ವೀರಕಪುತ್ರ ಎಂ. ಶ್ರೀನಿವಾಸ
ವೀರಕಪುತ್ರ ಎಂ ಶ್ರೀನಿವಾಸ / ವೀರಕಪುತ್ರ ಶ್ರೀನಿವಾಸ ( ೮ ಜೂನ್ ೧೯೮೨ ) ಎಂಬ ಹೆಸರಿನಿಂದ ಜನಪ್ರಿಯವಾಗಿರುವ ವೀರಕಪುತ್ರ ಮುನಿವೆಂಕಟಪ್ಪ ಶ್ರೀನಿವಾಸ ಅವರು ಕರ್ನಾಟಕದ ಒಬ್ಬ ಪುಸ್ತಕೋದ್ಯಮಿ, ಪ್ರಕಾಶಕ, ಸಾಮಾಜಿಕ ಕಾರ್ಯಕರ್ತ, ಫಸ್ಟ್ ಫೋರ್ಸ್ ಕಟ್ಟಡ ಸುರಕ್ಷಣಾ ಸೇವಾ ಸಂಸ್ಥೆಯ ಮಾಲೀಕ ಮತ್ತು ಕನ್ನಡ ಚಲಚಿತ್ರರಂಗ ನಟ ಡಾ ವಿಷ್ಣುವರ್ಧನ್ ಅಭಿಮಾನಿಗಳ ಡಾ. ವಿಷ್ಣು ಸೇನಾ ಸಮಿತಿ[೧]ಯ ರಾಜ್ಯಾಧ್ಯಕ್ಷರು. ಅವರು ವೀರಲೋಕ ಬುಕ್ಸ್ ಎಂಬ ಪುಸ್ತಕ ಪ್ರಕಾಶಕ ಸಂಸ್ಥೆ, ಕನ್ನಡ ಮಾಣಿಕ್ಯ ಪತ್ರಿಕೆ ಮತ್ತು ಬುಕ್ಸ್ ಬರ್ಗರ್ ಕಾಫಿ (ಬಿಬಿಸಿ) [೨] [೩] ಮಳಿಗೆಯನ್ನು ಆರಂಭಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.[೨][೩]
ವೀರಕಪುತ್ರ ಎಂ. ಶ್ರೀನಿವಾಸ | |
---|---|
ಜನನ | ವೀರಕಪುತ್ರ, ಕೋಲಾರ ಜಿಲ್ಲೆ, ಕರ್ನಾಟಕ, ಭಾರತ | ೮ ಜೂನ್ ೧೯೮೨
ಕಾವ್ಯನಾಮ | ವೀರಕಪುತ್ರ ಎಂ. ಶ್ರೀನಿವಾಸ |
ವೃತ್ತಿ | ಪುಸ್ತಕೋದ್ಯಮಿ, ಚಲನಚಿತ್ರ ಅಭಿಮಾನಿ, ಸಮಾಜ ಸೇವಕ ಮತ್ತು ಉದ್ಯಮಿ |
ರಾಷ್ಟ್ರೀಯತೆ | ಭಾರತ |
ವಿಷಯ | ಕನ್ನಡ |
ಪ್ರಭಾವಗಳು |
ಆರಂಭಿಕ ಜೀವನ
ಬದಲಾಯಿಸಿಶ್ರೀನಿವಾಸ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ವೀರಕಪುತ್ರ ಗ್ರಾಮದಲ್ಲಿ ಜನಿಸಿದರು. [೪] ಇವರ ತಂದೆ ಮುನಿವೆಂಕಟಪ್ಪ ಮತ್ತು ತಾಯಿ ನಾರಾಯಣಮ್ಮ. ಇವರು ಕೆ.ಜಿ.ಎಫ್ ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾಪದವಿ ಪಡೆದರು.
ವೃತ್ತಿ ಮತ್ತು ಸಮಾಜ ಸೇವೆ
ಬದಲಾಯಿಸಿ- ನಿರುದ್ಯೋಗಿಯಾಗಿದ್ದ ಇವರು ಬೆಂಗಳೂರಿಗೆ ಬಂದನಂತರ ತಮ್ಮ ಬದುಕನ್ನು ಕಟ್ಟಿಕೊಂಡು ಇತರರ ನಿರುದ್ಯೋಗವನ್ನು ತೊಲಗಿಸಲು ನೆರವಾದರು. ಇದನ್ನು ಅವರು ತಮ್ಮ ಜೀವನ ಚಿತ್ರ ಪುಸ್ತಕ ಬದುಕೇ ಥ್ಯಾಂಕ್ ಯು ನಲ್ಲಿ ದಾಖಲಿಸಿದ್ದಾರೆ.
