ವಾಸು ದೀಕ್ಷಿತ್ ಕನ್ನಡದ ಖ್ಯಾತ ಗಾಯಕರಲ್ಲಿ ಒಬ್ಬರು.[] ಇವರು ಮೂಲತಃ ಮೈಸೂರಿನವರು. ಹುಟ್ಟಿ ಬೆಳೆದದ್ದು ಸಹ ಮೈಸೂರಿನಲ್ಲಿಯೇ. ಇವರ ಶಾಲೆ ಶಿಕ್ಷಣ ಆಗಿದ್ದು ಮೈಸೂರಿನ ಬಲೋದ್ಯಾನ ಇಂಗ್ಲಿಷ್ ಸ್ಕೂಲ್ ನಲ್ಲಿ. ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಆಗಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಇವರು ಖ್ಯಾತ ಗಾಯಕರಾದ ರಘು ದೀಕ್ಷಿತ್ ರವರ ಸಹೋದರ. ಇವರು ಕನ್ನಡ ಭಾವಗೀತಗಳನ್ನು ಜಗತ್ತಿನಾದ್ಯಂತ ಪ್ರಸಿದ್ಧಗೊಳಿಸಿದ್ದಾರೆ. ಇವರ ರಾಗಿ ತಂದೀರಾ ಹಾಡು ಜನಪ್ರಿಯವಾಗಿದೆ. ಈ ಹಾಡು ಪುರಂದರದಾಸರು ರಚಿಸಿರುವುದು. ಇವರು ಹೆಚ್ಚಾಗಿ ಬಳಸುವ ಸಂಗೀತ ಪ್ರಕಾರ ಭಾರತೀಯ ಜಾನಪದ ಮತ್ತು ಫ್ಯೂಶನ್.

ವಾಸು ದೀಕ್ಷಿತ್

ಮೊದಲಿನ ದಿನಗಳು

ಬದಲಾಯಿಸಿ
 
ವಾಸು ದೀಕ್ಷಿತ್ ಮತ್ತು ಸ್ಮರಾತ್ಮಾದ ಜಿಷ್ಣು

೨೦೦೨ ರಲ್ಲಿ ಇವರು ಮತ್ತು ಅಭಿನಂತ್ ಕುಮಾರ್ ಎಂಬ ಗಿಟಾರ್ ವಾದಕರು ಸೇರಿ ಸ್ವರಾತ್ಮಾ ಎಂಬ ಒಂದು ಗುಂಪು ಸೃಷ್ಟಿಸಿದರು. ಇದು ಕೇವಲ ಭಾರತದಲ್ಲಿ ಅಲ್ಲದೆ ಹಲವು ದೇಶಗಳಲ್ಲಿ ಸಹ ಖ್ಯಾತ ಹೆಸರು ಪಡೆದಿದೆ. ಮೊರಾಕೊ, ಯುನೈಟೆಡ್ ಕಿಂಗ್ಡಮ್, ಹೊಂಗ್ ಕೊಂಗ್, ಸಿಂಗಪೋರ್ ಸೇರಿದಂತೆ ಹಲವು ದೇಶಗಳಲ್ಲಿ ಕನ್ನಡ ಭಾವಗೀತೆಗಳನ್ನು ಪ್ರಸಿದ್ಧಿಗೊಳಿಸಿದ್ದಾರೆ. ಇವರು ರಚಿಸುವ ಹಾಡುಗಳು ಸಾಮಾಜಿಕ, ರಾಜಕೀಯ ಹಾಗೂ ಅವರವರ ಜೀವನದ ಕಥೆಯ ಬಗ್ಗೆ ಆಗಿರುತ್ತದೆ.[]

