನೀಡಿತು ಎಂದು ಅನೇಕ ಜನರು ನಂಬುತ್ತಾರಾದರೂ, ಇದರ ಕುರಿತಾದ ಯಾವುದೇ ಸಮರ್ಥನೆಯೂ ಪುಸ್ತಕದಲ್ಲಿಲ್ಲ; ತಾನು ಕೇವಲ ಒಬ್ಬ ಮನುಷ್ಯ ಎಂದು V ಸಮರ್ಥಿಸಿಕೊಳ್ಳುತ್ತಾನೆ. ಚುಚ್ಚುಮದ್ದಿನಿಂದಾಗಿ V ಹುಚ್ಚುಹಿಡಿದ ಸ್ಥಿತಿಯನ್ನು ತಲುಪಿದ್ದ ಎಂದು ಡಾ. ಸರಿಡ್ಜ್‌ ನಂಬುತ್ತಾಳಾದರೂ, ಸ್ವಾತಂತ್ರ್ಯದೆಡೆಗಿನ ಮೊದಲ ಹೆಜ್ಜೆಯಾಗಿ ಅವನು ಬುದ್ಧಿಭ್ರಮಣೆಯ ಸೋಗುಹಾಕಿರುವುದರ ಸಾಧ್ಯತೆಯು ಇನ್ನೂ ಮುಕ್ತವಾಗಿ ಉಳಿದುಕೊಂಡಿದೆ. ಕಾದಂಬರಿಯಾದ್ಯಂತ, ತನ್ನ ವಿಶಿಷ್ಟ ಗುರುತಾಗಿರುವ ಗೈ ಫಾಕ್ಸ್‌ ಮುಖವಾಡ, ನೀಳವಾದ ದಟ್ಟ-ಕಂದುಬಣ್ಣದ ಕೂದಲಿನ ಭುಜದವರೆಗಿನ ಉದ್ದದ ಒಂದು ಚೌರಿಟೋಪಿ ಮತ್ತು ಕಪ್ಪು ಕೈಗವುಸುಗಳು, ತುಂಡು ಕವಚ, ಷರಾಯಿಗಳು ಮತ್ತು ಬೂಟು ಇವೇ ಮೊದಲಾದವನ್ನು ಒಳಗೊಂಡಿರುವ ಒಂದು ಉಡುಗೆ ತೊಡುಗೆಗಳನ್ನು ಹೆಚ್ಚೂಕಮ್ಮಿ ಎಲ್ಲ ಯಾವಾಗಲೂ V ಧರಿಸುತ್ತಾನೆ.  ಮುಖವಾಡವನ್ನು ಧರಿಸದಿರುವಾಗ, ಅವನ ಮುಖವನ್ನು ತೋರಿಸಲಾಗಿಲ್ಲ.  ಷ್ಯಾಡೋ ಗ್ಯಾಲರಿಯ ಹೊರಗಡೆ ಇರುವಾಗ, ಸರಿಸುಮಾರು 1600ರ ದಶಕದ ಒಂದು ಶಂಕುವಿನಾಕಾರದ ಟೋಪಿ ಹಾಗೂ ನೆಲಮುಟ್ಟುವಷ್ಟು-ಉದ್ದದ ಜೋಲಂಗಿಯನ್ನು ಧರಿಸುವ ಮೂಲಕ ಈ ಉಡುಗೆ-ತೊಡುಗೆಯ ಸಮಗ್ರ ಪರಿಣಾಮವನ್ನು ಅವನು ಸಂಪೂರ್ಣಗೊಳಿಸುತ್ತಿದ್ದ. ಕಠಾರಿಗಳು, ಸ್ಫೋಟಕಗಳು ಮತ್ತು ಅಶ್ರುವಾಯು ಇವು ಅವನ ಆಯ್ಕೆಯ ಶಸ್ತ್ರಾಸ್ತ್ರಗಳಲ್ಲಿ ಸೇರಿದ್ದವು.

ಈ ಪುಸ್ತಕವು ಸೂಚಿಸುವ ಪ್ರಕಾರ, V ತನ್ನ ಹೆಸರನ್ನು "V" ಎಂಬ ರೋಮನ್‌ ಅಂಕಿಯಿಂದ ತೆಗೆದುಕೊಂಡ. ಇದು ಪ್ರಯೋಗದ ಅವಧಿಯಲ್ಲಿ ಅವನನ್ನು ಹಿಡಿದಿಡಲಾಗಿದ್ದ ಕೋಣೆಯ ಅನುಕ್ರಮ ಸಂಖ್ಯೆಯಾಗಿತ್ತು. ಇದು ಅವನ ಹೆಸರಿನ ಹುಟ್ಟಿನ ಕುರಿತಾದ ಮುಖ್ಯ ವಿವರಣೆಯಾಗಿದೆ. ಆದಾಗ್ಯೂ, ಇತರ ಊಹಾಸಿದ್ಧಾಂತಗಳು ಅವನ ಸಂಕೇತ ನಾಮ ವನ್ನು ವಿವರಿಸಬಹುದು. ಉದಾಹರಣೆಗೆ, IIನೇ ಜಾಗತಿಕ ಸಮರದಲ್ಲಿನ ಮಿತ್ರರಾಷ್ಟ್ರಗಳ ಹೋರಾಟದಲ್ಲಿ ಮೈತ್ರಿ ಒಕ್ಕೂಟದ ಶಕ್ತಿಗಳನ್ನು ಜಯಿಸಲು ವಿನ್ಸ್‌ಟನ್‌ ಚರ್ಚಿಲ್‌ನಿಂದ ಬಳಸಲ್ಪಟ್ಟ "V ಫಾರ್‌ ವಿಕ್ಟರಿ!" ಎಂಬ ಪುನಶ್ಚೇತನಗೊಳಿಸುವ ಕೂಗಿನ ಅವನ ಹೆಸರಿನಲ್ಲಿ ಅಲ್ಲೊಂದು ಸ್ಪಷ್ಟವಾದ ಪ್ರತಿಧ್ವನಿಯಿದೆ. ಇಲ್ಲಿ ಇದು ಸರಳವಾಗಿ "V ಫಾರ್ ವೆಂಡೆಟ್ಟಾ" ಎಂಬುದಾಗಿ ರೂಪಾಂತರಗೊಂಡಿದೆ. ವೃತ್ತವೊಂದರೊಳಗಿನ V ಅಕ್ಷರವು, ಕೇವಲ ಒಂದು ತಲೆಕೆಳಗಾದ ಅರಾಜಕತೆಯ ಚಿಹ್ನೆಯಾಗಿದ್ದು, ಒಂದು A ಚಿಹ್ನೆಯನ್ನು ಗುರುತು ಮಾಡುವ ಓರೆಗೆರೆಯನ್ನು ಅದು ಹೊಂದಿರುವುದಿಲ್ಲ ಎಂಬುದನ್ನೂ ಗಮನಿಸಬೇಕು.

ಪುಸ್ತಕದ ಕೊನೆಯಲ್ಲಿ, ತನ್ನ ಮೇಲೆ ಗುಂಡುಹಾರಿಸಲು ಮುಖ್ಯ ಇನ್ಸ್‌ಪೆಕ್ಟರ್‌ ಎರಿಕ್‌ ಫಿಂಚ್‌ಗೆ V ಅವಕಾಶ ಮಾಡಿಕೊಡುತ್ತಾನೆ, ಹಾಗೂ ಎವೆಯ ತೋಳುಗಳಲ್ಲಿ ಸಾಯುತ್ತಾನೆ. ಎವೆಯು ನಂತರದಲ್ಲಿ Vಯ ಗುರುತನ್ನು ತಾಳುತ್ತಾಳೆ ಹಾಗೂ ಡೌನಿಂಗ್‌ ಸ್ಟ್ರೀಟ್‌‌ನ್ನು ತನ್ನ ಅಂತಿಮ ಗಮ್ಯಸ್ಥಾನವನ್ನಾಗಿ ಹೊಂದಿರುವ ಒಂದು ಬಾಂಬ್‌-ಹೊತ್ತ ಟ್ರೇನಿನೊಳಗೆ ನಿಜವಾದ Vಯ ಕಳೇಬರವನ್ನು ಇರಿಸುವ ಮೂಲಕ, ಅವನಿಗೆ ಒಂದು ವೈಕಿಂಗ್‌ ಶೈಲಿಯ ಅಂತ್ಯಕ್ರಿಯೆಯನ್ನು ಮಾಡುತ್ತಾಳೆ. Vಯು ಧರಿಸಿರುವ ಮುಖವಾಡವು ಅವನ ಧ್ವನಿಯನ್ನು ತಿರುಚುತ್ತವೆ ಎಂಬುದನ್ನು ಪ್ರಾಯಶಃ ತೋರಿಸಲೋ ಏನೋ ಅವನ ಪಾತ್ರದ ಸಂಭಾಷಣೆಯ ಗುಳ್ಳೆಯಾಕಾರದ ಲೇಖಗಳು ಕರಾರುವಾಕ್ಕಾಗಿ ಅಂಡಾಕಾರದಲ್ಲಿ ಇರುವ ಬದಲು "ವಿಕಾರಗೊಳಿಸಿರುವಂತೆ ಮತ್ತು ತಿರುಚಿರುವಂತೆ" ಕಾಣುತ್ತವೆ. ಅಲನ್‌ ಮೂರ್‌‌ನ ಮತ್ತೊಂದು ಕೃತಿಯಾದ ವಾಚ್‌ಮೆನ್‌‌ ನಲ್ಲಿ ರೋರ್‌ಸ್ಕಾಚ್‌ ಪಾತ್ರವು ಕೂಡಾ ಒಂದು ಮುಖವಾಡವನ್ನು ಧರಿಸುತ್ತದೆ ಹಾಗೂ ಅದನ್ನು ಧರಿಸಿದಾಗೆಲ್ಲಾ ಇದೇ ತೆರನಾದ ಮಾತಿನ ತಿರುಚಿರುವ ಗುಳ್ಳೆಯಾಕಾರದ ಲೇಖಗಳನ್ನು ಬಳಸಿಕೊಳ್ಳುತ್ತದೆ, ಹಾಗೂ ಮುಖವಾಡ ಧರಿಸದೇ ಇದ್ದಾಗ ಎಂದಿನ ಅಂಡಾಕಾರದ ಲೇಖಗಳನ್ನು ಬಳಸಿಕೊಳ್ಳುತ್ತದೆ. ಮತ್ತೊಬ್ಬ ಲೇಖಕನ ಕುರಿತು V ಉಲ್ಲೇಖಿಸಿದಾಗಲೆಲ್ಲಾ, ಉದ್ಧರಣ ಚಿಹ್ನೆಗಳು ನಿಖರವಾಗಿ ಕಾಣಿಸುತ್ತವೆ.

ಎವೆರಿ ಹ್ಯಾಮಂಡ್‌

ಬದಲಾಯಿಸಿ

ಕಥೆಯ ಒಂದು ಪ್ರಮುಖ ಪಾತ್ರವಾದ ಎವೆರಿ ಹ್ಯಾಮಂಡ್‌ ಎಂಬ ಪ್ರಾಯದ ಹುಡುಗಿಯನ್ನು "ಫಿಂಗರ್‌ಮೆನ್‌" ಗುಂಪಿನಿಂದ V ರಕ್ಷಿಸುತ್ತಾನೆ. ಅವಳನ್ನು Vಯ ಗುಂಪಿನೊಳಗೆ ತೆಗೆದುಕೊಳ್ಳಲಾಗುತ್ತದೆ. Vಯ ಪೂರ್ವಚರಿತ್ರೆ, ಸರ್ಕಾರದ ವಿರುದ್ಧವಾಗಿರುವ ಅವನ ಸದ್ಯದ ಹೋರಾಟ ಇವೆಲ್ಲದರ ಕುರಿತೂ ತಿಳಿದುಕೊಳ್ಳುವ ಅವಳು ಅಂತಿಮವಾಗಿ ಅವನ ಉತ್ತರಾಧಿಕಾರಿಯಾಗುತ್ತಾಳೆ. ಅಷ್ಟೇ ಅಲ್ಲ, ಮುಖ್ಯ ಇನ್ಸ್‌ಪೆಕ್ಟರ್‌ ಎರಿಕ್‌ ಫಿಂಚ್‌ನ ಸಹಭಾಗಿಯಾದ ಡೊಮಿನಿಕ್‌ ಸ್ಟೋನ್‌ನಲ್ಲಿ ಭವಿಷ್ಯದ ಓರ್ವ ಉತ್ತರಾಧಿಕಾರಿಯನ್ನೂ ಅವಳು ಕಂಡುಕೊಳ್ಳುತ್ತಾಳೆ.

ಎರಿಕ್‌ ಫಿಂಚ್‌

ಬದಲಾಯಿಸಿ

ಈತ ನ್ಯೂ ಸ್ಕಾಟ್ಲೆಂಡ್‌ ಯಾರ್ಡ್‌ನ ಮುಖ್ಯಸ್ಥ ಹಾಗೂ ತನಿಖಾಕಾರ್ಯಗಳ ಮಂತ್ರಿ. ಆ ತನಿಖಾ ಸಂಸ್ಥೆಯು "ನೋಸ್‌" ಎಂದು ಕರೆಯಲ್ಪಡುತ್ತಿರುತ್ತದೆ. ಫಿಂಚ್‌ ಓರ್ವ ವ್ಯಾವಹಾರಿಕ ಸಿದ್ಧಾಂತಿಯಾಗಿದ್ದು, ಸರ್ಕಾರದ ಪಕ್ಷವನ್ನು ವಹಿಸುತ್ತಿರುತ್ತಾನೆ. ಏಕೆಂದರೆ ಒಂದು ಅಸ್ತವ್ಯಸ್ತತೆಯ ಪ್ರಪಂಚದಲ್ಲಿ ಸೇವೆಸಲ್ಲಿಸುವುದಕ್ಕಿಂತ ಸುವ್ಯವಸ್ಥೆಯ ಪ್ರಪಂಚದಲ್ಲಿ ಸೇವೆ ಸಲ್ಲಿಸುವುದು ಅವನ ಉದ್ದೇಶವಾಗಿರುತ್ತದೆ. ಅದೇನೇ ಇದ್ದರೂ, ಅವನು ಗೌರವಾರ್ಹ ಮತ್ತು ಸಭ್ಯನಾದ ವ್ಯಕ್ತಿಯಾಗಿರುತ್ತಾನೆ, ಮತ್ತು ಅವನು ವಿಶ್ವಾಸಾರ್ಹನಾಗಿದ್ದು ಯಾವುದೇ ಮಹತ್ವಾಕಾಂಕ್ಷೆ ಇಲ್ಲದವನಾಗಿರುವುದರಿಂದ ನಾಯಕನು ಅವನ ಮೇಲೆ ನಂಬಿಕೆಯಿಟ್ಟಿರುತ್ತಾನೆ. ಅಂತಿಮವಾಗಿ ಅವನು ನೋರ್ಸ್‌ಫೈರ್‌ನ ದುಷ್ಕೃತ್ಯಗಳೊಂದಿಗಿನ ತನ್ನ ದುಷ್ಕಾರ್ಯಭಾಗಿತ್ವಗಳ ಕುರಿತು ದುಃಖವನ್ನು ವ್ಯಕ್ತಪಡಿಸುವ ಮೂಲಕ, ತನ್ನದೇ ಆದ ಅರಿವು ಮೂಡಿಕೆ ಹಾಗೂ ಆತ್ಮಜ್ಞಾನವನ್ನು ಸಾಧಿಸುತ್ತಾನೆ; ಅದೇನೇ ಇದ್ದರೂ, ಅವನು Vಯನ್ನು ಕೊಲ್ಲುತ್ತಾನೆ. ಒಂದು ಹಂತದಲ್ಲಿ ಅವನು ಎಡ್ವರ್ಡ್‌ ಫಿಂಚ್‌ ಎಂಬುದಾಗಿ ಉಲ್ಲೇಖಿಸಲ್ಪಡುತ್ತಾನೆ (ಇದು ಹೆಲೆನ್‌ ಹೇಯರ್ ಕಡೆಯಿಂದ ಆದ ತಪ್ಪಾಗಿರುತ್ತದೆ‌). ಫಿಂಚ್‌ Vಯ ಪ್ರಮುಖ ಎದುರಾಳಿಯಾಗಿರುತ್ತಾನೆ ಮತ್ತು ಒಂದು ವೇಳೆ Vಯನ್ನು ಖಳನಾಯಕನನ್ನಾಗಿ ಪರಿಗಣಿಸಬೇಕೆನ್ನುವುದಾದರೆ, ಫಿಂಚ್‌ ಕಥೆಯ ಸಮಾನಾಂತರ ನಾಯಕನಾಗಿರುತ್ತಾನೆ.

