ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ವಿಶ್ವನಾಥ ಬದಿಕಾನ
ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ವಿಶ್ವನಾಥ ಬದಿಕಾನ.
ವಿಶ್ವನಾಥ ಬದಿಕಾನ
ಬದಲಾಯಿಸಿಎಂಎ, ಪಿಎಚ್‌ಡಿ ಪದವಿ ಪಡೆದಿರುವ ಬದಿಕಾನ, ಸುಮಾರು 16 ವರ್ಷಗಳಿಂದ ಅಧ್ಯಾಪಕ ವೃತ್ತಿ ಮಾಡಿದ್ದಾರೆ. ಗೌಡ ಕನ್ನಡದ ಜನಪದ ಕತೆಗಳು, ಗಾದೆಗಳು, ಎ.ಕೆ. ರಾಮನುಜನ್ ಬದುಕು ಬರಹಗಳು, ತುಳುತ ಕತಾ ಸಂಸ್ಕೃತಿ ಎಂಬ 4 ಪುಸ್ತಕಗಳನ್ನು ಪ್ರಕಟಪಡಿಸಿದ್ದಾರೆ. ಇವರ 25ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹವನ್ನೂ ಮಾಡಿದ್ದಾರೆ.
ವೃತ್ತಿ
ಬದಲಾಯಿಸಿಇವರು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ೧೯೯೬ರಿಂದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಲೋಶಿಯಸ್ ಕಾಲೇಜಿನಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಯನ್ನು ಪ್ರಾರಂಭಿಸಿ, ಸಾರಥ್ಯವಹಿಸಿ ಇಂದಿಗೂ ಯೋಜನೆಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿದ್ದಾರೆ.
ಊರು
ಬದಲಾಯಿಸಿಇವರ ಮೂಲ ಊರು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಅಂಬ್ರೋಟಿ-ಪೇರಾಲು ಊರಿನ ಬದಿಕಾನ ಮನೆ. ಪ್ರಸ್ತುತ ಇವರು ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಕನ್ನಡ ವಿಕಿಪೀಡಿಯದಲ್ಲಿ ಅರೆಭಾಷೆಗೆ ಸಂಬಂಧಿಸಿದ ಹಲವು ಲೇಖನಗಳನ್ನು ತಯಾರಿಸಿದ್ದಾರೆ. ತುಳು ವಿಕಿಪೀಡಿಯದ ಬೆಳವಣಿಗೆಗೆ ಇವರು ಉತ್ತಮ ಕೊಡುಗೆಯನ್ನು ನೀಡಿದ್ದಾರೆ.
(ಮೇ ೨೦೧೭ರಲ್ಲಿ ಪರಿಚಯಿಸಲ್ಪಟ್ಟವರು)