೨೦೦೩ ರಲ್ಲಿ ವಾಸು ದೀಕ್ಷಿತ್ ರವರು ಸ್ವರಾತ್ಮಾ ಗುಂಪನ್ನು ಬಿಡಬೇಕಾಯಿತು. ಅವರ 'ಮಾಸ್ಟರ್ ಇನ್ ಫಿಲಂ ಅಂಡ್ ವಿಡಿಯೋ ಕಮ್ಯುನಿಕೇಷನ್' ಪದವಿ ಮುಗಿಸಲೆಂದು ಎರಡು ವರ್ಷಗಳ ಕಾಲ ವಿರಾಮ ತೆಗೆದುಕೊಂಡರು. ಪದವಿಗಾಗಿ ಮೈಸೂರಿನಿಂದ ಅಹ್ಮದಾಬಾದ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆ ಡಿಸೈನ್ ನಲ್ಲಿ ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿದರು. ಎರಡು ವರ್ಷಗಳ ನಂತರ ಮತ್ತೆ ಸ್ವರಾತ್ಮಾ ಗುಂಪಿಗೆ ಸೇರಿಕೊಂಡರು.

ಇವರು ಅಹಮದಾಬಾದ್ ನಿಂದ ವಾಪಸ್ ಆದ ನಂತರ ನಡೆದ ರೇಡಿಯೋ ಸಿಟಿ ಲೈವ್ ೨೦೦೬ ಎಂಬ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ನಂತರ ಹಲವೆಡೆ ಕಾರ್ಯಕ್ರಮ ಗಳನ್ನು ನೀಡುತ್ತಾ ಹೆಸರು ಪಡೆದುಕೊಂಡು ಅವರ ಮುಂದಿನ ಒಂದು ಯೋಜನೆಗೆ ಪ್ರಾಯೋಜಕರನ್ನು ಹುಡುಕುತ್ತಿದ್ದರು.

೨೦೦೯ ರಲ್ಲಿ ಸ್ವರಾತ್ಮಾ ರೋಲಿಂಗ್ ಸ್ಟೋನ್ಸ್ ಎಂಬ ಖ್ಯಾತ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿತು.[][][] ಜಾಕ್ ದನಿಎಲ್ಸ್ ಇಂಡಿಯನ್ ರಾಕ್ ಅವಾರ್ಡ್ಸ್ ನಲ್ಲಿ ಅತಿ ಉತ್ತಮ ಹಾಡು, ಅತಿ ಉತ್ತಮ ಗಾಯಕ, ಹಾಗು ಅತಿ ಉತ್ತಮ ಗುಂಪು ಎಂಬ ಪ್ರಶಾಂತಿಗಳನ್ನು ಪಡೆದುಕೊಂಡಿತು. ಭಾರತದಲ್ಲೇ ಈ ಪ್ರಶಸ್ತಿ ಗಳನ್ನು ಪಡೆದ ಮೊದಲ ವ್ಯಕ್ತಿ ಇವರಾಗಿದ್ದಾರೆ.[]

ಸಾಧನೆಗಳು

ಬದಲಾಯಿಸಿ

ಮೈಸೂರು ಯುವ ದಸರಾ ಹಬ್ಬ, ಕನಕಪುರದ ಹತ್ತಿರ ನಡೆದ ಫೈರ್ಫ್ಲೈಸ್ ಫೆಸ್ಟಿವಲ್ ಆಫ್ ಸೇಕ್ರೆಡ್ ಮ್ಯೂಸಿಕ್ ಸೇರಿದಂತೆ ಹಲವು ಕಡೆ ಕಾರ್ಯಕ್ರಮ ನೀಡಿದದ್ದಾರೆ. ಸುನಿಧಿ ಚೌಹಾಣ್, ಉಷಾ ಉತುಪ್ ಅವರ ಜೊತೆಯಲ್ಲಿ ಹಾಡಿದವರಿವರಾಗಿದ್ದಾರೆ.

೨೦೦೮ ರಲ್ಲಿ ಇವರು ಎನ್.ಡಿ.ಟಿ.ವಿ ಚಾನೆಲ್ ನಲ್ಲಿ ಸಲಾಂ ಜಿಂದಗಿ ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ತಮ್ಮ ಹಾಗು ಸ್ವರಾತ್ಮದ ಬಗ್ಗೆ ಮಾತನಾಡಿದರು. ಅದೇ ವರ್ಷ ಸ್ವರಾತ್ಮಾ ಸಿಂಗಪೋರ್ ನಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿತು.