ಆಡಮ್‌ J. ಸುಸಾನ್‌

ಬದಲಾಯಿಸಿ

"ದಿ ಲೀಡರ್‌" ಎಂದೂ ಚಿರಪರಿಚಿತನಾಗಿರುವ ಆಡಂ ಸುಸಾನ್‌, ನೋರ್ಸ್‌ಫೈರ್‌ ಪಕ್ಷದ ನಾಯಕನಾಗಿರುತ್ತಾನೆ ಮತ್ತು ಅವನ ಅಧಿಕಾರ ಬಲವು ದೊಡ್ಡದಾದ ರೀತಿಯಲ್ಲಿ ಔಪಚಾರಿಕವಾದದ್ದಾಗಿದ್ದರೂ, ದೇಶದ ಅಧಿಕೃತ ನಾಯಕನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಫೇಟ್‌ ಕಂಪ್ಯೂಟರ್‌ ವ್ಯವಸ್ಥೆಯೊಂದಿಗೆ ಸುಸಾನ್‌ಗೆ ಪ್ರೀತಿಯಿರುತ್ತದೆ ಮತ್ತು ಸಹವರ್ತಿ ಮಾನವರೊಂದಿಗಿನ ತನ್ನ ಸಹವಾಸಕ್ಕಿಂತ ಕಂಪ್ಯೂಟರ್‌ನ ಸಾಹಚರ್ಯಕ್ಕೆ ಅವನು ಆದ್ಯತೆ ನೀಡುತ್ತಿರುತ್ತಾನೆ. ತನ್ನದೇ ಸ್ವಂತದ ಮನಸ್ಸು ಜಾರಿದಾಗ, ಅಸ್ತಿತ್ವದಲ್ಲಿರುವ ಜೀವಿಗಳೆಂದರೆ ತಾನು ಮತ್ತು 'ದೇವರು' ಮಾತ್ರ ಎಂಬ ಒಂದು ಸ್ವಾತ್ಮೈಕಸತ್ತಾಕವಾದಿ ನಂಬಿಕೆಯನ್ನೂ ಸುಸಾನ್‌ ವ್ಯಕ್ತಪಡಿಸುತ್ತಾನೆ (ಫೇಟ್‌ ಕಂಪ್ಯೂಟರ್‌ನ್ನು ಉಲ್ಲೇಖಿಸುತ್ತಾ). "ನಿಷ್ಕಳಂಕತೆ"ಯ ಉಗ್ರ ಬಲಪಂಥೀಯ ದೃಷ್ಟಿಕೋನ ಮತ್ತು ವರ್ಣಭೇದ ನೀತಿವಾದದ ಅಭಿಮತಗಳ ಕಟ್ಟಾ ಅನುಯಾಯಿಯಾಗಿರುವ ಆತ, ನಾಗರಿಕ ವಿಮೋಚನೆಗಳು ಅಪಾಯಕಾರಿ ಮತ್ತು ಅನಗತ್ಯ ಎಂದು ಪ್ರಾಮಾಣಿಕವಾಗಿ ನಂಬಿರುತ್ತಾನೆ. ಆದಾಗ್ಯೂ, ತನ್ನ ಜನರ ಕುರಿತಾಗಿ ನಿಜವಾದ ಕಾಳಜಿಯನ್ನು ಹೊಂದಿರುವವನಂತೆ ಕಾಣಿಸುತ್ತಾನೆ, ಮತ್ತು ಉಗ್ರ ಬಲಪಂಥೀಯ ದೃಷ್ಟಿಕೋನವನ್ನು ಅಪ್ಪಿಕೊಂಡಿರುವ ಅವನ ಸ್ಥಿತಿಯು ತನ್ನದೇ ಸ್ವಂತದ ಏಕಾಂಗಿತನಕ್ಕೆ ಆತ ನೀಡಿರುವ ಒಂದು ಪ್ರತಿಕ್ರಿಯೆ ಎಂಬುದನ್ನು ಸೂಚಿಸುತ್ತದೆ. ಯುದ್ಧಕ್ಕೆ ಮುಂಚೆ, ಅವನೊಬ್ಬ ಮುಖ್ಯ ಪೇದೆಯಾಗಿದ್ದು ಧಾರ್ಮಿಕ ಗಾಢನಂಬಿಕೆಗಳನ್ನು ಹೊಂದಿದವನಾಗಿರುತ್ತಾನೆ (ಸಲಿಂಗಕಾಮಿಗಳನ್ನು ಕುರಿತು ಒಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, 'ತಾವೇ ಸೃಷ್ಟಿಸಿದ ಒಂದು ರೊಚ್ಚುಗುಂಡಿಯಲ್ಲಿ ಈಜುತ್ತಿರುವ ಮಂದಿ' ಎಂದು ದೂಷಿಸಿದ್ದಕ್ಕಾಗಿ ಜೇಮ್ಸ್‌ ಆಂಡರ್ಟನ್‌ ಎಂಬ ಹೆಸರಿನ ಮ್ಯಾಂಚೆಸ್ಟರ್‌‌ನ ಮುಖ್ಯಪೇದೆಯ ಕುಖ್ಯಾತನಾಗಿ ಮಾರ್ಪಟ್ಟ ನಂತರ, ತಾನು ಆದರ್ಶೀಕರಿಸಲ್ಪಟ್ಟಿರುವುದನ್ನು ಅಥವಾ ಮೇಲ್ಪಂಕ್ತಿಯಾಗಿಸಲ್ಪಟ್ಟಿರುವುದನ್ನು ತನ್ಮೂಲಕ ಸುಸಾನ್‌ ಸೂಚಿಸುತ್ತಾನೆ). ಕಾದಂಬರಿಯ ಅಂತ್ಯದಲ್ಲಿ, ತನ್ನ ಹಿಂದಿನ ಲೆಫ್ಟಿನೆಂಟ್‌ಗಳ ಪೈಕಿ ಒಬ್ಬನ ವಿಧವೆಯಾದ ರೋಸ್‌ ಆಲ್ಮಂಡ್‌ಳಿಂದ ಅವನು ಮೋಸದಿಂದ ಕೊಲ್ಲಲ್ಪಡುತ್ತಾನೆ. ಚಲನಚಿತ್ರ ರೂಪಾಂತರದಲ್ಲಿ, ಅವನಿಗೆ "ಆಡಮ್‌ ಸಟ್ಲರ್‌ " ಎಂದು ಹೆಸರಿಸಲಾಗಿದ್ದು, ಪೀಟರ್‌ ಕ್ರೀಡಿಯಿಂದ ಅವನು ಕೊಲ್ಲಲ್ಪಡುತ್ತಾನೆ (ಕೆಳಗೆ ನೋಡಿ).

