ಶಾಂತವೇರಿ ಗೋಪಾಲಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
ಟ್ಯಾಗ್: 2017 source edit
೧೫೧ ನೇ ಸಾಲು:
ಅಂದಿನಿಂದ ಗೋಪಾಲಗೌಡರ ಹೆಸರು ಅಖಿಲ ಭಾರತ ಮಟ್ಟದ ಸಮಾಜವಾದಿ ನಾಯಕರಿಗೆ ಪರಿಚಯವಾಯಿತು; ಅವರ ಜತೆ ನಿಕಟ ಸಂಪರ್ಕ ಬೆಳೆಯಿತು. ಡಾಕ್ಟರ್ ರಾಮಮನೋಹರ ಲೋಹಿಯಾ ಅವರ ಪ್ರಭಾವಕ್ಕೊಳಗಾದ ಅವರು ಹೊಸ ಹುರುಪನ್ನೇ ತಳೆದರು; ಪ್ರಖರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಹಿಂದಿಯಲ್ಲಿ ಸೊಗಸಾಗಿ ಭಾಷಣ ಮಾಡುತ್ತಿದ್ದ ಗೋಪಾಲಗೌಡರು
ಉತ್ತರ ಭಾರತದಲ್ಲಿಯೂ ಪ್ರಸಿದ್ಧಿ ಪಡೆದಿದ್ದರೆಂಬುದು ಗಮನಿಸಬೇಕಾದ ಅಂಶ.
[[ಕಾಗೋಡು ಸತ್ಯಾಗ್ರಹ]]
ರೈತ ಸಂಘಟನೆಯಲ್ಲಿ ಹೆಚ್ಚು ಒಲವು ತೋರಿಸಿದ ಗೌಡರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ರೂಪುಗೊಂಡ, ಕಾಗೋಡು ರೈತ ಸತ್ಯಾಗ್ರಹವನ್ನು ನಡೆಸಿದರು. ಕಾಗೋಡು ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿ. ಅಲ್ಲಿ ರೈತರು ಜಮೀನ್ದಾರರ ಅನ್ಯಾಯಗಳನ್ನು ಪ್ರತಿಭಟಿಸಿದರು. ಜಮೀನ್ದಾರರಿಗಾಗಿ ದುಡಿದು ಅದರ ಲಾಭವನ್ನೆಲ್ಲ ಅವರಿಗೊಪ್ಪಿಸಿ ಅವರ ದಯೆಯಿಂದ ರೈತರು ಬಾಳುವಂತಾಗಿತ್ತು.
ಧಾನ್ಯ ಒಪ್ಪಿಸುವಾಗ ಬಳಸುವ ಅಳತೆ ಕೂಡ, ನ್ಯಾಯವೋ ಅಲ್ಲವೋ, ಜಮೀನ್ದಾರರು ಹೇಳಿದಂತೆ ಆಗಬೇಕಾಗಿತ್ತು. ಎಷ್ಟೋ ಮಂದಿ ಜೀತದಾಳುಗಳಾಗಿದ್ದರು. ಗಂಡಸರು ಮೊಣಕಾಲಿನಿಂದ ಮೇಲೆ ಪಂಚೆ ಉಡಬೇಕು. ಹೆಂಗಸರು ಸೀರೆಯನ್ನು ಕಾಲಿನತನಕ ಉಡಕೂಡದು. ಇಂತಹ ನಿರ್ಬಂಧಗಳು. ರೈತರು ತಿರುಗಿಬಿದ್ದರು. ಅದು ಗೋಪಾಲಗೌಡರ ಸತ್ವಪರೀಕ್ಷೆಯ ಘಟನೆಯಾಯಿತು. ಜಮೀನ್ದಾರರು ರೈತರನ್ನು ಗೇಣಿಯಿಂದ ತೆಗೆದು ಹಾಕಿದರು. ಸಮಾಜವಾದಿ ಪಕ್ಷದವರ ನಾಯಕತ್ವದಲ್ಲಿ ರೈತರು ಗುಂಪುಗುಂಪಾಗಿ ಗದ್ದೆಗಿಳಿದರು. ಪೊಲೀಸರು ತಡೆದು ದಸ್ತಗಿರಿ ಮಾಡಿದರು. ಸತ್ಯಾಗ್ರಹದಲ್ಲಿ ಗೌಡರು ‘ಸೈ’ ಎನಿಸಿಕೊಂಡರು. ೧೯೫೧ರಲ್ಲಿ ನಡೆದ ಆ ಸತ್ಯಾಗ್ರಹಕ್ಕೆ ಡಾಕ್ಟರ್ ಲೋಹಿಯಾ ಅವರೂ ಬಂದಿದ್ದರು. ಸತ್ಯಾಗ್ರಹ ನಡೆಸಿ ಕಾರಾಗೃಹ ಸೇರಿದರು. ಹೆಸರಾಂತ ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲಿ ಅನೇಕಮಂದಿ ಪ್ರಭಾವೀ ತರುಣರು ಸಮಾಜವಾದದತ್ತ ತಿರುಗಿದರು. ಮುಂದೆ ಪ್ರಮುಖ ವ್ಯಕ್ತಿಗಳಾಗಿ ರೂಪುಗೊಂಡರು.