ವಿದ್ಯುತ್ ಮಂಡಲಗಳು
ವಿದ್ಯುತ್ ಮಂಡಲಗಳಲ್ಲಿ ಎರಡು ವಿಧಗಳಿವೆ.
ಸರಳ ವಿದ್ಯುತ್ ಮಂಡಲಗಳು(simple electrical circuits):
ಬದಲಾಯಿಸಿವಿದ್ಯುತ್ ಪ್ರವಾಹದ ವಾಹಕ ಪಥದಲ್ಲಿ ಒಂದು ವಿದ್ಯುತ್ ಆಕರ, ಒಂದು ವಿದ್ಯುತ್ ಉಪಕರಣ ಮತ್ತು ಒಂದು ಸ್ವಿಚ್ ನ ಆವೃತ ಜೋಡಣೆಯನ್ನು "'ಸರಳ ವಿದ್ಯುತ್ ಮಂಡಲ"' ಎನ್ನುವರು. ಉದಾಹರಣೆ: ಟಾರ್ಚ್ ಸರಳ ವಿದ್ಯುತ್ ಮಂಡಲವನ್ನು ಹೊಂದಿದೆ.
ಸಂಕೀರ್ಣ ವಿದ್ಯುತ್ ಮಂಡಲಗಳು(complex electrical circuits):
ಬದಲಾಯಿಸಿಸರಳ ವಿದ್ಯುತ್ ಮಂಡಲಗಳಲ್ಲಿ ಅತ್ಯಂತ ಸರಳ ವಿದ್ಯುತ್ ಉಪಕರಣಗಳನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಬಳಸಬಹುದು. ಸಾಮಾನ್ಯವಾಗಿ ಮನೆ,ಅಂಗಡಿ,ಕಾರ್ಖಾನೆ,ಕಛೇರಿ ಹಾಗೂ ಹೊಲ-ಗದ್ದೆಗಳಲ್ಲಿ ಅನೇಕ ಸಂಕೀರ್ಣ ವಿದ್ಯುತ್ ಸಾಧನ ಸಲಕರಣೆಗಳನ್ನು ಬಳಸಲಾಗುವುದು. ನಮ್ಮ ಅಗತ್ಯತೆಗೆ ಅನುಗುಣವಾಗಿ ಬಳಸಲು ಅವುಗಳಿಗೆ ಸಂಕೀರ್ಣ ವಿದ್ಯುತ್ ಮಂಡಲಗಳು ಅಗತ್ಯ. ಸಂಕೀರ್ಣ ವಿದ್ಯುತ್ ಮಂಡಲಗಳು, ಅನೇಕ ವಿದ್ಯುತ್ ಉಪಕರಣಗಳು, ಆಕರಗಳು, ಸ್ವಿಚ್ ಗಳು, ಸಾಕೆಟ್ ಗಳು, ಪ್ಲಗ್ ಗಳು ಮುಂತಾದ ಘಟಕಗಳನ್ನು ಒಳಗೊಂಡಿರುತ್ತವೆ. ಸಂಕೀರ್ಣ ವಿದ್ಯುತ್ ಮಂಡಲಗಳನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು.
- ಸರಣಿ ಮತ್ತು ಸಮಾಂತರ ವಿದ್ಯುತ್ ಮಂಡಲಗಳು.
- ಗೃಹ ವಿದ್ಯುತ್ ಮಂಡಲಗಳು.
- ವಾಣಿಜ್ಯ ವಿದ್ಯುತ್ ಮಂಡಲಗಳು.
ಸರಣಿ ಮತ್ತು ಸಮಾಂತರ ವಿದ್ಯುತ್ ಮಂಡಲಗಳು(Series and parallel electrical circuits):
ಬದಲಾಯಿಸಿವಿದ್ಯುತ್ ಸಾಧನ ಸಲಕರಣೆಗಳನ್ನು ಸಾಮಾನ್ಯವಾಗಿ ಎರಡು ರೀತಿಯ ಸಂಕೀರ್ಣ ಮಂಡಲಗಳಲ್ಲಿ ಬಳಸುವರು.ಅವುಗಳೆಂದರೆ ಸರಣಿ ವಿದ್ಯುತ್ ಮಂಡಲ ಮತ್ತು ಸಮಾಂತರ ವಿದ್ಯುತ್ ಮಂಡಲ.
