ಕಾವ್ಯ,ಲಲಿತ ಪ್ರಬಂದ ಸಣ್ಣಕಥೆಗಳಂಥ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿರುವ ಡಾ.ವಿನಯ ಪ್ರಸ್ತುತ ಕನ್ನಡದ ಸ್ಥಿತಿಗಳನ್ನು ಸೂಕ್ಶ್ಮ ಗ್ರಹಿಕೆಯಲ್ಲಿ ಬರವಣಿಗೆಗೆ ಇಳಿದಿದ್ದಾರೆ.ಉತ್ತರ ಕನ್ನಡ ಮಾಸ್ಕೇರಿಯಲ್ಲಿ ಜನಿಸಿದ ಇವರು ಹಾವೇರಿ ಜಿಲ್ಲೆಯ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಸವಣೂರಿನಲ್ಲಿ ವ್ರತ್ತಿಪರ ಬದುಕನ್ನು ಆರಂಭಿಸಿ ಪ್ರಸ್ತುತ ಮಾಹಾವಿದ್ಯಾಲಯ ಆಳ್ನಾವರದಲ್ಲಿ ಕನ್ನಡ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ.ಪದವಿ ಹಾಗು ಕನ್ನಡದಲ್ಲಿ ಮಹಿಳಾ ಸಾಹಿತ್ಯದ ವಿಕಾಸ ಘಟ್ಟಗಳು ಸಂಷೊದನಾ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ನೂರು ಗೋರಿಯ ದೀಪ ಇವರ ಕ್ರತಿಗಳು.ಪು.ತಿ.ನ ಕಾವ್ಯ ಪ್ರಶಸ್ತ್ತಿ ಸಾರಂಗ ಮಟ ಫ್ರಾಶ್ಃಆಶ್ಟೀ ದೊರಕಿವೆ.ಊರ ಒಳಗಣ ಬಯಲು ಕ್ರತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೦೮ನೇ ಸಾಲಿನ ಸಣ್ಣ ಕಥೆ ಪ್ರಕಾರದ ಪುಸ್ತಕ ಬಹುಮಾನವನ್ನು ಪಡೆದಿದೆ.ಇವರು ಸೂಕ್ಶ್ಮ ಸಂವೇದನೆಯ ಕವಯತ್ರಿ ಮಾತ್ರವಲ್ಲ,ಒಳ್ಳೆಯ ಕತೆಗಾರ್ತಿ ಹಾಗು ಒಳ್ಳೆಯ ಚಿಂತನಯುಳ್ಳವರು.ಹೆಣ್ಣಿನಒಳತೊಟ ಸಮಸ್ಯೆ ಸ್ಪಂದನಗಳನ್ನು ಸಶಕ್ತವಾಗಿ ದಾಖಲಿಸುತ್ತವೆ.

"https://kn.wikipedia.org/w/index.php?title=ವಿನಯಾ&oldid=685954" ಇಂದ ಪಡೆಯಲ್ಪಟ್ಟಿದೆ