ಇಂಗ್ಲೆಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
space
೧೦೬ ನೇ ಸಾಲು:
ಈ ಕಲ್ಪಗಳಲ್ಲಿ ವಿಸ್ತಾರವಾದ ಜಿಯೊಸಿಂಕ್ಲೈನಲ್ ಸಮುದ್ರವಿತ್ತು. ಇದರ ವಾಯವ್ಯದತ್ತ ಉತ್ತರ ಅಟ್ಲಾಂಟಿಕ್ ಶಾಶ್ವತ ಭೂಖಂಡ ಮತ್ತು ಫೆನೊಸ್ಕಾಂಡಿಯಾಗಳಿದ್ದವು. ಈ ಭೂಭಾಗಗಳನ್ನು ನದಿಗಳು ಸವೆಯಿಸಿ ಆ ಮೂಲಕ ಹೊತ್ತು ತಂದ ಶಿಲಾಕಣಗಳನ್ನು ಸಮುದ್ರದಲ್ಲಿ ಕಲೆಹಾಕಿದವು. ನೀರಿನ ಮಟ್ಟದಲ್ಲಿ ಮತ್ತು ಭೂ-ಜಲಗಳ ಹರವಿನಲ್ಲಿ ವ್ಯತ್ಯಾಸಗಳು ಆಗಾಗ ತಲೆದೋರಿ ಶಿಲಾಪ್ರಸ್ತರಗಳಲ್ಲೂ ವೈವಿದ್ಯ ಉಂಟಾಯಿತು. ಆರ್ಡೊವಿಶಿಯನ್ ಕಲ್ಪದ ಅತ್ಯಂತ ಹಳೆಯ ಎರೆನಿಗ್ ಶಿಲಾಶ್ರೇಣಿಯಲ್ಲಿ ಅನುಕ್ರಮವಾಗಿ ಅಡಿಯಿಂದ ದಪ್ಪ ಹರಳಿನ ಗ್ರಿಟ್, ಮರಳುಶಿಲೆ, ಮರುಳುಯುಕ್ತ ಜೇಡು ಶಿಲೆ ಮತ್ತು ಕಟ್ಟಕಡೆಗೆ ಕರಿಯ ಜೇಡಿನ ಶಿಲಾಪ್ರಸ್ತರಗಳನ್ನು; ನೋಡಬಹುದು. ಇವುಗಳ ಅಧ್ಯಯನದಿಂದ ಜಲಾಶಯದ ಆಳ ಹೆಚ್ಚಿದಂತೆಲ್ಲ ಅದರ ಕರಾವಳಿ ದೂರ ದೂರ ಸರಿಯಿತೆಂದು ವ್ಯಕ್ತವಾಗಿದೆ. ಅಲ್ಲದೆ ಮಧ್ಯ ಅರ್ಡೊವಿಶಿಯನ್ ಕಲ್ಪದಲ್ಲಿ ಭೂಭಾಗ ತೀವ್ರಗತಿಯಲ್ಲಿ ಮೇಲಕ್ಕೆ ಎತ್ತಲ್ಪಟ್ಟಿತು. ಆಗ ದಪ್ಪ ಕಣಗಳ ಗ್ರಿಟ್ಟುಗಳು ಶೇಖರವಾದುವು. ಮುಂದೆ ಬಾಲಾಹಂತದಲ್ಲಿ ನಯಕಣ ರಚನೆಯ ಮರಳುಶಿಲೆ ಮತ್ತು ಜೇಡುಶಿಲಾಪ್ರಸ್ತರಗಳೂ ನಿಕ್ಷೇಪಗೊಂಡವು.
