ತೀ. ನಂ. ಶ್ರೀಕಂಠಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೪ ನೇ ಸಾಲು:
ಕನ್ನಡದ ದಿಗ್ಗಜರಲ್ಲಿ ಮೂವರು ‘ಶ್ರೀ’ ಗಳು ಪ್ರಸಿದ್ಧರು. ತಮ್ಮ ಸತ್ವದಿಂದ, ಸಾಮರ್ಥ್ಯದಿಂದ, ಪ್ರತಿಭೆಯಿಂದ, ವಿದ್ವತ್ತಿನಿಂದ ಕನ್ನಡ ನಾಡು-ನುಡಿಗಳನ್ನು ಶ್ರೀಮಂತಗೊಳಿಸಿದ ಈ ಮೂವರು ‘ಶ್ರೀ’ ಗಳಲ್ಲಿ ತೀ.ನಂ.ಶ್ರೀ ಅವರೂ ಒಬ್ಬರು. ಕನ್ನಡದ ಕಣ್ವ, ಕಣ್ಮಣಿಗಳೆಂದು ಹೆಸರಾದ ಬಿ.ಎಂ.ಶ್ರೀ ಮತ್ತು ಎಂ.ಆರ್.ಶ್ರೀ ಅವರಂತೆಯೇ ತೀ.ನಂ.ಶ್ರೀ ಅವರೂ ‘ಕನ್ನಡ ಕಳಶ’ವನ್ನು ಬೆಳಗಿದ ಕೀರ್ತಿ ಪಡೆದವರು.
 
ಪ್ರೊಫೆಸರ್ '''ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ''' [[ಕನ್ನಡ]]ದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ಕಾಣಬಹುದಾಗಿತ್ತು. ಅವರು [[ಮೈಸೂರು ವಿಶ್ವವಿದ್ಯಾಲಯ]]ದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು. ಅವರು ಆದರ್ಶ ಪ್ರಾಧ್ಯಾಪಕರು ಮತ್ತು ಶ್ರೇಷ್ಠ ವಾಗ್ಮಿಯೆಂದು ಪ್ರಸಿದ್ಧರಾಗಿದ್ದರು. ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಜನ ಮೇಧಾವಿಗಳು ತೀ.ನಂ.ಶ್ರೀ ಅವರ ಶಿಷ್ಯರಾಗಿದ್ದವರು. ತೀ.ನಂ.ಶ್ರೀ ಅವರು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಛಂದಸ್ಸು, ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ - ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು, ಈ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ್ದಾರೆ. "ಒಲುಮೆ" ಕನ್ನಡದ ಮೊಟ್ಟಮೊದಲನೆಯ ಪ್ರೇಮಗೀತೆಗಳ ಸಂಕಲನವಾಗಿದ್ದು, [[ಕೆ.ಎಸ್.ನರಸಿಂಹಸ್ವಾಮಿ]] ಅವರ "ಮೈಸೂರು ಮಲ್ಲಿಗೆ" ಸಂಕಲನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. "ನಂಟರು" ಕನ್ನಡದ ಮಹತ್ವದ ಲಲಿತ ಪ್ರಬಂಧಗಳ ಸಂಕಲನಗಳಲ್ಲೊಂದು. ರಾಕ್ಷಸನ ಮುದ್ರಿಕೆ ವಿಶಾಖ ದತ್ತನ ಮುದ್ರಾರಾಕ್ಷಸ, ನಾಟಕದ ಯಶಸ್ವಿ ಭಾಷಾಂತರ ಮಾತ್ರವಾಗಿರುವುದಲ್ಲದೆ, ಸೃಜನಶೀಲ ರೂಪಾಂತರವೂ ಆಗಿದೆ.
