ಲೂಯಿಸಾ ಕ್ಯಾಥರೀನ್ ಶೊರ್
ಬಾಲ್ಯ ಮತ್ತು ಕುಟುಂಬ
ಬದಲಾಯಿಸಿಲೂಯಿಸ ಕ್ಯಾಥರೀನ್ (1824-1895), ೧೯ ನೇ ಶತಮಾನದ ಪ್ರಸಿದ್ಧ ಕವಯಿತ್ರಿ ಹಾಗು ಬರಹಗಾರ್ತಿ. ಫೆಬ್ರವರಿ 20, 1824 ರಂದು ಪಾಟನ್, ಬೆಡ್ಫೋರ್ಡಶೈರಲ್ಲಿ ಜನಿಸಿದರು. ಇವರ ತಂದೆ ಥಾಮಸ್ ಶೋರ್, ಚರ್ಚ್ ಆಫ್ ಇಂಗ್ಲೆಂಡ್‍ನ ಪಾದ್ರಿಯಾಗಿದ್ದರು ಮತ್ತು ಇವರು ಒಬ್ಬ ಲೇಖಕರಾಗಿದ್ದರು. ಥಾಮಸ್ ಶೋರ್ ಉತ್ತಮ ಕುಟುಂಬದಿಂದ ಬಂದಿದ್ದು. ಅವರು ಮೊದಲು ಲಾರ್ಡ್ ಟೀಗ್ಮೌತ್ ಆದ. ಜಾನ್ ಶೋರ್ ಅವರ ಸೋದರಳಿಯ ಮತ್ತು ಅವನ ತಾಯಿ ಕವವಯಿತ್ರಿ. ವಿನಾಥ್ರೋಪ್ ಮ್ಯಾಕ್ವರ್ತ್ ಪ್ರೆದ್‌ನ ಚಿಕ್ಕಮ್ಮ ಆಗಿದ್ದರು. ಥಾಮಸ್ ಶೋರ್ ಆಕ್ಸ್ಫರ್ಡ್‌ನ, ವಾಧಮ್ ಕಾಲೇಜಿನಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ, 1814 ರಲ್ಲಿ ಬಿಎ ಪದವಿಯನ್ನು ಪಡೆದರು ಹಾಗು 1818 ರಲ್ಲಿ ಎಮ್ಎ ಪದವಿಯನ್ನು ಪಡೆದರು. ಅವರು 1812 ರಿಂದ 1818 ರವರೆಗೆ ಕಾಲೇಜಿನಲ್ಲಿ ವಿದ್ವಾಂಸರಾಗಿದ್ದರು. 19 ಡಿಸೆಂಬರ್ 1818 ರಂದು ಲಿಟ್ಲ್ ಕ್ಯಾಸ್ಟರ್ಟನ್, ರುಟ್ಲ್ಯಾಂಡ್‌ನಲ್ಲಿ ರೆವೆಡ್ ಆರ್. ಟ್ವೆಪೆನಿ ಅವರ ಪುತ್ರಿ "ಮಾರ್ಗರೆಟ್ ಆನಿ" ಟ್ವೀಪೆನಿಯನ್ನು ಹಿರಿಯರ ಇಚ್ಚೆಯಂತೆ ತಮ್ಮ ಪತ್ನಿಯನ್ನಾಗಿ ಸ್ವೀಕರಿಸಿದರು. ಥಾಮಸ್ ಶೋರ್ ಸೇಂಟ್ ಎಡ್ಮಂಡ್ಸ್ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಕಾಲ ವೃತ್ತಿಜೀವನದ ನಂತರ, ತಮ್ಮ ಕುಟುಂಬದೊಂದಿಗೆ ಅವರು ಎವರ್ಟನಲ್ಲಿ ನೆಲೆಗೊಂಡರು. ಅವರು ಕೊಕೇನ್ ಹ್ಯಾಟ್ಲಿಯ ನೆರೆಹೊರೆಯ ಪ್ಯಾರಿಷ್‌ನಲ್ಲಿಯೂ ಸಹ ಕ್ರೇಟಾಗಿ ಕಾರ್ಯನಿರ್ವಹಿಸಿದರು. ಅವರು ಅನೇಕ ಶಾಸ್ತ್ರೀಯ ಮತ್ತು ದೇವತಾಶಾಸ್ತ್ರದ ಕೃತಿಗಳನ್ನು ರಚಿಸಿದ್ದಾರೆ. 1863 ರಲ್ಲಿ 'ದಿ ಚರ್ಚ್‌ಮ್ಯಾನ್ ಮತ್ತು ಫ್ರೀಥಿಂಕರ್, ಕ್ರುತಿಯನ್ನು ಅವರು ಪ್ರಕಟಿಸಿದರು.
