ಕಣಕ
ಕಣಕವು ಯಾವುದೇ ಧಾನ್ಯಗಳು, ದ್ವಿದಳಧಾನ್ಯದ ಅಥವಾ ಚೆಸ್ನಟ್ ಬೆಳೆಗಳಿಂದ ತಯಾರಿಸಲಾದ ಗಟ್ಟಿ, ಮೆತುವಾದ, ಕೆಲವೊಮ್ಮೆ ಹಿಗ್ಗುವಂಥ ಹಿಟ್ಟು. ಕಣಕವನ್ನು ಸಾಮಾನ್ಯವಾಗಿ ಹಿಟ್ಟಿಗೆ ಸಣ್ಣ ಪ್ರಮಾಣದ ನೀರು ಮತ್ತು/ಅಥವಾ ಇತರ ದ್ರವವನ್ನು ಮಿಶ್ರಣಮಾಡಿ ತಯಾರಿಸಲಾಗುತ್ತದೆ, ಮತ್ತು ಕೆಲವೊಮ್ಮೆ ಇದರಲ್ಲಿ ಮಂಡ ಅಥವಾ ಇತರ ಹುದುಗುಬರಿಸುವ ಪದಾರ್ಥಗಳು ಜೊತೆಗೆ ವಿವಿಧ ಕೊಬ್ಬುಗಳು ಅಥವಾ ರುಚಿಕಾರಕಗಳಂತಹ ಇತರ ಘಟಕಾಂಶಗಳು ಸೇರಿರುತ್ತದೆ. ಕಣಕವನ್ನು ಮಾಡುವ ಮತ್ತು ಅದಕ್ಕೆ ಆಕಾರ ಕೊಡುವ ಪ್ರಕ್ರಿಯೆಯು ಅನೇಕ ವಿವಿಧ ಆಹಾರ ಪದಾರ್ಥಗಳ ತಯಾರಿಕೆಗೆ ಪೂರ್ವಗಾಮಿಯಾಗಿದೆ, ವಿಶೇಷವಾಗಿ ಬ್ರೆಡಗಳು ಮತ್ತು ಬ್ರೆಡ್ ಆಧಾರಿತ ವಸ್ತುಗಳು, ಮತ್ತು ಬಿಸ್ಕೆಟ್‍ಗಳು, ಕೇಕ್‍ಗಳು, ಕುಕಿಗಳು, ಡಂಪ್ಲಿಂಗ್‍ಗಳು, ಫ಼್ಲ್ಯಾಟ್‍ಬ್ರೆಡ್‍ಗಳು, ನೂಡಲ್‍ಗಳು, ಪಾಸ್ತಾ, ಪೇಸ್ಟ್ರಿ, ಪೀಟ್ಸಾ, ಪೈನ ಮಧ್ಯಭಾಗ, ಮತ್ತು ಹೋಲುವ ವಸ್ತುಗಳು ಸೇರಿದಂತೆ ಕೂಡ. ಕಣಕವನ್ನು ಅನೇಕ ವಿವಿಧ ಹಿಟ್ಟುಗಳಿಂದ ತಯಾರಿಸಬಹುದು, ಸಾಮಾನ್ಯವಾಗಿ ಗೋಧಿ ಆದರೆ ಮೆಕ್ಕೆ ಜೋಳ, ಅಕ್ಕಿ, ಸಣ್ಣಗೋದಿ, ದ್ವಿದಳಧಾನ್ಯಗಳು, ಬಾದಾಮಿ, ಮತ್ತು ಇತರ ದವಸ ಧಾನ್ಯಗಳು ಮತ್ತು ವಿಶ್ವದ ಸುತ್ತಲೂ ಬಳಸಲಾಗುವ ಬೆಳೆಗಳಿಂದ ತಯಾರಿಸಲಾದ ಹಿಟ್ಟುಗಳು ಕೂಡ.
