ಕರ್ನಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
Added template {{wikify}}
 
೧ ನೇ ಸಾಲು:
{{wikify}}
'''ಕರ್ನಲ್''': ಸೈನ್ಯದಲ್ಲಿ ಒಂದು ಉನ್ನತ ದರ್ಜೆ. ಇದು [[ಲೆಫ್ಟೆನೆಂಟ್ ಕರ್ನಲ್]] ದರ್ಜೆಗಿಂತ ಮೇಲಿನದು ಮತ್ತು [[ಬ್ರಿಗೇಡಿಯರ್]] ದರ್ಜೆಗಿಂತ ಕೆಳಗಿನದು. ಲೆಫ್ಟೆನೆಂಟ್ ಕರ್ನಲ್ ಆದವನು ಪದಾತಿ ಸೈನ್ಯದ ಒಂದು [[ಬಟಾಲಿಯನ್|ಬಟಾಲಿಯನ್ನಿಗೆ]] ಅಧಿನಾಯಕ. ಕರ್ನಲುಗಳನ್ನು [[ರೆಜಿಮೆಂಟ್| ರೆಜಿಮೆಂಟಿಗೆ]] ಹೊರತಾಗಿರುವಂತೆ ಸೇನಾಕೇಂದ್ರದ ಸಹಾಯಕ ವರ್ಗದಲ್ಲಾಗಲಿ ಬ್ರಿಗೇಡಿನಲ್ಲಾಗಲಿ ಕಮ್ಯಾಂಡಿನಲ್ಲಾಗಲಿ ಕಾರ್ಯಕ್ಷೇತ್ರದಲ್ಲಿ ನಿಯೋಜಿಸುತ್ತಾರೆ. ಕರ್ನಲ್ ಜನರಲ್ ಎಂಬ ಪದವನ್ನು ಹಿಂದೆ ಅನೇಕ ಸೈನ್ಯಗಳಲ್ಲಿ ಈಗಲೂ ಜರ್ಮನ್ ಸೇನೆಯಲ್ಲಿ ಆ ದರ್ಜೆಯ ಶ್ರೇಷ್ಠತೆಯ ಸಲುವಾಗಿ ಬಳಸುತ್ತಾರೆ. ಸಂಯಕ್ತ [[ರಾಷ್ಟ್ರ|ರಾಷ್ಟ್ರಗಳ]] ಸೇನೆಯಲ್ಲಿ ಅಧಿಕಾರಿಗಳು ಜ್ಯೇಷ್ಠಾನುಕ್ರಮದಲ್ಲಿ ಬಡತಿಯನ್ನು ಪಡೆಯಬಹುದಾದ ಶ್ರೇಷ್ಠತಮ ದರ್ಜೆ ಕರ್ನಲ್ ಪದವಿ. [[ಭಾರತ]] ದೇಶದಲ್ಲಿ ಲೆಫ್ಟೆನೆಂಟ್ ಕರ್ನಲುಗಳನ್ನು ಮೇಜರುಗಳಿಂದಲೂ ಕರ್ನಲಗಳನ್ನು ಲೆಫ್ಟೆನೆಂಟ್ ಕರ್ನಲುಗಳಿಂದಲೂ ಆರಿಸಿಕೊಳ್ಳುತ್ತಾರೆ. ಮೇಜರುಗಳು ತಮ್ಮ ದರ್ಜೆಗೆ ಜ್ಯೇಷ್ಠಾನುಕ್ರಮದಿಂದ ಏರುತ್ತಾರೆ. ಕೆಲವು ರೆಜಿಮೆಂಟುಗಳು ತಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಕೋರಿದಾಗ ಜನರಲ್ ಪದವೀಧರರಲ್ಲಿ ಕೆಲವರನ್ನು ಕರ್ನಲ್ ಕಮಾಂಡಂಟರನ್ನಾಗಿ ನೇಮಕಮಾಡುತ್ತಾರೆ.
 
"https://kn.wikipedia.org/wiki/ಕರ್ನಲ್" ಇಂದ ಪಡೆಯಲ್ಪಟ್ಟಿದೆ