ಕಿರು ಪಾತ್ರಗಳು

ಬದಲಾಯಿಸಿ
  • ಗೋರ್ಡಾನ್‌ ಡೀಟ್ರಿಕ್‌ : ಈತ ಕಳ್ಳ ಸಾಗಾಣಿಕೆಯಲ್ಲಿ ಪರಿಣತಿಯನ್ನು ಪಡೆದಿರುವ ಓರ್ವ ಸಣ್ಣ ಅಪರಾಧಿ. ಎವೆರಿ ಹ್ಯಾಮಂಡ್‌ಗೆ ಆಶ್ರಯಕೊಡುವ ಈತ, ನಂತರದಲ್ಲಿ ಅವಳೊಂದಿಗೆ ಪ್ರಣಯ ಚೆಲ್ಲಾಟವಾಡುತ್ತಾನೆ. ಸ್ಕಾಟ್ಲೆಂಡ್‌‌ಸಂಘಟಿತ ಅಪರಾಧದ ಕೂಟವನ್ನು ಲಂಡನ್‌ಗೂ ವಿಸ್ತರಿಸಲು ಪ್ರಯತ್ನಿಸುತ್ತಿರುವ ಅಲಿಸ್ಟೇರ್‌ ಹಾರ್ಪರ್ ಎಂಬ ಓರ್ವ ನಿರ್ದಯಿ ದರೋಡೆಕೋರನಿಂದ ಈತ ಕೊಲ್ಲಲ್ಪಡುತ್ತಾನೆ.
  • ಲೆವಿಸ್‌ ಪ್ರೊಥೆರೊ: ಹಿಂದೊಮ್ಮೆ Vಯನ್ನು ಹಿಡಿದಿಡಲಾಗಿದ್ದ "ಲಾರ್ಕ್‌ಹಿಲ್‌" ಸೆರೆಶಿಬಿರದ ಹಿಂದಿನ ಆಜ್ಞಾಪಕನಾಗಿದ್ದ (ಕಮಾಂಡರ್‌) ಈತ, ನಂತರದಲ್ಲಿ "ಮಾಹಿತಿ"ಯನ್ನು ಸಾರ್ವಜನಿಕರಿಗೆ ದಿನವೂ ಪ್ರಸಾರ ಮಾಡುವ ಸರ್ಕಾರಿ ರೇಡಿಯೋದ ಪ್ರಸಾರಕರ್ತನಾದ "ದಿ ವಾಯ್ಸ್‌ ಆಫ್‌ ಫೇಟ್‌" ಆಗಿ ಮಾರ್ಪಡುತ್ತಾನೆ. ಲೆವಿಸ್‌ನನ್ನು ಒಯ್ಯುತ್ತಿದ್ದ ಟ್ರೇನ್‌ ಒಂದನ್ನು ನಿಲ್ಲಿಸುವ V, ಅವನನ್ನು ಅಪಹರಿಸುತ್ತಾನೆ. ಬ್ಯಾಚ್‌ 5ಕ್ಕೆ ಸೇರಿದ ಔಷಧಗಳ ಒಂದು ಅತಿಯಾದ ಪ್ರಮಾಣದ ಸಂಯೋಜನೆಯ ಸೇವನೆಯಿಂದಾಗಿ ಮತ್ತು Vಯ ಕಾರ್ಯಾಗಾರದಲ್ಲಿನ ಲಾರ್ಕ್‌ಹಿಲ್‌ ಶಿಬಿರದ ಒಂದು ಅಣಕು ಮರುಸೃಷ್ಟಿಯ ತಾಣದಲ್ಲಿ ತನ್ನ ಅಮೂಲ್ಯವಾದ ಬೊಂಬೆ ಸಂಗ್ರಹವು ಸುಡಲ್ಪಟ್ಟಿದ್ದನ್ನು ನೋಡಿದ ಆಘಾತದಿಂದಾಗಿ ಆತ ಹುಚ್ಚು ಹಿಡಿದ ಸ್ಥಿತಿಗೆ ತಲುಪಿರುತ್ತಾನೆ. ಕತೆಯ ಉಳಿದ ಭಾಗದಲ್ಲಿ ಆತ ಅಶಕ್ತಗೊಳಿಸಲ್ಪಟ್ಟವನಂತೆ ಉಳಿದುಕೊಳ್ಳುತ್ತಾನೆ.
  • ಬಿಷಪ್‌ ಆಂಟನಿ ಲಿಲಿಮನ್‌: ಚರ್ಚ್‌ನಲ್ಲಿನ ಪಕ್ಷದ ಧ್ವನಿಯಾಗಿರುವ ಲಿಲಿಮನ್‌ ಓರ್ವ ಭ್ರಷ್ಟ ಪಾದ್ರಿಯಾಗಿದ್ದು, ತನ್ನ ಹಲವಾರು ಪಾದ್ರಿ ಹೋಬಳಿಗಳಲ್ಲಿನ ಪ್ರಾಯದ ಹುಡುಗಿಯರಿಗೆ ಲೈಂಗಿಕ ಕಿರುಕುಳವನ್ನು ನೀಡುತ್ತಿರುತ್ತಾನೆ. ಸಂಸ್ಥಾನದಿಂದ ಒಂದು ಉನ್ನತ ನೌಕರಿಯನ್ನು ಕೊಡುವುದಕ್ಕೆ ಮುಂಚಿತವಾಗಿ, ಪ್ರೊಥೆರೊ ರೀತಿಯಲ್ಲೇ ಆತ ಲಾರ್ಕ್‌ಹಿಲ್‌ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಲಿಲಿಮನ್‌ ಓರ್ವ ಪಾದ್ರಿಯಾಗಿದ್ದು, ಬ್ಯಾಚ್‌ 5ರ ಔಷಧಗಳನ್ನು ಕೊಡಲಾಗುತ್ತಿರುವ ಸೆರೆಯಾಳುಗಳಿಗೆ ಆಧ್ಯಾತ್ಮಿಕ ಬೆಂಬಲವನ್ನು ನೀಡಲು ಅವನ ಎರವಲು ಸೇವೆಯನ್ನು ಪಡೆಯಲಾಗಿರುತ್ತದೆ. ಲಿಲಿಮನ್‌ ಎವೆರಿ ಹ್ಯಾಮಂಡ್‌ಳ (ಆಗ ಅವಳು ಓರ್ವ ಪ್ರಾಯದ ಹುಡುಗಿಯಂತೆ ಸಿಂಗರಿಸಿಕೊಂಡಿರುತ್ತಾಳೆ) ಮೇಲೆ ಬಹುಮಟ್ಟಿಗೆ ಅತ್ಯಾಚಾರ ಮಾಡಿದ ನಂತರ, Vಯಿಂದಾಗಿ ಅವನು ಪ್ರಭುಭೋಜನ ಸಂಸ್ಕಾರದಲ್ಲಿ ಸೈನೈಡ್‌-ಬೆರೆಸಿದ ಒಂದು ಬ್ರೆಡ್ಡಿನ ಬಿಲ್ಲೆಯನ್ನು ಒತ್ತಾಯಪೂರ್ವಕವಾಗಿ ಸೇವಿಸಬೇಕಾಗಿ ಬಂದಾಗ ಅವನು ಸಾಯುತ್ತಾನೆ.
  • ಡೇಲಿಯಾ ಸರಿಡ್ಜ್‌: ಈಕೆ ಲಾರ್ಕ್‌ಹಿಲ್‌ ಶಿಬಿರದ ವೈದ್ಯಳಾಗಿದ್ದು, ಮಾರಣಾಂತಿಕ ಚುಚ್ಚುಮದ್ದಿನಿಂದ Vಯು ಇವಳನ್ನು ಕೊಲ್ಲುತ್ತಾನೆ. Vಯ ಹಿಂದಿನ ಪೀಡಕರ ಪೈಕಿ ಏಕಮಾತ್ರಳಾಗಿರುವ ಸರಿಡ್ಜ್‌ ತನ್ನ ಕೃತ್ಯಗಳಿಗಾಗಿ ತೀವ್ರ ಪಶ್ಚಾತ್ತಾಪ ಪಡುತ್ತಾಳೆ, ಹಾಗೂ ತನ್ನ ಜೀವನದ ಅಂತಿಮ ಕ್ಷಣಗಳಲ್ಲಿ ಅವನಲ್ಲಿ ಕ್ಷಮೆಯನ್ನು ಕೋರುತ್ತಾಳೆ. ಅವಳಿಗೋಸ್ಕರ ತಾನು ಮಿಡಿಯುತ್ತಿರುವುದಾಗಿಯೂ ಉಲ್ಲೇಖಿಸುವ ಫಿಂಚ್‌, ಅವಳ ಸಾವಿನಿಂದಾಗಿ ತನಗೆ ಹುಚ್ಚುಹಿಡಿದಿದೆ ಎಂದು ಭಾವಿಸಿ, Vಯ ಜೀವವನ್ನು ಕೊನೆಗಾಣಿಸಲು ನಿರ್ಧರಿಸಿರುತ್ತಾನೆ.
  • ಡೆರೆಕ್‌ ಆಲ್ಮಂಡ್‌ : ಈತ ನೋರ್ಸ್‌ಫೈರ್‌ ಸರ್ಕಾರದ ಉನ್ನತ-ಶ್ರೇಣಿಯ ಅಧಿಕಾರಿಯಾಗಿರುತ್ತಾನೆ. ದಿ ಫಿಂಗರ್ ಎಂದು ಕರೆಯಲಾಗುವ ಸರ್ಕಾರದ ರಹಸ್ಯ ಆರಕ್ಷಕ ಗುಂಪನ್ನು ಈತ ನಡೆಸುತ್ತಿರುತ್ತಾನೆ. Vಯ ಗುರಿಗಳ ಪೈಕಿ ಸರಿಡ್ಜ್‌ ಕೊನೆಯವಳಾಗಿದ್ದಾಳೆ ಎಂದು ಫಿಂಚ್‌ ಇವನನ್ನು ಎಚ್ಚರಿಸುತ್ತಾನೆ. Vಯನ್ನು ತಡೆಯಲು ಸರಿಡ್ಜ್‌ಳ ಮನೆಗೆ ಇವನು ಓಡುತ್ತಾನಾದರೂ, ತನ್ನ ಕೆಲಸ ಸಾಧಿಸುವುದಕ್ಕೆ ಮುಂಚೆಯೇ Vಯಿಂದ ಕೊಲ್ಲಲ್ಪಡುತ್ತಾನೆ. ಆಲ್ಮಂಡ್‌ನ ಜಾಗಕ್ಕೆ ಪೀಟರ್‌ ಕ್ರೀಡಿ ಬರುತ್ತಾನೆ. ಕಥೆಯಲ್ಲಿ ಅಲ್ಮಂಡ್‌ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿತ್ರಿಸಲ್ಪಡುವುದಿಲ್ಲವಾದರೂ, ಕಾದಂಬರಿಯ ಪ್ರಮುಖ ಕಥಾ ವಿಸ್ತರಣೆಗಳ ಪೈಕಿ ಒಂದನ್ನು ಅವನ ಸಾವು ಚಾಲನೆಗೊಳಿಸುತ್ತದೆ; ಅಂದರೆ, ಅವನ ವಿಧವೆಯಾದ ರೋಸ್‌, ತನ್ನ ಗಂಡನನ್ನು ಕಳೆದುಕೊಂಡಿದ್ದರಿಂದಾಗಿ ನಿರ್ಗತಿಕಳಾಗಿ ಮತ್ತು ದೈಹಿಕ-ಮಾನಸಿಕ ಆಘಾತಗಳಿಗೆ ಈಡಾಗಿ ಉಳಿದುಕೊಂಡಿರುತ್ತಾಳೆ. ಆಲ್ಮಂಡ್‌ ಓರ್ವ ಭಾವಶೂನ್ಯ ವ್ಯಕ್ತಿಯಾಗಿದ್ದು, ರೋಸ್‌ಳನ್ನು ನಿಂದಿಸುವ ಸ್ವಭಾವವನ್ನು ಹೊಂದಿರುತ್ತಾನೆ. ಅವನಲ್ಲಿ ರೋಸ್‌ಗೆ ಎಂದಿಗೂ ಪ್ರೀತಿಯಿರುವುದಿಲ್ಲ. ತನ್ನ ದುಃಖ ಹಾಗೂ ಹತಾಶೆಯಲ್ಲಿ, ತನ್ನ ಶೋಚನೀಯ ಸ್ಥಿತಿಗೆ ನೋರ್ಸ್‌ಫೈರ್‌ನ ನಾಯಕ ಆಡಂ ಸುಸಾನ್‌ನನ್ನು ಕಾರಣವಾಗಿಸುತ್ತಾಳೆ, ಮತ್ತು ಕಾದಂಬರಿಯ ನಿರ್ಣಾಯಕ ಘಟ್ಟದಲ್ಲಿ ಅವನನ್ನು ಮೋಸದಿಂದ ಕೊಲ್ಲುತ್ತಾಳೆ.
  • ರೋಸ್‌ಮೇರಿ ಆಲ್ಮಂಡ್‌: ಈಕೆ ಡೆರೆಕ್‌ ಆಲ್ಮಂಡ್‌ನ ನಿಂದಿತ ಪತ್ನಿ. ಆಲ್ಮಂಡ್‌ನ ಕೊಲೆಯಾದಾಗ, ರೋಸ್‌ ಖಿನ್ನತೆಗೊಳಗಾಗುತ್ತಾಳೆ ಮತ್ತು ಸಾಹಚರ್ಯ ಹಾಗೂ ಬೆಂಬಲಕ್ಕಾಗಿ ನಿಧಾನ ಸ್ವಭಾವದ ರೋಜರ್‌ ಡಾಸ್‌ಕೊಂಬ್‌ನ (ಅವನನ್ನು ಈಕೆ ತುಂಬಾ ದ್ವೇಷಿಸುತ್ತಿರುತ್ತಾಳೆ) ಕಡೆಗೆ ಇವಳು ಓಲಬೇಕಾಗುತ್ತದೆ. Vಯ ಕೈಗಳಲ್ಲಿ ಡಾಸ್‌ಕೊಂಬ್‌ನ ಸಾವು ಸಂಭವಿಸಿದಾಗ ತನಗೆ ತಾನು ಪೋಷಿಸಿಕೊಳ್ಳುವ ಒಂದು ಮಾರ್ಗವಾಗಿ ಈಕೆ ಬಲವಂತವಾಗಿ ಓರ್ವ ಪ್ರದರ್ಶಕ ಬಾಲೆಯಾಗಬೇಕಾಗುತ್ತದೆ. Vಯು ಕಣ್ಗಾವಲು ವ್ಯವಸ್ಥೆಗಳನ್ನು ಮುಚ್ಚಿದಾಗ, ಒಂದು ಬಂದೂಕು ಕೊಳ್ಳಲು ಹಾಗೂ ಆಡಂ ಸುಸಾನ್‌ನನ್ನು ಮೋಸದಿಂದ ಕೊಲ್ಲಲು ಆ ಅವಕಾಶವನ್ನು ಇವಳು ಬಳಸಿಕೊಳ್ಳುತ್ತಾಳೆ.
  • ಹೆಲೆನ್‌ ಹೇಯರ್‌: ಈಕೆ ಕೊನ್ರಾಡ್‌ ಹೇಯರ್‌‌ನ ‌ನಿರ್ದಯಿ, ಒಳಸಂಚು ನಡೆಸುವ ಹೆಂಡತಿ. ತನ್ನ ಗಂಡನನ್ನು (ಅವನೆಡೆಗೆ ತಿರಸ್ಕಾರವನ್ನು ಹೊರತುಪಡಿಸಿ ಇವಳಿಗೆ ಇನ್ನಾವುದೇ ಭಾವನೆಯಿರುವುದಿಲ್ಲ, ಮತ್ತು ಅವನನ್ನು ಅಂತ್ಯವೊಂದಕ್ಕೆ ಕೇವಲ ಒಂದು ಮಾರ್ಗವಾಗಿ ಕಾಣುತ್ತಾಳೆ) ಹದ್ದುಬಸ್ತಿನಲ್ಲಿಡಲು, ಮತ್ತು ಅವನು ನಾಯಕನಾದ ನಂತರ ಅಂತಿಮವಾಗಿ ದೇಶವನ್ನು ನಿಯಂತ್ರಿಸುವ ತನ್ನದೇ ಆದ ಗುರಿಯನ್ನು ಮುಂದುವರಿಸಲು ಕಾಮ ಮತ್ತು ತನ್ನ ಮೇಲ್ಮಟ್ಟದ ಬುದ್ಧಿಶಕ್ತಿಯನ್ನು ಈಕೆ ಬಳಸಿಕೊಳ್ಳುತ್ತಾಳೆ. ಜೊತೆಜೊತೆಯಲ್ಲೇ, ಹಾರ್ಪರ್‌ನೊಂದಿಗೆ ಪ್ರಣಯ ಸಲ್ಲಾಪಗಳಲ್ಲಿ ತೊಡಗುವ ಈಕೆ, ಅವನನ್ನು ಕ್ರೀಡಿಯ ವಿರುದ್ಧ ತಿರುಗಿಸುತ್ತಾಳೆ. ಅಂತಿಮವಾಗಿ, ಇವಳ ನಿಯಂತ್ರಕ ಯೋಜನೆಯು ಕುಸಿದು ಬೀಳುತ್ತದೆ ಹಾಗೂ ಫಿಂಚ್‌ನಿಂದ (ತನ್ನ ಪತಿ, ಪೀಟರ್‌ ಕ್ರೀಡಿ ಹಾಗೂ ಅಲಿಸ್ಟೇರ್‌ ಹಾರ್ಪರ್‌ ಇವರೆಲ್ಲರೂ ಕೊಲ್ಲಲ್ಪಟ್ಟಾಗ, ಪಕ್ಷದಲ್ಲಿ ಏನು ಉಳಿದಿದೆಯೋ ಅದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ಫಿಂಚ್‌ ತನ್ನೊಂದಿಗೆ ಕೈಜೋಡಿಸುತ್ತಾನೆ ಎಂದು ಇವಳು ನಂಬಿರುತ್ತಾಳೆ) ತಿರಸ್ಕರಿಸಲ್ಪಟ್ಟ ನಂತರ ರಕ್ಷಣೆ ಹಾಗೂ ಆಹಾರಕ್ಕೆ ಪ್ರತಿಯಾಗಿ ಒಂದು ಅರೆ-ಕುಡಿದ ಪಟಾಲಂಗೆ ಕೊನೆಗೆ ಇವಳು ತನ್ನ ದೇಹವನ್ನು ಅರ್ಪಿಸಿಕೊಳ್ಳುವುದು ಕಂಡುಬರುತ್ತದೆ ಮತ್ತು ಅರಾಜಕತೆಯ ನಂತರ ಈಕೆ ಲಂಡನ್‌ಗೆ ಬಂದು ಬೀಳುತ್ತಾಳೆ.
  • ಪೀಟರ್‌ ಕ್ರೀಡಿ: ಈತ ಓರ್ವ ನಯನಾಜೂಕಿಲ್ಲದ, ಸಣ್ಣ ಮನಸ್ಸಿನ ಮನುಷ್ಯ. ಡೆರೆಕ್‌ ಆಲ್ಮಂಡ್‌ನ ಮರಣಾನಂತರ ಈತ ಅವನಿದ್ದ "ದಿ ಫಿಂಗರ್‌"ನ ಭದ್ರತಾ ಮಂತ್ರಿಯ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾನೆ. ದುರ್ಬಲಗೊಳ್ಳುತ್ತಿರುವ ಸುಸಾನ್‌ನನ್ನು ಬದಲಿಸಿ ತಾನು ನಾಯಕನಾಗಲು ಇವನು ಹವಣಿಸುತ್ತಾನೆ. ಆದರೆ ಶ್ರೀಮತಿ ಹೇಯರ್‌ಳ ತಂತ್ರದ ಒಂದು ಭಾಗವಾಗಿ, ಅಲಿಸ್ಟೇರ್‌ ಹಾರ್ಪರ್‌ ಕಡೆಯ ಕೊಲೆಗಡುಕರು ಇವನನ್ನು ಕೊಲ್ಲುತ್ತಾರೆ. (ದುರ್ಬಲಗೊಳ್ಳುತ್ತಿರುವ ಫಿಂಗರ್‌ಗೆ ಆಸರೆಯಾಗಿ ನಿಲ್ಲಲು ಈ ಕೊಲೆಪಾತಕರನ್ನು ಕ್ರೀಡಿಯು ಕೆಲಸಕ್ಕೆ ನೇಮಿಸಿಕೊಂಡಿರುತ್ತಾನೆ; ಆದರೆ ಹೆಲೆನ್‌ ಹೇಯರ್‌ ಅವರಿಗೆ ಇನ್ನೂ ಹೆಚ್ಚಿನ ಆಮಿಷವನ್ನು ಒಡ್ಡಿರುತ್ತಾಳೆ.)
  • ಕೊನ್ರಾಡ್‌ ಹೇಯರ್‌: ಈತ ದೇಶದ CCTV ವ್ಯವಸ್ಥೆಯನ್ನು ನಿಯಂತ್ರಿಸುವ ಬೇಹುಗಾರಿಕಾ ಸಂಸ್ಥೆಯಾದ "ದಿ ಐ"ನ ಮೇಲ್ವಿಚಾರಕ. ಇವನ ಹೆಂಡತಿಯಾದ ಹೆಲೆನ್‌ ಇವನ ಮೇಲೆ ಅಧಿಕಾರ ಚಲಾಯಿಸುತ್ತಿರುತ್ತಾಳೆ, ಮತ್ತು ಇವನು ನಾಯಕನಾಗುವ ಮೂಲಕ, ಸಿಂಹಾಸನದ ಹಿಂದಿನಿಂದ ಅಧಿಕಾರ ಚಲಾಯಿಸುವ ಅವಕಾಶ ತನಗೆ ದೊರೆಯಬೇಕು ಎಂಬುದು ಅವಳ ಆಶಯವಾಗಿರುತ್ತದೆ. ಕೊನೆಯಲ್ಲಿ, ಹೆಲೆನ್‌ ವ್ಯಭಿಚಾರ ನಡೆಸುತ್ತಿರುವುದರ ಮತ್ತು ಅದನ್ನು ತಾನು ಕ್ಷಿಪ್ರವಾಗಿ ಚಿತ್ರಿಸಿರುವುದರ ಫಲವಾದ ಒಂದು ವಿಡಿಯೋಟೇಪ್‌ನ್ನು ಕೊನ್ರಾಡ್‌ಗೆ V ಕಳಿಸುತ್ತಾನೆ. ಅವಳ ಪ್ರೇಮಿ ಅಲಿಸ್ಟೇರ್‌ ಹಾರ್ಪರ್‌ನನ್ನು V ಕೊಲ್ಲುತ್ತಾನಾದರೂ, ಈ ಪ್ರಕ್ರಿಯೆಯಲ್ಲಿ ಹಾರ್ಪರ್‌ನ ಒಂದು ಮಡಿಚಬಲ್ಲ-ಅಂಚಿನ ಕ್ಷೌರದ ಕತ್ತಿಯಿಂದ ಅವನು ಒಂದು ಪ್ರಾಣಾಂತಿಕ ಗಾಯಕ್ಕೀಡಾಗುತ್ತಾನೆ. ಅವನು ಏನು ಮಾಡಿದನೆಂದು ಹೆಲೆನ್‌ಗೆ ಅರಿವಾದಾಗ, ತನ್ನ ಯೋಜನೆಯೆಲ್ಲಾ ಹಾಳಾಗಿದ್ದುದನ್ನು ಕಂಡು ಕೆರಳುವ ಆಕೆ, ಆತನನ್ನು ಸಾಯುವವರೆಗೂ ರಕ್ತಸುರಿಸಿಕೊಳ್ಳುವಂತೆ ಬಿಟ್ಟು, ತಾನು ಸಾಯುತ್ತಿರುವುದನ್ನು ಆತ ತಾನೇ ನೋಡಿಕೊಳ್ಳಲಿ ಎಂಬ ಉದ್ದೇಶದಿಂದ ತಮ್ಮ TVಗೆ ಸಂಪರ್ಕ ಹೊಂದಿರುವಂತೆ ವಿಡಿಯೋ ಕ್ಯಾಮೆರಾವೊಂದನ್ನು ಸಜ್ಜುಗೊಳಿಸುತ್ತಾಳೆ.
  • ಡೊಮಿನಿಕ್‌ ಸ್ಟೋನ್‌: ಓರ್ವ ಕಿರಿಯ ಆರಕ್ಷಕ ಸಿಬ್ಬಂದಿಯಾದ ಈತ ಇನ್ಸ್‌ಪೆಕ್ಟರ್‌ ಫಿಂಚ್‌ನ ಸಹಾಯಕ. ಹಿಂದಿನ ಲಾರ್ಕ್‌ಹಿಲ್‌ ಶಿಬಿರದ ಸಿಬ್ಬಂದಿ ಹಾಗೂ V ನಡುವೆ ಸಂಬಂಧವಿರುವುದನ್ನು ಮತ್ತು "ಫೇಟ್‌" ಕಂಪ್ಯೂಟರ್‌ ವ್ಯವಸ್ಥೆಯೊಳಗೆ ಪ್ರವೇಶಿಸಿ Vಯು ಅಕ್ರಮವಾದ ರೀತಿಯಲ್ಲಿ ಮಾಹಿತಿ ಪಡೆಯುತ್ತಿರುವುದನ್ನು ಡೊಮಿನಿಕ್‌ ಕಂಡುಹಿಡಿಯುತ್ತಾನೆ. ಅವನು ಮತ್ತು ಡಾ. ಸರಿಡ್ಜ್‌ ಈ ಇಬ್ಬರು ಮಾತ್ರವೇ ಸದರಿ ಪಕ್ಷದಲ್ಲಿನ ಉತ್ತಮ-ಹೃದಯದ ವ್ಯಕ್ತಿಗಳಾಗಿರುತ್ತಾರೆ. ಕೊನೆಯಲ್ಲಿ, ಡೊಮಿನಿಕ್‌ನನ್ನು ಎವೆಯು ಒಂದು ಗಲಭೆಯ ಗುಂಪಿನಿಂದ ರಕ್ಷಿಸುತ್ತಾಳೆ ಮತ್ತು ಅವಳೀಗ Vಯ ಸ್ವರೂಪದಲ್ಲಿದ್ದು ಅವಳೊಂದಿಗೆ V ಹೇಗೆ ನಡೆದುಕೊಂಡನೋ ಅದೇ ರೀತಿಯಲ್ಲಿ ಅವಳ ಶಿಷ್ಯನಾಗಿರುವಂತೆ ಡೊಮಿನಿಕ್‌ ಸ್ಪಷ್ಟವಾಗಿ ನೇಮಕಗೊಳ್ಳುತ್ತಾನೆ.
  • ವ್ಯಾಲರೀ ಪೇಜ್‌: ಈಕೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಓರ್ವ ನಟಿ. ಈಕೆಯೊಬ್ಬ ಸಲಿಂಗ ಕಾಮಿನಿಯಾಗಿದ್ದಳು ಎಂದು ಕಂಡುಬಂದಾಗ ಸರ್ಕಾರವು ಇವಳನ್ನು ಲಾರ್ಕ್‌ಹಿಲ್‌ನಲ್ಲಿ ಬಂಧಿಸಿಟ್ಟಿರುತ್ತದೆ. ಸರ್ಕಾರದ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಾಗಿನ ಈಕೆಯ ದುರವಸ್ಥೆಯು ಓರ್ವ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕ್ರಾಂತಿಕಾರಿಯಾಗುವಲ್ಲಿ Vಯನ್ನು ಪ್ರೇರೇಪಿಸುತ್ತದೆ.
  • ರೋಜರ್‌ ಡಾಸ್‌ಕೊಂಬ್‌: ಈತ ಪಕ್ಷದ ಮಾಧ್ಯಮ ವಿಭಾಗಕ್ಕೆ ಸಂಬಂಧಿಸಿದ ತಾಂತ್ರಿಕ ಮೇಲ್ವಿಚಾರಕ ಮತ್ತು "ದಿ ಮೌತ್‌"ನ ಪ್ರಚಾರ ಯೋಜನೆಯ ಮಂತ್ರಿ. ಡೆರೆಕ್‌ "ಕಹಿ" ಆಲ್ಮಂಡ್‌ನ ಸಾವಿನ ನಂತರ, ಅವನ ವಿಧವೆ ರೋಸ್‌ಮೇರಿಯನ್ನು ಪಡೆಯಲು ಡಾಸ್‌ಕೊಂಬ್‌ ಮುಗಿಬೀಳುತ್ತಾನೆ. ಅಂತಿಮವಾಗಿ ಆಕೆ ಬೆಂಬಲಕ್ಕಾಗಿ ಇವನೆಡೆಗೆ ತಿರುಗುತ್ತಾಳೆ. ಜೋರ್ಡಾನ್‌ ಗೋಪುರದ ಮೇಲಿನ Vಯ ದಾಳಿಯ ಸಂದರ್ಭದಲ್ಲಿ, ಅವನನ್ನು ಓರ್ವ ನಾಮಮಾತ್ರದ (ನಕಲಿ ಅಥವಾ ಬದಲಿ) "V"ಯಂತೆ ಸಜ್ಜುಗೊಳಿಸಲಾಗಿರುತ್ತದೆ ಮತ್ತು ನಿಜವಾದ Vಯು ತಪ್ಪಿಸಿಕೊಳ್ಳುವಾಗ ಪೊಲೀಸರಿಂದ ಈ ವೇಷಧಾರಿ ಡಾಸ್‌ಕೊಂಬ್‌ ಕೊಲ್ಲಲ್ಪಡುತ್ತಾನೆ.
  • ಅಲಿಸ್ಟೇರ್‌ ಹಾರ್ಪರ್‌: ಈತ ಸ್ಕಾಟಿಷ್‌ ಸಂಘಟಿತ ಅಪರಾಧದ ನಾಯಕನಾಗಿದ್ದು, ಎವೆಯ ಪ್ರಿಯತಮನಾದ ಗೋರ್ಡಾನ್‌ನನ್ನು ಈತ ಕೊಲ್ಲುತ್ತಾನೆ. ಸರ್ಕಾರದ ಕಣ್ಗಾವಲು ಉಪಕರಣವನ್ನು Vಯು ನಾಶಪಡಿಸಿದ ನಂತರ ಆರಕ್ಷಕ ಪಡೆಗೆ ತಾತ್ಕಾಲಿಕವಾಗಿ ಬೆಂಬಲ ನೀಡಲು, ಅಲಿಸ್ಟೇರ್‌ ಹಾರ್ಪರ್ ಮತ್ತು ಅವನ ಕೆಲವೊಂದು ಜನರನ್ನು ಆರಂಭದಲ್ಲಿ ಕ್ರೀಡಿಯು ಎರವಲು ಸೇವೆಗೆ ನೇಮಿಸಿಕೊಂಡಿರುತ್ತಾನೆ. ಆದರೆ, ಕೊನ್ರಾಡ್‌ ಅಧಿಕಾರಕ್ಕೆ ಬಂದ ನಂತರ "ದಿ ಫಿಂಗರ್‌"ನ ಮೇಲ್ವಿಚಾರಕನಾಗಿ ಹಾರ್ಪರ್‌ನನ್ನು ನೇಮಿಸುವ ಪ್ರಸ್ತಾವವನ್ನು ಅವನ ಮುಂದಿಡುವ ಮೂಲಕ ಕ್ರೀಡಿಯ ಪತನವನ್ನು ಖಾತ್ರಿಪಡಿಸಲು, ಹೆಲೆನ್‌ ಹೇಯರ್‌ ಹಾರ್ಪರ್‌ನನ್ನು ತನ್ನ ಕಡೆಗೆ ನೇಮಿಸಿಕೊಳ್ಳುತ್ತಾಳೆ. ಆತ ತಾತ್ಕಾಲಿಕವಾಗಿ ಹೆಲೆನ್‌ಳ ಪ್ರೇಮಿಯಾಗಿ ಮಾರ್ಪಡುತ್ತಾನೆ. ಕ್ರೀಡಿಯ ಸ್ವಾಧೀನದ ನಂತರ, ಹೆಲೆನ್‌ಳೊಂದಿಗಿನ ತನ್ನ ಕೊಡು-ಕೊಳ್ಳುವ ಕರಾರಿನ ತನ್ನ ಭಾಗವನ್ನು ಪೂರೈಸುವ ಹಾರ್ಪರ್‌ ತನ್ನ ಮಡಿಚಬಲ್ಲ ಕ್ಷೌರದ ಕತ್ತಿಯಿಂದ ಒಂದು ಮಾರಣಾಂತಿಕ ಆಳಗಾಯವನ್ನು ಮಾಡುವ ಮೂಲಕ ಕ್ರೀಡಿಯನ್ನು ಸಾಯಿಸುತ್ತಾನೆ. ಹಾರ್ಪರ್‌ ಅವನ ಕುತ್ತಿಗೆಯನ್ನು ಮಾರಣಾಂತಿಕವಾಗಿ ಸೀಳುತ್ತಿದ್ದಂತೆ, ಕೊನ್ರಾಡ್‌ ಒಂದು ತಿರುಚುಳಿಯಿಂದ ಹಾರ್ಪರ್‌ಗೆ ಸಾಯುವಂತೆ ಹೊಡೆಯುತ್ತಾನೆ.

