ವಿಲ್ಫಿ ರೆಬಿಂಬಸ್

ಕರಾವಳಿ ಕರ್ನಾಟಕದ ಕೊಂಕಣಿ ಗಾಯಕ

ಕೊಂಕಣ್ ಕೋಗುಳ್ ಎಂದೇ ಖ್ಯಾತಿ ಪಡೆದ ವಿಲ್‌ಫ್ರೆಡ್ ಜೆರಾಲ್ಡ್ ರೆಬಿಂಬಸ್ ಅವರು ಕರಾವಳಿ ಕರ್ನಾಟಕದ ಪ್ರಸಿದ್ಧ ಕೊಂಕಣಿ ಭಾಷೆಯ ಗಾಯಕ. ಕರ್ನಾಟಕ ಮಾತ್ರವಲ್ಲ, ವಿದೇಶಗಳಲ್ಲಿಯೂ ಕೊಂಕಣಿ ಭಾಷೆಯ ಕಂಪನ್ನು ಪಸರಿಸಿದ ಮಂಗಳೂರಿನ ಕಲಾವಿದ.

ವಿಲ್ಫಿ ರೆಬಿಂಬಸ್
ಜನ್ಮನಾಮ೧೯೪೨, ೨ ಎಪ್ರಿಲ್
ಮರಣ೯ ಮಾರ್ಚ್, ೨೦೧೦
ವೃತ್ತಿಗಾಯಕ
ಸಕ್ರಿಯ ವರ್ಷಗಳು೧೯೫೬-೨೦೦೮
ಹೆಸರುವಾಸಿಯಾದದ್ದುಕೊಂಕಣ್ ಕೋಗುಳ್
ಬಾಳ ಸಂಗಾತಿ(ಗಳು)ಮೀನಾ ಗ್ರೇಶಿಯಾ ರೆಬಿಂಬಸ್
ಮಕ್ಕಳುವಿಶ್ವಾಸ್ ರೆಬಿಂಬಸ್, ವೀಣಾ ರೆಬಿಂಬಸ್ ಪಾಯ್ಸ್
ಪೋಷಕರು(s)ತಂದೆ- ಲ್ಯಾಂಡಲಿನ್ ರೆಬಿಂಬಸ್, ತಾಯಿ- ಮಗ್ದಲಿನಾ ಮೆಂಡೋನ್ಸಾ
ಪುರಸ್ಕಾರಗಳುರಾಜ್ಯೋತ್ಸವ ಪ್ರಶಸ್ತಿ

ವಿದ್ಯಾಭ್ಯಾಸ ಮತ್ತು ವೈಯಕ್ತಿಕ ಜೀವನಸಂಪಾದಿಸಿ

ವಿಲ್ಫಿ ರೆಬಿಂಬಸ್ ಅವರು ಹುಟ್ಟಿದ್ದು ಎಪ್ರಿಲ್ ೨, ೧೯೪೨ರಂದು ಮಂಗಳೂರಿನಲ್ಲಿ ಸಾಮಾನ್ಯ ಮಂಗಳೂರು ಕ್ಯಾಥೊಲಿಕ್ ಕುಟುಂಬದಲ್ಲಿ. ತಂದೆ ಲ್ಯಾಂಡಲಿನ್ ರೆಬಿಂಬಸ್, ತಾಯಿ ಮಗ್ದಲಿನಾ ಮೆಂಡೋನ್ಸಾ. ವಿಲ್ಫಿಯವರ ತಂದೆ ಕೇರಳದ ಕಾನ್ಹಂಗಾಡ್ ಮೂಲದವರು ಮತ್ತು ತಾಯಿ ಗೋವಾ ರಾಜ್ಯದವರು.

ವಿಲ್ಫಿ ರೆಬಿಂಬಸ್ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಂಗಳೂರಿನ ಮೀಲಾಗ್ರಿಸ್ ಹೈಸ್ಕೂಲಿನಲ್ಲಿ ಪೂರೈಸಿ. ನಂತರ ಅವರು ಮೆಕ್ಯಾನಿಕಲ್ ಕೋರ್ಸನ್ನು ಅಭ್ಯಾಸ ಮಾಡಿದರು.

