ರಘು ದೀಕ್ಷಿತ್[೧] (ಜನನ: ನವೆಂಬರ್ ೧೧, ೧೯೭೪) ಒಬ್ಬ ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜಕ ಗಾಯಕರಲ್ಲೊಬ್ಬರು ತಮ್ಮದೇ ಆದ ಹೊಸ ಪಂಗಡದ ಪ್ರತಿಭೆಯೆಂದು ಗುರುತಿಸಲ್ಪಡುತ್ತಿದ್ದಾರೆ. ಸ್ವಲ್ಪ ಮಟ್ಟಿಗೆ ಇಂಡಿಪಾಪ್, ಎಂದು ವರ್ಗಿಕರಿಸಬಹುದಾಧ ಧಾಟಿಯಲ್ಲಿ ಅವರ ಸಂಗೀತ ಸಾಧನೆ ರೂಪುಗೊಂಡು ಸಾಗುತ್ತಿದೆ. ತಾವೇ ರೂಪಿಸಿದ ಒಂದು ಸಂಸ್ಥೆ “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ವತಿಯಿಂದ ಸಂಗೀತವನ್ನು ಪ್ರಪಂಚಾದ್ಯಂತ, ಹಲವಾರು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ರಘು ದೀಕ್ಷಿತ್, ಸೂಕ್ಙ್ಮ ಜೀವಶಾಸ್ಥ್ರದಲ್ಲಿ ಚಿನ್ನದ ಪದಕ ಪಡೆದಿದ್ದಾರೆ, ಹಾಗು ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಆದರೂ ಕೂಡಾ ಅವರು ತಮ್ಮ ವಾದ್ಯ ಸ೦ಗೀತದಿ೦ದ ಹೆಸರು ಮಾಡಿದ್ದಾರೆ.

ರಘು ದೀಕ್ಷಿತ್
ರಘು ದೀಕ್ಷಿತ್
ಜನನ
ರಘು

ನವೆಂಬರ್ ೧೧, ೧೯೭೪
ರಾಷ್ಟ್ರೀಯತೆಭಾರತೀಯ
ವಿದ್ಯಾರ್ಹತೆಎಮ್. ಎಸ್ಸಿ (ಸೂಕ್ಙ್ಮ ಜೀವಶಾಸ್ಥ್ರ) ಚಿನ್ನದ ಪದಕ ವಿಜೇತ, ಭರತನಾಟ್ಯದಲ್ಲಿ ವಿದ್ವತ್ ಪದವಿ
ಹಳೆ ವಿದ್ಯಾರ್ಥಿಯುವರಾಜ ಕಾಲೇಜ್ (ಮೈಸೂರು ವಿಶ್ವವಿದ್ಯಾಲಯ)
ಇದಕ್ಕೆ ಖ್ಯಾತರುಸಾಂಗ್‌ಲೈನ್ಸ್‌ ಪ್ರಶಸ್ತಿ ವಿಜೇತ, ಒಬ್ಬ ಹೊಸ ತಲೆಮಾರಿನ ಇಂಡಿಪಾಪ್,' ಎಂಬ ವಿಶಿಷ್ಟ ಸಂಗೀತ ಸಂಯೋಜಕ ಗಾಯಕರಲ್ಲೊಬ್ಬರು. “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ಸಂಸ್ಥಾಪಕ, ಎಚ್. ಎನ್. ಭಾಸ್ಕರ್ ಎಂಬ ಸುಪ್ರಸಿದ್ಧ ಬ್ಯಾಂಡ್ ವಾದಕರ ಜೊತೆ ಸೇರಿ, ಅಂತರಾಗ್ನಿ ಫ್ಯೂಶನ್ ಸಂಗೀತದ ಬ್ಯಾಂಡ್ ಪ್ರಾರಂಭಿಸಿದರು.
ಜಾಲತಾಣraghudixit.com

ವಿದ್ಯಾಭ್ಯಾಸ ಸಂಪಾದಿಸಿ

ರಘು, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜೈವರಸಾಯನಿಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯಲ್ಲೂ ತೇರ್ಗಡೆಯಾದರು. ಸ್ವಲ್ಪ ಸಮಯ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ದುಡಿದರು. ಮುಂದೆ ಅದೆಲ್ಲವನ್ನು ಬಿಟ್ಟು ಸಂಗೀತಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ತಮ್ಮ ಅನುಪಮ ಸಾಧನೆಯಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಭರವಸೆಯ ಹೊಸ ಸಂಗೀತಗಾರ ಎಂದು ಗುರುತಿಸಲ್ಪಟ್ಟಿದ್ದಾರೆ. ಜಾಗತಿಕ ಮಟ್ಟದ ಪ್ರಶಸ್ತಿಯನ್ನು ಸಾಂಗ್‌ಲೈನ್ಸ್‌‌ನಿಂದ ಪಡೆದಿದ್ದಾರೆ.

ಸಂಗೀತ ಕ್ಷೇತ್ರದ ಹೆಜ್ಜೆ ಗುರುತುಗಳು ಸಂಪಾದಿಸಿ

ರಘು ದೀಕ್ಷಿತ್,[೨] ಪ್ರಾರಂಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಹಾಡುಗಳನ್ನು ನುಡಿಸುತ್ತಿದ್ದರು. ಅವರ ಸಂಗೀತದ ಗೀಳಿನ ವಿಷಯ ದಾಖಲಿಸಲು ಯೋಗ್ಯವಾಗಿದೆ. ಒಮ್ಮೆ ವಿದೇಶಿಯರೊಬ್ಬರು ಇಂಗ್ಲೀಷಿನಲ್ಲಿ ಬರೆಯುವ ಬದಲು ಮಾತೃಭಾಷೆಯಲ್ಲಿ ಬರೆಯಲು ಸಲಹೆ ಕೊಟ್ಟಮೇಲೆ ರಘು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ಹಾಗೆಯೇ ಮುಂದುವರೆದು ಹಿಂದಿಯನ್ನೂ ಸೇರಿಸಿಕೊಂಡರು. ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿನ ಸಭಿಕರಿಗೆ ಪ್ರಸ್ತುತಪಡಿಸಿದ ಖ್ಯಾತಿ ರಘು ದೀಕ್ಷಿತ್‍ರಿಗೆ ಸೇರಬೇಕು. ವಿದೇಶಗಳನ್ನು ಬೆಟ್ಟಿಯಾದಾಗ ಅಲ್ಲಿ ಕನ್ನಡ ಭಾಷೆಯ ಹಾಡನ್ನು ಪ್ರಸ್ತುತಪಡಿಸುತ್ತಿದ್ದರು. ಇಂದಿನ ಯುವ ಪೀಳಿಗೆಯವರಿಗೆ ತುಂಬ ಅಚ್ಚುಮೆಚ್ಚಿನ ಗಾಯಕ ರಘು ದೀಕ್ಷಿತ್. ಸೈಕೋ ಚಿತ್ರದಲ್ಲಿ ಅವರು ಸಂಗೀತ ನೀಡಿ ಹಾಡಿದ “ನಿನ್ನ ಪೂಜೆಗೆ ಬಂದೆ” ಹಾಡು ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡಿಗರು ತೊಡುವ ಲುಂಗಿಯನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಶ್ರೇಯಸ್ಸು ಅವರದು. ಟ್ವಿಟ್ಟರ್ ಜಾಲತಾಣದಲ್ಲಿ ತುಂಬ ಚಟುವಟಿಕೆಯಿಂದಿರುತ್ತಾರೆ. ಸಂಪರ್ಕಿಸಿದವರೆಲ್ಲರ ಜೊತೆ ವ್ಯವಹರಿಸುವುದು ತುಂಬ ಕಡಿಮೆ. ರಘು ದೀಕ್ಷಿತ್ ಇದಕ್ಕೆ ಅಪವಾದವೆನ್ನುವ ತರಹ ವರ್ತಿಸುತ್ತಾರೆ. ಮೈಸೂರಿನ ಜೆ.ಸಿ. ಕಾಲೇಜಿನಲ್ಲಿ ಅವರ ಜೊತೆ ಸಂದರ್ಶನ ನಡೆಯಿತು. [೩] ಭರತನಾಟ್ಯಶಾಸ್ತ್ರವನ್ನು ಸುಮಾರು ಹದಿನೆಂಟು ವರ್ಷ ಕಲಿತು ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ನಂದಿನೀಶ್ವರ್ ಅವರ ನೃತ್ಯ ಗುರು. ಹೆಂಡತಿ ಕಂಟೆಂಪೊರರಿ ಡ್ಯಾನ್ಸರ್. ಆಕೆ ಒಡಿಸ್ಸಿ, ಕಥಕ್, ಭರತನಾಟ್ಯ ಎಲ್ಲ ಕಲಿತು ನೃತ್ಯ ಸಂಯೋಜಕಿಯಾಗಿ ಹೆಸರವಾಸಿಯಾಗಿದ್ದಾರೆ. ಜನಪದದ ತಳಹದಿಯನ್ನಿಟ್ಟುಕೊಂಡು, ಸಮಕಾಲೀನ ಉಪಕರಣಗಳನ್ನು ಬಳಸಿ ಹಾಡುವುದು. ಸಮಕಾಲೀನ ಜನಪದ ಶೈಲಿ, ಅವರಿಗೆ ಒಗ್ಗಿದೆ. ಮೈಸೂರು ನಗರದ ಜೆ.ಸಿ. ಕಾಲೇಜಿನಲ್ಲಿ ಅವರು, ಶಿಶುನಾಳ ಶರೀಫರ ಹಾಡನ್ನು ಹಾಡಿದಾಗ, ಅಲ್ಲಿನ ಹುಡುಗರೆಲ್ಲ ಅದನ್ನು ಕೇಳಿ ಸಂತೋಷಪಡುತ್ತಾರೆ.

