ವಿಕಿಪೀಡಿಯ:ವಿಕಿಪೀಡಿಯ ಸಾಧಕರು
(ವಿಕಿಪೀಡಿಯ:ತಿಂಗಳ ವಿಕಿಪೀಡಿಯ ಸಂಪಾದಕ ಇಂದ ಪುನರ್ನಿರ್ದೇಶಿತ)
ಈ ತಿಂಗಳ ವಿಕಿಪೀಡಿಯ ಸಂಪಾದಕ ಯೋಜನೆ ಯಾಕೆಂದರೆ ವಿಕಿಪೀಡಿಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚುವ ವ್ಯಕ್ತಿಯನ್ನು ಸಮುದಾಯದವರು ಗುರುತಿಸಬೇಕು ಎಂದು. ಇದರಿಂದ ಆ ವ್ಯಕ್ತಿಗೆ ತಾನು ಮಾಡಿದ ಕೊಡುಗೆಗೆ ಗೌರವ ಸಿಕ್ಕಿದ ಹಾಗೆ ಆಗುತ್ತದೆ ಮತ್ತು ಸಮುದಾಯದ ಇತರ ಸದಸ್ಯರಿಗೆ ಹೆಚ್ಚು ಹೆಚ್ಚು ಸಂಪಾದಿಸುವಂತೆ ಸ್ಪೂರ್ತಿಯೂ ದೊರೆಯುತ್ತದೆ.
ಈ ಬಗ್ಗೆ ಸೌಭಾಗ್ಯವತಿಯವರು ಸಲಹೆ ನೀಡಿದ್ದರು. ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ನಡೆಸಿ ಒಂದು ಟೆಂಪ್ಲೇಟನ್ನೂ ತಯಾರಿಸಲಾಗಿತ್ತು.
ಆ ನಂತರ ನವೆಂಬರ್ ತಿಂಗಳಿನಲ್ಲಿ ಅರಳಿಕಟ್ಟೆಯಲ್ಲಿ ಚರ್ಚೆ ನಡೆದು ವಿಕಿಪೀಡಿಯ ಸಾಧಕರೆಂದು ಆದರೆ ಉತ್ತಮ ಎಂದು ತೀರ್ಮಾನಿಸಲಾಯಿತು. ಹಾಗಾಗಿ ಟೆಂಪ್ಲೇಟನ್ನೂ ರಚಿಸಲಾಯಿತು.
ನಿಯಮಗಳು
ಬದಲಾಯಿಸಿ- ಆಯ್ಕೆ ಆಗುವ ವ್ಯಕ್ತಿ ಆ ತಿಂಗಳ ಸಕ್ರಿಯ ಸಂಪಾದಕರು ಆಗಿರಬೇಕು.
- ಅತ್ಯುತ್ತಮ ಗುಣಮಟ್ಟದ ಲೇಖನಗಳನ್ನು ತಯಾರಿಸಿರಬೇಕು.
- ವಿಕಿಪೀಡಿಯದಲ್ಲಿ ದೀರ್ಘ ಅವಧಿಯ ಸಂಪಾದಕರು ಆಗಿರಬೇಕು (ಕನಿಷ್ಠ ೪೫-೫೦ ದಿನ).
- ಅವರು ಲೇಖನಗಳನ್ನು ರಚಿಸುವಾಗ ಅಗತ್ಯದ ಅಂಶಗಳನ್ನು ಸೇರಿಸುತ್ತಿರುವವರು ಆಗಿರಬೇಕು (ಉಲ್ಲೇಖ, ಆಂತರಿಕ ಕೊಂಡಿ, ಬಾಹ್ಯ ಕೊಂಡಿ, ಚಿತ್ರ, ವರ್ಗ).
- ಅವರು ಅರಳಿಕಟ್ಟೆಯ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಬೇಕು.
ಆಯ್ಕೆ ಸಮಿತಿ ಸದಸ್ಯರು
ಬದಲಾಯಿಸಿಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಬಹುದು.