ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ವಸಂತ ಎಸ್.ಎನ್
ವಸಂತ ಎಸ್.ಎನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ವಾಸವಾಗಿರುವ ತುಳು-ಕನ್ನಡಿಗ. ಕನ್ನಡ ಮಾಧ್ಯಮದಲ್ಲಿ ಕಲಿತ ಇವರು ಹೆಚ್ಚಿನ ಓದಿಗಾಗಿ ಹುಡುಕಾಟ ನಡೆಸಿದಾಗ ಕನ್ನಡ ಭಾಷೆಯಲ್ಲಿರುವ ಸೀಮಿತ ಸಂಪನ್ಮೂಲಗಳ ಬಗ್ಗೆ ಅರಿತುಕೊಂಡರು. ಹೀಗಾಗಿ ಇವರು ೧೧ ಮೇ ೨೦೦೯ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ತಮ್ಮ ಖಾತೆ ತೆರೆದರು. ಅಂದಿನಿಂದ ತಮ್ಮ ಸಂಪಾದನೆಯನ್ನು ಪ್ರಾರಂಭಿಸಿದ ಇವರು ಇಂದು ಎಲ್ಲ ವಿಕಿಗಳ ಖಾತೆಯಲ್ಲಿ ಸುಮಾರು ೧೯೦೦೦ಕ್ಕೂ ಅಧಿಕ ಸಂಪಾದನೆಗಳನ್ನು ಹೊಂದಿದ್ದಾರೆ.
ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ಮಾಹಿತಿ ಕೊರತೆ ಇದೆ ಎಂದು ತಿಳಿದುಕೊಂಡ ಇವರು ಅನೇಕ ವಿಜ್ಞಾನ ಲೇಖನಗಳನ್ನು ಸೇರಿಸಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಮೂಲಧಾತು. ಮುಖ್ಯವಾಗಿ ಕರ್ನಾಟಕದ ವೃಕ್ಷಗಳ ಬಗ್ಗೆ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ವಿಜ್ಞಾನದಲ್ಲಿ ನಿತ್ಯ ಬಳಕೆಯಾಗುವ ಲೇಖನಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಸೇರಿಸಿದ್ದಾರೆ. ವಿಜ್ಞಾನಿಗಳ ಬಗ್ಗೆ ಪರಿಚಯ, ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಲೇಖನ ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ೩೦೦ಕ್ಕೂ ಅಧಿಕ ಲೇಖನಗಳನ್ನು ವಿಕೀಕರಿಸಿ ವಿಸ್ತರಿಸಿದ್ದಾರೆ. ವಿಕಿಡೇಟಾ ದಲ್ಲಿಯೂ ಉತ್ತಮ ಕೊಡುಗೆ ನೀಡಿದ್ದಾರೆ. ಇವರು ತಮ್ಮ ನಿರಂತರ ಕೊಡುಗೆಗೆ ಬಾರ್ನ್‌ಸ್ಟಾರ್ ಅನ್ನೂ ಗಳಿಸಿದ್ದಾರೆ. ಮುಂದೆ ಇವರು ಭಾರತದ ಪ್ರಮುಖ ಸ್ಥಳಗಳ ಬಗ್ಗೆ ಲೇಖನ ರಚಿಸುವ ಯೋಜನೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶವನ್ನು ವಿಕೀಕರಣಗೊಳಿಸುವ ಯೋಜನೆ ಹೊಂದಿದ್ದಾರೆ. ಈಗ ಜೀವಂತವಾಗಿರುವ ತುಳು ವಿಕಿಪೀಡಿಯಕ್ಕೆ ಇವರು ಅದು ಶೈಶವಾವಸ್ಥೆಯಲ್ಲಿದ್ದಾಗಿನಿಂದಲೂ ನಿರಂತರ ಸಂಪಾದನೆಯ ಕೊಡುಗೆ ನೀಡಿದ್ದಾರೆ.
ಇವರನ್ನು ಇಲ್ಲಿ ಸಂಪರ್ಕಿಸಬಹುದು.