ಇಂಗ್ಲೆಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
೧೦೦ ನೇ ಸಾಲು:
ಭೂ ಇತಿಹಾಸದ ಅಧ್ಯಯನದಲ್ಲಿ ಇಂಗ್ಲೆಂಡಿಗೆ (ವೇಲ್ಸ್ ಸಹ ಸೇರಿ) ಒಂದು ವಿಶಿಷ್ಟ ಸ್ಥಾನವಿದೆ. ಭೂ ಇತಿಹಾಸದ ವಿವಿಧ ಘಟ್ಟಗಳ ಎಲ್ಲ ಶಿಲಾಪ್ರಸ್ತರಗಳನ್ನು ನಾವಿಲ್ಲಿ ನೋಡಬಹುದು. ಬಹುಶ: ಇತರ ಯಾವ ಭಾಗದಲ್ಲೂ ಈ ಬಗೆಯ ಶಿಲಾಶ್ರೇಣಿಗಳನ್ನು ನೋಡಲಾರೆವು. ಆಂಗ್ಲಿಸಿಯಿಂದ ಲಂಡನ್ನಿಗೆ ನೇರ ಹಾದುಹೋದಲ್ಲಿ ಆರ್ಷೇಯ (ಆರ್ಕೀಯನ್) ಶಿಲೆಗಳಿಂದ ಮೊದಲಾಗಿ ಅನುಕ್ರಮವಾಗಿ ಎಲ್ಲ ಭೂಯುಗಗಳ ಶಿಲಾಪ್ರಸ್ತರಗಳು-ಮೆಯೊಸೀನ್ ಕಲ್ಪವನ್ನು ಬಿಟ್ಟು (ಆಗ ಇಡೀ ಇಂಗ್ಲೆಂಡ್ ಭೂ ಪ್ರದೇಶವಾಗಿತ್ತು). ಒಂದಾದ ಮೇಲೊಂದು ಗೋಚರಗೊಳ್ಳುತ್ತ ಇಡೀ ಭೂ ಇತಿಹಾಸದ ಎಲ್ಲ ಪುಟಗಳನ್ನೂ ಒಂದೂ ತಪ್ಪಿಹೋಗದಂತೆ ತಿರುವಿ ಹಾಕಿದ ಅನುಭವವಾಗುತ್ತದೆ. ಹೀಗೆ ಕಂಡು ಬರುವ ವಿವಿಧ ಭೂಯುಗಗಳ ಶಿಲಾಶ್ರೇಣಿಗಳ ಸೂಕ್ಷ್ಮ ಪರಿಚಯವನ್ನಿಲ್ಲಿ ಕೊಟ್ಟಿದೆ.
===ಪ್ರಿಕೇಂಬ್ರಿಯನ್ ಕಲ್ಪ (600 ದಶಲಕ್ಷ ವರ್ಷಗಳಿಂದಲೂ ಹಿಂದೆ)===
ಈ ಕಲ್ಪದ ಶಿಲೆಗಳನ್ನು ಆಂಗ್ಲಿಸಿ, ವೇಲ್ಸಿನ ನೆವಿನ್ ಮತ್ತು ಬಾಡ್ರ್ಸೆ ದ್ವೀಪಗಳ ನಡುವಿನ ಲೆನ್ ಪರ್ಯಾಯದ್ವೀಪ, ಲಾಂಗ್‍ಮಿಂಡ್ ಶ್ರೇಣಿ. ಶೆಕಿನ್ ಬೆಟ್ಟಗಳು, ಚಾರ್ನ್‍ವುಡ್ ಮತ್ತು ಮಾಲ್‍ವೆರ್ನುಗಳಲ್ಲಿ ನೋಡಬಹುದು. ಇವುಗಳಲ್ಲಿ ಬಹುಭಾಗ ನೈಸ್ (ಗೀರು) ಶಿಲೆಗಳು. ಇವು ಶ್ರೇಣಿಯ ಅತ್ಯಂತ ಹಿರಿದಾದ ಶಿಲೆಗಳೂ ಹೌದು. ಮುಂದೆ ತಲೆದೋರಿದ ಭೂ ಚಟುವಟಿಕೆಗಳಿಗೆ ಒಳಗಾಗಿ ನೈಸುಗಳು ಅಲ್ಲಲ್ಲೆ ಮಡಿಸಿ ಹೋಗಿವೆ. ಸವೆದ ಶಿಲೆಗಳ ಮೇಲೆ ಚಾರ್ನ್‍ವುಡ್, ಮಾಲ್‍ವೆರ್ನ್ ಮುಂತಾದ ಕಡೆಗಳಲ್ಲಿ ಜ್ವಾಲಾಮುಖಜ ಶಿಲಾಪ್ರಸ್ತರಗಳಿವೆ. ಲಾಂಗ್‍ಮಿಂಡ್ ಮತ್ತು ಇತರ ಕೆಲವಡೆಗಳಲ್ಲಿ ಕಂಡುಬರುವ ಗ್ರೀಟ್ ಮತ್ತು ಜೇಡು ಶಿಲಾಪ್ರಸ್ತರಗಳು ಈ ಯುಗದ ಜಲಜಶಿಲೆಗಳು[[ಜಲಜಶಿಲೆ]]ಗಳು ಸ್ಕಾಟ್ಲೆಂಡಿನ ಟಾರಿಡೋನಿಯನ್ ಜಲಜಶಿಲೆಗಳಿಗೆ ಸರಿಸಮವೆಂದು ಪರಿಗಣಿತವಾಗಿವೆ.
