ವಾಮನ ನಂದಾವರ
ಕನ್ನಡ ಮತ್ತು ತುಳವಿನ ವಿದ್ವಾಂಸರು, ಸಂಶೋಧಕರು,ತುಳುವಿನ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.
ಜನನ
ಬದಲಾಯಿಸಿದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರ[೧]. ತಂದೆ ಬಾಬು ಬಾಳೆಪುಣಿ, ತಾಯಿ ಪೂವಮ್ಮರವರ ಮಗನಾಗಿ ೧೫.೧೧.೧೯೪೪ರಂದು ಜನಿಸಿದರು.
ವಿದ್ಯಾಭ್ಯಾಸ
ಬದಲಾಯಿಸಿ- ಬಂಟ್ವಾಳ ತಾಲ್ಲೂಕಿನ ಮುದುಂಗಾರು ಕಟ್ಟೆ ಸರಕಾರಿ ಎಲಿಮೆಂಟರಿ ಶಾಲೆ, ಪಾಣೆಮಂಗಳೂರಿನ ಎಸ್.ವಿ.ಎಸ್ ಹೈಯರ್ ಎಲಿಮೆಂಟರಿ ಶಾಲೆ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಬೋರ್ಡು ಹೈಸ್ಕೂಲು ಕುರ್ನಾಡ್, ಆನಂದಾಶ್ರಮ ಪ್ರೌಢಶಾಲೆ,ಕೋಟೆಕಾರ್
- ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಬಿ.ಎಸ್‌ಸಿ ಪದವಿ.
- ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ.
- ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ (ಕನ್ನಡ)
- ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಡ್
- ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ.ವಿವೇಕ ರೈಯವರ ಮಾರ್ಗದರ್ಶನದಲ್ಲಿ 'ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ.[೨]
ಉದ್ಯೋಗ
ಬದಲಾಯಿಸಿ- ಬೆಂಗಳೂರುದ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ
- ಸೇಂಟ್ ಆನ್ಸ್ ಪ್ರೌಢಶಾಲೆಯ ಸಹಾಯಕ ಅಧ್ಯಾಪಕರಾಗಿ ಸೇವೆ
- ಸೇಂಟ್ ಆನ್ಸ್ ಮಹಿಳಾ ಶಿಕ್ಷಕ-ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ
- ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ.
- ಸಹ್ಯಾದ್ರಿ ಶಿಕ್ಣಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲ
- ಇಂದಿರಾ ಗಾಂಧಿ ರಾಷ್ತ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರು
- ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿ
- ಮಂಗಳೂರು ದರ್ಶನ ಯೋಜನೆದ ಸಹಾಯಕ ಸಂಪಾದಕರು
ಕೃತಿಗಳು
ಬದಲಾಯಿಸಿ- ತಾಳಮೇಳ (ಕನ್ನಡ ಕವನ ಸಂಕಲನ) ೧೯೭೫
- ಓಲೆಪಟಾಕಿ (ಸ್ವತಂತ್ರ ತುಳು ಕನ್ನಡ ಒಗಟುಗಳ ಸಂಕಲನ)೧೯೮೦
- ತುಳುವೆರೆ ಕುಸಾಲ್ ಕುಸೆಲ್ (ತುಳು ಜಾನಪದ ಪ್ರಬಂಧ) ೧೯೮೭/೧೯೮೮
- ಸಿಂಗದನ (ತುಳು ಜಾನಪದ ಅಧ್ಯಯನ ಪ್ರಬಂಧ) ೧೯೮೭/೧೯೮೮
- ತುಳುಟು ಪನಿಕತೆ (ತುಳುತ್ತ ದಂತ ಕತೆಕುಲು)[೩] ೧೯೮೮
- ಅವಳಿ ವೀರರೆ ಕುರಿತ ಜಾನಪದ ಮಹಾಕಾವ್ಯ ‘ಕೋಟಿ ಚೆನ್ನಯ'
- 'ಜಾನಪದ ಸುತ್ತಮುತ್ತ’.