- ಇವರು ರಾಜ್ಯದಾದ್ಯಂತ ಹಸಿರಿನ ಉಳಿವಿಗಾಗಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಅಭಿಯಾನದ ನೇತೃತ್ವವನ್ನು ವಹಿಸಿದ್ದಾರೆ. ಇದುವರೆಗೆ ನೇರ ರಕ್ತದಾನದ ಮೂಲಕ ಸುಮಾರು ೪೫೬ ಜನರಿಗೆ ರಕ್ತದಾನಿಗಳನ್ನು ಡಾ. ವಿಷ್ಣು ಸೇನಾನಿಗಳ ಮೂಲಕ ಒದಗಿಸಿಕೊಟ್ಟಿದ್ದಾರೆ. ಏಳಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಆಧುನಿಕರಣಗೊಳಿಸಿದ್ದಾರೆ. ಡಾ.ವಿಷ್ಣುವರ್ಧನ್ ಅವರ ವಿಶೇಷ ಅಂಚೆ ಲಕೋಟೆಯನ್ನು ಹೊರತರಲು ಶ್ರಮಿಸಿದ್ದಾರೆ. ಒರಿಸ್ಸಾ ದ ಪುರಿ ಸಮುದ್ರ ತೀರದಲ್ಲಿ ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು.
- ದೆಹಲಿಯಲ್ಲಿ ಡಾ.ವಿಷ್ಣುವರ್ಧನ್ (ನಟ) ರಾಷ್ಟ್ರೀಯ ಉತ್ಸವ ಆಯೋಜಿಸಿದ್ದಾರೆ. ಇದುವರೆಗೆ ೫೪ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರು ಆಯೋಜಿಸಿದ ಕಟೌಟ್ ಜಾತ್ರೆ ಎಂಬ ಕಾರ್ಯಕ್ರಮವು ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
- ಡಾ.ವಿಷ್ಣುವರ್ಧನ್ ಅವರ ಬದುಕು, ಸಾಧನೆ ಕುರಿತಾದ ಕರುನಾಡ ಯಜಮಾನ ಎಂಬ ಪುಸ್ತಕದ ಹತ್ತುಸಾವಿರ ಪ್ರತಿಗಳನ್ನು ಶಾಲಾ ಮಕ್ಕಳಿಗೆ ಒದಗಿಸಿದ್ದಾರೆ. ಹತ್ತು ವರ್ಷದಿಂದ ಹದಿನೈದು ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತಿದ್ದಾರೆ. ಕೋಟಿಗೊಬ್ಬ ಎಂಬ ಕ್ಯಾಲೆಂಡರ್ ಅನ್ನು ರೂಪಿಸಿ ಅದನ್ನು ಪ್ರತಿವರ್ಷ ಇಪ್ಪತ್ತು ಸಾವಿರ ಮನೆಗಳಿಗೆ ತಲುಪಿಸುತ್ತಿದ್ದಾರೆ.
- ಡಾ.ಶರಣ ಹುಲ್ಲೂರ ಅವರ ಜೊತೆಗೂಡಿ ಡಾ.ವಿಷ್ಣುವರ್ಧನ್ ರ ವೃತ್ತಿ ಜೀವನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ "ಮೇರುನಟ" ಎಂಬ ಪುಸ್ತಕವನ್ನು ಹೊರತಂದಿದ್ದಾರೆ.
- ತಮ್ಮ ಗ್ರಾಮ ವೀರಕಪುತ್ರ ಕ್ಕೆ ಹದಿನೈದು ಸೋಲಾರ್ ದೀಪಗಳನ್ನು ಸೇವಾರ್ಥವಾಗಿ ಅಳವಡಿಸಿಕೊಟ್ಟಿದ್ದಾರೆ.[೫]
- ವೀರಲೋಕ ಬುಕ್ಸ್ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನೂರಾರು ಕನ್ನಡ ಪುಸ್ತಕ ಪ್ರಕಾಶಕರ ಸಂಗಮವಾಗಿ ಪುಸ್ತಕ ಸಂತೆ ಎಂದು ನಗರದ ಹೆಚ್‌ಎಸ್‌ಆರ್ ಲೇಔಟಿನ ಸ್ವಾಭಿಮಾನ ಉದ್ಯಾನವನದಲ್ಲಿ ಏರ್ಪಡಿಸಲಾಯಿತು.[೬]
- "ಉತ್ತರ ಪರ್ವ" ಎಂಬ ಮಹತ್ತರ ಕನ್ನಡ ಸಾಹಿತ್ಯ ಕೃತಿಗಳ ಯೋಜನೆಯೊಂದನ್ನು ವೀರಲೋಕ ಬುಕ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.