ವಿಲ್ಫಿಯವರು ಶಾಲಾದಿನಗಳಲ್ಲಿಯೇ ಪ್ರತಿಭಾವಂತ ಗಾಯಕರಾಗಿ ಗುರುತಿಸಲ್ಪಟ್ಟವರು ಮತ್ತು ಹಲವಾರು ಸ್ಪರ್ಧೆಯಲ್ಲಿ ಪಾರಿತೋಷಕಗಳನ್ನು ಗೆದ್ದಿದ್ದರು. ತಮ್ಮ ೧೪ನೆ ವಯಸ್ಸಿನಲ್ಲಿಯೇ ಕೊಂಕಣಿ ಗೀತೆಗಳಿಗೆ ರಾಗ ಸಂಯೋಜಿಸಲು ಆರಂಭಿಸಿದ್ದರು ೧೫ನೆಯ ವಯಸ್ಸಿಗೆ ತಮ್ಮ ಮೊದಲ ಕೊಂಕಣಿ ನಾಟಕ ಪೊಯ್ಶಾಂಚೊ ಸಂಸಾರ್ (ದುಡ್ಡಿನ ಜಗತ್ತು) ಅನ್ನು ಬರೆದು ಸಂತ ಜೊಸೆಫ್ ನಾಟಕ ಸಂಘದ ಮೂಲಕ ರಂಗಕ್ಕೆ ತಂದಿದ್ದರು. ಆ ಬಳಿಕ ಸುಮಾರು ೮ ಕೊಂಕಣಿ ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು. ತಮ್ಮದೆ ಆದ ಹಾಡುಗಾರ ತಂಡ(ಯುನೈಟೆಡ್ ಯಂಗ್‌ಸ್ಟರ್ಸ್ ಮ್ಯೂಸಿಕ್ ಪಾರ್ಟಿ- ಪ್ರಸ್ತುತ ಯುನೈಟೆಡ್ ಯಂಗ್‌ಸ್ಟರ್ಸ್ ಕಲ್ಚರಲ್ ಅಸೋಸಿಯೇಷನ್ ಎಂದು ಹೆಸರಾಗಿದೆ) ವನ್ನು ೧೯೫೯ರಲ್ಲಿ ಸ್ಥಾಪಿಸುವಾಗ ವಿಲ್ಫಿ ರೆಬಿಂಬಸ್ ಅವರ ವಯಸ್ಸು ಕೇವಲ ೧೭ ವರ್ಷ !

ಹಾಡುಗಾರಿಕೆಯ ಹೊರತಾಗಿ ವಿಲ್ಫಿಯವರು, ಶಾಲಾದಿನಗಳಲ್ಲಿ ಉತ್ತಮ ಕಬಡ್ಡಿ ಆಟಗಾರರೂ ಸಹ ಆಗಿದ್ದರು.

ವಿಲ್ಫಿಯವರ ವಿವಾಹವು ಮೀನಾ ಗ್ರೇಶಿಯಾ ರೆಬಿಂಬಸ್ (ಜನನ: ನವಂಬರ್ ೨೧, ೧೯೪೬) ಅವರ ಜೊತೆಗೆ ಜನವರಿ ೨೫, ೧೯೭೦ರಂದು ನಡೆಯಿತು. ಮೀನಾ ರೆಬಿಂಬಸ್ ಅವರು ಸಹಾ ವಿಲ್ಫಿಯವರಂತೆ ಚಿಕ್ಕ ವಯಸಿನಲ್ಲಿಯೇ ಹಾಡಲು ಪ್ರಾರಂಭಿಸಿದ್ದರು. ವಿಲ್ಫಿಯವರೊಂದಿಗಿನ ಮೀನಾ ಅವರ ಗಾನಯಾನ ಮೊದಲ ಬಾರಿಗೆ ಆರಂಭವಾಗಿದ್ದು ೧೯೬೩ರಲ್ಲಿ. ವಿಲ್ಫಿಯವರ ಯುನೈಟೆಡ್ ಯಂಗ್zಸ್ಟರ್ಸ್ ಬಳಗದವರು ಪ್ರಸ್ತುತ ಪಡಿಸಿದ ದೋತ್ ಮಕನಕ ನಾಟಕದಲ್ಲಿ ಹಿನ್ನೆಲೆ ಗಾಯಕಿಯಾಗಿ ಕಾಣಿಸಿಕೊಡರು. ಆಗ ಮೀನಾರವರ ವಯಸು ೧೬ ವರ್ಷ.

