ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೧
ಡಿಸೆಂಬರ್ ೨೧: ಉತ್ತರ ಭೂಗೋಳಾರ್ಧದಲ್ಲಿ ಚಳಿಗಾಲದ ಪ್ರಾರಂಭ ಮತ್ತು ದಕ್ಷಿಣ ಭೂಗೋಳಾರ್ಧದಲ್ಲಿ ವಸಂತದ ಅಂತ್ಯೆ.
- ೬೯ - ವೆಸ್ಪಾಸಿಯನ್ (ಚಿತ್ರಿತ) ಇದೇ ವರ್ಷದ ನಾಲ್ಕನೇ ರೋಮ್ನ ಚಕ್ರವರ್ತಿ ಆಗಿ, ಈ ವರ್ಷ ಇತಿಹಾಸದಲ್ಲಿ ನಾಲ್ಕು ಚಕ್ರವರ್ತಿಗಳ ವರ್ಷ ಎಂದು ಹೆಸರಾಯಿತು.
- ೧೯೫೮ - ಚಾರ್ಲ್ಸ್ ದೆ ಗೌಲ್, ಫ್ರಾನ್ಸ್ನ ರಾಷ್ಟ್ರಪತಿಯಾಗಿ ಚುನಾಯಿತರಾದರು.
- ೧೯೭೧ - ಕರ್ಟ್ ವಾಲ್ಡ್ಹೈಮ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾದರು.
- ೧೯೮೮ - ಭಯೋತ್ಪಾದಕರ ಬಾಂಬ್ ವಿಸ್ಫೋಟದಲ್ಲಿ ಪಾನ್ ಆಮ್ ೧೦೩ ವಿಮಾನ ಸ್ಕಾಟ್ಲೆಂಡ್ನ ಲಾಕರ್ಬಿ ಮೇಲೆ ಧ್ವಂಸಗೊಂಡು ೨೭೦ ಜನ ಸಾವನ್ನಪ್ಪಿದರು.
ಜನನಗಳು: ಕರ್ಟ್ ವಾಲ್ಡ್ಹೈಮ್, ಹೂ ಜಿನ್ಟಾವ್; ಮರಣಗಳು: ನಿಕೊಲಾಸ್ ಟಿನ್ಬೆರ್ಗೆನ್, ಜಿ.ವಿ.ಅಯ್ಯರ್.