ವಿಷಯಗಳು ಮತ್ತು ಪ್ರಮುಖ ಲಕ್ಷಣಗಳು

ಬದಲಾಯಿಸಿ

ವಾಚ್‌ಮೆನ್‌ ನಲ್ಲಿ ಅತೀವವಾಗಿ ಕಂಡುಬರುವಂಥ ಗಾಢವಾಗಿ ವಿವರಿಸಲ್ಪಟ್ಟ ನಿರೂಪಣಾ ಮತ್ತು ಬಹು ಕಥಾವಸ್ತುವಿನ ರೂಪರೇಖೆಗಳ ಮೊದಲ ಬಳಕೆಯು ಈ ಸರಣಿಯಲ್ಲಿ ಕಂಡುಬಂದಿತ್ತು. ಅಂಕಣದ ಹಿನ್ನೆಲೆಗಳು, ಸುಳಿವುಗಳು ಹಾಗೂ ದಾರಿತಪ್ಪಿಸುವ ಸುಳಿವುಗಳ ದೆಸೆಯಿಂದ ಅನೇಕವೇಳೆ ಅದುಮಿ ತುಂಬಿಸಲ್ಪಟ್ಟಿವೆ; ಅಧ್ಯಾಯದ ಶೀರ್ಷಿಕೆಗಳಲ್ಲಿ ಹಾಗೂ Vಯ ಭಾಷಣದಲ್ಲಿ ಸಾಹಿತ್ಯಿಕ ಪರೋಕ್ಷ ಪ್ರಸ್ತಾಪಗಳು ಹಾಗೂ ಶಬ್ದ ಚಮತ್ಕಾರ ಎದ್ದುಕಾಣುವಂತಿವೆ (ಇದು ಬಹುತೇಕ ಎಲ್ಲ ಸಮಯಗಳಲ್ಲೂ ಅಯಾಂಬಿಕ್‌ ಪಂಚಗಣಿಯ ರೂಪವನ್ನು ಪಡೆದುಕೊಳ್ಳುತ್ತದೆ. ಈ ವಿಶಿಷ್ಟ ಸ್ವರೂಪವು ಉಚ್ಚಾರಾಂಶಗಳ ಐದು ಜೋಡಿಗಳ ಮೇಲೆ ಅವಲಂಬಿತವಾಗಿರುವ ಒಂದು ಛಂದೋಬದ್ಧ ಅಳತೆಗೋಲಾಗಿದ್ದು, ಪ್ರತಿ ಜೋಡಿಯ ಎರಡನೇ ಉಚ್ಚಾರಾಂಶಕ್ಕೆ ಮೊದಲನೆಯದಕ್ಕಿಂತ ಹೆಚ್ಚು ಒತ್ತುನೀಡಲಾಗುತ್ತದೆ; ಷೇಕ್ಸ್‌ಪಿಯರ್‌ನ ಅನೇಕ ಕೃತಿಗಳಲ್ಲಿ ಇದರ ಅತ್ಯಂತ ಪ್ರಸಿದ್ಧ ಬಳಕೆಯನ್ನು ಕಾಣಬಹುದು).

ದಿ ಮ್ಯಾಜಿಕ್‌ ಫಾರವೇ ಟ್ರೀ ಯೊಂದಿಗೆ Vಯು ಎವೆಯನ್ನು ಓದಿ ಓದಿ ನಿದ್ರೆ ತಂದುಕೊಳ್ಳುತ್ತಾನೆ. ಸರಣಿಯಾದ್ಯಂತ ಪ್ರಾಸಂಗಿಕವಾಗಿ ಪ್ರಸ್ತಾಪಿಸಲ್ಪಟ್ಟಿರುವ "ದಿ ಲ್ಯಾಂಡ್‌ ಆಫ್‌ ಡೂ-ಆಸ್‌-ಯು-ಪ್ಲೀಸ್‌" ಮತ್ತು "ದಿ ಲ್ಯಾಂಡ್‌ ಆಫ್‌ ಟೇಕ್‌-ವಾಟ್‌-ಯು-ವಾಂಟ್‌" ಎಂಬ ಪರಿಕಲ್ಪನೆಗಳಿಗೆ ಈ ಸರಣಿಯು ಮೂಲವನ್ನು ಒದಗಿಸುತ್ತದೆ. ಪ್ರಮುಖವಾಗಿ ನಾಟಕೀಯ ಆವೃತ್ತಿಯಲ್ಲಿ ಮತ್ತೊಂದು ಸಾಂಸ್ಕೃತಿಕ ಉಲ್ಲೇಖವು ಅನುರಣಿಸುತ್ತದೆ: "ಕೋವಿಮದ್ದಿನ ರಾಜದ್ರೋಹ ಮತ್ತು ಒಳಸಂಚಿನ, ನವೆಂಬರ್‌ ಐದನ್ನು ಮರೆಯದಿರಿ ಮರೆಯದಿರಿ. ಕೋವಿಮದ್ದಿನ ರಾಜದ್ರೋಹವನ್ನು ಎಂದಾದರೂ ಏಕೆ ಮರೆಯಬೇಕು ಎಂಬುದಕ್ಕೆ ನನಗೆ ಯಾವ ಕಾರಣವೂ ಗೊತ್ತಿಲ್ಲ." ಗೈ ಫಾಕ್ಸ್‌ನ ಕಥೆ ಮತ್ತು 1605ರ ಕೋವಿಮದ್ದಿನ ‌ಒಳಸಂಚಿನಲ್ಲಿನ ಅವನ ಪಾಲ್ಗೊಳ್ಳುವಿಕೆಗೆ ಈ ಸಾಲುಗಳು ನೇರವಾಗಿ ನಿದೇಶಿಸುತ್ತವೆ.

ಅರಾಜಕತಾವಾದಕ್ಕೆ ಪ್ರತಿಯಾಗಿರುವ ಉಗ್ರ ಬಲಪಂಥೀಯ ದೃಷ್ಟಿಕೋನ

ಬದಲಾಯಿಸಿ

ಅರಾಜಕತಾವಾದ ಮತ್ತು ಉಗ್ರ ಬಲಪಂಥೀಯ ದೃಷ್ಟಿಕೋನಗಳ ಎರಡು ಅಸಂಗತವಾಗಿರುವ ರಾಜಕೀಯ ದೃಷ್ಟಿಕೋನಗಳು ಕಥೆಯೊಳಗಡೆ ವ್ಯಾಪಿಸಿವೆ. [] ನೋರ್ಸ್‌ಫೈರ್‌ ಆಡಳಿತ ವಿಧಾನವು ಬಲಪಂಥೀಯ ಸಿದ್ಧಾಂತದ ಪ್ರತಿಯೊಂದು ಅಂಶವನ್ನೂ ಹಂಚಿಕೊಳ್ಳುತ್ತದೆ: ಇದು ಅತೀವವಾಗಿ ಅನ್ಯದ್ವೇಷದ (ಪರಕೀಯರನ್ನು ದ್ವೇಷಿಸುವ) ಗುಣವನ್ನು ಹೊಂದಿದ್ದು ಭಯ ಮತ್ತು ಬಲಗಳ ಮೂಲಕ ರಾಷ್ಟ್ರವನ್ನು ಆಳುತ್ತದೆ, ಹಾಗೂ ಪ್ರಬಲವಾದ ಮುಂದಾಳುತನವನ್ನು ಆರಾಧಿಸುತ್ತದೆ [ಉದಾಹರಣೆಗೆ, ಫಹ್ರೆರ್‌ಪ್ರಿನ್ಜಿಪ್‌ (ನಾಯಕ ತತ್ತ್ವ ಎಂಬ ಪದಗುಚ್ಛಕ್ಕಿರುವ ಜರ್ಮನ್‌ ಹೆಸರು)]

ಬಹುಪಾಲು ಬಲಪಂಥೀಯ ಆಡಳಿತ ವಿಧಾನಗಳಲ್ಲಿರುವಂತೆ, ಪರಸ್ಪರರ ನಡುವೆ ಅಧಿಕಾರದ ಕಿತ್ತಾಟಗಳಲ್ಲಿ ತೊಡಗಿಕೊಂಡಿದ್ದರೂ ಸಹ ಒಂದೇ ನಾಯಕನ ಅಪ್ಪಣೆಯನ್ನು ಪಾಲಿಸುವ ವಿವಿಧ ಬಗೆಯ ಹಲವಾರು ಸಂಸ್ಥಾನ ಸಂಘಟನೆಗಳು ಅಸ್ತಿತ್ವದಲ್ಲಿವೆ.

ಬಲಪಂಥೀಯ ಆಡಳಿತ ವಿಧಾನವು ಸಮಗ್ರ ಸಂಸ್ಥಾಸೂತ್ರವನ್ನು ಅವಲಂಬಿಸುತ್ತದೆ.

ಸಂಸ್ಥಾನದೊಂದಿಗಿನ ಸಮಾಜದ ಒಟ್ಟಾರೆ ಗುರುತಿಸುವಿಕೆ, ಮತ್ತು ಸಂಸ್ಥಾನದ ವಿವಿಧ ಸಂಸ್ಥೆಗಳನ್ನು ಅಂಗಗಳಾಗಿ ಹೊಂದಿರುವ ಒಂದು ಶರೀರವಾಗಿ ಅಥವಾ ಘಟಕವಾಗಿ ಸಮಾಜದ ಕುರಿತು ಆಲೋಚಿಸುವುದನ್ನು ಸಂಸ್ಥಾಸೂತ್ರದ ಒಂದು ಪ್ರಮುಖ ಅಂಶವು ಒಳಗೊಳ್ಳುತ್ತದೆ. ಸಂಸ್ಥೆಗಳಿಗೆ ಶರೀರದ ಭಾಗಗಳ ಹೆಸರುಗಳನ್ನು ಇಟ್ಟಿರುವ ಮೂಲಕ ಇದು ಪ್ರತಿಬಿಂಬಿಸಲ್ಪಟ್ಟಿದೆ: ಆರಕ್ಷಕ ವ್ಯವಸ್ಥೆಯ ಬೇಹುಗಾರಿಕೆ ಶಾಖೆಯ ಹೆಸರು ದಿ ನೋಸ್‌  ಎಂದಾಗಿದೆ; ದಿ ಇಯರ್‌  ಮತ್ತು ದಿ ಐ  ಇವು ಕಣ್ಗಾವಲು ಸಂಸ್ಥೆಗಳಾಗಿವೆ; ಆರಕ್ಷಕ ವ್ಯವಸ್ಥೆಯ ಏಕರೂಪದ ಶಾಖೆಯು ದಿ ಫಿಂಗರ್‌  ಎಂಬುದಾಗಿದೆ (ಮತ್ತು ಇದಕ್ಕಾಗಿ ಕೆಲಸ ಮಾಡುವವರನ್ನು ಫಿಂಗರ್‌ಮೆನ್‌  ಎಂದು ಕರೆಯಲಾಗುತ್ತದೆ); ಮತ್ತು ಸಂಸ್ಥಾನದಿಂದ ನಿಯಂತ್ರಿಸಲ್ಪಡುವ ಮಾಧ್ಯಮವು ದಿ ಮೌತ್‌  ಎಂದು ಹೆಸರಿಸಲ್ಪಟ್ಟಿದೆ.

ನಿಯಂತ್ರಣದ ಈ ವ್ಯವಸ್ಥೆಯನ್ನು ಸೃಷ್ಟಿಸುವಾಗ, ಥಾಮಸ್‌ ಹಾಬ್ಸ್‌‌ಲೆವಿಯಾಥನ್‌ ಎಂಬ ಹೆಸರಿನ ಶಿಷ್ಟ ಇಂಗ್ಲಿಷ್‌ ರಾಜಕೀಯ ಪರಿಕಲ್ಪನೆಯನ್ನು ಮೂರ್‌ ಪ್ರಚೋದಕವಾಗಿ ಹೊರತರುತ್ತಾನೆ. ಸಂಸ್ಥಾನವನ್ನು ಒಂದು ಬೃಹತ್‌ ಸಾಂಸ್ಥಿಕ ಸಮಗ್ರ ಸಮಷ್ಟಿ‌ ಯಾಗಿ (ಗೆಸ್ಟಾಲ್ಟ್) ಇದು ಕಲ್ಪಿಸಿಕೊಳ್ಳುತ್ತದೆ. ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ಸ್ವಚ್ಛಂದ ಹಿಂಸೆಯನ್ನು ತಡೆಗಟ್ಟುವ ಅಗತ್ಯದ ಮೇಲೆ ಈ ಸಾಂಸ್ಥಿಕ ಸಮಗ್ರ ಸಮಷ್ಟಿ ವ್ಯವಸ್ಥೆಯ ಔಚಿತ್ಯವು ನಿರ್ಮಿಸಲ್ಪಟ್ಟಿದೆ (ನೋರ್ಸ್‌ಫೈರ್‌ ಕುರಿತಾದ ಹಿನ್ನೆಲೆಯಲ್ಲಿ ಸುಳಿವು ನೀಡಲಾದಂತೆ). ಸಾರ್ವಭೌಮನು ಸಮಾಜದ ಸ್ವಾಭಾವಿಕ 'ಮುಖ್ಯಸ್ಥ'ನಾಗಿ ರೂಪುಗೊಂಡಿದ್ದು, ಪ್ರಾಯಶಃ ಇದು ಸಂಸ್ಥಾನದ ಸರ್ಕಾರದ ವಿವಿಧ ಅಂಗಗಳ ರಚನೆಗೆ ಸಂಬಂಧಿಸಿದ ಪರಿಭಾಷೆಯನ್ನು ವಿವರಿಸುತ್ತದೆ.