ಈ ವೇಳೆಗೆ ಮಧ್ಯ ಇಂಗ್ಲೆಂಡಿನ ಭಾಗ ಬಹುಪಾಲು ನೆಲವಾಗಿತ್ತು. ಸೈಲೂರಿಯನ್ ಕಲ್ಪದ ಆದಿಯಲ್ಲಿ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಅವಿರ್ಭಾವ ಮೊದಲಾಯಿತು. ಸಮುದ್ರದ ನಡುವೆ ನೀಳ ದಿಬ್ಬವೊಂದು ಉದ್ಬವಿಸಿ ಜಲಾಶಯ ಎರಡು ಪಾಲಾಯಿತು. ಹೊಸ ಬೆಟ್ಟಗಳ ಸಾಲೂ ಕಾಣಿಸಿಕೊಂಡಿತು. ಈ ದಿಬ್ಬ ಬೆರ್ವಿಕ್ಕಿನಿಂದ ಮೊದಲಾಗಿ ಸಾಲ್ವೆ ಮೂಲಕ ಹಾದು ವೆಕ್ಸ್ ಫರ್ಡಿನಲ್ಲಿ ಕೊನೆಮುಟ್ಟಿತು. ಸಮುದ್ರದಲ್ಲಿ ಅತಿ ಸೂಕ್ಷ್ಮಕಣಗಳು ಸಂಚಿತವಾದುವು. ಕ್ರಮೇಣ ಸಮುದ್ರದ ಉತ್ತರಾರ್ದ ನೆಲಭಾಗವಾಗಿ ಮಾರ್ಪಟ್ಟಾಗ ಮರುಳುಶಿಲೆಗಳು ನಿಕ್ಷೇಪಗೊಂಡುವು. ಕಾರ್ಡಿಗನ್‍ಷೈರಿನ ಲ್ಯಾಂಡೋವರಿಯನ್ ಶಿಲಾಶ್ರೇಣಿಯಲ್ಲಿ ಗ್ರೇ ವ್ಯಾಕ್ ಮತ್ತು ಜೇಡುಶಿಲಾಪ್ರಸ್ತರಗಳು ಒಂದಾದ ಮೇಲೊಂದು ಕಂಡು ಬಂದಿವೆ. ಆರ್ಡೊವಿಶಿಯನ್ ಕಲ್ಪದ ಉತ್ತರಾರ್ಧದಲ್ಲಿ ಲೇಕ್ ಜಿಲ್ಲೆಯಲ್ಲಿ ಅಗ್ನಿಪರ್ವತಗಳ ಚಟುವಟಿಕೆಯಿಂದ ಲಾವಾ, ಟಫ್, ಅಗ್ಲಾಮರೇಟ್ ಶಿಲಾಪ್ರಸ್ತರಗಳು ತಲೆದೋರಿ ಬಾರೊಡೇಲ್ ಶ್ರೇಣಿ ಉಂಟಾಯಿತು. ತದನಂತರ ಜೇಡು ಮತ್ತು ಗ್ರಿಟ್ ಪ್ರಸ್ತರಗಳು ಶೇಖರವಾಗಿ ಮುಂದೆ ರೂಪಾಂತರ ಹೊಂದಿ ಸ್ಕಿಡಾವಾ ಜೇಡುಶಿಲಾ ಶ್ರೇಣಿಗಳೆನಿಸಿದುವು.
 
ಅಷ್ಟು ತೀವ್ರವಲ್ಲದ ಭೂ ಚಟುವಟಿಕೆಗಳ ದೆಸಿಯಿಂದ ಶಿಲಾಪ್ರಸ್ತರಗಳು ಮಡಿಕೆ ಬಿದ್ದು ಕಲ್ಪದ ಅಂತ್ಯದಲ್ಲಿ ನೆಲಭಾಗ ಮತ್ತೆ ಕುಸಿದು ಸಮುದ್ರವಾಗಿ ಮಾರ್ಪಟ್ಟಿತು. ಈಗಿನ ವಾಯುವ್ಯ ಇಂಗ್ಲೆಂಡಿನಲ್ಲಿರುವ ಆಷ್‍ಗಿಲನ್ ಮತ್ತು ಸೈಲೂರಿಯನ್ ಶಿಲಾಪ್ರಸ್ತರಗಳ ನಿಕ್ಷೇಪ ಮೊದಲಾಯಿತು. ಉತ್ತರ ಭಾಗದಲ್ಲಿ ತಲೆದೋರಿದ್ದ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಪ್ರಭಾವ ಇಂಗ್ಲೆಂಡ್, ವೇಲ್ಸುಗಳಿಗೂ ಹಬ್ಬಿತು. ಈ ಕಾಲದಲ್ಲೇ ಲೇಕ್ ಜಿಲ್ಲೆಯ ಉಬ್ಬು ಉಂಟಾಯಿತು. ಉತ್ತರ ಮತ್ತು ಪಶ್ಚಿಮ ವೇಲ್ಸನಲ್ಲಿ ಅಸಂಖ್ಯಾತ ಪರಸ್ಪರ ಸಮಾಂತರ ಮೇಲ್ಮಡಿಕೆಗಳೂ ಕೆಳಮಡಿಕೆಗಳೂ ತಲೆದೋರಿದುವು.
