ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮೭ ನೇ ಸಾಲು:
ಕಾವೇರಿ: ಕೊಡಗು ಜಿಲ್ಲೆಯ ಭಾಗಮಂಡಲದ ಬಳಿ ಇರುವ ಬ್ರಹ್ಮಗಿರಿಯ ತಲಕಾವೇರಿಯಲ್ಲಿ ಜನಿಸಿ ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಪ್ರವಹಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಮುಖ್ಯ ಉಪನದಿಗಳು ಹಾರಂಗಿ, ಹೇಮಾವತಿ, ಲಕ್ಷ್ಮಣತೀರ್ಥ, ಲೋಕಪಾವನಿ, ಕಪಿಲಾ, ಶಿಂಷಾ, ಅರ್ಕಾವತಿ ಮೊದಲಾದವು. ಚುಂಚನಕಟ್ಟೆ, ಶಿವನಸಮುದ್ರ, ಹೊಗೆನಕಲ್ಲು ಬಳಿ ಜಲಪಾತಗಳಿವೆ. ಕಾವೇರಿಯ ಹಾಗೂ ಇದರ ಉಪನದಿಗಳ ನೀರು ಬೇಸಾಯಕ್ಕೆ ಬಲು ಹೆಚ್ಚಾಗಿ ಉಪಯೋಗ. ಮುಖ್ಯ ಜಲಾಶಯಗಳು ಹಾರಂಗಿ, ಹೇಮಾವತಿ, ಕೃಷ್ಣರಾಜಸಾಗರ, ಕಪಿಲಾ ಹಾಗೂ ತಮಿಳುನಾಡಿನ ಮೆಟ್ಟೂರು ಶಿವಸಮುದ್ರದ ಬಳಿ ವಿದ್ಯುಜ್ಜನಕ ಕೇಂದ್ರವಿದೆ.
 
ಭಾರತದ ನದಿಗಳನ್ನು ಪ್ರಾಚೀನ ಕಾಲದಿಂದಲೂ ಬೇಸಾಯಕ್ಕೆ ಬಳಸಲಾಗುತ್ತಿದೆ. ಋಗ್ವೇದ ಹಾಗೂ ಅಥರ್ವವೇದಗಳಲ್ಲಿ ಬಳಕೆಯ ವಿಧಾನಗಳ ವಿವರಗಳಿವೆ. ಗ್ರೀಕ್ ಪ್ರವಾಸಿ [[ಮೆಗಾಸ್ತನೀಸ್]] ತನ್ನ ಪ್ರವಾಸಕಥನದಲ್ಲಿ ಭಾರತದ ನದಿಗಳ ನೀರಿನ ಬಳಕೆಯ ವಿಧಾನಗಳನ್ನು ಮೆಚ್ಚಿ ಪ್ರಸ್ತಾವಿಸಿದ್ದಾನೆ. 14-17ನೆಯ ಶತಮಾನಗಳ ಮೊಗಲ್ ದೊರೆಗಳು ಸಹ ಈ ದಿಸೆಯಲ್ಲಿ ಉತ್ತಮ ಕೆಲಸ ಮಾಡಿದರು. ಬ್ರಿಟಿಷರ ಆಳ್ವಿಕೆಯಲ್ಲೂ ಸಾಕಷ್ಟು ಪ್ರಗತಿ ಆಯಿತು. ದೇಶ ಸ್ವಾತಂತ್ರ್ಯವನ್ನು ಗಳಿಸಿದ ಬಳಿಕ ಹಲವಾರು ಪಂಚವಾರ್ಷಿಕ ಯೋಜನೆಗಳ ಮೂಲಕ ನದಿಯ ನೀರಿನ ಬಳಕೆ ಹೆಚ್ಚುತ್ತ ಬಂತು. ಹಲವಾರು ಬೃಹತ್ ಯೋಜನೆಗಳು ಪೂರೈಕೆಯ ನಾನಾ ಘಟ್ಟಗಳಲ್ಲಿವೆ. ಬೃಹತ್ ಹಾಗೂ ಮಧ್ಯಮ ದರ್ಜೆಯ ನೀರಾವರಿ ಯೋಜನೆಗಳ ಮೂಲಕ 44.8 ಮಿಲಿಯನ್ ಹೆಕ್ಟೇರ್ ವಿಸ್ತಾರದ ಪ್ರದೇಶ ನೀರಾವರಿ ಸೌಲಭ್ಯಗಳನ್ನು ಪಡೆಯಲಿದೆ. ಸಣ್ಣ ಪ್ರಮಾಣದ ನೀರಾವರಿ ಯೋಜನೆಗಳಿಂದ ಸುಮಾರು 30 ಮಿಲಿಯನ್ ಹೆಕ್ಟೇರ್ ಪ್ರದೇಶ ಪ್ರಯೋಜನಕಾರಿಯಾಗುತ್ತದೆ. ಕಳೆದ ಮೂರು ಪಂಚವಾರ್ಷಿಕ ಯೋಜನೆಗಳಲ್ಲಿ ರೂ. 18,500 ಮಿಲಿಯನಿನಷ್ಟು ಹಣವನ್ನು ನೀರಾವರಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ.
