ಮಂಡಕ್ಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "ಸದಸ್ಯ:Bschandrasgr": link to userpage on main namespace.
೨೩ ನೇ ಸಾಲು:
:ಭತ್ತವನ್ನು ಪ್ಯಾಡಿ ಕ್ಲೀನರ್‌ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. ಹೀಗೆ ಸ್ವಚ್ಛಗೊಳಿಸಿದ ತಲಾ 45 ಚೀಲ (ಒಂದು ಚೀಲದಲ್ಲಿ 70 ಕಿಲೋ) ತುಂಬಿಸಿಡಬಲ್ಲ ನಾಲ್ಕು ಸ್ಟೋರೇಜ್‌ಗಳು-ಈ ಪೈಕಿ ಎರಡನ್ನು ಮೀಸಲಿಟ್ಟು, ಉಳಿದ ಎರಡನ್ನು ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ. ಒಂದು ದಿನಕ್ಕೆ ಬೇಕಿರುವಷ್ಟು ಭತ್ತವನ್ನು ಸ್ಟೋರೇಜ್‌ಗೆ ಹಾಕಿ 95 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕುದಿಸಿದ ನೀರನ್ನು ಅದರೊಳಗೆ ಬಿಡಲಾಗುತ್ತದೆ. ಆರು ಗಂಟೆಯ ಬಳಿಕ ಆ ನೀರನ್ನು ಹೊರಗೆ ಬಿಟ್ಟು ರೋಸ್ಟರ್‌ (ಬೆಂಕಿಯಿಂದ) ಮೂಲಕ ಭತ್ತವನ್ನು ಹುರಿಯಲಾಗುತ್ತದೆ. ಹುರಿದ ಭತ್ತವನ್ನು ತಂಪುಗೊಳಿಸಲು ಕೂಲಿಂಗ್‌ ಜಾಲಿಯಲ್ಲಿ ಹಾಕಲಾಗುತ್ತದೆ. ತಣ್ಣಗಾದ ಭತ್ತವನ್ನು ಪಾಲಿಶ್‌ ಮಾಡುವ ವೇಳೆ ಅಕ್ಕಿಯಿಂದ ಸಿಪ್ಪೆ (ತೌಡು) ಬೇರೆಯಾಗಿ ಹೊರಗೆ ಬರುತ್ತದೆ. ಬಿಸಿ ಅಕ್ಕಿಯನ್ನು ತಂಪಾಗಿಸಲು ಮತ್ತೆ ಜಾಲಿಯಲ್ಲಿ (ಜಾಲರಿಯಲ್ಲಿ) ಹಾಕಲಾಗುತ್ತದೆ. ಬಳಿಕ ಫ್ಯಾನ್ ಬಳಸಿ ಸಿಪ್ಪೆಯನ್ನು ಅಕ್ಕಿಯಿಂದ ಪ್ರತ್ಯೇಕಿಸಲಾಗುತ್ತದೆ. ಆ ಅಕ್ಕಿಯನ್ನು ಡ್ರೈಯರ್‌ಗೆ ಹಾಕಲಾಗುತ್ತದೆ. ಡ್ರೈಯರ್‌ನಲ್ಲಿ ಅಕ್ಕಿ ಮೇಲೆ, ಕೆಳಗೆ ಚಲಿಸುತ್ತದೆ. 45 ಚೀಲ ಅಕ್ಕಿ ಒಣಗಲು ಎರಡೂವರೆ ಗಂಟೆ ತಗಲುತ್ತದೆ. ಆ ಅಕ್ಕಿಯನ್ನು ಜಾಲಿಯಲ್ಲಿ ಹಾಕಿದಾಗ ನುಚ್ಚು ಬೇರೆಯಾಗುತ್ತದೆ. ಈ ಅಕ್ಕಿಯನ್ನು ಇನ್ನೊಂದು ರೋಸ್ಟರ್‌ ಮೂಲಕ ಹಾಯಿಸಿ ಹೊರಬಂದಾಗ ಮಂಡಕ್ಕಿ ತಯಾರಾಗುತ್ತದೆ.
:ಹೀಗೆ ಆದ ಮಂಡಕ್ಕಿಯನ್ನು ಕನ್ವೇಯರ್‌ ಸಹಾಯದಿಂದ ಸಂಗ್ರಹ ಟ್ಯಾಂಕಿನಲ್ಲಿ ತುಂಬಲಾಗುತ್ತದೆ. ಒಂದೊಂದು ಟ್ಯಾಂಕ್‌ನಲ್ಲಿ 1,500 ಚೀಲ ಮಂಡಕ್ಕಿ ಹಿಡಿಯಬಲ್ಲದು. ಅಂತಹ ನಾಲ್ಕು ಟ್ಯಾಂಕ್‌ಗಳು ಇವೆ. ನಂತರ ಮಂಡಕ್ಕಿಯನ್ನು ಪ್ಯಾಕ್‌ ಮಾಡಲಾಗುತ್ತದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ 3 ಕಿಲೋದಿಂದ 6 ಕಿಲೋವರೆಗೆ ವಿಧವಿಧ ಚೀಲದಲ್ಲಿ ಪ್ಯಾಕ್‌ ಮಾಡಲಾಗುವುದು. ಸಾಮಾನ್ಯವಾಗಿ 5 ಕಿಲೋ ತೂಕದ ಚೀಲಗಳನ್ನು ಸಿದ್ಧಪಡಿಸಿ ಸಾಗಿಸಲಾಗುತ್ತದೆ.
==[[ಸದಸ್ಯ:Bschandrasgr|ನೋಡಿ]]==
*ಭತ್ತದ [[ಅರಳು]]ಇದೇ ಬಗೆಯ ತಿನಿಸು.
==ಆಧಾರ==
"https://kn.wikipedia.org/wiki/ಮಂಡಕ್ಕಿ" ಇಂದ ಪಡೆಯಲ್ಪಟ್ಟಿದೆ