===ಡಿವೋನಿಯನ್ ಕಲ್ಪ (350-400 ದಶಲಕ್ಷ ವರ್ಷಗಳ ಹಿಂದಿನ ಕಾಲ)===
{{Main|ಡಿವೋನಿಯನ್}}ಈ ವೇಳೆಗೆ ಇಂಗ್ಲಿಂಡಿನ ಲೇಕ್ ಜಿಲ್ಲೆ ಮತ್ತು ಉತ್ತರ ವೇಲ್ಸಿನ ಬಹುಭಾಗ ಭೂಖಂಡವಾಗಿ ಉಳಿದಿತ್ತು. ಅಸಂಖ್ಯಾತ ನೂತನ ಪರ್ವತಶ್ರೇಣಿಗಳಿಂದ ಕೂಡಿದ ಉತ್ತರ ಅಟ್ಲಾಂಟಿಸ್ ಶಾಶ್ವತ ಭೂಖಂಡವೂ ಇತ್ತು. ಫೆನೊಸ್ಕಾಂಡಿಯಾ ಹೆಚ್ಚು ವಿಸ್ತಾರಗೊಂಡು ಉತ್ತರ ಸಮುದ್ರದ ದಕ್ಷಿಣ ಭಾಗವನ್ನು ಅತಿಕ್ರಮಿಸಿತ್ತು. ಉತ್ತರ ಇಂಗ್ಲೆಂಡ್, ವೇಲ್ಸ್ ಮತ್ತು ಮಧ್ಯ ಐರ್ಲ್‍ಂಡುಗಳನ್ನೊಳಗೊಂಡ ದೊಡ್ಡ ಪರ್ಯಾಯದ್ವೀಪ ತಲೆದೋರಿತು. ಕಲ್ಪದ ಉದ್ದಕ್ಕೂ ಕ್ಯಾಲಿಡೋನಿಯನ್ ಪರ್ವತಜನ್ಯ ಶಕ್ತಿಗಳ ಪ್ರಭಾವ ಕ್ರಮೇಣ ಕುಂದುತ್ತ ಪರ್ಯಾಯದ್ವೀಪದ ವಿಸ್ತೀರ್ಣ ಮತ್ತು ರಚನೆಯಲ್ಲಿ ಅನೇಕ ಬದಲಾವಣೆಗಳು ಕಂಡುಬಂದವು. ಉತ್ತರ ಅಟ್ಲಾಂಟಿಸ್ ಮತ್ತು ಪರ್ಯಾಯದ್ವೀಪದ ನಡುವೆ ಅಸಂಖ್ಯಾತ ಖಾರಿಗಳೂ ದಿಬ್ಬಗಳೂ ಇದ್ದು ಶಿಲಾ ನಿಕ್ಷೇಪದ ಕಾರ್ಯಗತಿಯನ್ನು ಬಹುಮಟ್ಟಿಗೆ ಪ್ರಚೋದಿಸಿದುವು.