ಒಡಹುಟ್ಟಿದವರು
ಬದಲಾಯಿಸಿಮಾರ್ಗರೆಟ್ ಎಮಿಲಿ ಶೋರ್ (1819-1839), ರಿಚರ್ಡ್ ನೋಯೆಲ್ ಶೋರ್ (ಬ್ಯಾಪ್ 1821), ಅರಬೆಲ್ಲಾ ಸುಸಾನಾ ಶೋರ್ (1897, ಅಥವಾ 1897 ರ ನಂತರ), ಲೂಯಿಸಾ ಕ್ಯಾಥರೀನ್ ಶೋರ್ ಮತ್ತು ಮ್ಯಾಕ್ವರ್ತ್ ಚಾರ್ಲ್ಸ್ ಶೋರ್ (ಬಾಪ್ 1825, ಡಿ. 1860) ಎಂಬ ಐವರು ಥಾಮಸ್ ಶೋರ್ ಹಾಗು ಮಾರ್ಗರೆಟ್ ಆನಿ ದಂಪತಿಗಳ ಮಕ್ಕಳು. ಅವರು ಥಾಮಸ್ ಶೋರ್‍ನ ಐದು ಮಕ್ಕಳಲ್ಲಿ ನಾಲ್ಕನೇ ಮತ್ತು ಮೂರು ಹೆಣ್ಣು ಮಕ್ಕಳಲ್ಲಿ ಕಿರಿಯರಾಗಿದ್ದರು. ಅವರ ಮೂರು ಹೆಣ್ಣುಮಕ್ಕಳು ಸಾಹಿತ್ಯದ ಕಲೆಯನ್ನು ತಮ್ಮ ತಂದೆಯಿಂದ ಉಡುಗೊರೆಯಾಗಿ ಪಡೆದಿದ್ದರು ಮತ್ತು ಕಲಿಕೆಯ ಉತ್ಸಾಹವನ್ನೂ ಹೊಂದಿದ್ದರು. ಇವರಲ್ಲಿ ಹಿರಿಯಳು, ಮಾರ್ಗರೆಟ್ ಎಮಿಲಿ ಷೋರ್ (1819-1839) ಹೆಚ್ಚಾಗಿ ಕವನ ಮತ್ತು ಕಾಲ್ಪನಿಕ ಕಥೆಗಳನ್ನು ಬರೆದಿದ್ದಾರೆ. ಇಪ್ಪತ್ತನೇ ವರ್ಷದಲ್ಲೆ ಮೃತಳಾದ ಈಕೆಯ ಉತ್ಸಾಹಭರಿತ ಜೀವನ ಮತ್ತು ಅಧ್ಯಯನಗಳನ್ನು, 1891 ರಲ್ಲಿ ತನ್ನ ಸಹೋದರಿಯರು ಪ್ರಕಟಿಸಿದ 'ಜರ್ನಲ್' ನಿಂದ ತಿಳಿಯಬಹುದಾಗಿದೆ.
ಸಾಹಿತ್ಯಾಭಿರುಚಿ ಹಾಗು ಅವರ ಕೊಡುಗೆಗಳು
ಬದಲಾಯಿಸಿಲೂಯಿಸಾ ಶೋರ್ ಅನೇಕ ಸಾಹಿತ್ಯ ನಿರ್ಮಾಣಗಳಲ್ಲಿ ತನ್ನ ಸಹೋದರಿ ಅರಬೆಲ್ಲಾರೊಂದಿಗೆ ಆಸಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಲೂಯಿಸಾ ಶೋರ್‌ರ ಮೊದಲ ಸಂಯೋಜನೆ "ವಾರ್ ಮ್ಯೂಸಿಕ್" ಎಂಬ ಕ್ರಿಮಿಯನ್ ಯುದ್ಧದ ಬಗೆಗಿನ ಕವಿತೆಯಾಗಿದೆ. 1855 ರಲ್ಲಿ "ವಾರ್ ಲಿರಿಕ್ಸ್" ಎಂಬ ಶೀರ್ಷಿಕೆಯ ಪದ್ಯಗಳ ಒಂದು ಸಂಪುಟವನ್ನು ನಿರ್ಮಿಸಿದ ಈ ಇಬ್ಬರು ಸಹೋದರಿಯರು 1859 ರಲ್ಲಿ, "ಜೆಮ್ಮಾ ಆಫ್ ದಿ ಐಲ್ಸ್", ಒಂದು ಸಾಹಿತ್ಯಕ ಕವಿತೆಯನ್ನು ಬರೆದಿದ್ದಾರೆ. 