ಅವಸರಾಲ (ವಿಂಜಮೂರಿ) ಅನಸೂಯಾ ದೇವಿ (೧೨ ಮೇ ೧೯೨೦ - ೨೩ ಮಾರ್ಚ್ ೨೦೧೯) ಒಬ್ಬ ಪ್ರಸಿದ್ಧ ಜಾನಪದ ಕಲಾವಿದೆ, ಸಂಗೀತ ನಿರ್ದೇಶಕಿ, ಲೇಖಕಿ ಮತ್ತು ಹಾರ್ಮೋನಿಯಂ ವಾದಕಿ.[][][] ಕಲಾ ಪ್ರಪೂರ್ಣ ಬಿರುದಾಂಕಿತರು. ಅವರ ಮೊದಲ ಹಾಡನ್ನು ಎಂಟನೇ ವಯಸ್ಸಿನಲ್ಲಿ ರೆಕಾರ್ಡ್ ಮಾಡಲಾಯಿತು.[]

ವಿಂಜಮೂರಿ ಅನಸೂಯ ದೇವಿ
ಜನನ(೧೯೨೦-೦೫-೧೨)೧೨ ಮೇ ೧೯೨೦
ಮರಣMarch 23, 2019(2019-03-23) (aged 98)
ಇತರೆ ಹೆಸರುಅವಸರಾಲ ಅನಸೂಯ ದೇವಿ
ವೃತ್ತಿಗಾಯಕಿ
ಸಕ್ರಿಯ ವರ್ಷಗಳು1929-2019
ಪೋಷಕರು
  • ವಿಂಜಮೂರಿ ವೆಂಕಟಲಕ್ಷ್ಮೀನರಸಿಂಹರಾವ್ (ತಂದೆ)
  • ವಿಂಜಮೂರಿ ವೆಂಕಟರತ್ನಮ್ಮ (ತಾಯಿ)

ಕೌಟುಂಬಿಕ ಹಿನ್ನೆಲೆ

ಬದಲಾಯಿಸಿ

ಅವರು ಮೇ 12, 1920ರಂದು ಸಂಗೀತಗಾರರು ಮತ್ತು ಬರಹಗಾರರ ಕುಟುಂಬದಲ್ಲಿ ಜನಿಸಿದರು. ಮುನುಗಂಟಿ ವೆಂಕಟರಾವ್ ಅವರಿಂದ ಕರ್ನಾಟಕ ಸಂಗೀತವನ್ನು ಕಲಿತರು. ಅವರ ತಂದೆ ವಿಂಜಮೂರಿ ವೆಂಕಟಲಕ್ಷ್ಮೀನರಸಿಂಹರಾವ್ ಒಬ್ಬರು ನಟ ಮತ್ತು ತೆಲುಗು ಸಂಸ್ಕೃತ ಪಂಡಿತ ಹಾಗೂ ಲೇಖಕ[] . ತಾಯಿ ವಿಂಜಮೂರಿ ವೆಂಕಟರತ್ನಮ್ಮ 1914ರಲ್ಲಿ ಅನಸೂಯ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು.

ವೈಶಿಷ್ಟ್ಯಗಳು

ಬದಲಾಯಿಸಿ
  • ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ರಂತಹ ಸ್ವಾತಂತ್ರ್ಯ ಚಳುವಳಿಯ ದಿಗ್ಗಜರ ಸಮ್ಮುಖದಲ್ಲಿ ಹಾಡಿದ ಅನುಭವ ಆಕೆಗಿತ್ತು .[]
  • ವಿಂಜಮುರಿ ಅನಸೂಯ ಅವರು ತಮ್ಮ ಸೋದರಮಾವ ದೇವುಲಪಲ್ಲಿ ಕೃಷ್ಣ ಶಾಸ್ತ್ರಿಯವರು ಬರೆದ ಪ್ರಸಿದ್ಧ ದೇಶಭಕ್ತಿ ಗೀತೆ "ಜಯಜಜಯ ಪ್ರಿಯ ಭಾರತ" ಗೆ ಸಂಗೀತ ಸಂಯೋಜನೆ ಮಾಡಿದರು.
  • “ಜಯ ಜಯ ಪ್ರಿಯ ಭಾರತ", "ಮೊಕ್ಕಜನ್ನ ತೋಟಾಲೋ.." ಮತ್ತು "ನೋಮಿನಾ ಮಲ್ಲಾಳ...."ದಂತಹ ಜಾನಪದ ಗೀತೆಗಳ ಮತ್ತು ಅನೇಕ ದೇಶಭಕ್ತಿಯ ಗೀತೆಗಳ ಸಂಯೋಜಕರು.
  • ದೂರದ ಹಳ್ಳಿಗಳಲ್ಲಿ ಅಡಗಿದ್ದ ಜನಪದ ಗೀತೆಗಳಿಗೆ ಘನತೆ ತಂದುಕೊಟ್ಟು ಸಂಗೀತ ಲೋಕದಲ್ಲಿ ಎತ್ತರಕ್ಕೆ ನಿಲ್ಲುವಂತೆ ಮಾಡಿದ ಗಾಯಕಿ.
  • ಕರ್ನಾಟಕ ಬಾನಿಯಲ್ಲಿ ಜಾನಪದ ಗೀತೆಗಳನ್ನು ರಚಿಸಿದ ಭಾರತದ ಮೊದಲ ಗೀತ ಸಂಯೋಜಕಿ ಅವರು.
  • ವಿಶ್ವವಿದ್ಯಾನಿಲಯಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ಪಠ್ಯಕ್ರಮವಾಗಿ ಸೇರಿಸಿದ ಗಾಯಕಿ.
  • ದಕ್ಷಿಣ ಭಾರತದ ಮೊದಲ ಮಹಿಳಾ ಸಂಗೀತ ನಿರ್ದೇಶಕಿ.
  • ವಿಶ್ವಾದ್ಯಂತ 11 ಜೀವಮಾನ ಸಾಧನೆ ಪ್ರಶಸ್ತಿಗಳು.
  • ಅನೇಕ ದೇಶಗಳಲ್ಲಿ ಸಾವಿರಾರು ಸಂಗೀತ ಕಚೇರಿಗಳು.
  • 11 ಗ್ರಂಥಗಳ ಲೇಖಕಿ.

