ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್‍ಸಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: *ಏಷ್ಯನ್ ಫುಟ್ಬಾಲ್ ಒಕ್ಕೂಟವು(ಎಎಫ್‍ಸಿ) ಏಷ್ಯಾ ಮತ್ತು ಆಸ್ಟ್ರೇಲಿಯಾದ ಫುಟ್...
( ಯಾವುದೇ ವ್ಯತ್ಯಾಸವಿಲ್ಲ )

೧೫:೨೧, ೨೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

  • ಏಷ್ಯನ್ ಫುಟ್ಬಾಲ್ ಒಕ್ಕೂಟವು(ಎಎಫ್‍ಸಿ) ಏಷ್ಯಾ ಮತ್ತು ಆಸ್ಟ್ರೇಲಿಯಾದ ಫುಟ್ಬಾಲ್ ಅಸೋಷಿಯೇಷನ್ ಆಡಳಿತದ ಮಂಡಳಿಯಾಗಿದೆ. ಇದು 47 ದೇಶಗಳನ್ನು ಹೊಂದಿದೆ; ಹೆಚ್ಚಾಗಿ ಏಷ್ಯನ್ ಮತ್ತು ಆಸ್ಟ್ರೇಲಿಯಾ ಖಂಡದ ಸದಸ್ಯ ದೇಶಗಳು ಇದರಲ್ಲಿವೆ. ಅಜರ್ಬೈಜಾನ್, ಜಾರ್ಜಿಯಾ, ಕಝಾಕಿಸ್ತಾನ್, ರಶಿಯಾ, ಮತ್ತು ಟರ್ಕಿ -ಇವು ಯುಇಎಪ್ಎ (UEFA)ಯ ಸದಸ್ಯರು, ಇವು ಯುರೋಪ್ ಮತ್ತು ಏಷ್ಯಾ ಪ್ರಾಂತ್ಯಗಳಲ್ಲಿ ಅಂತರ್ಖಂಡ ದೇಶಗಳಲ್ಲಿ ಸೇರಿವೆ. ಆದ್ದರಿಂದ ಎಎಫ್‍ಸಿಗೆ ಸೇರಿಲ್ಲ.[೧]

ಎಎಫ್‌ಸಿ ಕಪ್‌ ಬಗ್ಗೆ ವಿವರ

  • ಎಎಫ್‌ಸಿ ಕಪ್‌ ಶುರುವಾಗಿದ್ದು 1956ರಲ್ಲಿ. ಇದು ವಿಶ್ವದ ಎರಡನೇ ಹಳೆಯ ಕಾಂಟಿನೆಂಟಲ್‌ ಫುಟ್‌ಬಾಲ್‌ ಟೂರ್ನಿ ಎಂಬ ಹಿರಿಮೆ ಹೊಂದಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ತಂಡ ಫಿಫಾ ಕಾನ್ಫೆಡರೇಷನ್ಸ್‌ ಕಪ್‌ಗೆ ನೇರ ಅರ್ಹತೆ ಗಳಿಸಲಿದೆ.
  • ಎಎಫ್‌ಸಿ ಕಪ್‌ ಟೂರ್ನಿಯನ್ನು ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 1956ರ ಚೊಚ್ಚಲ ಟೂರ್ನಿ ಹಾಂಕಾಂಗ್‌ ನಲ್ಲಿ ನಡೆದಿತ್ತು. ಆ ಕೂಟದಲ್ಲಿ ಏಷ್ಯಾದ ವಿವಿಧ ವಲಯಗಳಿಂದ ಅರ್ಹತೆ ಗಳಿಸಿದ್ದ ಏಳು ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. 2007ರಲ್ಲಿ ಇಂಡೊನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ ದೇಶಗಳ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆದಿತ್ತು.
  • ಆರಂಭದಲ್ಲಿ ದಕ್ಷಿಣ ಕೊರಿಯಾ ಮತ್ತು ಇರಾನ್‌ ತಂಡಗಳು ಟೂರ್ನಿಯ ಯಶಸ್ವಿ ತಂಡಗಳೆನಿಸಿದ್ದವು. ಇರಾನ್‌ ತಂಡ ಟೂರ್ನಿಯಲ್ಲಿ ‘ಹ್ಯಾಟ್ರಿಕ್‌ ಪ್ರಶಸ್ತಿ’ ಗೆದ್ದ ಸಾಧನೆಗೂ ಭಾಜನವಾಗಿದೆ. ಈ ತಂಡ 1968, 1972 ಮತ್ತು 1976ರಲ್ಲಿ ಚಾಂಪಿಯನ್‌ ಆಗಿತ್ತು. 1984ರ ಬಳಿಕ ಜಪಾನ್‌ ಮತ್ತು ಸೌದಿ ಅರೇಬಿಯಾ ತಂಡಗಳು ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದವು. ಸೌದಿ ಅರೇಬಿಯಾ ಮೂರು ಬಾರಿ ಪ್ರಶಸ್ತಿ ಗೆದ್ದರೆ, ಜಪಾನ್‌ ಈ ಟೂರ್ನಿಯ ಅತ್ಯಂತ ಯಶಸ್ವಿ ತಂಡ ಅನಿಸಿದೆ. ಈ ತಂಡ ನಾಲ್ಕು ಬಾರಿ ಟ್ರೋಫಿಗೆ ಮುತ್ತಿಕ್ಕಿದೆ.
  • ಇರಾಕ್‌ (2007), ಕುವೈತ್‌ (1980) ಮತ್ತು ಇಸ್ರೇಲ್‌ (1964) ಮತ್ತು ಆಸ್ಟ್ರೇಲಿಯಾ (2015) ತಂಡಗಳೂ ಎಎಫ್‌ಸಿ ಕಪ್‌ನಲ್ಲಿ ತಲಾ ಒಮ್ಮೆ ಟ್ರೋಫಿ ಎತ್ತಿಹಿಡಿದಿವೆ. ಕುವೈತ್‌ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಅರಬ್‌ ದೇಶದ ಮೊದಲ ತಂಡ ಎಂಬ ಹಿರಿಮೆ ಹೊಂದಿದೆ.
  • 2007ರಲ್ಲಿ ಆಸ್ಟ್ರೇಲಿಯಾವು ಏಷ್ಯನ್‌ ಕಾನ್ಫೆಡರೇಷನ್‌ಗೆ ಸೇರ್ಪಡೆ ಯಾಯಿತು. 2015ರಲ್ಲಿ ಕಾಂಗರೂಗಳ ನೆಲದಲ್ಲಿ ಎಎಫ್‌ಸಿ ಕಪ್‌ನ ಫೈನಲ್‌ ನಡೆದಿತ್ತು. ಆ ಟೂರ್ನಿಯಲ್ಲಿ ಆತಿಥೇಯ ತಂಡ ಪ್ರಶಸ್ತಿ ಗೆದ್ದಿತ್ತು. 2019ರ ಟೂರ್ನಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಆಯೋಜನೆ ಯಾಗಿದ್ದು ಇದರಲ್ಲಿ ಭಾಗವಹಿಸುವ ತಂಡ ಗಳ ಸಂಖ್ಯೆಯನ್ನು 16ರಿಂದ 24ಕ್ಕೆ ಹೆಚ್ಚಿಸಲಾಗಿದೆ.