 
==ಮೂಲ==
ಚಿಕ್ಕನಾಯಕನಹಳ್ಳಿ ವಿಜಯನಗರ ಸಾಮ್ರಾಜ್ಯ ಒಡೆದ ಮೇಲೆ ತಲೆ ಎತ್ತಿಕೂಂಡ ಪಾಳೆಯ ಪಟ್ಟುಗಳಲ್ಲಿ ಒಂದಾದ ಹಾಗಲವಾಡೆಯ ಚರಿತೆಯ ಮೂಲಕ ಪರಿಚಿತವಾಗಿದೆ. ಚಿಕ್ಕನಾಯಕನ ಹಳ್ಳಿಯ ಪೂರ್ವಕ್ಕೆ ಸುಮಾರು 17 ಮೈಲಿ ದೂರವಿದ್ದ ಹಾಗಲವಾಡಿ ಹಾಳಾಗಲು ಆ ಸಂಸ್ಥಾನದ ಮಂತ್ರಿಯಾಗಿದ್ದ ಬ್ರಾಹ್ಮಣ ಕುಟುಂಬದವರು ಬಂದು ತೀರ್ಥಪುರದಲ್ಲಿ ನೆಲಸಿದರಂತೆ. ಇವರೇ ತೀ.ನಂ ಶ್ರೀ ಅವರ ಪೂರ್ವಜರು.
 
==ಜನನ==
Line ೨೩ ⟶ ೨೬:
 
==ನೌಕರಿ, ಹಲವಾರು ನಗರಗಳಲ್ಲಿ==
ಇಂಟರ್ಮೀಡಿಯೇಟ್ ಕಾಲೇಜ್ ಬೆಂಗಳೂರಿಗೆ ವರ್ಗ. ಮತ್ತೆ, ೧೯೫೭ ರಲ್ಲಿ ಮೈಸೂರು. ಮೈಸೂರು ಸಂವಿಧಾನ ಪರಿಷತ್ ನಲ್ಲಿ ಭಾಷಾಂತರಕಾರರಾಗಿ. ದಾವಣಗೆರೆ ಕಾಲೇಜ್ ನಲ್ಲಿ ಸೂಪೆರಿನ್ಟೆಂಡೆಂಟ್ ಆಗಿ, ಕೋಲಾರ ಕಾಲೇಜ್, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ. ಮೈಸೂರು ಮಹಾರಾಜ ಕಾಲೇಜ್ ಕನ್ನಡ ಪ್ರೊಫೆಸರ್ ಆಗಿ ನಿಯುಕ್ತರಾದರು.ಸಾಹಿತ್ಯೋಪಾಸನೆಗೆ ತಮ್ಮನ್ನು ತೆತ್ತುಕೊಂಡಿದ್ದರಿಂದ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಮೂರನೇಯ ಸ್ಥಾನ ಮಾತ್ರ ದೊರೆಯಿತಾದರೂ ಅದರಿಂದ ಕಂದಾಯ ಇಲಾಖೆಯ ಪೋಬೆಷ್‍ನಲ್ ಹುದ್ದೆ ಸಿಕ್ಕಿ ಶ್ರೀರಂಗಪಟ್ಟಣಕ್ಕೆ ನೌಕರಿಯ ಮೇಲೆ ಹೋಗಬೇಕಾಯಿತು. ಆದರೆ ಎರಡೇ ತಿಂಗಳಲ್ಲಿ ಅದನ್ನು ತ್ಯಜಿಸಿ ಮೈಸೂರಿನ ಇಂಟರ್‍ಮಿಡಿಯೇಟ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ಹಿಂದಕ್ಕೆ ಬಂದರು. 1929ರಲ್ಲಿ ಪರೀಕ್ಷೆಗೆ ಕುಳಿತು ಇಂಗ್ಲೀಷ್ ಎಂ.