ಲಟ್ಟಣಿಗೆಯು ಉರುಳೆಯಾಕಾರದ ಆಹಾರ ತಯಾರಿಕಾ ಉಪಕರಣ. ಇದನ್ನು ಕಣಕಕ್ಕೆ ಆಕಾರ ಕೊಡಲು ಮತ್ತು ಅದನ್ನು ಚಪ್ಪಟೆಯಾಗಿಸಲು ಬಳಸಲಾಗುತ್ತದೆ. ಎರಡು ಶೈಲಿಗಳ ಲಟ್ಟಣಿಗೆಗಳು ಕಂಡುಬರುತ್ತವೆ: ರೋಲರ್‌ಗಳು ಹಾಗೂ ರಾಡ್‍ಗಳು. ರೋಲರ್ ಬಗೆಯ ಲಟ್ಟಣಿಗೆಯು ಪ್ರತಿ ತುದಿಯಲ್ಲೂ ಸಣ್ಣ ಹಿಡಿಗಳಿರುವ ದಪ್ಪನೆಯ ಉರುಳೆಯನ್ನು ಹೊಂದಿರುತ್ತದೆ; ರಾಡ್ ಬಗೆಯ ಲಟ್ಟಣಿಗೆಗಳು ಸಾಮಾನ್ಯವಾಗಿ ತೆಳ್ಳನೆಯ ಕ್ರಮೇಣ ಮೊನಚಾಗುವ ದಂಡಗಳಾಗಿರುತ್ತವೆ. ವಿಭಿನ್ನ ಬಗೆಗಳ ಹಾಗೂ ವಸ್ತುಗಳ ಲಟ್ಟಣಿಗೆಗಳು ಬದಲಾಗುವ ಅನುಕೂಲಗಳನ್ನು ಒದಗಿಸುತ್ತವೆ, ಮತ್ತು ಅವನ್ನು ಅಡುಗೆ ಹಾಗೂ ಬೇಕಿಂಗ್‍ನಲ್ಲಿ ಭಿನ್ನ ಕಾರ್ಯಗಳಿಗೆ ಬಳಸಲಾಗುತ್ತದೆ.

ಕಟ್ಟಿಗೆಯ ಲಟ್ಟಣಿಗೆ
ಲಟ್ಟಣಿಗೆಯಿಂದ ಚಪಾತಿ ಲಟ್ಟಿಸುತ್ತಿರುವುದು

ಲಟ್ಟಣಿಗೆಗಳು ಹಲವಾರು ಗಾತ್ರಗಳು, ಆಕಾರಗಳು ಮತ್ತು ಗಾಜು, ಪಿಂಗಾಣಿ, ಅಕ್ರಿಲಿಕ್, ಬೇಕಲೈಟ್, ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಮ್, ಸಿಲಿಕೋನ್, ಕಟ್ಟಿಗೆ, ತುಕ್ಕುರಹಿತ ಉಕ್ಕು, ಅಮೃತಶಿಲೆ, ಹಾಗೂ ಪ್ಲಾಸ್ಟಿಕ್ ಸೇರಿದಂತೆ ವಿವಿಧ ವಸ್ತುಗಳಲ್ಲಿ ಬರುತ್ತವೆ. ಕೆಲವು ಟೊಳ್ಳಾಗಿದ್ದು ಅಪೇಕ್ಷಿತ ಆಹಾರವನ್ನು ಉತ್ತಮವಾಗಿ ಲಟ್ಟಿಸಲು ಇವುಗಳಲ್ಲಿ ಬಿಸಿ ಅಥವಾ ತಂಪು ನೀರನ್ನು ತುಂಬುವುದು ಸಾಧ್ಯವಾಗುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

Rolling Pins