೨೦೦೯ ರಲ್ಲಿ ಸ್ವರಾತ್ಮ ದ ಮೊದಲ ಆಲ್ಬಮ್ ಬಿಡುಗಡೆ ಆಯಿತು. ಇದೇ ಸಮಯದಲ್ಲಿ ವಾಸು ಅವರಿಗೆ ಭುಜದಲ್ಲಿನ ಮೂಳೆ ಜರುಗಿ ಹಾಡುಗಳ ಪ್ರಚಾರಕ್ಕೆ ಎಂದು ಎಲ್ಲೆಡೆ ಹೋಗಾಲು ಸಾಧ್ಯವಾಗಲಿಲ್ಲ. ಆದರೆ ಅವರ ಗುಂಪಿನ ಗಾಯಕರು ಹಾಗು ವಾದ್ಯ ನುಡಿಸುವವರೆಲ್ಲರೂ ಭಾರತದಾದ್ಯಂತ ಕಾರ್ಯಕ್ರಮಗಳನ್ನು ನೀಡಿ ಯಶಸ್ವಿಯಾಗಿ ಬಂದರು. ಇದಾದ ನಂತರ ಯುನೈಟೆಡ್ ಕಿಂಗ್ಡಮ್ ನ ಜಾನ್ ಲೆಕ್ಕಿ ಎಂಬ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ವಾಸು ದೀಕ್ಷಿತ್ ಮತ್ತು ಸ್ವರಾತ್ಮಾ ಗುಂಪಿನ ಸಂಗೀತಗಾರರಿಗೆ ಒಂದು ದೊಡ್ಡ ಯೋಜನೆಗೆ ಸೇರಲು ಅವಕಾಶ ನೀಡಿದರು. ಲೆಕ್ಕಿ ಅವರಿಗೆ ಇವರೆಲ್ಲರ ಸಂಗೀತ ಶೈಲಿ ಬಹಳ ಹಿಡಿಸಿತು. ಯುನೈಟೆಡ್ ಕಿಂಗ್ಡಮ್ ನಲ್ಲಿ ಇವರ ಒಂದು ಕಾರ್ಯಕ್ರಮದಲ್ಲಿ ಜನರಿಗೆ ಇವರ ಹಾಡುಗಳು ತುಂಬ ಹಿಡಿಸಿ, ಕನ್ನಡ ಹಾಗು ಬೇರೆ ಭಾರತೀಯ ಭಾಷೆ ಬಾರದಿದ್ದ ಜನರೆಲ್ಲಾ ಹಾಡಲು ಶುರು ಮಾಡಿದರು. ಲೆಕ್ಕಿ ಅವರ ಜೊತೆಯಲ್ಲಿ ವಾಸು ದೀಕ್ಷಿತ್ ರವರು ಯಶ್ ರಾಜ್ ಸ್ಟುಡಿಯೋ ಪ್ರವೇಶಿಸಿ ಬ್ರಿಟಿಷ್ ಕೌನ್ಸಿಲ್ ನಿಂದ ಆಯೋಜನೆ ಗೊಂಡಿರುವ ಎರಡು ಹಾಡುಗಳಲ್ಲಿ ತಮ್ಮ ಕಂಠವನ್ನು ಸೇರಿಸಿದರು. ಅದೇ ವರ್ಷದಲ್ಲಿ ಇವರ 'ಜಂಬ' ಎಂಬ ಹಾಡು 'ಮ್ಯೂಸಿಕ್ ಅಲಯನ್ಸ್ ಪ್ಯಾಕ್ಟ್' ಎಂಬ ವೇದಿಕೆಯಲ್ಲಿನ ಟಾಪ್ ೩೩ ಭಾರತೀಯ ಹಾಡುಗಳಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡಿತು.

೨೦೧೪ ರಲ್ಲಿ ಫಾಕ್ಸ್ ಲೈಫ್ ಚಾನೆಲ್ ನಲ್ಲಿನ ಸೌಂಡ್ ಟ್ರೆಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.[] ೨೦೧೬ ರಲ್ಲಿ ಎಂ.ಟಿ.ವಿ ಅನ್ಪ್ಲಗ್ಡ್ ನಲ್ಲಿ ಕಾರ್ಯಕ್ರಮ ನೀಡಿದರು.[]  

ಉಲ್ಲೇಖನಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