ರೋಚಕ ಪ್ರಸಂಗ ಸಂಪಾದಿಸಿ

ರಘು, ಒಮ್ಮೆ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಎರಡನೆ ವರ್ಷ ಬಿಎಸ್‌ಸಿ ಓದುತ್ತಿರುವಾಗ, ಭರತನಾಟ್ಯ ಕಾರ್ಯಕ್ರಮ ನೀಡಿ, ವೇಷ ಕಳಚುತ್ತಿರುವಾಗ, ಆಧುನಿಕ ಶೈಲಿಯ (ಅಂದರೆ ಉದ್ದ ಕೂದಲು ಬಿಟ್ಟುಕೊಂಡು ಕೈಯಲ್ಲ ಗಿಟಾರ್ ಹಿಡಿದುಕೊಂಡ) ಒಬ್ಬ ಗಾಯಕ ಅವರನ್ನು ಗೇಲಿ ಮಾಡಿದ. ಸಂಗೀತ ಪ್ರಿಯರನ್ನು ಆಕರ್ಶಿಸುವ ಬಗ್ಗೆ ಒಂದು ಚಿಕ್ಕ ಉಪನ್ಯಾಸ ಕೊಟ್ಟ. ಈ ಪಾಠದಿಂದ ರಘು ದೀಕ್ಷಿತ್, ವಿಚಲಿತರಾಗಲಿಲ್ಲ. ಶಾಸ್ತ್ರೀಯ ನಾಟ್ಯ ಬಗ್ಗೆ ಅಪಾರ ಅಭಿಮಾನವಿದ್ದ ರಘು ಗಿಟಾರ್ ಸಂಗೀತ ಕಲಿತು ಮೇಟಿಯಾಗಿ ಹೊಸಸವಾಲನ್ನು ಎದುರಿಸುವುದಾಗಿ ಶಪಥಮಾಡಿದರು. ಈ ಪ್ರಸಂಗನ್ನು ಸೀರಿಯಸ್ ಆಗಿ ತೆಗೆದುಕೊಂಡು ಗಿಟಾರ್ ಕಲಿತರು. ಗಿಟಾರ್ ನುಡಿಸುತ್ತ, ಅವರು ಕಂಡುಕೊಂಡ ಸತ್ಯವೆಂದರೆ, ಅದರಲ್ಲಿರುವ ಸ್ವಾತಂತ್ರ್ಯ ಶಾಸ್ತ್ರೀಯದಲ್ಲಿ ಇಲ್ಲವೆನ್ನಿಸಿತು. ಇಲ್ಲಿ ಹೇಗೆ ಬೇಕಾದರೂ, ಏನು ಬೇಕಾದರೂ ಹಾಡಬಹುದು; ಇಷ್ಟ ಬಂದ ಸಾಹಿತ್ಯವನ್ನು ನಾವೇ ಬರೆದುಕೊಂಡು ನಮಗಿಷ್ಟ ಬಂದಂತೆ ಹಾಡಬಹುದು. ಹೀಗಾಗಿ ಸುಮಾರು ವರ್ಷಗಳ ಅವರೇ ಇಂಗ್ಲೀಷಿನಲ್ಲಿ ಸಾಹಿತ್ಯ ಬರೆಯುವುದರ ಜೊತೆಗೆ ಹಾಡುತ್ತಲಿದ್ದರು. ಗಿಟಾರ್ ನಲ್ಲಿ ಆ ಹಾಡುಗಳನ್ನು ನುಡಿಸುತ್ತಿದ್ದರು.