ಘಟಕಾಂಶಗಳು, ಉತ್ಪಾದಿಸಲಾಗುತ್ತಿರುವ ಉತ್ಪನ್ನದ ಬಗೆ, ಹುದುಗು ಪದಾರ್ಥದ ಬಗೆ (ವಿಶೇಷವಾಗಿ ಕಣಕವು ಮಂಡವನ್ನು ಆಧರಿಸಿದೆಯೋ ಅಥವಾ ಇಲ್ಲವೋ ಎಂದು), ಕಣಕವನ್ನು ಹೇಗೆ ಮಿಶ್ರಣ ಮಾಡಲಾಗುತ್ತದೆ (ಕ್ಷಿಪ್ರವಾಗಿ ಮಿಶ್ರಣಮಾಡಲಾಗುತ್ತದೆಯೋ ಅಥವಾ ನಾದಿ ಉಬ್ಬಲು ಬಿಡಲಾಗುತ್ತದೆಯೋ ಎಂದು), ಮತ್ತು ಬೇಯಿಸುವ ಅಥವಾ ಬೇಕ್‍ಮಾಡುವ ತಂತ್ರವನ್ನು ಅವಲಂಬಿಸಿ ಕಣಕಗಳು ವ್ಯಾಪಕವಾಗಿ ಬದಲಾಗುತ್ತವೆ. ಯಾವುದು ಕಣಕವನ್ನು ತಯಾರಿಸುತ್ತದೆ ಎಂಬುದಕ್ಕೆ ಔಪಚಾರಿಕ ವ್ಯಾಖ್ಯಾನವಿಲ್ಲ, ಆದರೆ ಬಹುತೇಕ ಕಣಕಗಳು ಸ್ನಿಗ್ಧ ಸ್ಥಿತಿಸ್ಥಾಪಕ ಗುಣಲಕ್ಷಣಗಳನ್ನು ಹೊಂದಿರುತ್ತವೆ.[೧]
ಹುದುಗು ಬರಿಸಿದ ಕಣಕಗಳನ್ನು (ಸಾಮಾನ್ಯವಾಗಿ ದವಸ ಧಾನ್ಯಗಳು ಅಥವಾ ದ್ವಿದಳಧಾನ್ಯಗಳನ್ನು ಪುಡಿಮಾಡಿ, ಹಿಟ್ಟು ಉತ್ಪಾದಿಸಿ, ನೀರು ಮತ್ತು ಮಂಡವನ್ನು ಮಿಶ್ರಣಮಾಡಿ ತಯಾರಿಸಲಾಗುತ್ತದೆ) ವಿಶ್ವದ ಎಲ್ಲೆಡೆ ವಿವಿಧ ಬ್ರೆಡ್‍ಗಳನ್ನು ತಯಾರಿಸಲು ಬಳಸಲಾಗುತ್ತದೆ. ಬ್ರೆಡ್ ಕಣಕದಲ್ಲಿ ಉಪ್ಪು, ಎಣ್ಣೆಗಳು ಅಥವಾ ಕೊಬ್ಬುಗಳು, ಸಕ್ಕರೆಗಳು ಅಥವಾ ಜೇನು ಮತ್ತು ಕೆಲವೊಮ್ಮೆ ಹಾಲು ಅಥವಾ ಮೊಟ್ಟೆಗಳು ಕೂಡ ಸಾಮಾನ್ಯ ಘಟಕಾಂಶಗಳಾಗಿರುತ್ತವೆ. ವಾಣಿಜ್ಯ ಬ್ರೆಡ್ ಕಣಕಗಳು ಕಣಕ ಸುಧಾರಕಗಳನ್ನು (ಕಣಕದ ಸ್ಥಿರತೆ ಮತ್ತು ಅಂತಿಮ ಉತ್ಪನ್ನದಲ್ಲಿ ನೆರವಾಗುವ ಘಟಕಾಂಶಗಳ ಒಂದು ವರ್ಗ) ಕೂಡ ಒಳಗೊಂಡಿರಬಹುದು.
ಉಲ್ಲೇಖಗಳು
ಬದಲಾಯಿಸಿ- ↑ Leon Levine; Ed Boehmer (1997). "Chapter 12, Dough Processing Systems". Handbook of Food Engineering Process. doi:10.1201/9781420049077.ch12.