- ನವೆಂಬರ್ ೧೫-೧೭, ೨೦೨೪ ರಲ್ಲಿ ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ಮೂರು ದಿನಗಳ ಕಾಲ ವೀರಲೋಕ ಪುಸ್ತಕ ಸಂತೆ -೨ ಎಂಬ ಕನ್ನಡ ಪುಸ್ತಕ ಮೇಳವನ್ನು ನಡೆಸಲಾಗಿದೆ. ಇದರ ಫಲವಾಗಿ ಮೂರು ಕೋಟಿ ರೂ. ನಷ್ಟು ವಹಿವಾಟು ಕಂಡಿತೆಂದು ಅಂದಾಜು ಮಾಡಲಾಗಿದೆ. [೭][೮][೯][೧೦][೧೧]
ಪ್ರಶಸ್ತಿಗಳು
ಬದಲಾಯಿಸಿಅಕ್ಟೋಬರ್ ೧೩, ೨೦೨೩ ರಲ್ಲಿ ಕನ್ನಡಪ್ರಭ ದಿನಪತ್ರಿಕೆ + ಏಷ್ಯಾನೆಟ್ -ಸುವರ್ಣ ನ್ಯೂಸ್ ಆಯೋಜಿಸಿದ ಸಮಾರಂಭದಲ್ಲಿ ಇವರಿಗೆ "ಅಸಾಮಾನ್ಯ ಕನ್ನಡಿಗ" ಎಂಬ ಪುರಸ್ಕಾರ ಪ್ರದಾನ ಮಾಡಲಾಗಿದೆ. [೧೨][೧೩][೧೪]
ಉಲ್ಲೇಖಗಳು
ಬದಲಾಯಿಸಿ- ↑ "Dr. Vishnu Sena Samiti Archives".
- ↑ "ಕೊರೋನಾ ಸಂಕಷ್ಟ: ಸ್ಯಾಂಡಲ್‌ವುಡ್ ಸ್ಟಾರ್ ನಟರಿಗೊಂದು ಬಹಿರಂಗ ಪತ್ರ".
- ↑ "ಕೊರೋನಾ ಸಂಕಷ್ಟ: ಸ್ಯಾಂಡಲ್‌ವುಡ್ ಸ್ಟಾರ್ ನಟರಿಗೊಂದು ಬಹಿರಂಗ ಪತ್ರ".
- ↑ ಮಾಲೂರು#ಮಾಲೂರು ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು
- ↑ [೧]
- ↑ https://www.prajavani.net/district/bengaluru-city/pustaka-sante-2676701
- ↑ "HINDUSTAN TIMES KANNADA".
- ↑ "ಕನ್ನಡ ಪ್ರಭ".
- ↑ "ಉದಯವಾಣಿ".
- ↑ "ಕನ್ನಡ ಒನ್ ಇಂಡಿಯಾ".
- ↑ ಪ್ರಜಾವಾಣಿ. "ಕನ್ನಡ ದಿನ ಪತ್ರಿಕೆ".
- ↑ "Kannada Prabha ePaper: Read e-newspaper in Kannada by Kannada Prabha BENGALURU:20231014".
- ↑ "Kannada Prabha ePaper: Read e-newspaper in Kannada by Kannada Prabha".
- ↑ "Kannada Prabha ePaper: Read e-newspaper in Kannada by Kannada Prabha".
ಬಾಹ್ಯ ಕೊಂಡಿಗಳು
ಬದಲಾಯಿಸಿ- Archived 2024-06-09 ವೇಬ್ಯಾಕ್ ಮೆಷಿನ್ ನಲ್ಲಿ.
- https://www.linkedin.com/in/veerakaputra-srinivas-49157b262/
- https://www.prajavani.net/district/bengaluru-city/veerloka-publication-uttara-parva-uttara-karnataka-sahitya-suggi-2584831
- https://tv9kannada.com/karnataka/varada-teerada-kathegalu-a-katha-sankalana-by-tv9-senior-producer-ravindra-muddi-selected-by-veeraloka-books-ggs-817871.html
- https://veeralokabooks.com/product/merunata/
- https://vijaykarnataka.com/entertainment/news/veerakaputra-srinivasa-s-post-on-negative-remarks-about-kiccha-sudeep-starrer-vikrant-rona/articleshow/93212610.cms
- https://publictv.in/superstar-dr-vishnus-52nd-puthali-anavarana/
- https://kannada.asianetnews.com/sandalwood/veerakaputra-m-srinivasa-writes-a-open-letter-to-sandalwood-star-heroes-about-helping-their-fans-on-this-pandemic-time-dpl-qryps8
- https://kannada.asianetnews.com/sandalwood/veerakaputra-m-srinivasa-writes-a-open-letter-to-sandalwood-star-heroes-about-helping-their-fans-on-this-pandemic-time-dpl-qryps8
- https://www.asiabookofrecords.com/
- https://www.youtube.com/watch?v=jyn5u-72uug
- https://tv9kannada.com/karnataka/kolar/veerak-putra-srinvas-an-ardent-fan-of-late-actor-vishnuvardhan-donates-15-solar-lamps-to-his-native-village-sas-729106.html?fbclid=IwAR19s2bOgwxhZ0suCjePkQUQBYtR9o3Q1gcr2uD53AquBaJrI3hL29Lz5m4
- https://www.facebook.com/photo/?fbid=365631402748250&set=a.141794735131919
- https://vijaykarnataka.com/news/vk-special/vijaya-karnataka-veeraloka-deepawali-story-competition-2023-prize-distribution/articleshow/107234187.cms
- https://www.prajavani.net/district/bengaluru-city/pustaka-sante-2676701