ಸರಣಿ ಸಂಪರ್ಕದಲ್ಲಿ ವಿದ್ಯುತ್ ಕೋಶಗಳು (cells in series):
ಬದಲಾಯಿಸಿ- ವಿದ್ಯುತ್ ಸಾಧನ ಸಲಕರಣೆಗಳನ್ನು ಸರಪಳಿಯಂತೆ ಒಂದರ ಋಣಾಗ್ರ(-)ವು ಮತ್ತೊಂದರ ಧನಾಗ್ರದೊಂದಿಗೆ(+) ಸಂಪರ್ಕಿಸುವಂತೆ ಜೋಡಿಸಲಾಗುತ್ತದೆ.
- ವಿದ್ಯುತ್ ಉಪಕರಣಗಳ ನಡುವೆ ವಿಭವವು ಹಂಚಿಕೆಯಾಗುವುದರಿಂದ ಅವು ತಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಲಾರವು.
- ಮಂಡಲ ಪೂರ್ಣಗೊಂಡಾಗ ಎಲ್ಲಾ ಉಪಕರಣಗಳೂ ಒಟ್ಟಿಗೆ ಕಾರ್ಯಾರಂಭ ಮಾಡುತ್ತವೆ,ಮಂಡಲ ತೆರೆದಾಗ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸುತ್ತವೆ. ಆದ್ದರಿಂದ ಇವು ಪರಸ್ಪರ ಅವಲಂಬಿತವಾಗಿವೆ.
ಸಮಾಂತರ ಸಂಪರ್ಕದಲ್ಲಿ ವಿದ್ಯುತ್ ಕೋಶಗಳು(Cells in parallel):
ಬದಲಾಯಿಸಿ- ವಿದ್ಯುತ್ ಸಾಧನ ಸಲಕರಣೆಗಳನ್ನು ಅವುಗಳ ಎಲ್ಲಾ ಧನಾಗ್ರ(+)ಗಳು ಒಂದೆಡೆ ಮತ್ತು ಎಲ್ಲಾ ಋಣಾಗ್ರ(-)ಗಳು ಒಂದೆಡೆ ಒಟ್ಟಾಗಿರುವಂತೆ ಜೋಡಿಸಲಾಗುತ್ತದೆ.
- ಎಲ್ಲಾ ವಿದ್ಯುತ್ ಉಪಕರಣಗಳೂ ನಿಗದಿತ ವಿಭವವನ್ನು ಪಡೆಯುವುದರಿಂದ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತವೆ.
- ವಿದ್ಯುತ್ ಆಕರಕ್ಕೆ ಎಲ್ಲಾ ಉಪಕರಣಗಳೂ ನೇರವಾಗಿ ಸಂಪರ್ಕ ಹೊಂದಿರುವುದರಿಂದ ಪರಸ್ಪರ ಅವಲಂಬನೆಯಿಲ್ಲದೇ ಕೆಲಸ ಮಾಡುತ್ತವೆ.ಯಾವುದೇ ಒಂದು ಉಪಕರಣ ವಿಫಲವಾದರೂ ಉಳಿದ ಯಾವ ಉಪಕರಣದ ಕಾರ್ಯಕ್ಕೂ ಅಡಚಣೆ ಆಗುವುದಿಲ್ಲ.