ಎ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದರು, ಅಲ್ಲದೆ ತಮ್ಮ ಪ್ರೀತಿಯ ಮಾತೃ ಸಂಸ್ಥೆ ಮಹಾರಾಜ ಕಾಲೇಜಿಗೆ ವರ್ಗವೂ ಆಯಿತು. ಅದೇ ವರ್ಷ ತಮ್ಮ ತಂದೆಯನ್ನು ಕಳೆದುಕೊಂಡ ದೌರ್ಭಾಗ್ಯವೂ ಅವರದಾಯಿತು. ಅಷ್ಟರಲ್ಲಿ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ ವ್ಯಾಸಂಗವೂ ಪ್ರಾರಂಭವಾದುದರಿಂದ ಅಧ್ಯಾಪಕ ವೃತ್ತಿಗೆ ಕನ್ನಡ ಎಂ.ಎ ಪರೀಕ್ಷೆಗೂ ವ್ಯಾಸಂಗ ಮಾಡಿ 1930ರಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಪದವಿ ಪ್ರದಾನ ಸಮಾರಂಭದಲ್ಲಿ ಮೂರು ಸುವರ್ಣ ಪದಕಗಳು ಬಂದವು. 1936ರಲ್ಲಿ ಬಿ.ಎ ಪರೀಕ್ಷೆ ಇನ್ನು ಒಂದು ತಿಂಗಳಿದೆ ಎನ್ನುವಾಗ ತೀ.ನಂ.ಶ್ರೀ ಯವರಿಗೆ ಜಯಲಕ್ಷಿ ಅವರೊಂದಿಗೆ ಮದುವೆ ಆಯಿತು. ವಧು ತಾಲೂಕು ಕೇಂದ್ರ ತುರುವೇಕೆರೆಯವರು. ಬಾಲ್ಯ ವಿವಾಹವೆಂದೇ ಎನ್ನಬಹುದಾದ ಇದರಿಂದ ಅವರ ಓದು ಸಾಹಿತ್ಯಾಭ್ಯಾಸಿಗಳಿಗೆ ದಕ್ಕೆಯೇನು ಆದಂತೆ ಕಾಣಲಿಲ್ಲ. ಅವರ ಹಿರಿಯ ಮಗಳು 1931ರಲ್ಲಿ ಹುಟ್ಟಿದಳು. 1932ರಲ್ಲಿ ಅವರ ಪೆತಮ ಕೃತಿ ‘ಓಲುಮೆ’ ಪ್ರಕಟವಾಯಿತು. 1936ರಲ್ಲಿ ಎರದನೇಯ ಮಗಳು ನಾಗರತ್ನನ, 1942ರಲ್ಲಿ ಮಗ ನಾಗಭೂಷಣ್ ಜನಿಸಿದರು. ಈ ಅವಧಿಯಲ್ಲೇ ಅವರಿಗೆ ಎರಡು ಗಂಡು ಮಕ್ಕಳು ಜನಿಸಿ ಶೈಶವದಲ್ಲಿ ತೀರಿಕೊಂಡಿದ್ದವು. ಇದ್ದ ಒಬ್ಬಳೆ ತಂಗಿ ಸಾವಿತ್ರಮ್ಮ ಗುಣ ಹೊಂದದೆ ಮಾನಸಿಕ ಅಸ್ವಸ್ಥತೆಯಿಂದ ನರಳುತಿದ್ದರು. 1943ರಲ್ಲಿ ತೀ.ನಂ.ಶ್ರೀ ಅವರಿಗೆ ಉಪ ಪ್ರಾಧ್ಯಾಪಕರಾಗಿ ಭಡ್ತಿ ದೊರೆತ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ದಿನವೇ ಅವರ ಸೋದರತ್ತೆ ಲಕ್ಷೀದೇವಮ್ಮನವರು ತೀರಿಕೊಂಡರು. ಅನಂತರ ನಾಲ್ಕು ತಿಂಗಳಲ್ಲೆ ಹಿರಿಯ ಮಗಳು ವಿಶಾಲಾಕ್ಷಿ ತನ್ನ 12 ವಯಸ್ಸಿನಲ್ಲಿ ತೀರಿಕೊಂಡಳು ಹೀಗಾಗಿ ಅವರ ಬದುಕಿನ ತಕ್ಕಡಿ ಸುಖಕಿಂತಲೂ ದುಃಖದ ಕಡೆಗೆ ಹೆಚ್ಚು ತೂಗಿದಂತೆ ಕಾಣುತ್ತದೆ.