ಈ ಶರೀರ ಅಥವಾ ಘಟಕವನ್ನು ಆರೋಗ್ಯಕರವಾಗಿ ಇರಿಸಲು, ಅದರ ಅನಾರೋಗ್ಯಕರ ಘಟಕಗಳಾದ (ಅಂದರೆ, ಪರಿಶುದ್ಧತೆಯ ಮೂಲಕದ ಬಲ ಎಂಬ ಆದರ್ಶಸೂತ್ರದ ಅನುಸಾರ) ಸರ್ವಾಧಿಕಾರಿ ಪ್ರಭುತ್ವ ಮತ್ತು ಸೆರೆಶಿಬಿರಗಳನ್ನು ಶುದ್ಧೀಕರಿಸಲು ಬಲಪಂಥೀಯ ಸಿದ್ಧಾಂತವು ಶಿಫಾರಸು ಮಾಡುತ್ತದೆ. ಸಂಚಿಕೆ #5ರಲ್ಲಿ, ತನ್ನಂಥ ಸಾಮಾನ್ಯ ಜನರು ಇಂಥ ನಿಯಮಾನುಸರಣೆಯಲ್ಲಿ ತೊಡಗಿಸಿಕೊಳ್ಳುವುದೇಕೆ ಎಂಬುದರ ಒಂದು ವಿವರಣೆಯಾಗಿ ಮಿಲ್‌ಗ್ರಾಂ ಪ್ರಯೋಗವನ್ನು ಡೇಲಿಯಾ ಸರಿಡ್ಜ್‌ ನಿರೂಪಿಸುತ್ತಾಳೆ. ಆಂಗ್ಲಿಕನ್‌ ಕ್ರೈಸ್ತಮತ ಮತ್ತು ವಿಶ್ವಾಸದ ಮೂಲಕದ ಪರಿಶುದ್ಧತೆ ಗಿರುವ ಸಂಬಂಧವು ರೋಮನ್‌ ಕ್ಯಾಥಲಿಕ್‌ ದೇಶಗಳಲ್ಲಿನ (ಅಂದರೆ, 1940-44ರ ವಿಕಿ ಪ್ರಭುತ್ವದ ದಕ್ಷಿಣ ಭಾಗದ ಫ್ರಾನ್ಸ್‌, 1939-75ರ ಫ್ರಾನ್ಸಿಸ್ಕೊ ಫ್ರಾಂಕೊ ಅಡಿಯಲ್ಲಿನ ಸ್ಪೇನ್‌, 1941-45ರ ಆಂಟೆ ಪ್ಯಾವೆಲಿಕ್‌ ಅಡಿಯಲ್ಲಿನ ಕ್ರೊಯೇಷಿಯಾದ ಸ್ವತಂತ್ರ ಸಂಸ್ಥಾನ, ಮತ್ತು 1933-38ರ ಡಾಲ್‌ಫಸ್‌ ಮತ್ತು ಷುಷಿಂಗ್‌ ಅಡಿಯಲ್ಲಿನ ಆಸ್ಟ್ರಿಯಾ) ಪಾದ್ರಿವರ್ಗದ ಉಗ್ರ ಬಲಪಂಥೀಯ ದೃಷ್ಟಿಕೋನದ ಒಂದು ವಿಶಿಷ್ಟ ಲಕ್ಷಣವಾಗಿದೆ; ಇಂಥ ಒಂದು ಸ್ವರೂಪವು ಸ್ಪಷ್ಟೋಕ್ತವಾಗಿ ಇಂಗ್ಲಂಡ್‌‌‌ನಲ್ಲಿ ಹತೋಟಿಯನ್ನು ತನ್ನ ಕೈಲಿಟ್ಟುಕೊಂಡಿದೆ. ಇಲ್ಲಿ ವಾಸ್ತವವಾಗಿ, ಚರ್ಚ್‌ ಆಫ್‌ ಇಂಗ್ಲಂಡ್‌‌ (ಆಂಗ್ಲಿಕನ್‌ ಚರ್ಚ್‌) ರಾಣಿಯನ್ನು ಮತ್ತು ಸಂಸ್ಥಾನವನ್ನು ತನ್ನ ಮುಖ್ಯಸ್ಥರಾಗಿ ಹೊಂದುವುದರೊಂದಿಗೆ 'ಸ್ಥಾಪಿಸಲ್ಪಟ್ಟಿದೆ'. ಕಥೆಯ ನಿರಂತರತೆ ಅಥವಾ ಅನುಕ್ರಮ ವಿವರಣೆಯಲ್ಲಿ, ಯುನೈಟೆಡ್‌ ಕಿಂಗ್‌ಡಂನ (ಉದಾಹರಣೆಗೆ ಸ್ಕಾಟ್ಲೆಂಡ್‌)[ಸೂಕ್ತ ಉಲ್ಲೇಖನ ಬೇಕು] ಆಂಗ್ಲಿಕನ್‌-ಅಲ್ಲದ ಭಾಗಗಳು, ಹಿಂಸಾತ್ಮಕವಾದ ನೋರ್ಸ್‌ಫೈರ್‌-ವಿರುದ್ಧದ ಬಂಡಾಯದಿಂದ ಏಕೆ ಆವರಿಸಲ್ಪಡುತ್ತವೆ ಎಂಬುದನ್ನು ಇದು ವಿವರಿಸುತ್ತದೆ.

ಗುರುತು

ಬದಲಾಯಿಸಿ

ಸ್ವತಃ ಒಂದು ರೀತಿಯ ಒಗಟು ಅಥವಾ ಗೂಢವಾದ ಪ್ರಶ್ನೆಯಾಗುಳಿಯುವ Vಗೆ ಸಂಬಂಧಿಸಿದ ಇತಿಹಾಸದ ಕುರಿತು ಮಾತ್ರವೇ ಸುಳಿವು ನೀಡಲಾಗಿದೆ. ಕಥೆಯ ಅಧಿಕಾಂಶವು ಇತರ ಪಾತ್ರಗಳ ದೃಷ್ಟಿಕೋನಗಳಿಂದ ಹೇಳಲ್ಪಟ್ಟಿದೆ: Vಯ ಅಭಿಮಾನಿ ಹಾಗೂ ಶಿಷ್ಯೆಯಾಗಿದ್ದ ಎವೆಯು ಹದಿನಾರು-ವರ್ಷ-ವಯಸ್ಸಿನ ಓರ್ವ ಕಾರ್ಖಾನೆಯ ಕೆಲಸಗಾರ್ತಿಯಾಗಿದ್ದಾಳೆ; ಎರಿಕ್‌ ಫಿಂಚ್ ಓರ್ವ ಪ್ರಪಂಚವೇ ಬೇಡವಾದ ಅಥವಾ ಜೀವನಶ್ರಾಂತನಂತಿರುವ ಮತ್ತು ಹಠವಾದಿಯಾದ ಆರಕ್ಷಕ ಸಿಬ್ಬಂದಿಯಾಗಿದ್ದು Vಯನ್ನು ಅವನು ಬೆನ್ನುಹತ್ತಿರುತ್ತಾನೆ; ಮತ್ತು ಅಧಿಕಾರಕ್ಕಾಗಿ ಪೈಪೋಟಿಗಿಳಿದಿರುವ ಬಲಪಂಥೀಯ ಪಕ್ಷದೊಳಗಿನ ಹಲವಾರು ಸ್ಪರ್ಧಿಗಳು ಇನ್ನುಳಿದ ಪಾತ್ರಗಳಾಗಿದ್ದಾರೆ. Vಯ ವಿಧ್ವಂಸಕ ಕೃತ್ಯಗಳು ನೈತಿಕವಾಗಿ ಇಬ್ಬಗೆಯ ಅಥವಾ ಸಂದಿಗ್ಧ ಸ್ವರೂಪಗಳಿಂದ ಕೂಡಿವೆ, ಮತ್ತು ಒಂದು ಉನ್ನತ ಉದ್ದೇಶದ ಹೆಸರಿನಲ್ಲಿ, ಅದು ಸ್ಥಿರತೆಯಿರಬಹುದು ಅಥವಾ ಸ್ವಾತಂತ್ರ್ಯವಿರಬಹುದು, ದುಷ್ಕೃತ್ಯಗಳ ತರ್ಕಬದ್ಧವಾಗಿಸುವಿಕೆಯು ಸರಣಿಯ ಒಂದು ಪ್ರಮುಖ ವಿಷಯವಾಗಿದೆ. ಪಾತ್ರವು ಅರಾಜಕತಾವಾದದ ಒಂದು ವಾಸ್ತವಿಕ ಸಮರ್ಥಕನ ಮತ್ತು ಓರ್ವ ಭಯೋತ್ಪಾದಕನಾಗಿ ಕ್ರಾಂತಿಕಾರಿಯ ಸಾಂಪ್ರದಾಯಿಕ ರೂಢಮಾದರಿಯ ಒಂದು ಮಿಶ್ರಣವಾಗಿದೆ.

ಸಂದರ್ಶನವೊಂದರಲ್ಲಿ ಮೂರ್‌ ಈ ರೀತಿಯಲ್ಲಿ ಹೇಳಿಕೆ ನೀಡಿದ:

...ಪ್ರಮುಖ ಪ್ರಶ್ನೆಯೆಂದರೆ, ಈ ಆಸಾಮಿ ಸರಿಯಿದ್ದಾನೆಯೇ? ಅಥವಾ ಅವನು ಹುಚ್ಚನೇ? ಓದುಗನಾದ ನೀನು ಇದರ ಬಗ್ಗೆ ಯೋಚಿಸುವುದೇನು? ಎಂಬುದು ನನ್ನನ್ನು ಒಂದು ಕ್ರಾಂತಿಕಾರಿ ಪರಿಹಾರೋಪಾಯವಾಗಿ ನನ್ನಲ್ಲಿ ಸ್ಫುರಿಸಿದೆ. ಏನನ್ನು ಯೋಚಿಸಬೇಕೆಂದು ನಾನು ಜನರಿಗೆ ಹೇಳಲು ಬಯಸಿರಲಿಲ್ಲ, ಸರ್ವಸಮ್ಮತವಾಗಿರುವ ಈ ಅತ್ಯಂತ ಚಿಕ್ಕದಾದ ಕೆಲವೊಂದು ಅಂಶಗಳ ಕುರಿತು ಯೋಚಿಸಲು ಮತ್ತು ಪರಿಗಣಿಸಲು ಮಾತ್ರವೇ ನಾನು ಜನರಿಗೆ ಹೇಳಲು ಬಯಸಿದ್ದೆ. ಅದೇನೇ ಆದರೂ ಮಾನವನ ಇತಿಹಾಸದಾದ್ಯಂತ ಈ ಅಂಶಗಳು ಯುಕ್ತವಾದ ರೀತಿಯಲ್ಲಿ ನಿಯತವಾಗಿ ಮರುಕಳಿಸುತ್ತವೆ. []

"Vಯು ಎವೆಯ ಅಪ್ಪನಲ್ಲ, ವಿಸ್ಲರ್‌ನ ತಾಯಿಯಲ್ಲ, ಅಥವಾ ಚಾರ್ಲಿಯ ಚಿಕ್ಕಮ್ಮನಲ್ಲ" ಎಂಬ ಹೇಳಿಕೆ ನೀಡಿರುವುದನ್ನು ಹೊರತುಪಡಿಸಿ, ಸಾಮಾನ್ಯವಾಗಿ ಭಾವಿಸಿರುವಂತೆ V ಯಾರಾಗಿದ್ದ ಎಂಬುದನ್ನು ಮೂರ್‌ ಎಂದೂ ಸ್ಪಷ್ಟಪಡಿಸಿಲ್ಲ; Vಯ ಗುರುತು ಪುಸ್ತಕದಲ್ಲಿ ಎಲ್ಲಿಯೂ ಬಹಿರಂಗಗೊಂಡಿಲ್ಲ ಎಂಬುದನ್ನು ಆತ ಸೂಚಿಸಿದ್ದಾನೆ. V ಪಾತ್ರದ ಸಂದಿಗ್ಧಾರ್ಥತೆ ಅಥವಾ ಅನಿಶ್ಚಯಾರ್ಥತೆಯು, ಕೃತಿಯಾದ್ಯಂತ ಎಡೆಬಿಡದೆ ಮುಂದುವರಿಯುವ ಒಂದು ವಿಷಯವಾಗಿದೆ; Vಯು ಓರ್ವ ಸ್ವಸ್ಥ ಬುದ್ಧಿಯವನೋ ಅಥವಾ ವಿಕೃತ ಮನಸ್ಸಿನವನೋ, ನಾಯಕನೋ ಅಥವಾ ಖಳನಾಯಕನೋ ಎಂಬುದನ್ನು ನಿರ್ಧರಿಸುವುದು ಸ್ವತಃ ಓದುಗನಿಗೆ ಸೇರಿದೆ. ಎವೆಯು ಗೈ ಫಾಕ್ಸ್‌ ಮುಖವಾಡವನ್ನು ತಾನೇ ಸ್ವತಃ ಧರಿಸುವುದಕ್ಕೆ ಮುಂಚಿತವಾಗಿ, Vಯು ವಹಿಸುವ ಪಾತ್ರಕ್ಕೆ ಹೋಲಿಸಿದರೆ ಅವನ ಗುರುತು ಅಷ್ಟೊಂದು ಮುಖ್ಯವಲ್ಲ ಎಂಬ ತೀರ್ಮಾನಕ್ಕೆ ಬರುತ್ತಾಳೆ. ತನ್ಮೂಲಕ ಸ್ವತಃ ಅವನ ಗುರುತನ್ನೇ ಅವನು ಮೈಗೂಡಿಸಿಕೊಂಡಿರುವುದರ ಅಥವಾ ಸಾಕಾರವಾಗಿರುವುದರ ಪರಿಕಲ್ಪನೆಯಾಗಿ ಮಾಡುತ್ತಾಳೆ.

ಒಂದು ನಿಶ್ಚಿತ ಗುರುತಿನ ಮೂಲಕದ ಈ ಮೂರ್ತೀಕರಣದ ಕೊರತೆಯು, "ಸರ್ವಮಾನವ" (ಎವ್ರಿಮ್ಯಾನ್‌ ಎಂದು ಕರೆಯಲಾಗುವ, ಮಾನವಕೋಟಿಯ ಪ್ರತೀಕವಾದ ಪ್ರಾತಿನಿಧಿಕ ಪಾತ್ರ) ಪಾತ್ರವೊಂದನ್ನು ಸೃಷ್ಟಿಸುವ ಒಂದು ವಿಧಾನವಾಗಿ ರೂಪಿಸಲ್ಪಟ್ಟಿದ್ದು, ಪುಸ್ತಕದಾದ್ಯಂತ ತೆಗೆದುಕೊಳ್ಳಲಾಗಿರುವ ವೈಯಕ್ತಿಕ ಹೊಣೆಗಾರಿಕೆಯ ಉದಾಹರಣೆಗಳನ್ನು ಅದು ಬಲಪಡಿಸುತ್ತದೆ. ಓರ್ವ ಪ್ರಾಯದ, ಅರಕ್ಷಿತ, ಅಶಿಕ್ಷಿತ ವ್ಯಕ್ತಿಯಾಗಿದ್ದು, "V" ಪರಿಕಲ್ಪನೆಗೆ ನಿಧಾನವಾಗಿ ಬದಲಾಗುತ್ತಿರುವ ಎವೆಯ ಪಾತ್ರದ ಬಳಕೆಯ ಮೂಲಕ ಈ "ಸರ್ವಮಾನವ‌" ಪಾತ್ರವು ಮತ್ತಷ್ಟು ವಿಶದೀಕರಿಸಲ್ಪಟ್ಟಿದೆ.

ಸಂಖ್ಯೆ 5 ಹಾಗೂ ಅಕ್ಷರ V

ಬದಲಾಯಿಸಿ

V ಫಾರ್ ವೆಂಡೆಟ್ಟಾ ಕೃತಿಯಾದ್ಯಂತ ಸಂಖ್ಯೆ 5 ಹಾಗೂ ರೋಮನ್‌ ಅಂಕಿಗಳಲ್ಲಿ ಸ್ವತಃ "5"ನ್ನು ಪ್ರತಿನಿಧಿಸುವ, ಅಕ್ಷರ Vಗೆ ಸಂಬಂಧಿಸಿದ ಅನೇಕ ಉಲ್ಲೇಖಗಳು ಕಂಡುಬರುತ್ತವೆ.