 
ವೇಲ್ಸಿನ ಕೆಳ ಡಿವೋನಿಯನ್ ಕಲ್ಪದ ಮರಳುಶಿಲಾ ಪ್ರಸ್ತರಗಳು ದಕ್ಷಿಣ ಭಾಗದಲ್ಲಿ ನದೀಮುಖಜ ಭೂಮಿಯೋಪಾದಿ ನಿಕ್ಷೇಪಗೊಂಡುವು. ಮಧ್ಯ ಮತ್ತು ಮೇಲಿನ ಡಿವೋನಿಯನ್ ಕಲ್ಪಗಳಲ್ಲಿ ಉತ್ತರ ಮತ್ತು ಮಧ್ಯ ವೇಲ್ಸ್ ಭೂಪ್ರದೇಶ ಉತ್ತರ ದಿಕ್ಕಿನತ್ತ ವಿಸ್ತಾರಗೊಂಡು ಅಟ್ಲಾಂಟಿಸ್ ಭೂಖಂಡದೊಡನೆ ಸೇರಿ ಹೋಯಿತು. ಹೀಗೆಯೇ ದಕ್ಷಿಣದ ಕಡೆಯೂ ವಿಸ್ತಾರಹೊಂದಿ ಇಡೀ ದಕ್ಷಿಣ ವೇಲ್ಸನ್ನು ಆಕ್ರಮಿಸಿತು. ಬಹುಶ: ಈ ಹಂತದಲ್ಲೇ ಡೆವಾನ್ ಪ್ರಾಂತ್ಯದ ಡಿವೋನಿಯನ್ ಶಿಲಾಪ್ರಸ್ತರಗಳು ನಿಕ್ಷೇಪಗೊಂಡವು.
===ಕಾರ್ಬೊನಿಫೆರಸ್ ಕಲ್ಪ (280-350 ದಶಲಕ್ಷ ವರ್ಷಗಳ ಹಿಂದಿನ ಕಾಲ)===
ಡಿವೋನಿಯನ್ ಕಲ್ಪದಲ್ಲೇ ಉತ್ತರ ಅಟ್ಲಾಂಟಿಸಿನ ಬಹುಭಾಗ ಸವೆತಕ್ಕೆ ಒಳಗಾಗಿತ್ತು. ಈ ಬೃಹತ್ ಖಂಡದ ಅಳಿದುಳಿದ ಭಾಗಗಳು ಮಧ್ಯ [[ಸ್ಕಾಟ್ಲೆಂಡ್]] ಮತ್ತು ಐಸ್ಲೆಂಡುಗಳ ನಡುವೆ ಅಲ್ಲಲ್ಲೇ ಚದರಿಹೋಗಿದ್ದುವು. [[ಸ್ಕಾಂಡಿನೇವಿಯ]] ಭೂಖಂಡವಾಗಿತ್ತು. ಯೂರೋಪು ಖಂಡದ ಬಹುಬಾಗ ನೀರಿನಲ್ಲಿ ಮುಳುಗಿ ಅಲ್ಲಲ್ಲೇ ಸಣ್ಣಪುಟ್ಟ ದ್ವೀಪಗಳಾದುವು. ಇವುಗಳಲ್ಲಿ ಸೇಂಟ್‍ಜಾರ್ಜ್ ಲ್ಯಾಂಡ್, ಈಸ್ಟ್ ಜಾರ್ಜ್ ಛಾನೆಲ್ ಮತ್ತು ವೇಲ್ಸನ ಬಹುಭಾಗ ದ್ವೀಪಗಳೋಪಾದಿಯಲ್ಲಿದ್ದವು. ಸಮುದ್ರಭಾಗಗಳಲ್ಲಿ ಬಗೆಬಗೆಯ ಶಿಲಾಕಣಗಳು ನಿಕ್ಷೇಪಗೊಳ್ಳುತ್ತಿದ್ದವು. ಸಮುದ್ರ ಅಷ್ಟು ಆಳವಿರದಿದ್ದರೂ ಅದರ ತಳ ಕುಗ್ಗುತ್ತಲೇ ಇತ್ತು. ಇಂಗ್ಲೆಂಡಿನಲ್ಲಿ ಕೆಳ ಕಾರ್ಬೊನಿಫೆರಸ್ ಶ್ರೇಣಿಗಳನ್ನು ಆವೋನಿಯನ್ ಶ್ರೇಣಿಗಳೆಂದೂ ಹೆಸರಿಸಿದ್ದಾರೆ. ಇವುಗಳ ಮುಖ್ಯ ಪ್ರಸ್ತರಗಳು ಅಸಂಖ್ಯಾತ ಜೀವಾವಶೇಷಗಳಿಂದ ಕೂಡಿದ ಸುಣ್ಣಶಿಲೆ. ಇವನ್ನು ಆಧರಿಸಿ ಇಡೀ ಶ್ರೇಣಿಯನ್ನು ಕೆಳ ಆವೋನಿಯನ್ (ಟೂರ್ನೇಸಿಯನ್) ಮತ್ತು ಮೇಲಿನ ಆವೋನಿಯನ್ (ವೈಸಿಯನ್) ಎಂದು ವಿಭಜಿಸಲಾಗಿದೆ. ಕೆಲವಡೆ ಕಾರಲ್ ದಿಬ್ಬಗಳಿದ್ದ ದಾಖಲೆಗಳಿವೆ. ಉತ್ತರ ಇಂಗ್ಲೆಂಡ್, ಲೇಕ್ ಜಿಲ್ಲೆ, ವಾಯವ್ಯ ಮತ್ತು ದಕ್ಷಿಣ ವೇಲ್ಸ್ ಮತ್ತು ಕೆಂಟ್-ಇಲ್ಲೆಲ್ಲ ಸುಣ್ಣಶಿಲಾಪ್ರಸ್ತರಗಳು ವ್ಯಾಪಿಸಿದ್ದುವು. ವೈಸಿಯನ್ ಹಂತದಲ್ಲಿ ವಾಯವ್ಯ ಇಂಗ್ಲೆಂಡಿನತ್ತ ನೀರಿನ ಮಟ್ಟದಲ್ಲಿ ಏರು ಪೇರುಗಳಾಗಿ ಜೌಗು ಮತ್ತು ಸಮುದ್ರ ಪ್ರದೇಶಗಳು ಅನುಕ್ರಮವಾಗಿ ಆವಿರ್ಭವಿಸುತ್ತ್ತಿದ್ದುವು. ಹೀಗಾಗಿ ಮರಳು ಶಿಲಾಪ್ರಸ್ತರಗಳ ನಡುವೆ ಅಲ್ಲಲ್ಲೆ ಕಲ್ಲಿದ್ದಲಿನ ತೆಳುವಾದ ಸಿರಗಳು ನಿಕ್ಷೇಪವಾದುವು. ನಡುವೆ ಸುಣ್ಣಶಿಲಾ ಪ್ರಸ್ತರಗಳೂ ಜೇಡು ಯೋರ್‍ಡೇಲ್ ಶ್ರೇಣಿಗಳೆಂದು ಕರೆಯಲಾಗಿದೆ. ಮೇಲಿನ ಕಾರ್ಬೊನಿಫೆರಸ್ (ನಮೂರಿಯನ್) ಶಿಲಾಪ್ರಸ್ತರಗಳನ್ನು ಕೆಳಗಿನ ಕಾರ್ಬೊನಿಫೆರಸ್ (ಆವೋನಿಯನ್) ಪ್ರಸ್ತರಗಳಿಂದ ಸುಲಭವಾಗಿ ಗುರುತಿಸಬಹುದು.
 
ಈ ಹಂತಗಳ ನಡುವೆ ಮಂದಗತಿಯ ಭೂ ಚಟುವಟಿಕೆಗಳು ತಲೆದೋರಿ ಆ ಕಾಲದ ಸಮುದ್ರಗಳಲ್ಲಿನ ನಿಕ್ಷೇಪ ಕಾರ್ಯವಿಧಾನವೇ ಬಲುಮಟ್ಟಿಗೆ ಬದಲಾಯಿತು. ಸೇಂಟ್ ಜಾರ್ಜ್‍ಲ್ಯಾಂಡ್ ಮತ್ತು ಪೂರ್ವ ಆಂಗ್ಲಿಯ ಒಂದಾಗಿ ಕ್ರಮೇಣ ಬ್ರಂಬಟ್ ದ್ವೀಪದೊಡನೆ ಐಕ್ಯವಾಗಿ ದಕ್ಷಿಣ ಇಂಗ್ಲೆಂಡ್ ವಿಸ್ತಾರಗೊಂಡಿತು. ಬ್ರಿಸ್ಟಲ್ ಕಾಲುವೆ ಇನ್ನೂ ವಿಸ್ತಾರವಾಗಿತ್ತು. ಇಲ್ಲಿ ಜೇಡು ಮತ್ತು ಮರಳು