ಜಾಂಬವಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜಾಂಬವಂತ
 
ಚುNo edit summary
೧ ನೇ ಸಾಲು:
'''ಜಾಂಬವಂತ'''ನು ರಾಮಾವತಾರ ಮತ್ತು ಕೃಷ್ಣಾವತಾರಗಳೆರಡರ ಕಾಲದಲ್ಲೂ ಭಾಗವಹಿಸಿದನೆನ್ನಲಾದ ದೀರ್ಘಜೀವಿ; ಅಶ್ವತ್ಥಾಮ, ಹನುಮಂತರಂತೆ ಯುಗಯುಗಾಂತರಗಳವರೆಗೂ ಜೀವಿಸಿದ್ದವ. ಈತನ ಚರಿತ್ರೆ [[ರಾಮಾಯಣ|ರಾಮಾಯಣದಲ್ಲಿ]] ಹೇಗೋ ಹಾಗೆ [[ಹರಿವಂಶ]], [[ಭಾಗವತ ಪುರಾಣ|ಭಾಗವತಗಳಲ್ಲೂ]] ಬಂದಿದೆ.
 
ಜಾಂಬವಂತ ಕರಡಿಯ ಜಾತಿಯವ. ತಾಯಿ ರಕ್ಷಾದೇವಿ, ತಂದೆ ಪ್ರಜಾಪತಿ. ಕಿಷ್ಕಿಂಧೆಯಲ್ಲಿ ವಾನರ ರಾಜನಾದ [[ಸುಗ್ರೀವ|ಸುಗ್ರೀವನ]] ಆಪ್ತಸಚಿವರಲ್ಲಿ ಒಬ್ಬ. [[ಸೀತೆ|ಸೀತಾನ್ವೇಷಣೆಗಾಗಿ]] [[ಹನುಮಂತ|ಹನುಮಂತನ]] ಜೊತೆಯಲ್ಲಿ ಈತನೂ ಹೋಗಿದ್ದನಲ್ಲದೆ ಅವನನ್ನು ಹುರಿದುಂಬಿಸಿ ಸಮುದ್ರಲಂಘನಕ್ಕೆ ಸಿದ್ಧಗೊಳಿಸಿದ. ಅನಂತರ ನಡೆದ ಲಂಕಾಯುದ್ಧದಲ್ಲಿ [[ರಾಮ|ರಾಮನಿಗೆ]] ಸಹಾಯಕನಾಗಿದ್ದ. ಯುದ್ಧದಲ್ಲಿ ಮೂರ್ಛಾಕ್ರಾಂತನಾದ [[ಲಕ್ಷ್ಮಣ|ಲಕ್ಷ್ಮಣನನ್ನು]] ಬದುಕಿಸಲು ಸಂಜೀವನವನ್ನು ತರುವಂತೆ ಹನುಮಂತನಿಗೆ ಸಲಹೆ ಮಾಡಿದವ ಈತನೇ.
 
ಕೃಷ್ಣಚರಿತ್ರೆಯಲ್ಲಿ ಬರುವ ಸ್ಯಮಂತಕೋಪಾಖ್ಯಾನದ ಕಥೆ ಜಾಂಬವಂತನ ಶೌರ್ಯಪ್ರಶಂಸೆಯೇ ಆಗಿದೆ. ಒಮ್ಮೆ [[ಕೃಷ್ಣ|ಶ್ರೀಕೃಷ್ಣ]] ಪ್ರಸೇನನೊಂದಿಗೆ ಬೇಟೆಗೆ ಹೋಗಿದ್ದಾಗ ಒಂದು ಸಿಂಹ ಪ್ರಸೇನನನ್ನು ಕೊಂದು, ಅವನ ಕೊರಳಿನಲ್ಲಿದ್ದ ಸ್ಯಮಂತಕ ಮಣಿಯನ್ನು ಅಪಹರಿಸಿತು. ಜಾಂಬವಂತ ಆ ಸಿಂಹವನ್ನು ಕೊಂದು, ಅದರ ವಶದಲ್ಲಿದ್ದ ರತ್ನವನ್ನು ತನ್ನ ಮಗಳಾದ ಜಾಂಬವತಿಗೆ ತಂದುಕೊಟ್ಟ. ಮುಂದೆ ಮಣಿಗಾಗಿ ಜಾಂಬವಂತನಿಗೂ ಕೃಷ್ಣನಿಗೂ ಬಾಹುಯುದ್ಧ ನಡೆಯಿತು. ಕೃಷ್ಣನೇ ಭಗವಂತನೆಂಬ ಅರಿವಾದಾಗ ಜಾಂಬವಂತ ಮಣಿಯೊಡನೆ ಜಾಂಬವತಿಯನ್ನೂ ಕೃಷ್ಣನಿಗೆ ಒಪ್ಪಿಸಿ ಕೃತಾರ್ಥನಾದ.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಂಬವಂತ}}
"https://kn.wikipedia.org/wiki/ಜಾಂಬವಂತ" ಇಂದ ಪಡೆಯಲ್ಪಟ್ಟಿದೆ