- ಡಿ.ವಿ.ಜಿ.ಯವರ ಸಾಹಿತ್ಯ ವಿಮರ್ಶೆ ‘ನಂಬಿಕೆ’
- ಅಭಿನಂದನ ಗ್ರಂಥ ‘ಕಾಕಾನ ಅಭಿನಂದನೆ’
- ಸ್ಮರಣ ಸಂಚಿಕೆ ‘ಪೆಂಗದೂಮ’
- ಬರಹಗಾರರ ಕೈಪಿಡಿ ‘ತುಳು ಸಾಹಿತಿ ಕಲಾವಿದರ ಮಾಹಿತಿ’
- ಕನ್ನಡ ಸಾಹಿತ್ಯ ಸಮ್ಮೇಳನದ ‘ಪೊನ್ನ ಕಂಠಿ’,
- ‘ಅಜ್ಜಿ ತಾಂಕಿನ ಪುಳ್ಳಿ’,
- ‘ನೆತ್ತರಾ ನೀರಾ’, ಇಂಚಿತ್ತಿ ತುಳು ನಾಟಕೊಲು,
- ತುಳು ಸಾಹಿತ್ಯ ಚರಿತ್ರೆ,
- ತುಳು ಜಾನಪದದ ಆಚರಣೆ,
- ತುಳು ಭಾಷಾ ಸಾಹಿತ್ಯ ಡಿ.ಕೆ. ಚೌಟ ಇಂಚಿತಿ ವ್ಯಕ್ತಿ ಚಿತ್ರ
- ಮನಶಾಸ್ತ್ರ ವಿಜ್ಞಾನಿಯ ಜೀವನ – ಸಾಧನೆ ಕುರಿತ ‘ಸರ್ ಜೀಮ್ಸ್ ಜಾರ್ಜ್ ಫ್ರೆಜರ್’
- ತುಳು ಕವನ ಸಂಕಲನ ‘ಬೀರ’.
- ತುಳು ದಂತಕತೆ ‘ತುಳುಟು ಪನಿಕತೆ’ ಮತ್ತು ‘ಒಂಜಿ ಕೋಪೆ ಕತೆಕುಲು’,
- ತುಳು ಜಾನಪದ ಕತೆ ‘ಕಿಡಿಗೇಡಿಯ ಕೀಟಲೆ’, ಮಕ್ಕಳ ಕಥೆ ‘ಕೋಟಿ ಚೆನ್ನಯ’
ಸಾಧನೆ
ಬದಲಾಯಿಸಿ- ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಜಾನಪದ ಸಿದ್ಧಾಂತದ ಅಧ್ಯಯನ, ಕಮ್ಮಟ.
- ತುಳು ಪಠ್ಯ ಪುಸ್ತಕ ಸಮಿತಿ, ತುಳು ನಿಘಂಟು ಯೋಜನೆ, ತುಳು ಜಾನಪದ ಪತ್ರಿಕೆ ಮಂಡಲಿಯಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ..
- ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ
- ಬಂಟ್ವಾಳ ತಾಲ್ಲೂಕು ೧೨ನೆದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ
ಪ್ರಶಸ್ತಿ
ಬದಲಾಯಿಸಿ- ತುಳುವರ ಕುಸಾಲ್ ಕುಸೆಲ್ ಕೃತಿಗೆ ಭಾರತೀಯ ಭಾಷಾ ಕೇಂದ್ರೀಯ ಸಂಸ್ಥೆಯ ಪ್ರಶಸ್ತಿ,
- ಸಿಂಗದನ ಮತ್ತು ಜಾನಪದ ಸುತ್ತ ಮುತ್ತ ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುರಸ್ಕಾರ,
- 'ಕೋಟಿ ಚೆನ್ನಯ ಜಾನಪದೀಯ ಅಧ್ಯಯನದ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ.
- ಬನ್ನಂಜೆ ಬಾಬು ಅಮಿನ್ ಪ್ರಶಸ್ತಿ.[೪]
- ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,
- ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ.[೫]
- ನಾಟಕ ಅಕಾಡೆಮಿ ಗೌರವ ಪ್ರಶಸ್ತಿ,
- ಕಾಂತಾವರ ಕನ್ನಡ ಸಂಘದ ಪುರಸ್ಕಾರ
ಉಲ್ಲೇಖ
ಬದಲಾಯಿಸಿ- ↑ . http://kanaja.in/?tribe_events=%E0%B2%A1%E0%B2%BE-%E0%B2%B5%E0%B2%BE%E0%B2%AE%E0%B2%A8-%E0%B2%A8%E0%B2%82%E0%B2%A6%E0%B2%BE%E0%B2%B5%E0%B2%B0[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2014-02-09. Retrieved 2021-08-10.
- ↑ http://tuluacademy.org/en/publications/page/2/
- ↑ .http://udupibits.in/?p=2206
- ↑ .http://www.rrcsirisampada.com/WjQkZ/OiZcZ/PLfhZ/QOipZ/news.html