  • ಕಥೆಯು ನವೆಂಬರ್‌ 5ರಂದು ಪ್ರಾರಂಭವಾಗುತ್ತದೆ
  • ಪ್ರತಿ ಅಧ್ಯಾಯದ ಶೀರ್ಷಿಕೆಯು V ಅಕ್ಷರದಿಂದ ಪ್ರಾರಂಭವಾಗುತ್ತದೆ.
  • ಥಾಮಸ್‌ ಪೈನ್‌ಕೊನ್‌V ಎಂಬ ಕಾದಂಬರಿಯನ್ನು V ಪಾತ್ರವು ಓದುತ್ತಿರುವಂತೆ ಮತ್ತು ಅದರಿಂದ ಹೇಳಿಕೆಯನ್ನು ಪಾತ್ರವು ಉಲ್ಲೇಖಿಸುವಂತೆ ಕಂಡುಬರುತ್ತದೆ.
  • ಬೀಥೊವೆನ್‌‌ಐದನೇ ಸ್ವರಮೇಳವು Vಯಿಂದ ಬಳಸಲ್ಪಟ್ಟಿದೆ ಮತ್ತು V ಅಕ್ಷರಕ್ಕೆ ಸಂಬಂಧಿಸಿದ ಮೋರ್ಸ್‌ ಸಂಕೇತ ಗುರುತುಕಾರಕವಾಗಿರುವ (IIನೇ ಜಾಗತಿಕ ಸಮರದ ಅವಧಿಯಲ್ಲಿ "V ಫಾರ್‌ ವಿಕ್ಟರಿ" ಎಂಬ ಅರ್ಥದಲ್ಲಿ BBCಯು ಈ ಸಂಕೇತವನ್ನು ಒಂದು ಕರೆ ಸಂಕೇತವಾಗಿ ಅತ್ಯಂತ ಭರ್ಜರಿಯಾಗಿ ಬಳಸಿತು) ಮೂರು ಗಿಡ್ಡನೆಯ ಸ್ವರಲಿಪಿಗಳು ಹಾಗೂ ಒಂದು ಉದ್ದನೆಯ ಸ್ವರಲಿಪಿಯ ಎದ್ದುಕಾಣುವ ಬಳಕೆಗಾಗಿ ಅದು ಪ್ರಸಿದ್ಧವಾಗಿದೆ.
  • ಲಾರ್ಕ್‌ಹಿಲ್‌ನ ಪ್ರದೇಶ ನಿರ್ಬಂಧದ ಶಿಬಿರದಲ್ಲಿನ ಕೋಣೆ Vಕ್ಕೆ ಸೇರಿರುವ ಓರ್ವ ಸೆರೆಯಾಳಾಗಿ Vಯನ್ನು ಸರಣಿಯು ಗುರುತಿಸುತ್ತದೆ.
  • Vಯ ಅಡಗುತಾಣಕ್ಕಿರುವ ಪ್ರವೇಶಾವಕಾಶವು ಮುಚ್ಚಲ್ಪಟ್ಟ ವಿಕ್ಟೋರಿಯಾ ನಿಲ್ದಾಣದ ಸುರಂಗಮಾರ್ಗದಿಂದ ಹೊರಡುತ್ತದೆ. ಇದರ ಹಾನಿಗೊಳಿಸಲ್ಪಟ್ಟ ಚಿಹ್ನೆಯನ್ನು ಅದನ್ನು ಫಿಂಚ್‌ ಪತ್ತೆಹಚ್ಚಿದಾಗ, ಅದು ಒಂದು ಪಾರ್ಶ್ವದ Vಯನ್ನು ಹೋಲುವಂತಿರುತ್ತದೆ.
  • Vಯ ವೈಯಕ್ತಿಕ ಸೂಕ್ತಿಯು ವಿ ವೆರಿ ವೆನಿವರ್ಸಮ್‌ ವೈವಸ್‌ ವಿಸಿ ಎಂಬ ಲ್ಯಾಟಿನ್‌ ನುಡಿಗಟ್ಟನ್ನು ಒಳಗೊಂಡಿದ್ದು (ಸತ್ಯದ ಬಲದಿಂದಾಗಿ, ನಾನು ನನ್ನ ಜೀವಿತಾವಧಿಯಲ್ಲಿ ಬ್ರಹ್ಮಾಂಡವನ್ನು ಗೆದ್ದಿರುವೆ) - ಅವು "v" ಅಕ್ಷರದಿಂದ ಪ್ರಾರಂಭವಾಗುವ ಐದು ಪದಗಳಾಗಿವೆ ಎಂಬುದು ಗಮನಾರ್ಹವಾಗಿದೆ. ಸದರಿ ನುಡಿಗಟ್ಟಿನ ಮೂಲವನ್ನು Vಯು ಫೌಸ್ಟ್‌ ಎಂಬುದಾಗಿ ಗುರುತಿಸುತ್ತಾನೆ.
  • ನವೆಂಬರ್‌ 5ರಂದು ಗೈ ಫಾಕ್ಸ್‌ ನೈಟ್‌ ನಡೆಯುತ್ತದೆ.
  • ಐದು ಇಂದ್ರಿಯಗಳೊಂದಿಗೆ ಸಂಬಂಧವಿರುವಂತೆ ಸರ್ಕಾರವು ಐದು ಶಾಖೆಗಳನ್ನು ಒಳಗೊಂಡಿರುತ್ತದೆ.
  • ಲಾರ್ಕ್‌ಹಿಲ್‌ನಲ್ಲಿ‌, Vಗೆ ಬ್ಯಾಚ್‌ "5"ರ ಔಷಧಿಯ ಚುಚ್ಚುಮದ್ದನ್ನು ನೀಡಲಾಗುತ್ತದೆ.
  • ಸರಣಿಯ ಅಂತ್ಯದಲ್ಲಿ ಕೇಳಿಬರುವ Vಯ ಕೊನೆಯ ಪದವು ಒಂದು Vಯಿಂದ ಪ್ರಾರಂಭವಾಗುತ್ತದೆ.
  • Vಯ ಬಹುಪಾಲು ಸಂಭಾಷಣೆಗಳು ಅಯಾಂಬಿಕ್‌ ಪಂಚಗಣಿಗಳನ್ನು[ಸೂಕ್ತ ಉಲ್ಲೇಖನ ಬೇಕು] (ಪ್ರತಿ ಸಾಲಿನಲ್ಲೂ ಒತ್ತಿಹೇಳಲ್ಪಟ್ಟ ಐದು ಉಚ್ಚಾರಾಂಶಗಳನ್ನು ಒಳಗೊಂಡ ಛಂದೋಬದ್ಧವಾದ ಕವಿತೆ) ಬಳಸುತ್ತವೆ .
  • ಫಿಂಚ್‌ LSDಯನ್ನು ತೆಗೆದುಕೊಂಡಾಗ ಮತ್ತು ಲಾರ್ಕ್‌ಹಿಲ್‌ನಲ್ಲಿನ Vಯ ಅನುಭವವನ್ನು ಪುನರಾವರ್ತಿಸಲು ಪ್ರಯತ್ನಿಸಿದಾಗ, ಅವನಿಗೆ ಒಂದು ಒಳಅರಿವು ಉಂಟಾಗುತ್ತದೆ ಹಾಗೂ ಶಿಬಿರದಿಂದ ಅವನು ಓಡುತ್ತಾನೆ. ಹೊಸದಾಗಿ ಕಂಡುಕೊಂಡ ತನ್ನ "ಸ್ವಾತಂತ್ರ್ಯ"ದ ಸಂಭ್ರಮದಲ್ಲಿರುವಾಗ, ಅವನು ಹೀಗೆ ಆಲೋಚಿಸುತ್ತಾನೆ:

    ವಾಲ್ಟಿಂಗ್‌ , ವೀರಿಂಗ್‌ , ವಾಮಿಟಿಂಗ್‌ ಅಪ್‌ ದಿ ವ್ಯಾಲ್ಯೂಸ್‌ ದಟ್‌ ವಿಕ್ಟಿಮೈಸ್ಡ್‌ ಮಿ. ಫೀಲಿಂಗ್‌ ವಾಸ್ಟ್‌ . ಫೀಲಿಂಗ್‌ ವರ್ಜಿನಲ್‌ ... ವಾಸ್‌ ದಿಸ್‌ ಹೌ ಹಿ ಫೆಲ್ಟ್‌? ದಿಸ್‌ ವರ್ವ್‌ , ದಿಸ್‌ ವೈಟಾಲಿಟಿ ... ದಿಸ್‌ ವಿಷನ್‌ .

    ನಂತರ, ತನ್ನ ಆಲೋಚನಾಸರಣಿಯನ್ನು ಆತ ಈ ಕೆಳಗಿನ ಫ್ರೆಂಚ್‌ ಶಬ್ದಗಳಿಂದ ಮುಕ್ತಾಯಗೊಳಿಸುತ್ತಾನೆ: "ಲಾ ವೋಯಿ " (ಮಾರ್ಗ), "ಲಾ ವೆರಿಟೆ " (ಸತ್ಯ), ಮತ್ತು "ಲಾ ವಿಯೆ "(ಜೀವನ). ಕೊನೆಯ ಶಬ್ದಕ್ಕೆ ಸಂಬಂಧಿಸಿದ ಅವನ ಫ್ರೆಂಚ್‌ ಉಚ್ಚಾರಣೆಯು "V" ಎಂಬ ಹೆಸರಿನಂತೆ ಕೇಳಿಸುತ್ತದೆ, ಮತ್ತು ಇದನ್ನು ಹೇಳುವಾಗ ಅವನು ತನ್ನ ಕೈಗಳನ್ನು ಮೇಲಕ್ಕೆತ್ತಿದಾಗ, ಅದರ ಆಕಾರವು "V" ಆಕಾರದಲ್ಲಿರುವಂತೆ ಕಾಣುತ್ತದೆ.

ರೂಪಾಂತರಗಳು

ಬದಲಾಯಿಸಿ

ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ಮೂರ್‌ನೊಂದಿಗೆ ಸಹಯೋಗವನ್ನು ನೀಡಿದ್ದ, ಬೌಹೌಸ್‌ ಮತ್ತು ಲವ್‌ ಅಂಡ್‌ ರಾಕೆಟ್ಸ್‌ ವಾದ್ಯವೃಂದದ ಡೇವಿಡ್‌ J ಎಂಬಾತ Vಯ "ದಿಸ್‌ ವಿಷಿಯಸ್‌ ಕ್ಯಾಬರೇ" ಎಂಬ ಹಾಡು ಹಾಗೂ ಪುಸ್ತಕದಿಂದ ಪ್ರೇರೇಪಿಸಲ್ಪಟ್ಟ ಇತರ ಸಂಗೀತದ ಒಂದು ಆವೃತ್ತಿಯನ್ನು ಧ್ವನಿಮುದ್ರಿಸಿಕೊಂಡಿದ್ದು, V ಫಾರ್ ವೆಂಡೆಟ್ಟಾ ಎಂಬ ಶೀರ್ಷಿಕೆಯ EPಯೊಂದರ ಮೇಲೆ ಅದು ಕಾಣಿಸಿಕೊಂಡಿತು. ಡೇವಿಡ್‌ನ ಪ್ರಕಾರ, ಕಾದಂಬರಿಯ IIನೇ ಭಾಗಕ್ಕೆ ಪ್ರಸ್ತಾವನಾ ರೂಪದ ಕವನವಾಗಿ ಪಾತ್ರವಹಿಸುವ ಭಾವಗೀತಾತ್ಮಕ ಕವನಗಳ ಒಂದು ಸಂಗ್ರಹಕ್ಕೆ ಸಂಗೀತವನ್ನು ಸಂಯೋಜಿಸುವ ಪ್ರಸ್ತಾಪವನ್ನು ಮೂರ್‌ ಅವನ ಮುಂದಿಟ್ಟ. ಗೀತಸಾಹಿತ್ಯವನ್ನು ಸ್ವೀಕರಿಸಿದ ಒಂದು ಗಂಟೆಯೊಳಗಾಗಿ ಆ ಹಾಡಿಗೆ ಡೇವಿಡ್‌ ಸಂಗೀತ ಸಂಯೋಜಿಸಿದ.

1989ರಲ್ಲಿ ಬಂದ ತಮ್ಮ ಗೀತಸಂಪುಟದಲ್ಲಿ V ಫಾರ್ ವೆಂಡೆಟ್ಟಾ ಕುರಿತಾದ ಹಲವಾರು ಉಲ್ಲೇಖಗಳನ್ನೂ ಸಹ ಪಾಪ್‌ ವಿಲ್‌ ಈಟ್‌ ಇಟ್‌ಸೆಲ್ಫ್‌ ಒಳಗೊಂಡಿತ್ತು. ಅದರ ಹೆಸರು ಹೀಗಿತ್ತು: ದಿಸ್‌ ಈಸ್‌ ದಿ ಡೆ... ದಿಸ್‌ ಈಸ್‌ ದಿ ಅವರ್‌... ದಿಸ್‌ ಈಸ್‌ ದಿಸ್‌! -ಇದರಲ್ಲಿನ "ಕೆನ್‌ ಯು ಡಿಗ್‌ ಇಟ್‌?" ಎಂಬ ಹಾಡು "ವಿ ಡಿಗ್‌ V ಫಾರ್ ವೆಂಡೆಟ್ಟಾ" ಎಂಬ ಸಾಹಿತ್ಯವನ್ನು ಒಳಗೊಂಡಿದೆ ಮತ್ತು ಇದರ ಸಮೂಹಗಾಯನವು "ಅಲನ್‌ ಮೂರ್‌ ನೋಸ್‌ ದಿ ಸ್ಕೋರ್‌" ಎಂಬ ಸಾಲಿನೊಂದಿಗೆ ಮುಕ್ತಾಯಗೊಳ್ಳುತ್ತದೆ. "ದಿ ಫ್ಯೂಸಸ್‌ ಹ್ಯಾವ್‌ ಬೀನ್‌ ಲಿಟ್‌" ಎಂಬ ಮತ್ತೊಂದು ಧ್ವನಿಪಥವು, "ದಿ ವಾಯ್ಸ್‌ ಆಫ್‌ ಫೇಟ್‌" ಮತ್ತು "ದಿ ಲ್ಯಾಂಡ್‌ ಆಫ್‌ ಡೂ-ಆಸ್‌-ಯು-ಪ್ಲೀಸ್‌" ಗಳಿಗೆ ಸಂಬಂಧಿಸಿದ ಉಲ್ಲೇಖಗಳನ್ನು ಒಳಗೊಳ್ಳುತ್ತದೆ.

ದಿ ಷ್ಯಾಡೋ ಗ್ಯಾಲರಿ ಎಂಬ ಪ್ರಗತಿಪರ ಮೆಟಲ್‌ ವಾದ್ಯವೃಂದವು ತನ್ನ ಹೆಸರನ್ನು Vಯ ಅಡಗುತಾಣದಿಂದ ತೆಗೆದುಕೊಂಡಿರುವುದನ್ನು ಎಂಬುದು ತನ್ನ ವೆಬ್‌ಸೈಟ್‌ನ FAQ ವಿಭಾಗದಲ್ಲಿ ಒಪ್ಪಿಕೊಂಡಿದೆ. ಈ ವಾದ್ಯವೃಂದವು ರೂಮ್‌ V ಎಂಬ ಹೆಸರಿನ ಒಂದು ಗೀತಸಂಪುಟವನ್ನೂ ಹೊಂದಿದ್ದು, ಇದು ಮತ್ತೊಂದು ಸ್ಪಷ್ಟ ಉಲ್ಲೇಖವಾಗಿದೆ.

ಜೊಕಾಸ್ಟಾ ಎಂಬ ಹೆಸರಿನ ತೊಂಬತ್ತರ ದಶಕದ ಪ್ರಗತಿಪರ ಬ್ರಿಟ್‌-ಪಾಪ್‌ ವಾದ್ಯವೃಂದವು, 1997ರಲ್ಲಿ ಬಂದ ಮತ್ತು ಎಪಿಕ್‌/VP ಮ್ಯೂಸಿಕ್‌ನಿಂದ ಬಿಡುಗಡೆ ಮಾಡಲ್ಪಟ್ಟ ತನ್ನ ನೋ ಕೋಇನ್ಸಿಡೆನ್ಸ್‌ ಎಂಬ ಗೀತಸಂಪುಟದಲ್ಲಿ "ದಿ ಲ್ಯಾಂಡ್‌ ಆಫ್‌ ಡೂ-ಆಸ್‌-ಯು-ಪ್ಲೀಸ್‌" ಎಂಬ ಗೀತೆಯನ್ನು ಬರೆಯಿತು. Vಯು ಬ್ರಿಟಿಷ್‌ ಜನತೆಗಾಗಿ ದೂರದರ್ಶನದ ಮೂಲಕ ಮಾಡಿದ ಭಾಷಣ, ಹಾಗೂ ಎವೆಗಾಗಿ ಅವನು ಓದುವ ಪುಸ್ತಕವು ಈ ಹಾಡಿನಾದ್ಯಂತ ಉಲ್ಲೇಖಿಸಲ್ಪಟ್ಟಿತು.