ಶಿಲಾಪ್ರಸ್ತರಗಳಿಂದಾದ ಕಲ್ಮ್ ಮೆಷರ್ಸ್ ಎಂಬ ಶಿಲಾಶ್ರೇಣಿ ನಿಕ್ಷೇಪಗೊಂಡಿತು. ಪೆನ್ನೈನ್ ಪ್ರದೇಶಗಳಲ್ಲಿ ವಿಸ್ತಾರವಾದ ನದೀಮುಖಜ ಭೂಮಿ ಉಂಟಾಗಿ ಇಡೀ ಉತ್ತರ ಇಂಗ್ಲೆಂಡ್ ಮತ್ತು ಈಶಾನ್ಯ ವೇಲ್ಸನ್ನೂ ಕ್ರಮೇಣ ಆಕ್ರಮಿಸಿಕೊಂಡು ಬಹು ವಿಸ್ತಾರವಾದ ಭೂಭಾಗ ತಲೆದೋರಿತು. ಇದು ನಮ್ಮ ದೇಶದ ಗಂಗಾ-ಬ್ರಹ್ಮಪುತ್ರ ಬಯಲಿನಷ್ಟು ವಿಸ್ತಾರವಾಗಿತ್ತೆಂದು ಊಹಿಸಲಾಗಿದೆ. ಇದರ ಶಿಲಾಸಂಯೋಜನೆ ಏಕರೀತಿಯದಾಗಿರದೆ ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಯಿಸುತ್ತಿತ್ತು. ಆಗ ಶೇಖರವಾದ ದಪ್ಪ ಕಣ ರಚನೆಯ ಮರಳು ಶಿಲೆಗಳನ್ನು ಮಿಲ್‍ಸ್ಟೋನ್‍ಗ್ರಿಟ್ ಎಂದು ಹೆಸರಿಸಿದ್ದಾರೆ. ಭೂಭಾಗದ ಅನೇಕ ಕಡೆ ಕಾಡುಗಳಿದ್ದವು. ಆಗಾಗ ತೋರಿದ ಭೂ ಕುಸಿತಗಳ ಪರಿಣಾಮವಾಗಿ ಸಸ್ಯರಾಶಿ ಆಳದಲ್ಲಿ ಹುದುಗಿ ಮರಳಿನಿಂದ ಮುಚ್ಚಿಹೋಗಿ ಕಲ್ಲಿದ್ದಲ ಪ್ರಸ್ತರಗಳಾಗಿ ಮಾರ್ಪಟ್ಟಿತು. ಇಂದಿನ ಅನೇಕ ಕಲ್ಲಿದ್ದಲ ಗಣಿಗಳು ಈ ಭಾಗದಲ್ಲೇ ಇವೆ. ಕಲ್ಪದ ಅಂತ್ಯದಲ್ಲಿ ತೀವ್ರಗತಿಯ ಭೂ ಚಟುವಟಿಕೆಗಳು ಮತ್ತೆ ತಲೆದೋರಿದುವು, ಇದಕ್ಕೆ ಸಂಬಂಧಿಸಿದ ಪರ್ವತಜನ್ಯ ಶಕ್ತಿಗಳನ್ನು ಆರ್ವೊರಿಕನ್, ಹರ್ಸಿನಿಯನ್, ಆಲ್ಟಾಯಿಡ್ ಮತ್ತು ವಾರ್ಸಿಕನ್ ಎಂದು ವಿವಿಧ ಘಟ್ಟಗಳಾಗಿ ಹೆಸರಿಸಲಾಗಿದೆ. ಇದು ಬಹುಮಟ್ಟಿಗೆ ಭೂಭಾಗಗಳ ಮೇಲ್ಮೈ ಲಕ್ಷಣಗಳನ್ನೇ ಬದಲಾಯಿಸಿದವು. ಯೂರೋಪು ಖಂಡದಲ್ಲಂತೂ ಇವುಗಳ ಹಾವಳಿ ಬಹು ತೀವ್ರವಾಗಿತ್ತು. ಬಹುಶ: ಪ್ಲಿಯೊಸೀನ್ ಕಲ್ಪಕ್ಕೆ ಕೊಂಚ ಮೊದಲು ಈ ಶಕ್ತಿಗಳು ಕುಗ್ಗಿದುವು.