ಗೃಹ ವಿದ್ಯುತ್ ಮಂಡಲಗಳು(Domestic electrical circuits)
ಬದಲಾಯಿಸಿಗೃಹ ವಿದ್ಯುತ್ ಮಂಡಲಗಳನ್ನು ದೀಪ ದೀಪ ಮಂಡಲ(lighting sub circuits)ಮತ್ತು ಶಕ್ತಿ ಉಪ ಮಂಡಲ(power sub circuits)ಎಂದು ಎರಡು ಉಪ ಮಂಡಲಗಳಾಗಿ ವಿಭಾಗಿಸಬಹುದು. ವಿದ್ಯುತ್ ಪ್ರವಾಹವು ಆವೃತ ವ್ಯವಸ್ಥೆ(ring system)ಯಲ್ಲಿ ತಾಮ್ರ ಅಥವಾ ಅಲ್ಯೂಮಿನಿಯಮ್ ವಾಹಕ ತಂತಿಗಳ ಮೂಲಕ ಮನೆಯ ವಿವಿಧ ಕೋಣೆಗಳ ದೀಪ ಹಾಗೂ ಶಕ್ತಿ ಉಪ ಮಂಡಲಗಳಲ್ಲಿ ಪ್ರವಹಿಸುತ್ತದೆ. ಆದ್ದರಿಂದ ಗೃಹ ವಿದ್ಯುತ್ ಮಂಡಲದ ಯಾವುದೇ ಸ್ಥಳದಲ್ಲಿ ವಿದ್ಯುತ್ ಸಂಪರ್ಕ ಪಡೆಯಬಹುದು. ಬೇರೆ ಬೇರೆ ಉಪ ಮಂಡಲಗಳು ಪ್ರತ್ಯೇಕ ಬೆಸೆ(fuse)ಗಳನ್ನು ಹೊಂದಿರುತ್ತವೆ. ದೀಪ ಮಂಡಲಗಳಲ್ಲಿ ಬಲ್ಬ್, ಫ್ಯಾನ್, ರೇಡಿಯೋ, ಟಿ.ವಿ ಮುಂತಾದವುಗಳನ್ನು ಸಾಕೆಟ್ ಮತ್ತು ಸ್ವಿಚ್ ಗಳ ಮೂಲಕ ಜೋಡಿಸಬಹುದು. ಶಕ್ತಿ ಮಂಡಲಗಳಲ್ಲಿ ಹೆಚ್ಚು ಪ್ರಮಾಣದ ವಿದ್ಯುತ್ ಬಳಸುವ ವಿದ್ಯುತ್ ಒಲೆ, ಜಲತಾಪಕ(water heater),ಮೋಟಾರ್ ಪಂಪ್ ಮುಂತಾದುವನ್ನು ಬಳಸುವರು. ಗೃಹವಿದ್ಯುತ್ ಮಂಡಲಗಳು ಸಮಾಂತರ ಮಂಡಲಗಳಾದ್ದರಿಂದ ಎಲ್ಲಾ ವಿದ್ಯುತ್ ಉಪಕರಣಗಳು ಸ್ವತಂತ್ರವಾಗಿ ಕೆಲಸಮಾಡುತ್ತವೆ. ಮನೆಯ ಎಲ್ಲಾ ವಿದ್ಯುತ್ ಸಾಧನ ಸಲಕರಣೆಗಳನ್ನು ಭೂಸಂಪರ್ಕ(earthing)ತಂತಿ ವ್ಯವಸ್ಥೆಗೆ ಜೋಡಿಸುವುದು ಅತ್ಯಗತ್ಯ.ಈ ತಂತಿಯು ವಿದ್ಯುತ್ ಉಪಕರಣಗಳಲ್ಲಿ ಸೋರಿಕೆಯಾದ ವಿದ್ಯುತ್ತನ್ನು ಭೂರಾಶಿಗೆ ಹರಿಸಿ ಬಳಕೆದಾರರನ್ನು ವಿದ್ಯುತ್ ಅಪಘಾತದಿಂದ ರಕ್ಷಿಸುತ್ತದೆ.