ಡೆಲ್‌ ಕಾನ್‌ ಡಾಸ್‌ ಎಂಬ ಹೆಸರಿನ ಸ್ಪ್ಯಾನಿಷ್‌ ಮೆಟಲ್‌ ಹಾಗೂ ಹಿಪ್‌ ಹಾಪ್‌ ವಾದ್ಯವೃಂದವು, 1991ರಲ್ಲಿ ಬಂದ ಟೆರ್ಸರ್‌ ಅಸಾಲ್ಟೊ ಎಂಬ ತನ್ನ ಗೀತಸಂಪುಟದಲ್ಲಿ "V ಡಿ ವೆಂಡೆಟ್ಟಾ" ಎಂಬ ಶೀರ್ಷಿಕೆಯ ಹಾಡೊಂದನ್ನು ಸೇರಿಸಿತು.

ಲಾಸ್‌ ವೆಗಾಸ್‌ ಮೂಲದ ಟೇಕಿಂಗ್‌ ಡಾನ್‌ ಎಂಬ ಹೆಸರಿನ ಒಂದು ಮೆಟಲ್‌ ವಾದ್ಯವೃಂದವು "V" ಅಥವಾ "V ಫಾರ್ ವೆಂಡೆಟ್ಟಾ" ಎಂಬ ಹಾಡನ್ನು ಬರೆಯಿತು ಹಾಗೂ V ಫಾರ್ ವೆಂಡೆಟ್ಟಾ ಚಲನಚಿತ್ರದ ರೂಪಾಂತರವೊಂದರ ಒಂದು ಪರ್ಯಾಯ ಲಾಂಛನವಾಗಿ ಉಪಯೋಗಿಸಲು ಬಳಸಿಕೊಂಡಿತು. ವಾದ್ಯವೃಂದದ ಟೈಂ ಟು ಬರ್ನ್‌ (2010) ಎಂಬ ಆರಂಭದ CDಯ ವಿಶೇಷ ಆವೃತ್ತಿಯಲ್ಲಿ ಈ ಹಾಡು ಸೇರಿಸಲ್ಪಟ್ಟಿದೆ.

NCಯ (ಉತ್ತರ ಕ್ಯಾಲಿಫೋರ್ನಿಯಾದ) ರ್ಯಾಲೀ ಮೂಲಕ್ಕೆ ಸೇರಿರುವ, ಈಗ ಅಸ್ತಿತ್ವದಲ್ಲಿಲ್ಲದ ದಿ ಟ್ರಿಪ್ಯಾನೇಟರ್ಸ್‌ ಎಂಬ ಹೆಸರಿನ ಪ್ರಭಾವಕಾರಿ ರಾಕ್‌ ಸಂಗೀತದ ವಾದ್ಯವೃಂದವು "V" ಎಂದು ಕರೆಯಲಾಗುತ್ತಿದ್ದ ಹಾಡೊಂದನ್ನು ಹೊಂದಿತ್ತು. ಇದರ ಸಾಹಿತ್ಯದ ಬಹುಭಾಗವು ಪ್ರಸಿದ್ಧವಾದ ಶಿಶುಪ್ರಾಸ ಗೀತೆಯನ್ನು ಒಳಗೊಂಡಿದ್ದು, ಕಥೆ ಮತ್ತು ಚಲನಚಿತ್ರದಾದ್ಯಂತ ಅದು ಪುನರಾವರ್ತನೆಯಾಗುತ್ತವೆ ("ರಿಮೆಂಬರ್‌, ರಿಮೆಂಬರ್, ದಿ ಫಿಫ್ತ್‌ ಆಫ್‌ ನವೆಂಬರ್‌‌...").

ವಿಷಿಯಸ್‌ ಕ್ಯಾಬರೇ ಎಂಬ ಬ್ರಿಟಿಷ್‌ ರಾಕ್‌ ವಾದ್ಯವೃಂದವು ತನ್ನ ಹೆಸರನ್ನು "ದಿಸ್‌ ವಿಷಿಯಸ್‌ ಕ್ಯಾಬರೇ" ಎಂಬ Vಯ ಹಾಡಿನಿಂದ ತೆಗೆದುಕೊಂಡಿತು.

ರಂಗಭೂಮಿ

ಬದಲಾಯಿಸಿ

ಸ್ಟಾಕ್‌ಹೋಮ್ಸ್‌ ಬ್ಲಾಡ್‌ಬ್ಯಾಡ್‌ ಎಂಬ ಹೆಸರಿನ ಸ್ವೀಡನ್ನಿನ ನಿರ್ಮಾಣ ಕಂಪನಿಯು, 2000ನೇ ಇಸವಿಯಲ್ಲಿ ಲ್ಯಾಂಡೆಟ್‌ ಡಾರ್‌ ಮ್ಯಾನ್‌ ಗಾರ್‌ ಸೊಮ್‌ ಮ್ಯಾನ್‌ ವಿಲ್‌ ಎಂಬ ಶೀರ್ಷಿಕೆಯ ಅಡಿಯಲ್ಲಿ ಸದರಿ ಸಚಿತ್ರ ಪುಸ್ತಕದ ರಂಗಭೂಮಿಯ ಒಂದು ಪ್ರತ್ಯಕ್ಷ ರೂಪಾಂತರವನ್ನು ಪ್ರದರ್ಶಿಸಿತು. ಈ ಶೀರ್ಷಿಕೆಯನ್ನು ಆಂಗ್ಲಭಾಷೆಗೆ ಅನುವಾದಿಸಿದರೆ ಅದು ದಿ ಲ್ಯಾಂಡ್‌ ವೇರ್‌ ಯು ಡು ಆಸ್ ಯು ಪ್ಲೀಸ್‌ (ನೀನು ಬಯಸಿದಂತೆ ಮಾಡಬಹುದಾದ ಪ್ರದೇಶ) ಎಂದಾಗುತ್ತದೆ.

ಸಿನಿಮಾ

ಬದಲಾಯಿಸಿ

2002ರ ಆರಂಭದಲ್ಲಿ ಚಿತ್ರಿಸಲ್ಪಟ್ಟ ದಿ ಮೈಂಡ್‌ಸ್ಕೇಪ್‌ ಆಫ್‌ ಅಲನ್‌ ಮೂರ್‌ ಎಂಬ ಸಾಕ್ಷ್ಯಚಿತ್ರರೂಪದ ರೂಪಕಚಿತ್ರದಲ್ಲಿನ ದೃಶ್ಯಗಳ ಪೈಕಿ ಒಂದನ್ನು, ಬೆಳ್ಳಿತೆರೆಗಾಗಿ ಮೊಟ್ಟಮೊದಲ ಬಾರಿಗೆ ಚಿತ್ರಿಸಲಾದ V ಫಾರ್ ವೆಂಡೆಟ್ಟಾ ದ ರೂಪಾಂತರವೊಂದು ಒಳಗೊಂಡಿತ್ತು.

ಈ ನಾಟಕೀಕರಣಗೊಂಡ ರೂಪದಲ್ಲಿ ಮುಖ್ಯಪಾತ್ರಕ್ಕೆ ಯಾವುದೇ ಸಂಭಾಷಣೆಯಿರಲಿಲ್ಲ ಮತ್ತು ಅದೇ ಸಮಯಕ್ಕೆ ವಾಯ್ಸ್‌ ಆಫ್‌ ಫೇಟ್‌ನ್ನು ಒಂದು ಪೀಠಿಕೆಯಾಗಿ ಬಳಸಿಕೊಳ್ಳಲಾಗಿದೆ.

2006ರ ಮಾರ್ಚ್‌ 17ರಂದು ಒಂದು ರೂಪಕ ಚಲನಚಿತ್ರ ರೂಪಾಂತರವು ಬಿಡುಗಡೆಯಾಯಿತು. ಜೇಮ್ಸ್‌ ಮೆಕ್‌ಟೀಗ್‌ (ದಿ ಮ್ಯಾಟ್ರಿಕ್ಸ್‌ ಫಿಲ್ಮ್ಸ್‌‌ನಲ್ಲಿ ಮೊದಲ ಸಹಾಯಕ ನಿರ್ದೇಶಕನಾಗಿದ್ದವ) ಎಂಬಾತನಿಂದ ನಿರ್ದೇಶಿಸಲ್ಪಟ್ಟ ಈ ಚಿತ್ರಕ್ಕೆ ವಾಚೋವ್ಸ್ಕಿ ಸೋದರರು ಚಿತ್ರಕಥೆಯನ್ನು ರಚಿಸಿದ್ದರು. ಇದರಲ್ಲಿ ಎವೆರಿ ಹ್ಯಾಮಂಡ್‌ ಪಾತ್ರದಲ್ಲಿ ನಟಾಲೀ ಪೋರ್ಟ್‌ಮನ್‌ ಕಾಣಿಸಿಕೊಂಡಿದ್ದರೆ, "V" ಪಾತ್ರದಲ್ಲಿ ಅಭಿನಯಿಸಿರುವುದು ಹ್ಯೂಗೋ ವೀವಿಂಗ್‌. ಇವರಿಬ್ಬರ ಜೊತೆಗೆ ಸ್ಟೀಫೆನ್‌ ರಿಯಾ, ಜಾನ್‌ ಹುರ್ಟ್‌ ಮತ್ತು ಸ್ಟೀಫೆನ್‌ ಫ್ರೈ ಕೂಡಾ ಅಭಿನಯಿಸಿದ್ದಾರೆ. V ಫಾರ್ ವೆಂಡೆಟ್ಟಾ ಚಲನಚಿತ್ರದಲ್ಲಿ ಆಡಮ್‌ ಸಟ್ಲರ್‌ ಎಂಬ ಮರುನಾಮಕರಣಗೊಂಡ ಪ್ರಧಾನ ನ್ಯಾಯಾಧೀಶನ ಪಾತ್ರವನ್ನು ವಹಿಸಿದ ಜಾನ್‌ ಹುರ್ಟ್‌ ಎಂಬಾತ, 1984ರಲ್ಲಿ ಬಂದ ನೈನ್‌ಟೀನ್‌ ಎಯ್ಟಿ-ಫೋರ್‌ ಎಂಬ ಜಾರ್ಜ್‌ ಆರ್ವೆಲ್‌‌ನ ಕಾದಂಬರಿಯ ಚಲನಚಿತ್ರ ರೂಪಾಂತರದಲ್ಲಿ ವಿನ್ಸ್ಟನ್‌ ಸ್ಮಿತ್‌ ಎಂಬ ಪಾತ್ರವನ್ನೂ ವಹಿಸಿದ. ಗೈ ಫಾಕ್ಸ್‌ ನೈಟ್‌ ಹಾಗೂ ಕೋವಿಮದ್ದಿನ ಒಳಸಂಚಿನ 400ನೇ ವಾರ್ಷಿಕೋತ್ಸವದೊಂದಿಗೆ ಏಕಕಾಲದಲ್ಲಿ ಜರುಗಲೆಂದು 2005ರ ನವೆಂಬರ್‌ 5ರಂದು ಬಿಡುಗಡೆಯಾಗಲು ಮೂಲತಃ ಸಿದ್ಧತೆ ಮಾಡಿಕೊಂಡಿದ್ದ ಈ ಚಿತ್ರವು, ಮಾರ್ಚ್‌ವರೆಗೆ ಮುಂದೂಡಲ್ಪಟ್ಟಿತು. 2005ರ ಜುಲೈ 7ರ ಲಂಡನ್‌ ಬಾಂಬ್‌ದಾಳಿಗಳ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಯಿತು ಎಂದು ಭಾವಿಸಲಾಯಿತಾದರೂ, ಬಿಡುಗಡೆಯಾಗದಿರುವುದಕ್ಕೆ ಇದನ್ನೊಂದು ಕಾರಣವಾಗಿ ಒಪ್ಪಿಕೊಳ್ಳಲು ಚಿತ್ರದ ನಿರ್ಮಾಪಕರು ನಿರಾಕರಿಸಿದರು.[]

ಆದಾಗ್ಯೂ, ಇಂದಿನವರೆಗೆ ಬಂದಿರುವ ತನ್ನ ಕೃತಿಗಳ ಪ್ರತಿಯೊಂದೂ ಬೆಳ್ಳಿತೆರೆಯ ರೂಪಾಂತರದೊಂದಿಗೆ ನಡೆದುಕೊಂಡಂತೆಯೇ ಅಲನ್‌ ಮೂರ್‌ ಸದರಿ ಚಲನಚಿತ್ರದಿಂದಲೂ ದೂರವುಳಿದ. DC ಕಾಮಿಕ್ಸ್‌ ಸಂಸ್ಥೆಯ ಸಾಂಸ್ಥಿಕ ಮೂಲಸಂಸ್ಥೆಯಾದ ವಾರ್ನರ್‌ ಬ್ರದರ್ಸ್‌ ಕಂಪನಿಯು ಸದರಿ ಚಲನಚಿತ್ರಕ್ಕೆ ಸಂಬಂಧಿಸಿದ, ಮೂರ್‌ನದೆಂದು ಸಾಮಾನ್ಯವಾಗಿ ಭಾವಿಸಲ್ಪಟ್ಟಿರುವ ಅನುಮೋದನೆಗಳ ಕುರಿತಾದ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಲು ವಿಫಲಗೊಂಡಿದ್ದರಿಂದಾಗಿ ತನ್ನ ಪ್ರಕಾಶಕನಾದ DC ಕಾಮಿಕ್ಸ್‌ನೊಂದಿಗಿನ ಸಹಕಾರವನ್ನು ಮೂರ್‌ ಅಂತ್ಯಗೊಳಿಸಿದ.[] ಚಿತ್ರಕಥೆಯನ್ನು ಓದಿದ ನಂತರ, ಮೂರ್‌ ಈ ರೀತಿಯಲ್ಲಿ ಟೀಕಿಸಿದ:

"ತಮ್ಮದೇ ಸ್ವಂತ ದೇಶದಲ್ಲಿ ಒಂದು ರಾಜಕೀಯ ವಿಡಂಬನಾತ್ಮಕ ಸನ್ನಿವೇಶವನ್ನು ಸ್ಥಾಪಿಸಲೆಂದು ತೀರಾ ಅಂಜುಬುರುಕರಿಂದ ಸೃಷ್ಟಿಸಲ್ಪಟ್ಟ ಬುಷ್‌-ಯುಗದ ಒಂದು ನೀತಿಕತೆಯಾಗಿ ಈ ಚಲನಚಿತ್ರವು ಮಾರ್ಪಟ್ಟಿದೆ.... ನವ-ಸಾಂಪ್ರದಾಯಿಕ‌ ಪಕ್ಷದಿಂದ ನಡೆಸಲ್ಪಡುತ್ತಿರುವ ಸಂಸ್ಥಾನವೊಂದರ ವಿರುದ್ಧವಾಗಿ ಎದ್ದುನಿಂತಿರುವ ಅಮೆರಿಕಾದ ಉದಾರಶೀಲ ಮೌಲ್ಯಗಳೊಂದಿಗಿನ ವ್ಯಕ್ತಿಯೊಬ್ಬನ ಒಂದು ಅಡ್ಡಿಪಡಿಸುವಿಕೆಯ ಮತ್ತು ನಿರಾಶೆಗೊಂಡ ಹಾಗೂ ಅದಕ್ಕಿಂತ ಹೆಚ್ಚಾಗಿ ಅಮೆರಿಕಾದ ಶಕ್ತಿಹೀನ ಉದಾರಶೀಲತೆಯ ಒಂದು ಕಲ್ಪನೆಯಾಗಿದೆ. ಆದರೆ, V ಫಾರ್ ವೆಂಡೆಟ್ಟಾ ಎಂಬ ಸಚಿತ್ರ ಪುಸ್ತಕವು ಈ ಉದ್ದೇಶವನ್ನು ಹೊಂದಿರಲಿಲ್ಲ. ಇದು ಉಗ್ರ ಬಲಪಂಥೀಯ ದೃಷ್ಟಿಕೋನದ ಕುರಿತದ್ದಾಗಿತ್ತು, ಇದು ಅರಾಜಕತೆಯ ಕುರಿತದ್ದಾಗಿತ್ತು, ಇದು ಇಂಗ್ಲಂಡ್‌‌‌ನ ಕುರಿತದ್ದಾಗಿತ್ತು."[೧೦]