ಎರಡು ಹಂತದಲ್ಲಿ ಪಂದ್ಯ

  • ಎಎಫ್‌ಸಿ ಟೂರ್ನಿಯು ಗುಂಪು ಮತ್ತು ನಾಕೌಟ್‌ ಹಂತಗಳಲ್ಲಿ ನಡೆಯುತ್ತದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳು ಇರಲಿದ್ದು, ಈ ಹಂತದಲ್ಲಿ ಪ್ರತಿ ತಂಡ ತಲಾ ಮೂರು ಪಂದ್ಯಗಳನ್ನು ಆಡುತ್ತದೆ. ಗುಂಪಿನಲ್ಲಿ ಪ್ರಶಸ್ತಿ ಗೆಲ್ಲುವ ಮತ್ತು ರನ್ನರ್ಸ್‌ ಅಪ್‌ ಆಗುವ ತಂಡಗಳು ನಾಕೌಟ್‌ ಹಂತಕ್ಕೆ ಅರ್ಹತೆ ಗಿಟ್ಟಿಸಲಿವೆ.
  • ನಾಕೌಟ್‌ ಹಂತದಲ್ಲಿ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 2019ರ ಆವೃತ್ತಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸುವ ಕಾರಣ ಈ ನಿಯಮದಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