ಗೃಹ ಬಳಕೆ ವಿದ್ಯುತ್
ಬದಲಾಯಿಸಿಶುಷ್ಕ ವಿದ್ಯುತ್ ಕೋಶಗಳನ್ನು ಆಟಿಕೆಗಳು, ಟಾರ್ಚ,ರೇಡಿಯೋ, ಗಡಿಯಾರ, ಕ್ಯಾಮರ,ಕ್ಯಾಲ್ಕುಲೇಟರ್, ರಿಮೋಟ್ ಕಂಟ್ರೋಲ್ ಇತ್ಯಾದಿಗಳಲ್ಲಿ ಬಳಸುವರು. ಆದರೆ ಈ ಶುಲ್ಕ ಕೋಶಗಳಿಂದ ದೊಡ್ಡ ಗಾತ್ರದ ವಿದ್ಯುತ್ ಉಪಕರಣಗಳನ್ನು ನಡೆಸಲು ಸಾಧ್ಯವಿಲ್ಲ.ನೇರ ವಿದ್ಯುತ್(Direct Current-D.C)ಆಕರಗಳಾದ ಶುಷ್ಕಕೋಶಗಳು ಬೇಗನೆ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಹಾಗೂ ಇವುಗಳನ್ನು ಆಗಿಂದಾಗ್ಗೆ ಬದಲಿಸಬೇಕಾಗುತ್ತದೆ. ಆದ್ದರಿಂದ ಗೃಹ ಬಳಕೆ ವಿದ್ಯುತ್ ಮಂಡಲಗಳಲ್ಲಿ ಪರ್ಯಾಯ ವಿದ್ಯುತ್(Alternative Current-A.C)ಉಪಯೋಗಿಸುವರು. ವಿವಿಧ ಉತ್ಪಾದನಾ ಘಟಕಗಳಿಂದ ನಮ್ಮ ಗೃಹ ಬಳಕೆ ವಿದ್ಯುತ್ ಸರಬರಾಜಾಗುತ್ತದೆ. ಮುಖ್ಯ ಉತ್ಪಾದನಾ ಘಟಕಗಳು ಅಧಿಕ ವಿಭವದ (high voltage)ವಿದ್ಯುತ್ತನ್ನು ಪ್ರಾದೇಶಿಕ ಉಪಘಟಕಗಳಿಗೆ ರವಾನಿಸುತ್ತವೆ. ನಂತರ ಉಪಘಟಕಗಳಿಗೆ ರವಾನಿಸುತ್ತವೆ. ನಂತರ ಉಪಘಟಕಗಳು ಬಳಕೆದಾರರಿಗೆ ಅಲ್ಪ ವಿಭವದ(low voltage) ಅಗತ್ಯ ವಿದ್ಯುತ್ತನ್ನು ಹಂಚಿಕೆ ಮಾಡುತ್ತವೆ. ವಿದ್ಯುತ್ ಉತ್ಪಾದನಾ ಘಟಕಗಳಿಂದ ಮನೆ,ಅಂಗಡಿ,ಕಾರ್ಖಾನೆ, ಹೊಲಗೆದ್ದೆ ಮುಂತಾದ ಸ್ಥಳಗಳಿಗೆ ತೀವ್ರ ವಿದ್ಯುತ್ ಪ್ರಸರಣ ಮಾರ್ಗಗಳು (high tention lines),ವಿತರಣಾ ಮಾರ್ಗಗಳು (distribution lines) ಹಾಗೂ ವಿದ್ಯುತ್ ಪರಿವರ್ತಕ(transformer)ಗಳ ಮೂಲಕ ವಿದ್ಯುತ್ ಸರಬರಾಜಾಗುತ್ತದೆ.
ಗೃಹ ವೈರಿಂಗ್ ವ್ಯವಸ್ಥೆ (Domestic wiring system)
ಬದಲಾಯಿಸಿಮನೆಗಳಿಗೆ ವಿದ್ಯುತ್ ಸಂಪರ್ಕ ವಿದ್ಯುತ್ ಕಂಬಗಳಿಂದ ಅಥವಾ ಭೂಅಂತರ್ಗತ ಸಂಪರ್ಕ ತಂತಿಗಳ ಮೂಲಕ ದೊರೆಯುತ್ತದೆ.ವಿದ್ಯುತ್ ಸಂಪರ್ಕ ತಂತಿಯು ಎರಡು ವಿಧದ ವಾಹಕ ತಂತಿಗಳನ್ನು ಒಳಗೊಂಡಿವೆ.ಅವುಗಳಲ್ಲಿ ಒಂದು ಸವಿದ್ಯುತ್ ವಾಹಕ(Live-L)ತಂತಿ ಮತ್ತೊಂದು ತಟಸ್ಥ(Neutral-N)ತಂತಿ.