===ಪರ್ಮಿಯನ್ ಮತ್ತು ಟ್ರಯಾಸಿಕ್ ಕಲ್ಪಗಳು : ರ್(10-280 ದಶಲಕ್ಷ ವರ್ಷಗಳ ಹಿಂದಿನ ಕಾಲ)===
ಕಾರ್ಬೊನಿಫೆರಸ್ ಕಲ್ಪದ ಅನಂತರ ಮತ್ತು ಪರ್ವತ ಜನ್ಯ ಕಲ್ಪದಲ್ಲಿ ಇಡೀ ಬ್ರಿಟನ್ನಿನಲ್ಲಿ ಉಷ್ಣವಲಯದ ಮರಳುಗಾಡಿನ ವಾತಾವರಣವಿತ್ತು. ಮರಳು ಶಿಲೆಗಳು ನಿಕ್ಷೇಪಗೊಂಡವು. ಹಲವಾರು ಸರೋವರಗಳಲ್ಲಿ ಲವಣಗಳು ಶೇಖರವಾದುವು. ಚೆಷೈರ್ ಪ್ರಾಂತ್ಯದ ಸಮುದ್ರ ಭಾಗಗಳು ಭೂಮಧ್ಯ ಸಮುದ್ರವಾದ ಟೆಥಿಸಿನೊಡನೆ ಸಂಪರ್ಕ ಹೊಂದಿತ್ತು.
 
ಟ್ರಯಾಸಿಕ್ ಶಿಲಾಪ್ರಸ್ತರಗಳು ಮೀಸೋಜೋಯಿಕ್ ಯುಗದ ಮೊದಲ ಹಂತಕ್ಕೆ ಸೇರಿವೆ. ಪೆನ್ನೈನ್ ಶ್ರೇಣಿ ಈಡನ್ ಮತ್ತು ಕ್ಲಡ್ ಕಣಿವೆಗಳಲ್ಲಿ ಇವು ಅಷ್ಟು ಮಂದವಲ್ಲದ ಪ್ಲಿಸ್ಟೋಸೀನ್ ಹಿಮಕಲ್ಪದ ಪ್ರಸ್ತರಗಳಿಂದ ಆವೃತವಾಗಿದೆ. ಜೂರಾಸಿಕ್ ಕಲ್ಪ (135ರ್-10 ದಶಲಕ್ಷ ವರ್ಷಗಳ ಹಿಂದಿನ ಕಾಲ) : ಈ ಕಲ್ಪದ ಶ್ರೇಣಿಯಲ್ಲಿ ಮರಳು ಶಿಲೆ ಮತ್ತು ಜೇಡು ಶಿಲಾಪ್ರಸ್ತರಗಳಿವೆ. ಇವು ನೀಳವಾದ ಜಾಡಿನಲ್ಲಿ ಡಾಸ್ರ್ಟೆಟ್ ತೀರದಲ್ಲಿ ಪ್ರಾರಂಭವಾಗಿ ನಾರ್ಥ್ಯಾಂಪ್ಟನ್ ಷೈರ್, ಹಂಬರ್ ಕಣಿವೆ. ಪಿಕರಿಂಗ್ ಕಣಿವೆ, ಕ್ಲೀವ್‍ಲ್ಯಾಂಡ್ ಬೆಟ್ಟಗಳು ಮತ್ತು ಉತ್ತರ ಯಾರ್ಕ್‍ಷೈರ್ ಮೈದಾನಗಳಲ್ಲಿ ವಿಸ್ತಾರಗೊಂಡಿವೆ. ಕಲ್ಪದಲ್ಲಿ ಇಂಗ್ಲೆಂಡಿನ ಬಹುಭಾಗ ಭೂಪ್ರದೇಶವಾಗಿತ್ತು.