ಪ್ರತಿಷ್ಠೆಯ ಟೂರ್ನಿ

  • "ವಿಶ್ವಕಪ್‌ ಹಾದಿ ಬಹು ದೂರವಿದೆ. ಅದರ ಬಗ್ಗೆ ಚಿಂತಿಸುವ ಸಮಯ ಇದಲ್ಲ. ಈಗೇನಿದ್ದರೂ ನಾವು ಎಎಫ್‌ಸಿ ಟೂರ್ನಿಗೆ ಅರ್ಹತೆ ಗಳಿಸುವತ್ತ ಚಿತ್ತ ಹರಿಸಬೇಕು. ಸದ್ಯದ ಮಟ್ಟಿಗೆ ನಮ್ಮ ಗುರಿ ಇದೊಂದೇ ಆಗಿರಬೇಕು." ಭಾರತ ಫುಟ್‌ಬಾಲ್‌ ತಂಡದ ಆಟಗಾರ ಸುನಿಲ್‌ ಚೆಟ್ರಿ ಹೇಳಿದರು. ಸುನಿಲ್‌ ಅವರು ಆ ರೀತಿ ಹೇಳಲು ಕಾರಣವೂ ಇತ್ತು. ಏಷ್ಯಾದ ಮಟ್ಟಿಗೆ ಎಎಫ್‌ಸಿ ಕಪ್‌ ಬಹಳ ಪ್ರತಿಷ್ಠೆಯ ಟೂರ್ನಿ. ಇದರಲ್ಲಿ ಭಾರತ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ.
  • 1964 ರಲ್ಲಿ ಏಷ್ಯಾದ ಪಶ್ಚಿಮ ವಲಯದಿಂದ ಟೂರ್ನಿಗೆ ಅರ್ಹತೆ ಗಳಿಸಿದ್ದ ತಂಡ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿ ಹೊಸ ಮೈಲುಗಲ್ಲು ನೆಟ್ಟಿತ್ತು. ಅದಾಗಿ 47 ವರ್ಷಗಳ ಬಳಿಕ (2011ರಲ್ಲಿ) ತಂಡ ಮತ್ತೆ ಅರ್ಹತೆ ಗಳಿಸಿತ್ತಾದರೂ ಗುಂಪು ಹಂತದಲ್ಲಿಯೇ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಈಗ ಮತ್ತೊಮ್ಮೆ ಚೊಚ್ಚಲ ಪ್ರಶಸ್ತಿಯ ಬೇಟೆಗೆ ಸನ್ನದ್ಧವಾಗಿದೆ.
  • ಈ ಹಾದಿ ಅಷ್ಟು ಸುಲಭ ದ್ದಲ್ಲವಾದರೂ ಗುರುಪ್ರೀತ್ ಸಿಂಗ್‌ ಸಂಧು ಪಡೆ ಖಂಡಿತವಾಗಿಯೂ ಟ್ರೋಫಿ ಎತ್ತಿಹಿಡಿಯುವ ತಾಕತ್ತು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ತಂಡದಿಂದ ಮೂಡಿಬಂದಿರುವ ಸಾಮರ್ಥ್ಯ ಇದಕ್ಕೆ ನಿದರ್ಶನದಂತಿದೆ. ಹೋದ ವಾರ ನಡೆದ ಕಾಂಬೋಡಿಯಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ತಂಡ ಗೆಲುವಿನ ಸಿಹಿ ಸವಿದು ಚಾರಿತ್ರಿಕ ಸಾಧನೆ ಮಾಡಿತ್ತು. ಹೀಗಾಗಿ ಭಾರತದ ಫುಟ್‌ಬಾಲ್‌ ಲೋಕಕ್ಕೆ 12 ವರ್ಷಗಳಿಂದ ಕಾಡುತ್ತಿದ್ದ ಬಹುದೊಡ್ಡ ಕೊರಗೊಂದು ದೂರವಾಗಿತ್ತು. 2005 ರಲ್ಲಿ ಪಾಕಿಸ್ತಾನವನ್ನು ಅದರದ್ದೇ ನೆಲದಲ್ಲಿ ಮಣಿಸಿದ್ದ ಭಾರತ ಆ ನಂತರ ವಿದೇಶಿ ನೆಲ ದಲ್ಲಿ ಗೆದ್ದ ಮೊದಲ ಪಂದ್ಯ ಇದಾಗಿತ್ತು .
  • ಮಾರ್ಚ್‌ 28 ರಂದು ನಡೆಯುವ ಏಷ್ಯನ್‌ ಕಪ್‌ ಗುಂಪು ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತ, ಬಲಿಷ್ಠ ಮ್ಯಾನ್ಮಾರ್‌ ವಿರುದ್ಧ ಸೆಣಸಬೇಕಿದೆ. ಇದಕ್ಕೂ ಮುನ್ನ ಪೂರ್ವಭಾವಿ ಸಿದ್ಧತೆಗೆ ಅನುವಾಗಲೆಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಕಾಂಬೋಡಿಯಾ ವಿರುದ್ಧ ಪಂದ್ಯ ಆಯೋಜಿಸಿತ್ತು. ಈ ಪರೀಕ್ಷೆಯಲ್ಲಿ ಗೆದ್ದಿರುವ ಆಟಗಾರರಲ್ಲಿ ಈಗ ಹೊಸ ಹುರುಪು ಮೂಡಿದ್ದು ಭಾರತದ ಫುಟ್‌ಬಾಲ್‌ ಪ್ರಿಯರಲ್ಲೂ ಹೊಸ ಕನಸು ಚಿಗುರೊಡೆದಿದೆ.[೨]

ನೋಡಿ

ಉಲ್ಲೇಖ

  1. Asian Sports Net
  2. ಅರ್ಹತೆ ಗಳಿಸುವತ್ತ ಚಿತ್ತ;ಎಎಫ್‌ಸಿ ಫುಟ್‌ಬಾಲ್‌: ಹೊಸ ಕನಸು;ಜಿ. ಶಿವಕುಮಾರ;27 Mar, 2017