ಬರಹಗಳು

ಬದಲಾಯಿಸಿ

ಅವರ 90 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಚೆನ್ನೈನಲ್ಲಿ ಏಪ್ರಿಲ್ 12, 2008 ರಂದು ನಡೆದ ಸಮಾರಂಭದಲ್ಲಿ ಅವರ ಎರಡು ಪುಸ್ತಕಗಳು ಭಾವಗೀತಾಲು (ಭಾವಗೀತೆಗಳು) ಮತ್ತು ಜಾನಪದ ಗೇಯಾಲು(ಜನಪದ ಗೀತೆಗಳು) ಬಿಡುಗಡೆ ಮಾಡಲಾಯಿತು. ಇವುಗಳ ಜೊತೆಗೆ ಅವರು ಜಾನಪದ ಸಂಗೀತದ ಬಗ್ಗೆ ಏಳು ಪುಸ್ತಕಗಳು ಸೇರಿದಂತೆ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ
  • 1977 ರಲ್ಲಿ ಆಂಧ್ರ ವಿಶ್ವವಿದ್ಯಾನಿಲಯವು 'ಕಲಾಪ್ರಪೂರ್ಣ' ಎಂಬ ಬಿರುದನ್ನು ನೀಡಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.
  • ಅಮೆರಿಕದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.
  • ಪ್ಯಾರಿಸ್‌ನಲ್ಲಿ ಆಕೆಗೆ ಜಾನಪದ ರಾಣಿ ಎಂಬ ಬಿರುದನ್ನು ನೀಡಲಾಯಿತು.[]

ಅವರು ೨೩ ಮಾರ್ಚ್ ೨೦೧೯ರಂದು ತಮ್ಮ ೯೯ ನೇ ವಯಸ್ಸಿನಲ್ಲಿ ಯು.ಎಸ್.ಎ. ದೇಶದ ಹ್ಯೂಸ್ಟನ್ನಲ್ಲಿ ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ
  1. "Queen of folk music - HYDB". The Hindu. Retrieved 2018-06-03.
  2. ೨.೦ ೨.೧ "With many firsts to her credit - MADS". The Hindu. Retrieved 2018-06-03.
  3. "Space across new horizons - MADS". The Hindu. Retrieved 2018-06-03.
  4. ೪.೦ ೪.೧ https://www.newindianexpress.com/cities/vijayawada/2019/mar/25/vinjamuri-anasuya-devi-dies-at-99-1955538.html
  5. Mayabrahma, Roja (2019-03-24). "KCR condoles death of radio commentator Dr Vinjamuri Anasuya Devi". www.thehansindia.com (in ಇಂಗ್ಲಿಷ್). Retrieved 2020-03-06.
  6. "KCR condoles Anasuya Devi's demise". ANI News (in ಇಂಗ್ಲಿಷ್). Retrieved 2020-03-06.

ಬಾಹ್ಯ ಕೊಂಡಿಗಳು

ಬದಲಾಯಿಸಿ
  1. http://www.hindu.com/fr/2008/04/11/stories/2008041150360200.htm Archived 2009-05-30 ವೇಬ್ಯಾಕ್ ಮೆಷಿನ್ ನಲ್ಲಿ. Archived
  2. http://www.hindu.com/fr/2008/04/11/stories/2008041151150300.htm Archived 2008-06-01 ವೇಬ್ಯಾಕ್ ಮೆಷಿನ್ ನಲ್ಲಿ. Archived
  3. http://www.hindu.com/fr/2008/02/01/stories/2008020151380600.htm Archived
  4. ಜಾನಪದ ಸಂಗೀತದ ಸಾಮ್ರಾಜ್ಞಿ - ವಿಂಜಮುರಿ ಅನಸೂಯ Archived 2023-02-06 ವೇಬ್ಯಾಕ್ ಮೆಷಿನ್ ನಲ್ಲಿ.
  5. https://www.veethi.com/india-people/vinjamuri_anasuya_devi-profile-14035-24.htm