ವಿಕಾಸ್ಪೀಡಿಯ
ವಿಕಾಸ್ಪೀಡಿಯ ಎನ್ನುವುದು ಭಾರತ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟ ಒಂದು ಆನ್‍ಲೈನ್ ಮಾಹಿತಿ ಮಾರ್ಗದರ್ಶಕ ತಾಣ.[೨][೩] ಹೈದರಾಬಾದ್ ಸಿ-ಡ್ಯಾಕ್ ಸಂಸ್ಥೆಯಿಂದ ಕಾರ್ಯಗತಗೊಳಿಸಲ್ಪಟ್ಟಿರುವ ಇದು ಭಾರತ ಕೇಂದ್ರ ಸರ್ಕಾರದ 'ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ'ದ, ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ ಇಲಾಖೆಯಿಂದ ನಡೆಸಲ್ಪಡುತ್ತಿದೆ. ಈ ಜಾಲತಾಣವು ೨೩ ಭಾಷೆಗಳಲ್ಲಿ ಇದೆ. ಆ ಭಾಷೆಗಳೆಂದರೆ: ಅಸ್ಸಾಮಿ, ಬಂಗಾಳಿ, ಗುಜರಾತಿ, ಬೋಡೋ, ಡೋಂಗ್ರಿ, ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಸಂಸ್ಕೃತ, ಕಾಶ್ಮೀರಿ, ಹಿಂದಿ, ಕೊಂಕಣಿ, ನೇಪಾಳಿ, ಒಡಿಯಾ, ಉರ್ದು, ಮೈಥಿಲಿ, ಮಣಿಪುರಿ, ಸಂತಲಿ, ಸಿಂಧಿ, ಮಲಯಾಳಂ, ಪಂಜಾಬಿ ಮತ್ತು ಮರಾಠಿ.[೪]
ಜಾಲತಾಣದ ವಿಳಾಸ | vikaspedia |
---|---|
ತಾಣದ ಪ್ರಕಾರ | ಮಾಹಿತಿ ಮತ್ತು ಜ್ಞಾನ ಪೋರ್ಟಲ್ |
ಒಡೆಯ | ಭಾರತ ಸರ್ಕಾರ |
ಪ್ರಾರಂಭಿಸಿದ್ದು | 18 ಫೆಬ್ರವರಿ 2014[೧] |
೧೮ಫೆಬ್ರವರಿ೨೦೧೪ರಂದು ಇದು ಪ್ರಾರಂಭವಾಯಿತು.[೫] ಇದರಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಸಮಾಜಕಲ್ಯಾಣ, ಇಂಧನ, ಇ-ಆಡಳಿತ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಿವೆ.[೬] ಈ ವಿಕಾಸ್‍ಪೀಡಿಯ ಎನ್ನುವ ಹೆಸರು 'ವಿಕಾಸ್' (ಬೆಳವಣಿಗೆ, ಅಭಿವೃದ್ಧಿ) ಮತ್ತು ಎನ್‍ಸೈಕ್ಲೋಪೀಡಿಯ (ವಿಶ್ವಕೋಶ)ದ 'ಪೀಡಿಯ' ಎಂಬ ಪದಗಳನ್ನು ಕೂಡಿಸಿದ್ದಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Indian government launches Vikaspedia". Techinasia. 19 February 2014. Retrieved 20 February 2014.
- ↑ "Government launches Vikaspedia as online information guide". DNA. 18 February 2014. Retrieved 19 February 2014.
- ↑ "Government launches Vikaspedia, website for local content development tools". NDTV. 18 February 2014. Retrieved 19 February 2014.
- ↑ "Govt launches Vikaspedia as online information guide". Livemint. 18 February 2014. Retrieved 19 February 2014.
- ↑ ಪ್ರಾದೇಶಿಕ ಭಾಷೆಗಳಲ್ಲಿ ‘ವಿಕಾಸ್‌ಪೀಡಿಯ’ , ಪ್ರಜಾವಾಣಿ ವಾರ್ತೆ, 02/19/2014
- ↑ "Government launches online information guide Vikaspedia". Times of India. 18 February 2014. Retrieved 19 February 2014.