ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨
ಡಿಸೆಂಬರ್ ೨: ಸಂಯುಕ್ತ ಅರಬ್ ಎಮಿರೇಟ್ಸ್ (೧೯೭೧) ಮತ್ತು ಲಾಓಸ್ (೧೯೭೫) ಗಳಲ್ಲಿ ರಾಷ್ಟ್ರೀಯ ದಿನಾಚರಣೆ.
- ೧೮೦೪ - ಪ್ಯಾರಿಸ್ನಲ್ಲಿ ನೆಪೊಲಿಯನ್ ಬೊನಪಾರ್ಟೆ ತನ್ನನ್ನು ತಾನೆ ಚಕ್ರವರ್ತಿಯಾಗಿ ಘೋಷಿಸಿಕೊಂಡನು (ಚಿತ್ರಿತ).
- ೧೯೪೨ - ಎನ್ರಿಕೊ ಫೆರ್ಮಿ ನೇತೃತ್ವದ ತಂಡವೊಂದು ಮೊದಲ ಸ್ವತಃ ನಡೆಸಿಕೊಂಡು ಹೋಗುವ ಪರಮಾಣು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದರು.
- ೧೯೪೬ - ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಲು ಬ್ರಿಟಿಷ್ ಸರ್ಕಾರವು ಜವಹರಲಾಲ್ ನೆಹರೂ, ಬಲದೇವ್ ಸಿಂಗ್, ಜಿನ್ನ ಮತ್ತು ಲಿಯಾಖತ್ ಆಲಿ ಖಾನ್ರನ್ನು ಆಹ್ವಾನಿಸಿತು.
- ೧೯೮೮ - ಬೆನಾಜಿರ್ ಭುಟ್ಟೊ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಳು.
ಜನನಗಳು: ಜಾರ್ಜ್ ಸ್ಯುರಾತ್; ಮರಣಗಳು: ಹೆರ್ನಾನ್ ಕೊರ್ತೆಜ್, ಚೌಧರಿ ಮೊಹಮದ್ ಆಲಿ.