ಮರಾಠಿ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪ ನೇ ಸಾಲು:
ಮರಾಠಿ ರಂಗಭೂಮಿಯೊಂದಿಗೇ ಮರಾಠಿ ಚಿತ್ರೋದ್ಯಮವೂ ಬೆಳೆದರೂ, ಚಿತ್ರೋದ್ಯಮಕ್ಕೆ ಸತತ ಯಶಸ್ಸು ದೊರಕಲಿಲ್ಲ. ಭಾರತಲ್ಲಿಯೇ ಮೊಟ್ಟಮೊದಲ ವಾಕಿ ಚಿತ್ರ ತಯಾರಿಸಿದ [[ದಾದಾಸಾಹೇಬ್ ಫಾಳಕೆ]] , ಖ್ಯಾತ ನಿರ್ದೇಶಕ [[ವಿ.ಶಾಂತಾರಾಮ್]] ಮೊದಲಾದವರಿಂದ ಮರಾಠಿ ಚಿತ್ಯೋದ್ಯಮ ಸಮಕಾಲೀನ ಹಿಂದೀ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿತು. ನಿರ್ದೇಶಕ ರಾಜಾ ಪರಾಂಜಪೆ, ಸಂಗೀತ ನಿರ್ದೇಶಕ ಸುಧೀರ್ ಫಡ್ಕೆ, ಸಂಗೀತ ರಚನಕಾರ ಜಿ. ಮಾಡಗೂಳಕರ್ , ನಟ ರಾಜಾ ಗೋಸಾವಿ ಮೊದಲಾದವರು ಒಂದುಗೂಡಿ ಅನೇಕ ಗಮನಾರ್ಹ ಮರಾಠಿ ಚಿತ್ರಗಳನ್ನು ತೆರೆಗಿತ್ತರು. ಅಂದಿನ ಮರಾಠಿ ಆಡುಭಾಷೆಯು ನಾಟಕ, ಸಿನಿಮಾ ಅಷ್ಟಲ್ಲದೇ ಮರಾಠಿ ಸಾಹಿತ್ಯದಿಂದಲೂ ಪ್ರಭಾವಿತವಾಗಿತ್ತು.
 
ಆಧುನಿಕ ಮರಾಠಿ ಕಾವ್ಯ [[ಮಹಾತ್ಮಾ ಜ್ಯೋತಿಬಾ ಫುಲೆ]]ಯ ಕೃತಿಗಳಿಂದ ಮೊದಲಾಯಿತು. ನಂತರದ ಕವಿಗಳಾದ ಕೇಶವಸುತ, ಬಾಲಕವಿ, ಗೋವಿಂದಾಗ್ರಜ,ಮತ್ತು ರವಿ ಕಿರಣ ಂಂಡಲದ ಕವಿಗಳಾದ ಮಾಧವ ಜೂಲಿಯನ್ ಇತ್ಯಾದಿಗಳು ಸೃಷ್ಟಿಸಿದ ಕಾವ್ಯದಲ್ಲಿ ರಮ್ಯ ಮತ್ತು ವಿಕ್ಟೋರಿಯನ್ ಇಂಗ್ಲೀಷ್ ಕಾವ್ಯದ ಪ್ರಭಾವವಿತ್ತು. ಭಾವತೀವ್ರತೆ ಮತ್ತು ಗೇಯ ಗುಣ ಇವುಗಳ ಪ್ರಧಾನ ಆಂಶವಾಗಿತ್ತು. ಖ್ಯಾತ ವಿಡಂಬನ ಸಾಹಿತಿ ಮತ್ತು ರಾಜಕಾರಣಿ ಪಿ.ಕೆ.ಆತ್ರೆ ಝೆಂಡೂಚೆ ಫುಲೆ ಎಂಬ ಪ್ರಹಸನ ಸಂಕಲನದಲ್ಲಿ ಈ ಕಾವ್ಯ ಪ್ರಕಾರದ ಲೇವಡಿ ಮಾಡಿದರು. [[ಸಾನೆ ಗುರೂಜಿ]] (1899-1950) ಮರಾಠಿ ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದರು. ಶ್ಯಾಮಚೀ ಆಯಿ (ಶ್ಯಾಮನ ತಾಯಿ), ಆಸ್ತಿಕ್, ಗೋಡೆ ಶೇವಟ್ ( ಸುಖಾಂತ)ಅವರ ಮುಖ್ಯ ಕೃತಿಗಳು .ಅನೇಕ ಪಾಶ್ಚಿಮಾತ್ಯ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಮರಾಠಿಯಲ್ಲಿ ಸರಳ ರೀತಿಯಲ್ಲಿ ಭಾಷಾಂತರಿಸಿ ಗೋಡೆ ಗೋಷ್ಟಿ (ಮಧುರ ಕಥೆಗಳು) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ವಿಷ್ಣು ಸಖಾರಾಮ ಖಾಂಡೇಕರ್ (1889-1976) ಬರೆದ ಯಯಾತಿ ಕೃತಿ 1975ರಲ್ಲಿ [[ಜ್ಞಾನ ಪೀಠಜ್ಞಾನಪೀಠ ]] ಪ್ರಶಸ್ತಿಯನ್ನು ಗಳಿಸಿತು. ಕಾದಂಬರಿ, ಸಣ್ಣ ಕಥೆ , ಪ್ಬಂಧ ಇತ್ಯಾದಿ ಕ್ಷೇತ್ರಗಳಲ್ಲಿ ಕೈಯಾಡಿಸಿದ ಇವರ ಮುಖ್ಯ ಕೃತಿಗಳೆಂದರೆ ದೋನ ಧ್ರುವ ( ಎರಡು ಧ್ರುವಗಳು) , ಉಲ್ಕಾ, ಕ್ರೌಂಚವಧಾ, ಜಳಲೇಲಾ ಮೊಹರ್ ( ಸುಟ್ಟುಹೋದ ಮೊಹರು) ಮತ್ತು ಅಮೃತವೇಲ್ ( ಅಮೃತ ಬಳ್ಳಿ)
 
The major paradigm shift in sensibility began in the forties with the avant-garde modernist poetry of B.S. Mardhekar. In the mid fifties, the 'little magazine movement' gained momentum. It published writings which were non-conformist, radical and experimental. Dalit literary movement also gained strength due to the little magazine movement. This radical movement was influenced by the philosophy of Dr. Babasaheb Ambedkar and challenged the literary establishment which comprised of largely middle class, urban and upper caste people. The little magazine movement threw up many excellent writers. Bhalchandra Nemade is a well known novelist, critic and poet. The poetry of Arun Kolatkar, Dilip Chitre, Namdeo Dhasal, Vasant Abaji Dahake, Manohar Oak and many other modernist poets is complex, rich and provokative. Bhau Padhye,Vilas Sarang Shyam Manohar and Visharm Bedekar are well known fiction writers.
"https://kn.wikipedia.org/wiki/ಮರಾಠಿ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