1871 ರಲ್ಲಿ, 'ಫ್ರ ಡಾಲ್ಸಿನೊ, ಮತ್ತು ಇತರ ಕವನಗಳು,' ಮತ್ತು 1890 ರಲ್ಲಿ 'ಎಲಿಗೀಸ್ ಮತ್ತು ಸ್ಮಾರಕಗಳು' ಇತ್ಯಾದಿ ಕೃತಿಗಳನ್ನು ಈ ಇಬ್ಬರು ಸಹೊದರಿಯರು ರಚಿಸಿದ್ದಾರೆ. ಈ ಸಂಪುಟಗದಲ್ಲಿನ ಪ್ರಮುಖ ಕವಿತೆಗಳು ಲೂಯಿಸಾ ಕೃತಿಯಾಗಿದ್ದು, ಗಮನಾರ್ಹವಾಗಿ ತಮ್ಮ ಸಹೋದರಿ ಮಾರ್ಗರೇಟ್ ಎಮಿಲಿಯ ಮರಣದವನ್ನು ಕುರಿತು ಮತ್ತು ಅವರ ಸಹೋದರ ಮ್ಯಾಕ್ವರ್ತ್ ಚಾರ್ಲ್ಸ್ ಶೋರ್ನ 1860 ರಲ್ಲಿ ಕಳೆದುಕೊಂಡಿರುವ ಬಗ್ಗೆ ಚಿತ್ರಿತವಾಗಿದೆ. ತನ್ನ ಅಪ್ರಕಟಿತ ಕವಿತೆಗಳ ಆಯ್ದ ಭಾಗಗಳನ್ನು, 1896 ರಲ್ಲಿ ತನ್ನ ಸಹೋದರಿ ಶ್ರೀ ಫ್ರೆಡೆರಿಕ್ ಹ್ಯಾರಿಸನ್ ಅವರ ಮೆಚ್ಚುಗೆಯೊಂದಿಗೆ, 1897 ರಲ್ಲಿ ಅವರ ಕೆಲವು ನಾಟಕಗಳು ಮತ್ತು ಕವಿತೆಗಳ ಮರುಬಿಡುಗಡೆಯಾಯಿತು. ಅವರ ಎಲ್ಲಾ ಕೆಲಸವು ಶ್ರಮದಾಯಕ ಮತ್ತು ಮಹತ್ತರವಾದ ಉದ್ದೇಶವನ್ನು ಹೊಂದಿತ್ತು. ಲೂಯಿಸ ಮತ್ತು ಅವರ ಸಹೋದರಿ ಸ್ತ್ರೀವಾದಿಗಳಾಗಿದ್ದು, ಮಹಿಳಾ ಸಂಬಂಧಿ ಸಾಮಾಜಿಕ ಕಾರ್ಯಗಳಲ್ಲಿ ವಕೀಲತ್ವವನ್ನು ಉತ್ಸುಕರಾಗಿ ನಿರ್ವಹಿಸುತ್ತಿದ್ದರು. 1874 ರ ಏಪ್ರಿಲ್‌ನಲ್ಲಿ, ವೆಸ್ಟ್‌ಮಿಸ್ಟರ್‌ನ ರಿವ್ಯೂನಲ್ಲಿ ಲೂಯಿಸ ಶೋರ್‌ನ ಲೇಖನವೊಂದು ಹಲವಾರು ಬಾರಿ ಮರುಮುದ್ರಣವಾಯಿತು. ಅದರಲ್ಲಿ ಮಹಿಳೆಯರ ಚಳವಳಿಯಿಂದ ತೆಗೆದುಕೊಳ್ಳಲ್ಪಟ್ಟ ನಿರ್ಧಾರಗಳ ಪೂರ್ವಭಾವಿ ಚರ್ಚೆಯನ್ನು ಪ್ರಸ್ತುತಪಡಿಸಲಾಗಿದೆ.
ನಿಧನ
ಬದಲಾಯಿಸಿಲೂಯಿಸಾ ತನ್ನ ಜೀವನದ ಕೊನೆಯ ಭಾಗವನ್ನು ತನ್ನ ಸಹೋದರಿ ಅರಬೆಲ್ಲರೊಂದಿಗೆ ಬಕಿಂಗ್ಹ್ಯಾಮ್‌ಶಿರ್‌ನ, ಟ್ಯಾಪಪ್ಲೋವ್ ಸಮೀಪದ ಆರ್ಚಾರ್ಡ್ ಪೊಯ್ಲೆನಲ್ಲಿ ಕಳೆದರು. ಅವರುಮೇ 1895 ರಲ್ಲಿ ವಿಂಬಲ್ಡನ್‌ನಲ್ಲಿ ನಿಧನರಾದರು ಮತ್ತು ಬ್ರೂಕ್ವುಡ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರೆವೇರಿಸಲಾಯಿತು.