ಇಂಟರ್ಮೀಡಿಯೇಟ್ ಕಾಲೇಜ್ ಬೆಂಗಳೂರಿಗೆ ವರ್ಗ. ಮತ್ತೆ, ೧೯೫೭ ರಲ್ಲಿ ಮೈಸೂರು. ಮೈಸೂರು ಸಂವಿಧಾನ ಪರಿಷತ್ ನಲ್ಲಿ ಭಾಷಾಂತರಕಾರರಾಗಿ. ದಾವಣಗೆರೆ ಕಾಲೇಜ್ ನಲ್ಲಿ ಸೂಪೆರಿನ್ಟೆಂಡೆಂಟ್ ಆಗಿ, ಕೋಲಾರ ಕಾಲೇಜ್, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ. ಮೈಸೂರು ಮಹಾರಾಜ ಕಾಲೇಜ್ ಕನ್ನಡ ಪ್ರೊಫೆಸರ್ ಆಗಿ ನಿಯುಕ್ತರಾದರು.
 
==ಮೈಸೂರಿನ, ಓರಿಯೆಂಟಲ್ ರಿಸರ್ಚ್ ಶಾಖೆಯಲ್ಲಿ==
ತೀ.ನಂ.ಶ್ರೀ ಯವರ ಜೊತೆಗೆ ದುಡಿದ ಗೆಳೆಯರು, ಪ್ರೊ. ಡಿ.ಎಲ್.ನರಸಿಂಹಾಚಾರ್,ಕಸ್ತೂರಿ ರಂಗಚಾರ್, ಮುಂತಾದವರುಗಳು. ಅಲ್ಲಿನ ಅಪಾರ ಗ್ರಂಥಗಳನ್ನು ವಿಂಗಡಿಸಿ, ೧. ಕನ್ನಡಭಾಷೆಯ ಬೈಬ್ಲಿಯೋಥಿಕ, ಹಾಗೂ, ೨. ಸಂಸ್ಕೄತ ಭಾಷೆಯ ಬೈಬ್ಲಿಯೋಥಿಕಗಳನ್ನು,ಒಂದುಕಡೆ ಶೇಖರಿಸಿಟ್ಟರು. ಈ ಅಮೂಲ್ಯ ಗ್ರಂಥ ರಾಶಿಯಿಂದ, ಪ್ರೊ. ಆರ್.ಶ್ಯಾಮಾಶಾಸ್ತ್ರಿಗಳು, ಕೌಟಿಲ್ಯನ ಅರ್ಥಶಾಸ್ತ್ರವನ್ನು ಹುಡುಕಿ, ಸಂಪಾದಿಸಿ ಪ್ರಕಟಿಸಿದರು. ಓರಿಯೆಂಟಲ್ ಗ್ರಂಥಾಲಯವನ್ನು, ೧೯೧೮ ರಲ್ಲೇ ಸ್ಥಾಪಿಸಲಾಯಿತು. (ಮೈಸೂರು ವಿಶ್ವವಿದ್ಯಾನಿಲಯ, ೧೯೧೬ ರಲ್ಲಿ ಸ್ಥಾಪನೆಗೊಂಡಿತು.) ಗ್ರಂಥಾಲಯದ ಸಮಿತಿಯಲ್ಲಿ, ಅವರಜೊತೆಗೆ, ಪ್ರೊ.ಸಿ.ಆರ್.ರೆಡ್ಡಿ,, ಪ್ರೊ ಎಮ್.ಹಿರಿಯಣ್ಣ, ಎನ್. ರಂಗಾಚಾರ್ಯ, ಮುಂತಾದವರುಗಳು ಸಹಾಯಕರಾಗಿ ದುಡಿಯುತ್ತಿದ್ದರು. ೧೯೪೩ ರಲ್ಲಿ, ತೀ.ನಂ.ಶ್ರೀ ಯವರನ್ನು ಛೇರ್ಮನ್ ಆಗಿ ನಿಯುಕ್ತಿಸಲಾಯಿತು. [[ಮಾನಸ ಗಂಗೋತ್ರಿ]], ಕನ್ನಡ ಅಧ್ಯಯನ ಕೇಂದ್ರಕ್ಕೆ ಅವರು ಭದ್ರವಾದ ತಳಪಾಯ ಹಾಕಿಕೊಟ್ಟರು. ೧೯೫೮ ರಲ್ಲಿ ನಿಘಂಟು ಸಮಿತಿಯಲ್ಲಿ ಅಧ್ಯಕ್ಷರಾದರು.