ಒಟ್ಟಿನಲ್ಲಿ ಈ ಕಲ್ಪದ ಶಿಲೆಗಳು ಇಡೀ ಇಂಗ್ಲೆಂಡ್-ವೇಲ್ಸ್ ಉದ್ದಕ್ಕೂ ಅಂತರ್ಗತವಾಗಿದ್ದು ಅವುಗಳ ಮೇಲೆ ಇತರ ಭೂಯುಗಗಳ ಶಿಲಾಪ್ರಸ್ತರಗಳು ನಿಕ್ಷೇಪಗೊಂಡುವೆಂದೂ ಅಭಿಪ್ರಾಯಪಡಲಾಗಿದೆ. ಬಹುಶಃ ಈ ಭೂಭಾಗ ಉತ್ತರದಲ್ಲಿನ ಶಾಶ್ವತ ಭೂಖಂಡವಾಗಿದ್ದ ಅಟ್ಲಾಂಟಿಸ್ಸಿನ ಆಗ್ನೇಯ ತೀರಪ್ರದೇಶವಾಗಿತ್ತೆಂದೂ ಭೂ ವಿಜ್ಞಾನಿಗಳ ಊಹೆ. ಈ ವಿಶೇಷ ಸನ್ನಿವೇಶದ ಪರಿಣಾಮವಾಗಿಯೇ ಇಂಗ್ಲೆಂಡಿನಲ್ಲಿ ಭೂ ಇತಿಹಾಸದ ಎಲ್ಲ ಹಂತಗಳ ಶಿಲೆಗಳನ್ನೂ ನೋಡಲು ಸಾಧ್ಯವಾಗಿದೆ.
ಕೇಂಬ್ರಿಯನ್ ಕಲ್ಪ (500-600 ದಶಲಕ್ಷ ವರ್ಷಗಳ ಹಿಂದಿನ ಕಾಲ) : ಪ್ರಿಕೇಂಬ್ರಿಯನ್ ಕಲ್ಪದ ಭೂಭಾಗದ ಸವೆತ ಮತ್ತು ಭೂ ಚಟುವಟಿಕೆಗಳ ಪ್ರಭಾವದಿಂದ ಈ ಕಲ್ಪದಲ್ಲಿ ಇಂಗ್ಲೆಂಡ್ ಅಷ್ಟು ಆಳವಿರದ ಸಮುದ್ರವಾಗಿ ಮಾರ್ಪಟ್ಟಿತು. ಇಲ್ಲಿ ಎಂದಿನಂತೆ ವಿವಿಧ ಜನಜಶಿಲೆಗಳ ಸಂಚಯನ ಮೊದಲಾಯಿತು. ಬಲು ವಿಸ್ತಾರವಾದ ಪ್ರದೇಶದಲ್ಲಿ ದಪ್ಪ ಮರಳು ಶಿಲೆಗಳೂ ಮತ್ತು ಪೆಂಟಿ ಶಿಲೆಗಳೂ ಕೊಂಚ ಆಳವಾದ ಭಾಗಗಳಲ್ಲಿ ಸುಣ್ಣ ಶಿಲೆಯೂ ಶೇಖರಗೊಂಡು ಸಮುದ್ರದ ತಳ ಕ್ರಮೇಣ ಕುಗ್ಗುತ್ತ ಹೋಯಿತು. ಮುಂದೆ ಜೇಡುಶಿಲಾಪ್ರಸ್ತರಗಳೂ ನಿಕ್ಷೇಪಗೊಂಡುವು. ಈ ಬಗೆಯ ಜಲಜಶಿಲಾಪರಂಪರೆ ಮುಂದೆ ಅನೇಕ ಹಂತಗಳಲ್ಲಿ ತಲೆದೋರಿತು. ಹೀಗಾಗಿ ಯುಗ ಮುಂದುವರೆದಂತೆಲ್ಲ ವೇಲ್ಸ್ ಮತ್ತು ಇಂಗ್ಲೆಂಡಿನ ಬಹುಭಾಗ ಜಲಾಶಯವಾಗಿ ಪರಿವರ್ತಿತವಾಗಿ ನಿಕ್ಷೇಪಗಳು ತಲೆದೋರಿದುವು. ಮೆರಿಯೊನೆತ್ ಮತ್ತು ಡೆನ್‍ಬಿಗ್‍ಷೈರುಗಳ ಕೇಂಬ್ರಿಯನ್ ಶಿಲಾಶ್ರೇಣಿಗಳ ಮುಂದೆ 16,000' ಗಳನ್ನೂ ಮೀರಿದೆ. ಮೆರಿಯೊನೆತ್ತಿನ ಹಾರ್ಲೆಕ್ ಉಬ್ಬಿನಲ್ಲಿ ಈ ಕಲ್ಪದ ಶಿಲೆಗಳು ಬಲು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿವೆ.
"https://kn.wikipedia.org/wiki/ಇಂಗ್ಲೆಂಡ್" ಇಂದ ಪಡೆಯಲ್ಪಟ್ಟಿದೆ