ಸುಗಮ ಸಂಗೀತದ ಸಾಮ್ರಾಟ ಅಶ್ವಥ್ ರ ಭೇಟಿ ಸಂಪಾದಿಸಿ

ಅಶ್ವಥ್, ಸಂಯೋಜಿಸ ಹಲವು ಹಾಡುಗಳನ್ನೇ ಮಾದರಿಯಾಗಿ ಇಟ್ಟುಕೊಂಡು, ಅವರದೇ ರಾಗ ಸಂಯೋಜನೆಗೆ, ತಮ್ಮ ಸಮಕಾಲೀನ ವಾದ್ಯ ಸಂಗೀತದ ಅಲಂಕಾರ ಮಾಡಿ, ಅಶ್ವಥ್ಥರ ಮನವೊಲಿಸಿ ಮುಂದುವರೆದರು. ಹಾರ್ಮೋನಿಯಂ ತಬಲ ಹಾಕಿ, ಹಾಡಿದ ಕೃತಿಗಳು ಎಲ್ಲರ ಮನಮುಟ್ಟಿದವು. ಟ್ಯೂನ್ ವಿಷಯದಲ್ಲಿ ಯಾವತ್ತೂ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಲು ಹೋಗಿಯೇ ಇಲ್ಲ. ಇನ್ಸ್ಟ್ರುಮೆಂಟೇಶನ್ ಏನಿದೆಯೇ ಅದನ್ನು ಸ್ವಲ್ಪ ಆಧುನಿಕಗೊಳಿಸಿದ್ದಾರೆ, ಅಷ್ಟೆ. ಹಾಡುವಾಗ ಕನ್ನಡನಾಡಿನ ಒಬ್ಬ ಹಾಡುಗಾರ ಹೇಗೆ ಹಾಡುತ್ತಾನೋ ಹಾಗೆಯೇ ಹಾಡುತ್ತಾರೆ. ಕೇವಲ ಸಂಗೀತದ ಉಪಕರಣಗಳು ಮಾತ್ರ ಪಾಶ್ಚಿಮಾತ್ಯ, ಅಷ್ಟೆ. ಮೈಸೂರಿನಲ್ಲಿ ಪಿಟೀಲು ವಿದ್ವಾಂಸ, ಎಚ್ ಎನ್ ನರಸಿಂಹಮೂರ್ತಿ ಯವರ ಮಗ ಎಚ್ ಎನ್ ಭಾಸ್ಕರ್, ಸಹಿತ ಒಬ್ಬ ಪಿಟೀಲು ವಿದ್ವಾಂಸ. ಆತನನ್ನು ಕಷ್ಟಪಟ್ಟು ತಮ್ಮ ಜೊತೆ ಫ್ಯೂಶನ್ ಸಂಗೀತ ತಯಾರಿಸಲು ಒಪ್ಪಿಸಿ ಇಬ್ಬರೂ ಸೇರಿಕೊಂಡು ಅಂತರಾಗ್ನಿ ಅಂತ ಒಂದು ಬ್ಯಾಂಡ್ ಸುರುಮಾಡಿದರು. ಈ ಜೊತೆಗಾರಿಕೆ, ೨೦೦೫ರ ತನಕ ಮಾತ್ರ ಇತ್ತು. ನಂತರ ಭಾಸ್ಕರ್ ದೊಡ್ಡ ದೊಡ್ಡ ಗಾಯಕರ ಜೊತೆ ನುಡಿಸತೊಡಗಿದ ಮೇಲೆ, ಒಟ್ಟಿಗೆ ಸಮಯ ಸಿಗುವುದು ಕಡಿಮೆಯಾಯಿತು.