===ಕ್ರಿಟೇಷಿಯಸ್ ಕಲ್ಪ (65-135 ದಶ ಲಕ್ಷ ವರ್ಷಗಳ ಹಿಂದಿನ ಕಾಲ)===
ನೆಲದ ಮಟ್ಟ ಕುಗ್ಗುತ್ತ ಟೆಥಿಸ್ ಸಮುದ್ರ ಹೆಚ್ಚು ವಿಸ್ತಾರವಾಗುತ್ತ ಹೋಯಿತು ಕ್ರಿಟೇಷಿಯಸ್ (ವೀಲ್ಡನ್) ಪ್ರಸ್ತರಗಳು ಆಗ್ನೇಯ ಇಂಗ್ಲೆಂಡಿನ ತೀರದುದ್ದಕ್ಕೂ ನಿಖರವಾದುವು. ಕಡಲ ತೀರ ಕ್ರಮೇಣ ವೇಲ್ಸಿನತ್ತ ಸರಿಯಿತು. ವೀಲ್ಡ್‍ಜೊಡುಶಿಲೆ ಮತ್ತು ಹಸಿರು ಮರಳುಶಿಲೆ ಈ ಕಾಲದ ಮುಖ್ಯ ನಿಕ್ಷೇಪಗಳು. ಮೇಲಿನ ಕ್ರಿಟೇಷಿಯಸ್ ಕಲ್ಪದ ವೇಳೆಗೆ ಯೂರೋಪಿನ ಬಹುಭಾಗ (ಬ್ರಿಟನ್ನೂ ಸೇರಿ) ಮುಳುಗಡೆಯಾಗಿತ್ತು. ಇದಕ್ಕೆ ಮೂಲಕಾರಣ ಆಲ್ಬಿಯನ್ ಮತ್ತು ಸೈನೊಮೇನಿಯನ್ ಸಮುದ್ರದ ಆಕ್ರಮಣಗಳು. ಹೀಗೆ ಆವೃತವಾದ ಭೂಭಾಗಗಳಲ್ಲಿ ಗಾಲ್ಪ್ ಜೇಡು ಮತ್ತು ಚಾಕ್ (ಸೀಮೆಸುಣ್ಣ) ಶಿಲಾಪ್ರಸ್ತರಗಳು ನಿಕ್ಷೇಪ ಕೊಂಡುವು, ಚಾಕ್ ಪ್ರಸ್ತರಗಳನ್ನು ಸ್ಯಾಲಿಸ್ ಬರಿ, ಡಾರ್ಸೆಟ್, ಚಿಲ್ಟರ್ನ್ ಬೆಟ್ಟಗಳು, ಡೋವರ್ ಮತ್ತು ಉತ್ತರಕ್ಕೆ ಯಾರ್ಕ್‍ಷೈರ್ ವೋಲ್ಡುಗಳ ತನಕ ಗುರುತಿಸಬಹುದು. ಹೀಗೆ ಚಾಕ್ ಬ್ರಿಟನ್ನಿನ ಬಹುಭಾಗವನ್ನು ಆವರಿಸಿತ್ತು.
ಕಲ್ಪದ ಅಂತ್ಯದಲ್ಲಿ ಇಂಗ್ಲೆಂಡಿನ ಬಹುಭಾಗ ಮಟ್ಟಸವಾದ ಚಾಕ್ ಪ್ರಸ್ತರಗಳಿಂದ ಆವೃತವಾಗಿತ್ತು. ಆಲ್ಪಾನ್ ಪರ್ವತಜನ್ಯ ಕಲ್ಪವೂ ಮೊದಲಾಗಿ ಮುಂದೆ ಇಡೀ ಟರ್ಷಿಯರಿ ಯುಗದ ಉದ್ದಕ್ಕೂ ಪಸರಿಸಿತು. ಇದು ಯೂರೋಪಿನಲ್ಲಿ ಬಹು ತೀವ್ರವಾಗಿದ್ದು ಇಂಗ್ಲೆಂಡಿನಲ್ಲಿ ಅದರ ಬಿಸಿ ಮಾತ್ರ ತಟ್ಟಿತ್ತು. ವೀಲ್ಡ್ ಉಬ್ಬು ಮತ್ತು ಥೇಮ್ಸ್ ತಗ್ಗು ಈ ಕಾಲದಲ್ಲೇ ತಲೆದೋರಿದುವು.
===ಪೇಲಿಯೊಸೀನ್, ಇಯೋಸಿನ್, ಮತ್ತು ಅಲಿಗೋಸಿನ್ ಕಲ್ಪಗಳು (25-65 ದಶಲಕ್ಷ ವರ್ಷಗಳ ಹಿಂದಿನ ಕಾಲ)===
"https://kn.wikipedia.org/wiki/ಇಂಗ್ಲೆಂಡ್" ಇಂದ ಪಡೆಯಲ್ಪಟ್ಟಿದೆ