 
ಜತೆಯಲ್ಲೇ ವಿದ್ಯುದುತ್ಪಾದನ ಕೇಂದ್ರಗಳ ನಿರ್ಮಾಣವನ್ನೂ ಕೈಗೊಳ್ಳಲಾಗಿದ್ದು ಇದರ ಅಂತಿಮ ಗುರಿ 216.000 ಮಿಲಿಯನ್ ಕಿಲೊವಾಟ್ ಶಕ್ತಿಯ ಉತ್ಪಾದನೆ. ಉತ್ತರ ಭಾರತದ ನದಿಗಳಲ್ಲಿ ಒಳನಾಡಿನ ಜಲಸಂಚಾರ ವ್ಯವಸ್ಥೆಯನ್ನು ಉತ್ತಮಪಡಿಸುವ ಹಲವಾರು ಯೋಜನೆಗಳಿವೆ. ಇವುಗಳ ಪೈಕಿ ಸುಮಾರು 10,600 ಕಿಮೀ ದೂರ ಈ ಸೌಲಭ್ಯವನ್ನು ಕಲ್ಪಿಸಲು ಸಾಧ್ಯ. ಜಹಜು ಮತ್ತು ದೊಡ್ಡ ದೋಣಿಗಳು ಪ್ರಯಾಣಿಸಬಲ್ಲ ಉದ್ದ 2,480 ಕಿಮೀ. ಮಧ್ಯಮ ದರ್ಜೆಯ ದೋಣಿಗಳ ಸಂಚಾರಕ್ಕೆ 3,920 ಕಿಮೀ ಹಾಗೂ ಸಣ್ಣ ನಾಡದೋಣಿಗಳ ಸಂಚಾರಕ್ಕೆ 4,200 ಕಿಮೀಗಳಷ್ಟು ದೂರ ಯೋಗ್ಯವೆನಿಸಿದೆ. ಈ ಬಗೆಯ ನದಿಗಳಲ್ಲಿ ಮುಖ್ಯವಾದವು ಗಂಗಾ, ಯಮುನಾ, ಗಂಡಕಿ, ಬ್ರಹ್ಮಪುತ್ರ ಮತ್ತು ಮಹಾನದಿ. ಗೋದಾವರಿ, ಕೃಷ್ಣಾ, ನರ್ಮದಾ ಮತ್ತು ತಾಪಿ ನದಿಗಳು ಸಮುದ್ರವನ್ನು ಸೇರುವೆಡೆಯಿಂದ ಕೊಂಚ ದೂರ ಒಳನಾಡಿನತ್ತ ಸಂಚಾರ ಸೌಲಭ್ಯಗಳಿಗೆ ಅನುಕೂಲವೆನಿಸಿವೆ. ಕೇರಳ, ಒರಿಸ್ಸ ಮತ್ತು ಬಂಗಾಳ ರಾಜ್ಯಗಳಲ್ಲಿ ನದಿಗಳಲ್ಲಿ ನಾಡದೋಣಿಗಳ ಸಂಚಾರ ಅಧಿಕ
"https://kn.wikipedia.org/wiki/ನದಿ" ಇಂದ ಪಡೆಯಲ್ಪಟ್ಟಿದೆ