ವಿದ್ಯುತ್ ನ ಬಹುಪಾಲು ಸವಿದ್ಯುತ್ ವಾಹಕ ತಂತಿ (L)ಯ ಮೂಲಕ ಪ್ರವಹಿಸುತ್ತದೆ.ಈ ಎರಡು ತಂತಿಗಳ ನಡುವಿನ ವಿಭವಾಂತರ ಸಾಮಾನ್ಯವಾಗಿ ೨೩೦ ವೋಲ್ಟ್ ಇರುತ್ತದೆ. ಸವಿದ್ಯುತ್ ವಾಹಕ(L) ಮತ್ತು ತಟಸ್ಥ ವಾಹಕ(N) ತಂತಿಗಳನ್ನು ಆರಂಭದಲ್ಲಿ ವಿದ್ಯುತ್ ಮೀಟರ್ ಗೆ ಜೋಡಿಸಿರುತ್ತಾರೆ. ಮಂಡಲದಲ್ಲಿ ಬಳಕೆಯಾದ ವಿದ್ಯುತ್ ಪ್ರಮಾಣವನ್ನು ವಿದ್ಯುತ್ ಮೀಟರ್ ಅಳೆಯುತ್ತದೆ. ನಂತರ ವಾಹಕ ತಂತಿಗಳು ಮುಖ್ಯ ಸ್ವಿಚ್(MCB) ಮೂಲಕ ಹಾದು ಹೋಗುತ್ತವೆ. ಮುಖ್ಯ ಬೆಸೆ(main fuse)ಯನ್ನು ಯಾವಾಗಲೂ ಸವಿದ್ಯುತ್ ವಾಹಕತಂತಿಯೊಂದಿಗೆ ಸರಣಿ ಸಂಪರ್ಕದಲ್ಲಿ ಜೋಡಿಸುವರು.(ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಪ್ರವಾಹವನ್ನು ಮುಂದುವರಿಸಲು ಅಥವ ತಡೆ ಒಡ್ಡಲು ಮುಖ್ಯ ಸ್ವಿಚ್(MCB-Miniature Circuit Breakers) ಬಳಸುವರು). ಮಂಡಲದಲ್ಲಿನ ದೋಷಗಳ ದುರಸ್ತಿ ಸಮಯದಲ್ಲಿ ಈ ಸ್ವಿಚ್ ನಿಂದ ವಿದ್ಯುತ್ ಪ್ರವಾಹವನ್ನು ನಿರ್ಬಂಧಿಸುವರು.
ವಾಣಿಜ್ಯ ವಿದ್ಯುತ್ ಮಂಡಲಗಳು(Commercial electrical circuits):
ಬದಲಾಯಿಸಿಅಂಗಡಿಯ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ವಿದ್ಯುತ್ ಸಂಪರ್ಕ(commercial supply)ಎಂದು ವರ್ಗೀಕರಿಸಲಾಗಿದೆ. ಸಾಮಾನ್ಯವಾಗಿ ವಾಣಿಜ್ಯ ವಿದ್ಯುತ್ ಶುಲ್ಕವು ಗೃಹ ಬಳಕೆ ವಿದ್ಯುತ್ ಶುಲ್ಕಕ್ಕಿಂತ ಅಧಿಕವಾಗಿರುತ್ತದೆ. ವಾಣಿಜ್ಯ ವಿದ್ಯುತ್ ಸಂಪರ್ಕಗಳು ತಮ್ಮ ಶಕ್ತಿ ಅಗತ್ಯತೆಗೆ ತಕ್ಕಂತೆ ಏಕ ಸವಿದ್ಯುತ್ ವಾಹಕ ಸಂಪರ್ಕ(single phase) ಅಥವಾ ತ್ರಿ ಸವಿದ್ಯುತ್ ವಾಹಕ ಸಂಪರ್ಕ(three phase) ಹೊಂದಿರುತ್ತವೆ. ವಿದ್ಯುತ್ ಸರಬರಾಜು ಮಂಡಳಿಯವರು ೩೦೦೦ ವ್ಯಾಟ್ ವಿದ್ಯುತ್ ಶಕ್ತಿ ಅಗತ್ಯತೆಯವರೆಗೆ ಏಕ ಸವಿದ್ಯುತ್ ವಾಹಕ ಸಂಪರ್ಕವನ್ನು ಹಾಗೂ ೩೦೦೦ ವ್ಯಾಟ್ ಗಿಂತ ಅಧಿಕ ವಿದ್ಯುತ್ ಶಕ್ತಿ ಅಗತ್ಯತೆಗಳಿಗಾಗಿ ತ್ರಿ ಸವಿದ್ಯುತ್ ವಾಹಕ ಸಂಪರ್ಕ ವ್ಯವಸ್ಥೆಯನ್ನು ಶಿಫಾರಸ್ಸು ಮಾಡುತ್ತಾರೆ.