ವಿದೇಶದ ಒಂದು ಸನ್ನಿವೇಶ ಸಂಪಾದಿಸಿ

ಬೆಲ್ಜಿಯಂನಲ್ಲಿ ಫಾರ್ಮಸ್ಯೂಟಿಕಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಇದ್ದಾಗ ಒಂದು ಕಡೆ ಪೇಯಿಂಗ್ ಗೆಸ್ಟ್ ಆಗಿದ್ದಾಗ ಆ ಮನೆಯ ಯಜಮಾನ ರಘುರವರ ಹಾಡುವುದನ್ನು ಮೆಚ್ಚಿಕೊಂಡು ಅಲ್ಲಿಯ ಒಂದು ರೇಡಿಯೋ ಕೇಂದ್ರದಲ್ಲಿ ಹಾಡಲು ಅವಕಾಶ ಮಾಡಿಸಿಕೊಟ್ಟರು. ಅಲ್ಲಿನ ಜನ ಅದನ್ನು ತುಂಬ ಮೆಚ್ಚಿಕೊಂಡರು. ಯಾವುದೋ ಒಂದು ದೇಶದಲ್ಲಿ, ನಮ್ಮ ಭಾಷೆಯೇ ಅರ್ಥವಾಗದಿದ್ದರೂ ಜನ ನನ್ನ ಹಾಡನ್ನು ಮೆಚ್ಚಿಕೊಳ್ಳಬೇಕಾದರೆ, ನಮ್ಮ ದೇಶದಲ್ಲಿ ನಮ್ಮ ಭಾಷೆಯಲ್ಲಿ ಏಕೆ ಹಾಡಬಾರದೆನ್ನುವ ಆಲೋಚನೆ ಅವರ ತಲೆಯಲ್ಲಿ ಸುಳಿಯಿತು. ಆದರೆ ಜನಪ್ರಿಯತೆಗೆ ಅವರು ಸುಮಾರು ೯ ವರ್ಷಗಳ ಕಾಲ ಕಷ್ಟಪಡಬೇಕಾಯಿತು.

೨೦೦೭ ರಲ್ಲಿ ಮೊದಲ ಆಲ್ಬಂ ಸಂಪಾದಿಸಿ

೨೦೦೭ರಲ್ಲಿ ಮೊದಲ ಆಲ್ಬಂ ಬಂದರೂ ಜನಕ್ಕೆಲ್ಲ ಗೊತ್ತಾಗಿದ್ದು ಎರಡು ವರ್ಷಗಳ ಬಳಿಕ. ಸಿನಿಮಾದಲ್ಲಿ ಹಾಡಿದ ಮೇಲೆಯೇ ಜನರನ್ನು ತಲುಪಲು ಸಾಧ್ಯವಾಗಿದ್ದು. ಸಾಂಗ್‌ಲೈನ್ಸ್ ಪ್ರಶಸ್ತಿ ಬಂದರೂ ಸಿನಿಮಾದ ಮೂಲಕವೇ ಹೆಚ್ಚು ಬೆಳಕಿಗೆ ಬಂದಿದ್ದು. ಕನ್ನಡಿಗರು ಯಾರೂ ಗಮನಿಸಲೂ ಇಲ್ಲ ಎನ್ನುವ ಒಂದು ಕೊರತೆ ಹಯವದನಕ್ಕೆ, ಸಂಗೀತ ನೀಡಿದ್ದರು. ಭಾರತೀಯ ಜನಪದ ಸಂಗೀತ, ಆದರೆ ಹಾಡಿದ್ದು ಇಂಗ್ಲಿಶಿನಲ್ಲಿ. ಅದು ಇಂಗ್ಲಿಶ್ ನಾಟಕ, ಗಿರೀಶ್ ಕಾರ್ನಾಡ್ ಬರೆದರು. ಯಕ್ಷಗಾನದಲ್ಲಿರುವ ತೂಕ, ಶ್ರೀಮಂತಿಕೆ ಮತ್ತು ಕಚ್ಚಾ ಇವುಗಳ ಸಮ್ಮಿಶ್ರಣ ಇನ್ನೆಲ್ಲೂ ಇಲ್ಲ. ಅದಕ್ಕೆ ಅದನ್ನು ಕೋಟೆ ಸಿನಿಮಾದಲ್ಲಿ ಬಳಸಿಕೊಂಡರು.