ವಿಲ್ಫಿಯವರದು ಸಂಗೀತ ಕುಟುಂಬವೆಂದೇ ಹೇಳಬಹುದು. ಪತ್ನಿಯ ತಂದೆ ಗಿಟಾರ್ ನುಡಿಸುವ ಜೊತೆಗೆ ಇತರರಿಗೂ ಸಹ ಗಿಟಾರ್ ಕಲಿಸುತ್ತಿದ್ದರು. ಪತ್ನಿ ಮೀನಾ ಗಾಯಕಿ ಮತ್ತು ಸಂಯೋಜಕಿ ಕೊಂಕಣ್ ಮೈನಾ ಎಂದೇ ಪ್ರಸಿದ್ದರಾಗಿದ್ದಾರೆ. ಪುತ್ರ ವಿಶ್ವಾಸ್ ರೆಬಿಂಬಸ್ ಮತ್ತು ಪುತ್ರಿ ವೀಣಾ ರೆಬಿಂಬಸ್ ಪಾಯ್ಸ್ ತಂದೆಯ ಬಳಗದಲ್ಲಿ ಗಾಯಕರಾಗಿದ್ದಾರೆ.

ಸಾಧನೆಗಳುಸಂಪಾದಿಸಿ

೧೯೫೬ರಲ್ಲಿ ಪ್ರಾರಂಭವಾದ ವಿಲ್ಫಿಯವರ ಕಲಾ ಸೇವೆಯಿಂದಾಗಿ ಕೊಕಣಿ ಭಾಷಾ ಸಂಗೀತ ಕ್ಷೇತ್ರದಲ್ಲಿ ಹೊಸದೊಂದು ಮಜಲು ತೆರೆದುಕೊಂಡಿತು ಎನ್ನಬಹುದು. ೫೦ ವರ್ಷಗಳಲ್ಲಿ ವಿಲ್ಫಿಯವರು ಸುಮಾರು ೩೦೦೦ಕ್ಕಿಂತ ಹೆಚ್ಚು ಕೊಂಕಣಿ ಗೀತೆಗಳಿಗೆ ಸಂಗೀತ ಸಂಯೋಜಿಸಿದರು. ೫೦೦ಕ್ಕಿಂತ ಹೆಚ್ಚು ಕಲಾ ಪ್ರದರ್ಶನ ನೀಡಿದರು. ಸುಮಾರು ೨೪೮ ವಿಲ್ಫಿ ನೈಟ್ಸ್ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನಡೆಸಿಕೊಟ್ಟರು. ಇನ್ನು, ೪೦ರಷ್ಟು ಸಂಗೀತದ ಕೆಸೆಟ್‌ಗಳು, ಭಕ್ತಿಗೀತೆಯ ೬ ಕೆಸೆಟ್‌ಗಳು, ೪೦ರಷ್ಟು ಸಿಡಿ ಡಿಸ್ಕ್‌ಗಳು, ೧ ವಾದ್ಯ ಸಂಗೀತದ ಸಿಡಿ ಅಲ್ಲದೆ, ವಿಲ್ಫಿಯವರು ಹಾಡಿದ ಆಯ್ದ ಹಾಡುಗಳನ್ನು ಒಳಗೊಂಡ ೯ ಆವೃತ್ತಿಗಳ ಪುಸ್ತಕಗಳನ್ನು ಹೊರಬಂದಿವೆ. ಮಾತ್ರವಲ್ಲ, ೪೦ರಷ್ಟು ಸಂಗೀತದ ಕೆಸೆಟ್‌ಗಳು, ಭಕ್ತಿಗೀತೆಯ ೬ ಕೆಸೆಟ್‌ಗಳು ಮತ್ತು ನಾಲ್ಕು ಸಿನಿಮಾ ಹಾಡುಗಳನ್ನು ಒಳಗೊಂಡ ಕೋಗುಳ್ ಗಾಯ್ತಾ ಹೆಸರಿನ ಸಮಗ್ರ ಪುಸ್ತಕವೂ ಸಹ ಹೊರಬಂದಿದೆ.

೧೯೫೯ರಿಂದ ೧೯೭೦ರ ಅವಧಿಯಲ್ಲಿ, ಕರಾವಳಿ ಕರ್ನಾಟಕ ಮಾತ್ರವಲ್ಲದೆ ದೂರದ ಮುಂಬೈ, ಪಾಶ್ಚಾತ್ಯ ಮತ್ತು ಗಲ್ಫ್ ದೇಶಗಳಲ್ಲಿ, ಕೆನಡಾದಲ್ಲಿ ಸಹ ವಿಲ್ಫಿಯವರ ಸಂಗೀತ ಕಾರ್ಯಕ್ರಮಗಳು ಪ್ರದರ್ಶನ ಕಂಡಿವೆ.