 
==ಸಾಹಿತ್ಯಾಧ್ಯಯನದಲ್ಲೇ ತಮ್ಮ ಜೀವನದ ಸರ್ವಸ್ವ==
Line ೪೨ ⟶ ೪೫:
‘ನಂಟರು’ (ಮೊದಲ ಮುದ್ರಣ ೧೯೬೨) ತಡವಾಗಿ ಪ್ರಕಟವಾದ ಪ್ರಬಂಧಗಳ ಸಂಕಲನ. ತೀ.ನಂ.ಶ್ರೀ ಅವರು ‘ಪ್ರಬಂಧವೆನ್ನುವುದು ಮಂದಶೃತಿಯ ಭಾವಗೀತೆ’ ಎಂದು ತಿಳಿದಿದ್ದರು. ಇಲ್ಲಿನ ಪ್ರಬಂಧಗಳೆಲ್ಲ ಭಾವಗೀತೆಗಳಂತೆ ಮಿನುಗುವ ನುಡಿಚಿತ್ರಗಳಂತೆಯೇ ಇವೆ. ೧೯೭೦ರಲ್ಲಿ ಪ್ರಕಟವಾದ ‘ಬಿಡಿ ಮುತ್ತು’ ಅಮರ ಶತಕ ಮತ್ತು ಇತರ ಕೆಲವು ಪ್ರಸಿದ್ಧ ಸಂಸ್ಕೃತ ಸುಭಾಷಿತ ಸಂಕಲನಗಳಿಂದ ಆರಿಸಿದ ೨೧೫ ಮುಕ್ತಕಗಳ ಕನ್ನಡ ಅನುವಾದ. ಇಲ್ಲಿನ ಸುಂದರ ಸುಭಾಷಿತಗಳು ಕನ್ನಡಕ್ಕೆ ತೀ.ನಂ.ಶ್ರೀಯವರ ಒಂದು ವಿಶೇಷ ಕೊಡುಗೆ.
 
ತೀ.ನಂ.ಶ್ರೀ ಅವರಿಂದ ೧೯೪೨ರಲ್ಲಿ ಪ್ರಥಮ ಮುದ್ರಣಗೊಂಡ ‘ರಾಕ್ಷಸನ ಮುದ್ರಿಕೆ’ ವಿಶಾಖದತ್ತನ ಪ್ರಸಿದ್ಧವಾದ ಸಂಸ್ಕೃತ ನಾಟಕ ‘ಮುದ್ರಾರಾಕ್ಷಸ’ದ ರೂಪಾಂತರ. ಪ್ರೊ. ವೆಂಕಣ್ಣಯ್ಯನವರ ಸಲಹೆಯ ಮೇರೆಗೆ ಈ ಸುಂದರ ಕೃತಿಯನ್ನು ಕನ್ನಡಕ್ಕೆ ತಂದರು. ೧೯೩೯ರಲ್ಲಿ ‘ಕನ್ನಡ ಮಾಧ್ಯಮ ವ್ಯಾಕರಣ’ವನ್ನು ಪ್ರಕಟಿಸಿದರು. ಇದು ಹೊಸಗನ್ನಡ ಭಾಷೆಯ ಅಭ್ಯಾಸ ಮತ್ತು ಬೆಳವಣಿಗೆಗೆ ಪೂರಕವಾಗಿರಲೆಂದು ಉದ್ಧೇಶಿಸಿ ರಚಿತವಾದ ಗ್ರಂಥಗಳಲ್ಲಿ ಅತ್ಯಂತ ಜನಪ್ರಿಯ ಪುಸ್ತಕ. ೧೯೪೧ರಲ್ಲಿ ಪ್ರಕಟಿಸಿದ ‘ಹೆಣ್ಣು ಮಕ್ಕಳ ಪದಗಳು’ ತೀ.ನಂ.