ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೮
- ೧೮೩೫ - ಓಸ್ಕಿಯೊಲ ತನ್ನ ಸಿಮಿನೋಲ್ ಜನರನ್ನು ಅಮೇರಿಕ ಸಂಯುಕ್ತ ಸಂಸ್ಥಾನದ ಸೇನೆಯ ವಿರುದ್ಧ ಹೋರಾಟಕ್ಕೆ ಓಯ್ದು ಎರಡನೇ ಸೆಮಿನೋಲ್ ಯುದ್ಧವನ್ನು ಪ್ರಾರಂಭ ಮಾಡಿದನು.
- ೧೮೩೬ - ದಕ್ಷಿಣ ಆಸ್ಟ್ರೇಲಿಯ ಮತ್ತು ಅಡಿಲೇಡ್ಗಳ ಸ್ಥಾಪನೆ.
- ೧೮೩೬ - ಸ್ಪೇನ್ ಮೆಕ್ಸಿಕೊದ ಸ್ವಾತಂತ್ರ್ಯವನ್ನು ಒಪ್ಪಿಕೊಂಡಿತು.
- ೧೮೯೫ - ಫ್ರಾನ್ಸ್ನ ಲುಮಿಯೇರ್ ಸಹೋದರರು ಮೊದಲ ಬಾರಿಗೆ ಚಲನಚಿತ್ರವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದರು (ಚಿತ್ರಿತ).
ಜನನಗಳು: ಸರ್ ರತನ್ ಟಾಟಾ; ಮರಣಗಳು: ಕೆ.ಎಸ್.ನರಸಿಂಹಸ್ವಾಮಿ.