ಗೆಜ್ಜೆಯ ಬಳಕೆ ಸಂಪಾದಿಸಿ

ನಮ್ಮ ಹರಿದಾಸರು ಬಳಸುವ ಗೆಜ್ಜೆ, ಒಂದು ಜಾನಪದ ಸಂಪ್ರದಾಯದಲ್ಲಿ ಬರುವ ಪರಿಕರ. ಭರತನಾಟ್ಯ ಕಲಿತಿರುವುದರಿಂದ ಗೆಜ್ಜೆ ಕಟ್ಟಿಕೊಳ್ಳುವುದು ಸಹಜವಾಗಿ ಅನುಭವಕ್ಕೆ ಬಂದಿದೆ. ಕೆಲವೊಮ್ಮೆ ಮಾನಿಟರ್ ಸ್ಪೀಕರ್ ಕೆಲಸ ಮಾಡದಿದ್ದಾಗ ಬ್ಯಾಂಡಿನ ಎಲ್ಲ ಕಲಾವಿದರು ಲಯಬದ್ಧವಾಗಿ ನುಡಿಸಲು, ಗೆಜ್ಜೆ ಧರಿಸಿ, ಕಾಲುಕುಟ್ಟುವುದು ಸಹಾಯಕ್ಕೆ ಬರುತ್ತದೆ. ಸಂಗೀತಗಾರನಾಗಿ ಕೆಲಸ ಪ್ರಾರಂಭಿಸಿ ಹದಿಮೂರು ವರ್ಷಗಳ ನಂತರ ಬಂದ ಜೀವನದ ಪ್ರಥಮ ಪ್ರಶಸ್ತಿ ಇದು.

ಚಲನಚಿತ್ರ ಸಂಪಾದಿಸಿ

ವರ್ಷ ಚಿತ್ರ ನುಡಿ
2008 ಸೈಕೋ ಕನ್ನಡ
2009 ಕ್ವಿಕ್‌ ಗನ್‌ ಮುರುಗನ್‌ ಹಿಂದಿ
2009 ಜಸ್ಟ್‌ ಮಾತ್‌ ಮಾತಲ್ಲಿ ಕನ್ನಡ
2011 ಕೋಟೆ ಕನ್ನಡ
2011 ಮುಜಸೆ ಫ್ರೆಂಡ್‌ಶಿಪ್‌ ಕರೋಗೆ ಹಿಂದಿ
2013 ನಾರ್ತ್‌ ೨೪ ಕಥಂ ಮಲಯಾಳಂ
2014 ಬೇವ್‌ಕೂಫಿಯಾನ್‌ ಹಿಂದಿ
2015 ಸನ್‌ ಆಫ್‌ ಸತ್ಯಮೂರ್ತಿ ತೆಲುಗು
2015 ಶ್ರೀಮಂತುಡು ತೆಲುಗು
2015 ನಾನ್ನಕು ಪ್ರೇಮತೋ ತೆಲುಗು

ಪ್ರಶಸ್ತಿಗಳು ಸಂಪಾದಿಸಿ

  • ಸಾಂಗ್ ಲೈನ್ ಅವಾರ್ಡ್

ಉಲ್ಲೇಖಗಳು ಸಂಪಾದಿಸಿ

ಬಾಹ್ಯ ಸಂಪರ್ಕಗಳು ಸಂಪಾದಿಸಿ