ಶ್ರೀ ಅವರು ಸಂಗ್ರಹಿಸಿದ ಜನಪದ ಗೀತೆಗಳ ಭಂಡಾರವಾಗಿದೆ. ೧೯೪೬ರಲ್ಲಿ ಪ್ರಕಟಿಸಿದ ‘ಹರಿಹರ ಕವಿಯ ನಂಬಿಯಣ್ಣ ರಗಳೆ’ ತೀನಂಶ್ರೀ ಅವರು ತಮ್ಮ ವಿದ್ವತ್ತು ಮತ್ತು ಗ್ರಂಥ ಸಂಪಾದನ ಶಾಸ್ತ್ರದ ಜ್ಞಾನಗಳನ್ನು ಧಾರೆಯೆರೆದು ಸಂಪಾದಿಸಿದ ಪ್ರಾಚೀನ ಕನ್ನಡ ಕಾವ್ಯ. ‘ರನ್ನ ಕವಿಯ ಗದಾಯುದ್ಧ ಸಂಗ್ರಹಂ’ ತೀ.ನಂ.ಶ್ರೀ ಸಂಪಾದಿಸಿದ ಇನ್ನೊಂದು ವಿದ್ವತ್ಪೂರ್ಣ ಕೃತಿ. ಅವರು ರಚಿಸಿದ ವಿಮರ್ಶಾ ಕೃತಿಗಳೆಂದರೆ ‘ಪಂಪ’, ‘ಕಾವ್ಯ ಸಮೀಕ್ಷೆ’, ‘ಸಮಾಲೋಕನ’ ಮತ್ತು ಕಾವ್ಯಾನುಭವ’. ಇಂಗ್ಲೀಷಿನಲ್ಲಿ ತೀ.ನಂ.ಶ್ರೀ ಅವರು ಬರೆದ ‘Imagination in Indian Poetics and Other Literary Papers’, ‘Affricates in Kannada Speech and Other Linguistic Papers’ ಅವರ ಬದುಕಿನ ಅವಧಿಯ ನಂತರದಲ್ಲಿ ಪ್ರಕಟಗೊಂಡಿವೆ.ಕಾವ್ಯ ಮೀಮಾಂಸೆ ಅಥವಾ ಭಾಷೆಯನ್ನು ಕುರಿತು ಅವರು ಬರೆಯಬಹುದಾಗಿದ್ದ ಇನ್ನೂ ಮಹತ್ವದ ಕೃತಿಗಳಿಗೆ ಬೇಕಾದ ಸಿದ್ದತೆ ಎಲ್ಲವೂ ಅವರು ಮಾಡಿಕೊಂಡಿದ್ದ ಟಿಪ್ಪಣಿಗಳ ಹಸ್ತ ಪ್ರತಿಯಲ್ಲಿ ಉಳಿದುಹೋಗುವುದು ಅನಿವಾರ್ಯವಾಯಿತು. ತೀನಂಶ್ರೀ ಅವರನ್ನು ನೆನೆಯುವವರಿಗೆ ಮೂರು ಕ್ಷೇತ್ರಗಳಲ್ಲಿ ಅವರು ಅದ್ವಿತೀಯವಾಗಿ ನಿಲ್ಲುತ್ತಾರೆ. ಮೊದಲನೆಯದು ಅವರು ಕನ್ನಡದಲ್ಲಿ ಬರೆದು ಬಿಟ್ಟು ಹೋದ 'ಬಾರತೀಯ ಕಾವ್ಯ ಮೀಮಾಂಸೆ’ ಎಂಬ ಉದ್ಧಾಮ ಕೃತಿಯಲ್ಲಿ ಆ ವಿಷಯದಲ್ಲಿ ಅದನ್ನು ಮೀರಿಸುವಂತದ್ದು ಮುಂದೆ ಬಂದಿತೋ ಹೇಳಲಾಗುವುದಿಲ್ಲ. ಎರಡನೆಯದು ಅವರು ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ಭಾಷಾ ವಿಜ್ಞಾನದ ಅಭ್ಯಾಸಕ್ಕೆ ಮಾಡಿದ ಪೂರ್ವ ಸಿದ್ಧತೆ ಮತ್ತು ಕನ್ನಡ ನಿಘಂಟಿಗೆ ಅವರ ಪರಿಶ್ರಮದ ಕಾಣಿಕೆ. 