ಮಂಗಳೂರು ಮತ್ತು ಬೆಂಗಳೂರು ಆಕಾಶವಾಣಿಯಲ್ಲಿ, ಬೆಂಗಳೂರು ಮತ್ತು ದೆಹಲಿ ದೂರದರ್ಶನಗಳಲ್ಲಿ ವಿಲ್ಫಿಯವರ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಪುರಸ್ಕಾರ ಮತ್ತು ಸಮ್ಮಾನಗಳುಸಂಪಾದಿಸಿ

೧೯೭೧ ರಲ್ಲಿ ಕೊಂಕಣ್ ಕೋಗುಳ್ ಬಿರುದು

೧೯೯೧ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಇಂಟರ್‌ನ್ಯಾಶನಲ್ ಓರಿಯೆಂಟೇಶನ್ ಸೆಂಟರ್ ಆಫ್ ಅಮೇರಿಕಾ ಸಂಸ್ಥೆಯಿಂದ ಅವಾರ್ಡ್ ಆಫ್ ರೆಕಗ್ನಿಶನ್

೧೯೯೨ರಲ್ಲಿ ಅಬುಧಾಬಿ ಕೊಂಕಣಿ ಸಂಸ್ಥೆಗಳಿಂದ ಸಂಗೀತ ಚಕ್ರವರ್ತಿ ಬಿರುದು

೧೯೯೬ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಥಮ ವರ್ಷದ ಕೊಂಕಣಿ ಸಂಗೀತ ಪುರಸ್ಕಾರ

೧೯೯೮ರಲ್ಲಿ ನಮ ತುಳುವೆರ್- ದುಬೈ ಸಂಸ್ಥೆಯವರು ಕೊಡಮಾಡಿದ ತುಳುನಾಡ ಕೋಗಿಲೆ ಪ್ರಶಸ್ತಿ

೧೯೯೯ರಲ್ಲಿ ಕುವೈಟ್ ಕೆನರಾ ವೆಲ್‌ಫೆರ್ ಅಸೋಸಿಯೇಶನ್ ಸಂಸ್ಥೆಯವರು ಕೊಡಮಾಡಿದ ಕೊಕಣಿ ಕಲಾರತ್ನ

ಇವಿಷ್ಟೇ ಅಲ್ಲದೇ ಹಲವು ಮರಣೋತ್ತರ ಪುರಸ್ಕಾರಗಳು ವಿಲ್ಫಿ ರೆಬಿಂಬಸ್‌ರನ್ನು ಅರಸಿಕೊಂಡು ಬಂದಿವೆ.

ಮರಣಸಂಪಾದಿಸಿ

ವಿಲ್ಫಿ ರೆಬಿಂಬಸ್ ಅವರು ೯ ಮಾರ್ಚ್ ೨೦೧೦ ರಂದು ೬೭ನೆಯ ವಯಸ್ಸಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮರಣ ಹೊಂದಿದರು. ೧ ವರ್ಷದಿಂದ ಅವರು ಶ್ವಾಸಕೋಶದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು.

ಛಾಯಾಂಕಣಸಂಪಾದಿಸಿ

http://www.wilfyrebimbus.com/index.php/gallery

ಉಲ್ಲೇಖಗಳುಸಂಪಾದಿಸಿ

http://www.wilfyrebimbus.com/index.php

http://www.konkaniacademy.org/awards-recognition?start=6

http://www.wilfyrebimbus.com/index.php/awards

https://www.deccanherald.com/content/60039/wilfy-rebimbus-works-shall-not.html

https://www.deccanherald.com/content/57220/konkani-singer-wilfy-rebimbus-no.html

https://www.daijiworld.com/chan/musicDisplay.aspx?articlesID=2214

https://www.youtube.com/watch?v=rXpLdx99BT4

https://www.youtube.com/watch?v=eKQE4GOxXl8

ವಿಲ್ಫಿಯವರ ಹಾಡುಗಳನ್ನು ಇಲ್ಲಿ ಕೇಳಿಸಂಪಾದಿಸಿ

http://canaraworld.com/music/89-konkani-songs-late-wilfy-rebimbus

https://gaana.com/artist/wilfy-rebimbus