ಆತ ತನ್ನ ಅಭಿಪ್ರಾಯವನ್ನು ಮುಂದುವರೆಸುತ್ತಾ, ಒಂದು ವೇಳೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ನಡೆಯುತ್ತಿರುವುದರ ಕುರಿತಾಗಿ ಪ್ರತಿಭಟನೆ ವ್ಯಕ್ತಪಡಿಸುವುದೇ ವ್ಯಾಕೋವ್ಸ್ಕಿಸ್‌ನ ಬಯಕೆಯಾಗಿದ್ದಿದ್ದರೆ, ಬ್ರಿಟನ್‌ನೊಂದಿಗೆ ಈ ಹಿಂದೆ ಮೂರ್‌ ಮಾಡಿದ ರೀತಿಯಲ್ಲೇ USAನ ಸಮಸ್ಯೆಗಳ ಕಡೆಗೇ ನೇರವಾಗಿ ಉದ್ದೇಶಿಸಿರುವ ಒಂದು ರಾಜಕೀಯ ನಿರೂಪಣಾ ಶೈಲಿಯನ್ನು ಅವರು ಬಳಸಬೇಕಿತ್ತು. ಓರ್ವ ಕ್ರಾಂತಿಕಾರಿಯಾಗಿ ಚಿತ್ರಿಸುವುದರ ಬದಲು "V"ಯನ್ನು ಓರ್ವ ಸ್ವಾತಂತ್ರ್ಯ ಹೋರಾಟಗಾರನಂತೆ ವಾದಯೋಗ್ಯವಾದ ರೀತಿಯಲ್ಲಿ ಬದಲಾಯಿಸುವುದರ ಮೂಲಕ, ಸದರಿ ಚಲನಚಿತ್ರವು ಮೂಲ ಸಂದೇಶವನ್ನೇ ಬದಲಿಸುತ್ತದೆ ಎಂದು ತಿಳಿಸಿದ. ನಿರ್ಮಾಪಕ ಜೋಯೆಲ್‌ ಸಿಲ್ವರ್‌ನೊಂದಿಗಿನ ಸಂದರ್ಶನವೊಂದು ಸೂಚಿಸುವ ಪ್ರಕಾರ, ಬದಲಾವಣೆಯು ಪ್ರಜ್ಞಾಪೂರ್ವಕವಾಗಿಲ್ಲದೇ ಇರಬಹುದು; ಸಚಿತ್ರ ಪುಸ್ತಕಗಳ Vಯನ್ನು ಒಂದು ಖಂಡತುಂಡವಾದ "ಸೂಪರ್‌ ಹೀರೋ ರೀತಿಯಲ್ಲಿ... ವಿಶ್ವವನ್ನು ಬಹುಮಟ್ಟಿಗೆ ಉಳಿಸುವ ಓರ್ವ ಮುಖವಾಡ ಧರಿಸಿದ ಮುಯ್ಯಿಗಾರನ" ರೀತಿಯಲ್ಲಿ ಜೋಯೆಲ್‌ ಸಿಲ್ವರ್ ಗುರುತಿಸುತ್ತಾನೆ. ಕಥೆಯಲ್ಲಿರುವ Vಯ ಪಾತ್ರದ ಕುರಿತಾಗಿ ಮೂರ್‌ನದೇ ಆದ ಹೇಳಿಕೆಗಳಿಗೆ ವಿರುದ್ಧವಾಗಿ ನಿಲ್ಲುವ ಒಂದು ಸರಳೀಕರಣದ ಸ್ವರೂಪದಂತೆ ಇದು ಕಾಣುತ್ತದೆ.[೧೧]

ಇದಕ್ಕೆ ತದ್ವಿರುದ್ಧವಾಗಿ, ಪುಸ್ತಕದ ಸಹ-ಲೇಖಕ ಹಾಗೂ ಚಿತ್ರಕಾರನಾದ ಡೇವಿಡ್‌ ಲಾಯ್ಡ್‌, ರೂಪಾಂತರವನ್ನು ಒಪ್ಪಿಕೊಂಡು ಸ್ವೀಕರಿಸಿದ.[೧೨] ನ್ಯೂಸಾರಾಮಾ ಜೊತೆಗಿನ ಒಂದು ಸಂದರ್ಶನದಲ್ಲಿ ಅವನು ಹೀಗೆ ಹೇಳುತ್ತಾನೆ: "ಇದೊಂದು ಸೊಗಸಾದ ಚಲನಚಿತ್ರ. ನನಗೆ ತೋಚಿದಂತೆ ಈ ಚಿತ್ರದ ಕುರಿತಾದ ಅತ್ಯಂತ ಅಸಾಧಾರಣವಾದ ವಿಷಯವೆಂದರೆ, ಪುಸ್ತಕದಲ್ಲಿ ಗರಿಷ್ಟ ಪ್ರಮಾಣದ ಪರಿಣಾಮವು ಕಂಡುಬರಬೇಕು ಎಂದು ನಾನು ಹೇಗೆಲ್ಲಾ ಕೆಲಸ ಮಾಡಿ, ದೃಶ್ಯಗಳನ್ನು ಅತ್ಯಂತ ಚತುರತೆಯಿಂದ ರೂಪಿಸಿದ್ದೆನೋ ಆ ದೃಶ್ಯಗಳನ್ನು ನಾನು ನೋಡುವಾಗ ಅದೇ ಪ್ರಮಾಣದ ಕಾಳಜಿ ಹಾಗೂ ಪರಿಣಾಮದೊಂದಿಗೆ ಅದು ಚಲನಚಿತ್ರವಾಗಿ ರೂಪಾಂತರಗೊಂಡಿದೆ ಎನಿಸಿತು. ನಟಾಲೀ ಪೋರ್ಟ್‌ಮನ್‌ ಹಾಗೂ ಹ್ಯೂಗೋ ವೀವಿಂಗ್‌ ನಡುವಿನ "ರೂಪಾಂತರದ" ದೃಶ್ಯವು ಅದ್ಭುತವಾಗಿದೆ. ಮೂಲಕೃತಿಯನ್ನು ಅತೀವವಾಗಿ ಮೆಚ್ಚಿಕೊಳ್ಳುವ ಜನರ ಪೈಕಿ ನೀವೂ ಒಬ್ಬರಾಗಿದ್ದು ಅದಕ್ಕೆ ತರಲಾಗಿರುವ ಬದಲಾವಣೆಗಳು ನಿಮ್ಮನ್ನು ಅಪ್ರಯತ್ನವಾಗಿ ಅಥವಾ ತಾನೇತಾನಾಗಿ ಅದರಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡುವಂತಿದ್ದರೆ, ಆಗ ನೀವು ಸದರಿ ಚಲನಚಿತ್ರವನ್ನು ಇಷ್ಟಪಡದಿರಬಹುದು- ಆದರೆ ಒಂದು ವೇಳೆ, ನೀವು ಮೂಲಕೃತಿಯನ್ನು ಓದಿ ಆನಂದಿಸಿದವರಾಗಿದ್ದು ಆಕರ ಸಾಮಗ್ರಿಗಿಂತ ಭಿನ್ನವಾಗಿರುವ ಆದರೆ ಅದರಷ್ಟೇ ಶಕ್ತಿಯುತವಾಗಿರುವ ರೂಪಾಂತರವೊಂದನ್ನು ಸ್ವೀಕರಿಸಬಲ್ಲವರಾಗಿದ್ದರೆ, ಆಗ ನಾನೆಷ್ಟು ಪ್ರಭಾವಿತನಾದೆನೋ ನೀವೂ ಸಹ ಹಾಗೆಯೇ ಈ ಚಿತ್ರದಿಂದ ಪ್ರಭಾವಿತರಾಗುತ್ತೀರಿ."[೧೩]

ಚಲನಚಿತ್ರದ ಚಿತ್ರಕಥೆಯ ಒಂದು ಕಾದಂಬರೀಕರಣವನ್ನು ಸಚಿತ್ರ ಪುಸ್ತಕದ ಬರಹಗಾರನಾದ ಸ್ಟೀವ್‌ ಮೂರ್‌ ಬರೆದ (ಅಲನ್‌ ಮೂರ್‌ನೊಂದಿಗೆ ಇವನಿಗೆ ಯಾವ ಸಂಬಂಧವೂ ಇಲ್ಲ).

ಸಾಂಸ್ಕೃತಿಕ ಪ್ರಭಾವಗಳು

ಬದಲಾಯಿಸಿ
 
2008ರಲ್ಲಿ ಲಂಡನ್‌ನಲ್ಲಿ ವೈಜ್ಞಾನಿಕ ಧರ್ಮವ್ಯವಸ್ಥೆಗೆ ವಿರುದ್ಧವಾಗಿ ಆಯೋಜಿಸಲಾಗಿದ್ದ ಪ್ರತಿಭಟನೆಯೊಂದರಲ್ಲಿ "ಗೈ ಫಾಕ್ಸ್‌ ಮುಖವಾಡಗಳನ್ನು" ಧರಿಸಿರುವ ಪ್ರದರ್ಶನಕಾರರು.

ಅನಾನಿಮಸ್‌ ಎಂಬ ಹೆಸರಿನ ಒಂದು ನಾಯಕರಹಿತ ಅಂತರಜಾಲ-ಆಧರಿತ ಸಮೂಹವು ಗೈ ಫಾಕ್ಸ್‌ ಮುಖವಾಡವನ್ನು ತನ್ನ ಸಂಕೇತವಾಗಿ (ಒಂದು ಅಂತರಜಾಲ ಪರಿಕಲ್ಪನಾ ಘಟಕಕ್ಕೆ ಒಂದು ಉಲ್ಲೇಖವಾಗಿ) ಸ್ವೀಕರಿಸಿ ಅಳವಡಿಸಿಕೊಂಡಿದ್ದು, ವೈಜ್ಞಾನಿಕ ಧರ್ಮವ್ಯವಸ್ಥೆಯ ಚರ್ಚಿನ ವಿರುದ್ಧದ ಪ್ರಾಜೆಕ್ಟ್‌ ಚಾನೊಲಜಿಯ ಪ್ರತಿಭಟನೆಗಳ ಸಮಯದಲ್ಲಿ ಸಮೂಹದ ಸದಸ್ಯರು ಗಮನಾರ್ಹವಾಗಿ ಅವನ್ನು ಧರಿಸುತ್ತಾರೆ. ಎಂಟರ್‌ಟೈನ್‌ಮೆಂಟ್‌ ವೀಕ್ಲಿ ಜೊತೆಗಿನ ಸಂದರ್ಶನವೊಂದರಲ್ಲಿ, ತನ್ನ ಸಚಿತ್ರ ಪುಸ್ತಕವಾದ V ಫಾರ್ ವೆಂಡೆಟ್ಟಾ ದಿಂದ ಅಳವಡಿಸಿಕೊಳ್ಳಲಾಗಿರುವ ಗೈ ಫಾಕ್ಸ್‌ ವಿಶಿಷ್ಟತೆಯ ಬಳಕೆಯ ಕುರಿತಾಗಿ ಅಲನ್‌ ಮೂರ್‌ ಈ ರೀತಿ ಹೇಳಿದ: "ಕೆಲವು ದಿನಗಳ ಹಿಂದೆ ನಾನು ಸುದ್ದಿಯನ್ನು ವೀಕ್ಷಿಸುತ್ತಿರುವಾಗ, ಇಲ್ಲಿನ ವೈಜ್ಞಾನಿಕ ಧರ್ಮವ್ಯವಸ್ಥೆಯ ಕೇಂದ್ರ ಕಚೇರಿಯ ಹೊರಭಾಗದಲ್ಲಿ ಪ್ರದರ್ಶನಗಳು ನಡೆಯುತ್ತಿರುವುದನ್ನು ನೋಡಿ, ಮತ್ತು ಆ ಎಲ್ಲಾ ಪ್ರದರ್ಶನಕಾರರೂ V ಫಾರ್ ವೆಂಡೆಟ್ಟಾಗೈ ಫಾಕ್ಸ್‌ ಮುಖವಾಡಗಳನ್ನು ಧರಿಸಿರುವುದನ್ನು ತೋರಿಸುವ ದೃಶ್ಯದ ಭಾಗವೊಂದನ್ನು ಹಠಾತ್ತಾಗಿ ತೋರಿಸಿದಾಗ, ನಾನೂ ಕೂಡಾ ಉತ್ಸಾಹಭರಿತನಾದೆ. ಅದು ನನಗೆ ಸಂತೋಷವನ್ನು ಉಂಟುಮಾಡಿತು. ಅದು ನನ್ನಲ್ಲಿ ಒಂದು ಬೆಚ್ಚನೆಯ ಪುಟ್ಟ ಉಜ್ವಲತೆ ಅಥವಾ ಭಾವಾವೇಶವನ್ನು ಉಂಟುಮಾಡಿತು."[೧೪]

2009ರ ಮೇ 23ರಂದು, Vಯಂತೆ ವೇಷಭೂಷಣವನ್ನು ಧರಿಸಿದ ಪ್ರತಿಭಟನಾಕಾರರು ಬ್ರಿಟಿಷ್‌ MPಗಳ ಖರ್ಚುವೆಚ್ಚಗಳ ವಿವಾದದ ಕುರಿತಾಗಿ ಪ್ರತಿಭಟನೆಯನ್ನು ನಡೆಸುತ್ತಿರುವಾಗ, ಸಂಸತ್ತಿನ ಹೊರಭಾಗದಲ್ಲಿ ಕೋವಿಮದ್ದಿನ ಒಂದು ಖೋಟಾ ನಳಿಕೆಯನ್ನು ಕೂಡಾ ಆಸ್ಫೋಟಿಸಿದರು.[೧೫]

ಸಂಕಲಿಸಿದ ಆವೃತ್ತಿಗಳು

ಬದಲಾಯಿಸಿ

ಸಮಗ್ರ ಕಥೆಯು ಸಂಕಲಿತ ರೂಪದಲ್ಲಿ ಕಾಗದದ ಹೊದಿಕೆಯ (ISBN 0-930289-52-8) ಮತ್ತು ಗಟ್ಟಿರಟ್ಟಿನ ಹೊದಿಕೆಯ (ISBN 1-4012-0792-8) ಸ್ವರೂಪದಲ್ಲಿ ಪ್ರಕಟಗೊಂಡಿದೆ. 2009ರ ಆಗಸ್ಟ್‌‌ನಲ್ಲಿ ಕಳಚಬಲ್ಲ-ಹೊದಿಕೆಯ ಪರಿಪೂರ್ಣ ಆವೃತ್ತಿಯನ್ನು (ISBN 1-4012-2361-3) DC ಸಂಸ್ಥೆಯು ಪ್ರಕಟಿಸಿತು; ಸರಣಿಯ ಮೂಲ ಚಲಾವಣೆಗೆ ಸೇರಿದ ಹೊಸದಾಗಿ-ಬಣ್ಣಹಾಕಿದ "ಮೂಕವರ್ಣದ" ಪುಟಗಳನ್ನು (ಯಾವುದೇ ಸಂಭಾಷಣೆಯನ್ನು ಹೊಂದಿಲ್ಲದ ಪೂರ್ಣ-ಪುಟದ ಪಟ್ಟಿಗಳು) ಇದು ಒಳಗೊಂಡಿದ್ದು, ಇವು ಹಿಂದಿನ ಬೇರಾವುದೇ ಆವೃತ್ತಿಯಲ್ಲಿ ಕಾಣಿಸಿಕೊಂಡಿಲ್ಲ.[೧೬]

ಸಂದರ್ಶನಗಳು

ಬದಲಾಯಿಸಿ

ದಿ ಮೈಂಡ್‌ಸ್ಕೇಪ್‌ ಆಫ್‌ ಅಲನ್‌ ಮೂರ್‌ ಎಂಬ ಸಾಕ್ಷ್ಯಚಿತ್ರರೂಪದ ರೂಪಕ-ಚಿತ್ರದ DVDಯು ಕಲಾವಿದ ಡೇವಿಡ್‌ ಲಾಯ್ಡ್‌‌ನೊಂದಿಗಿನ ಬೇರೆಲ್ಲೂ ಲಭ್ಯವಾಗದ ಒಂದು ಹೆಚ್ಚುವರಿ ಸಂದರ್ಶನವನ್ನು ಒಳಗೊಂಡಿದೆ.

ಟಿಪ್ಪಣಿಗಳು ಮತ್ತು ಆಕರಗಳು

ಬದಲಾಯಿಸಿ
  1. ೧.೦ ೧.೧ ೧.೨ Moore, Alan (1983). "Behind the Painted Smile". Warrior (17).
  2. Brown, Adrian (2004). "Headspace: Inside The Mindscape Of Alan Moore" (http). Ninth Art. Retrieved 2006-04-06.
  3. Boudreaux, Madelyn (1994). "Introduction". An Annotation of Literary, Historic and Artistic References in Alan Moore's Graphic Novel, "V for Vendetta". Archived from the original on 2006-03-08. Retrieved 2006-04-06.
  4. ಮೂರ್‌, ಅಲನ್‌, ಇಂಟ್ರಡಕ್ಷನ್‌. V ಫಾರ್ ವೆಂಡೆಟ್ಟಾ . ನ್ಯೂಯಾರ್ಕ್‌: DC ಕಾಮಿಕ್ಸ್‌, 1990.
  5. Moore, Alan (w), Lloyd, David (p). "V for Vendetta" V for Vendetta, vol. 10, p. 28/6 (May, 1989). DC Comics.
  6. "Authors on Anarchism — an Interview with Alan Moore". Strangers in a Tangled Wilderness. Infoshop.org. Retrieved 2008-05-02.
  7. MacDonald, Heidi (2006). "A for Alan, Pt. 1: The Alan Moore interview". The Beat. Archived from the original on 2006-05-05. Retrieved 2006-04-06.
  8. Griepp, Milton (2005). "'Vendetta' Delayed". ICv2.com. Retrieved 2006-04-06.
  9. "Moore Slams V for Vendetta Movie, Pulls LoEG from DC Comics". Comic Book Resources. 22 April 2006.
  10. MTV (2006). ""Alan Moore: The last angry man"". MTV.com. Archived from the original on 2010-04-27. Retrieved 2006-08-30.
  11. Douglas, Edward (2006). "V for Vendetta's Silver Lining". Comingsoon.net. Archived from the original on 2013-07-30. Retrieved 2006-04-06.
  12. "V At Comic Con". Retrieved 2006-04-06.
  13. "David Lloyd: A Conversation". Newsarama. Retrieved 2006-07-14.
  14. "EW.com". Archived from the original on 2011-02-15. Retrieved 2010-04-06.
  15. BBC.com ಸುದ್ದಿ ವರದಿ, ಶನಿವಾರ, 23ರ ಮೇ 2009 16:49 UK
  16. Comicbookresources.com

ಹೊರಗಿನ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Alan Moore