1935ರ ಸುಮಾರಿನಿಂದ ಪ್ರಾರಂಭಿಸಿ ಅವರು ಅಲ್ಲಿ ಇಲ್ಲಿ ಬರೆದು ಮಂಡಿಸಿದ ಏಳೆಂಟು ಇಂಗ್ಲೀಷ್ ಲೇಖನಗಳು, ಎಂಟು ಹತ್ತು ಕನ್ನಡ ಲೇಖನಗಳು ಮತ್ತು ಗ್ರಂಥ ರೂಪದಲ್ಲಿ ಬಂದ’ ಕನ್ನಡ ಮಾಧ್ಯಮ ವ್ಯಾಕರಣ ಇವಿಷ್ಟರಿಂದಲೇ ಭಾಷಾಶಾಸ್ತ್ರದ ಅಭ್ಯಾಸಕ್ಕೆ ಅವರು ಒದಗಿಸಿದ ಪೂರ್ವ ಸಿದ್ಧತೆಯನ್ನು ನಿರ್ಣಯಿಸ ಬರುವುದಿಲ್ಲ. ಇದಲ್ಲದೇ ಭಾರತೀಯ ಭಾಷೆಗಳಿಗೆ ಶೀಘ್ರ ಲಿಪಿ, ತಾರೂ(ಟೆಲಿಗ್ರಾಫ್ ಯೋಜನೆ), ಏಕರೂಪದ ಲಿಪಿ ತತ್ವ ಇವುಗಳ ಆವಿಷ್ಕಾರಕ್ಕಾಗ ಭಾರತ ಸರ್ಕಾರದವರು ಹಾಕಿದ ಬೃಹತ್ ಯೋಜನೆಯ ಅಂಗವಾಗಿ ಕನ್ನಡದ ಧ್ವನಿಮಾ, ಆಕೃತಿಮಾಗಳ ಆಗಮನ ಸಂಖ್ಯಾ ಸಾಮರ್ಥ್ಯ ಯೋಜನೆಗೆ ಪುಣೆಯ ಡೆಕ್ಕನ್ ಕಾಲೇಜಿನ ಎಂ.ಆರ್ ರಂಗನಾಥ್ ಅವರನ್ನು ಒಪ್ಪಿಸಿ ಅದಕ್ಕೆ ಮಾರ್ಗದರ್ಶನವನ್ನು ಕೊಟ್ಟರು. ಎಂಟುನೂರು ಪುಟಗಳ ಒಂದು ಲಕ್ಷಕ್ಕೂ ಮಿಕ್ಕ ಪದಗಳಿಂದ ಕೂಡಿದ ಈ ಕೃತಿಪ್ರಕಟವಾದದಂದು ತೀನಂಶ್ರೀ ಅವರ ದೊಡ್ಡದೊಂದು ಕನಸು ನನಸಾಗಿ ಕನ್ನಡಿಗರಿಗೆ ದೊರೆಯಲಿದೆ. ಅವರು ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಭಾಷಾಂತರಕಾರರಾಗಿ ಕೆಲಸ ಮಾಡಿದಾಗ ಕನ್ನಡವನ್ನು ಆಡಳಿತ ಭಾಷೆಯಾಗಿ ಅಣಿಗೊಳಿಸುವ ಸಾಹಸಕ್ಕೆ ಸಾಕಷ್ಟು ಅಮೂಲ್ಯವಾದ ಕೊಡುಗೆಗಳನ್ನು ಕೊಟ್ಟಿರಬೇಕು.ತೀ.ನಂ.ಶ್ರೀ ಅವರ ಪ್ರತಿಭೆ, ವಿದ್ವತ್ತುಗಳು, ಅವರ ಆಸಕ್ತಿಯ ಪರಧೀಯೊಳಗೆ ಬರುವ ವಿಷಯಗಳು ಮತ್ತು ಜೀವಿತಾವಧಿಯಲ್ಲಿ ಅವರಿಗಿದ್ದ ಪ್ರಸಿದ್ಧಿಗಳನ್ನು ಪರಿಗಣಿಸಿದರೆ ಅವರು ಬರೆದ ಗ್ರಂಥಗಳ ಸಂಖ್ಯೆ ಕಡಿಮೆ ಎಂದೇ ಎಲ್ಲರ ಅಭಿಪ್ರಾಯ. ಅವರ ಹೆಸರಿನಲ್ಲಿ ಪ್ರಖಟವಾಗಿರುವ ಕೃತಿಗಳ ಸಂಖ್ಯೆ ಹದಿನಾಲ್ಕು ಮಾತ್ರ. ಅವುಗಳಲ್ಲಿ ಮೂರು ಅವರ ಮರಣ ನಂತರ ಪ್ರಕಟವಾದವು. ಇವಲ್ಲದೆ ಇಂಗ್ಲಿಷ್‍ನಲ್ಲಿ ಬರೆದ ಬಾಷೆ, ವ್ಯಾಕರಣ ಮತ್ತು ಸಾಹಿತ್ಯಗಳನ್ನು ಕುರಿತು ಬರೆದ ಸುಮಾರು ಹತ್ತೋಂಬತ್ತು ಲೇಖನಗಳು ಗ್ರಂಥ ರೂಪದಲ್ಲಿ ಬರೆದ ವಿವಿಧ ಕಡೆ ಚದುರಿಹೋಗಿವೆ. ಅಲ್ಲದೆ ಭಾಷಾಶಾತ್ರ ಕುರಿತ ಅವರ ಲೇಖನಗಳ ಸಂಗ್ರಹ ಅಚ್ಚೆಗೆ ಸಿದ್ದವಾಗಿದೆ ಎಂದು ತಿಳಿದುಬಂದಿದೆ. ಏಳೆಂಟು ಕನ್ನಡ ಲೇಖನಗಳು ಈಗ ಪ್ರಕಟವಾಗಿರುವ ಯಾವ ಸಂಗ್ರಹದಲ್ಲಿಯೂ ಸೇರದೆ ಉಳಿದುಕೊಂಡಿವೆ. ಗ್ರಂಥರೂಪದಲ್ಲಿ ಪ್ರಕಟವಾಗಿರುವ ಅವರ ಕೃತಿಗಳನ್ನು ಸ್ಥೂಲವಾಗಿ ಸೃಜನಾ, ಶಾಸ್ತ್ರ, ಸಂಪಾದನೆ ಮತ್ತು ವಿಮರ್ಶೆ ಎಂದು ನಾಲ್ಕು ವಿಧವಾಗಿ ಪರಿಶೀಲಿಸಬಹುದು. ಈ ವಿಭಾಗ ಕಾಲಾನುಕ್ರಮವಾಗಿ ಕಾಣದಿರಬಹುದು ಮತ್ತು ಶಾಸ್ತ್ರದೂಳಗೆ ವಿಮರ್ಶೆ, ವಿಮರ್ಶೆಯೊಳಗೆ ಶಾಸ್ರ್ತ ಬೆರೆಯಬಹುದು. ಸೃಜನ ‘ಒಲುಮೆ’ ಇದು ತೀ.ನಂ.ಶ್ರೀಯವರ ಮೊಟ್ಟ ಮೊದಲ ಕೃತಿ.
 
==ಮರಣ==
"https://kn.wikipedia.org/wiki/ತೀ._ನಂ._ಶ್ರೀಕಂಠಯ್ಯ" ಇಂದ ಪಡೆಯಲ್ಪಟ್ಟಿದೆ