ಕುಕಿ
ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಕೆನಡಾದಲ್ಲಿ, ಕುಕಿ ಎಂದರೆ ಒಂದು ಸಣ್ಣ, ಚಪ್ಪಟೆಯಾದ-ಬೇಯಿಸಿದ ಕೇಕು ಅಥವಾ ಬಿಸ್ಕತ್ತು, ಇದು ಸಾಮಾನ್ಯವಾಗಿ ಕೊಬ್ಬು, ಹಿಟ್ಟು, ಮೊಟ್ಟೆಗಳು ಹಾಗು ಸಕ್ಕರೆಯನ್ನು ಒಳಗೊಂಡಿರುತ್ತದೆ. ಉತ್ತರ ಅಮೆರಿಕದ ಹೊರಗಿರುವ ಬಹುತೇಕ ಇಂಗ್ಲಿಷ್ ಮಾತನಾಡುವ ರಾಷ್ಟ್ರಗಳಲ್ಲಿ, ಇದಕ್ಕಿರುವ ಬಹಳ ಸಾಮಾನ್ಯ ಪದವೆಂದರ ಬಿಸ್ಕತ್ತು ; ಹಲವು ಪ್ರದೇಶಗಳಲ್ಲಿ ಎರಡೂ ಪದಗಳನ್ನು ಬಳಸಲಾಗುತ್ತದೆ, ಇತರೆಡೆಗಳಲ್ಲಿ ಎರಡು ಪದಗಳು ವಿಭಿನ್ನ ಅರ್ಥಗಳನ್ನು ಹೊಂದಿರುತ್ತವೆ. ಸ್ಕಾಟ್ಲ್ಯಾಂಡ್ ನಲ್ಲಿ ಕುಕಿ ಎಂದರೆ ಒಂದು ಸಾಧಾರಣ ಬನ್ ಆಗಿದ್ದರೆ[೧], ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಒಂದು ಬಿಸ್ಕತ್ತೆಂದರೆ , ದೋಸೆಗೆ ಸದೃಶವಾಗಿರುವ, ತಕ್ಷಣಕ್ಕೆ ತಯಾರಾಗುವ ಬ್ರೆಡ್ ಆಗಿದೆ. ಯುನೈಟೆಡ್ ಕಿಂಗ್ಡಮ್ ನಲ್ಲಿ, ಕುಕಿ ಎಂದರೆ ಸಾಮಾನ್ಯವಾಗಿ ಚಾಕೊಲೆಟ್ ತುಣುಕುಗಳನ್ನು ಒಳಗೊಂಡಿರುವ ಬೇಯಿಸಿದ ಬಿಸ್ಕತ್ತುಗಳಾಗಿವೆ.
ಮೂಲ | |
---|---|
ಪರ್ಯಾಯ ಹೆಸರು(ಗಳು) | Biscuit |
ಮೂಲ ಸ್ಥಳ | Persia |
ವಿವರಗಳು | |
ಸೇವನಾ ಸಮಯ | Snack, dessert |
ಬಡಿಸುವಾಗ ಬೇಕಾದ ಉಷ್ಣತೆ | Variable |
ವ್ಯುತ್ಪತ್ತಿ
ಬದಲಾಯಿಸಿಇದರ ಹೆಸರು ಡಚ್ ನ ಪದ ಕೊಯೆಕ್ಜೆ ಅಥವಾ (ಅನೌಪಚಾರಿಕವಾಗಿ) ಕೊಯೆಕಿ ಯಿಂದ ವ್ಯುತ್ಪತ್ತಿಯನ್ನು ಹೊಂದಿದೆ, ಇದು ಸಣ್ಣ ಕೇಕ್ ಎಂಬ ಅರ್ಥವನ್ನು ನೀಡುತ್ತದೆ, ಇದು ಇಂಗ್ಲಿಷ್ ಭಾಷೆಗೆ ಡಚ್ ಮೂಲಕ ಉತ್ತರ ಅಮೆರಿಕದಲ್ಲಿ ಬಳಕೆಗೆ ಬಂದಿದೆ.
ವಿವರಣೆ
ಬದಲಾಯಿಸಿಕುಕಿಗಳನ್ನು ಸಾಮಾನ್ಯವಾಗಿ ಗರಿ ಗರಿಯಾಗುವವರೆಗೆ ಬೇಯಿಸಲಾಗುತ್ತದೆ ಅಥವಾ ಅವುಗಳು ಮೃದುವಾಗುವ ತನಕ ಬೇಯಿಸಲಾಗುತ್ತದೆ, ಆದರೆ ಕೆಲವು ಬಗೆಯ ಕುಕಿಗಳನ್ನು ಬೇಯಿಸುವುದೇ ಇಲ್ಲ. ಕುಕಿಗಳನ್ನು ವ್ಯಾಪಕವಾದ ವಿವಿಧ ಶೈಲಿಗಳಲ್ಲಿ ತಯಾರಿಸಲಾಗುತ್ತದೆ, ಇದರಲ್ಲಿ ಸಕ್ಕರೆ, ಮಸಾಲೆಗಳು, ಚಾಕೊಲೆಟ್, ಬೆಣ್ಣೆ, ಕಡಲೆಕಾಯಿ ಬೆಣ್ಣೆ, ಬೀಜಗಳು ಅಥವಾ ಒಣಗಿದ ಹಣ್ಣುಗಳಂತಹ ಪದಾರ್ಥಗಳಿಂದ ತಯಾರಾಗಿರುತ್ತವೆ. ಕುಕಿಯು ಮೃದುತನಾವು ಅದು ಎಷ್ಟು ಹೊತ್ತು ಬೆಂದಿದೆ ಎಂಬುದರ ಮೇಲೆ ಅವಲಂಬಿತವಾಗಬಹುದು.
ಕುಕಿಗಳ ಒಂದು ಸಾಧಾರಣ ಸಿದ್ಧಾಂತವು ಈ ಮಾದರಿಯಲ್ಲಿ ವ್ಯವಸ್ಥಿತವಾಗಿ ನಿರೂಪಿಸಬಹುದು. ಕೇಕ್ ಗಳು ಹಾಗು ಇತರ ಸಿಹಿಯುಕ್ತ ಬ್ರೆಡ್ ಗಳಿಂದ ಅದು ಹುಟ್ಟನ್ನು ಪಡೆದಿದ್ದರೂ ಸಹ, ಕುಕಿ ತನ್ನ ಎಲ್ಲ ರೂಪಗಳಲ್ಲೂ ನೀರನ್ನು ಹಿಟ್ಟನ್ನು ಕಲೆಸುವಲ್ಲಿ ಬಳಸಿಕೊಳ್ಳಲಾಗುವುದಿಲ್ಲ. ಕೇಕ್ ಗಳಲ್ಲಿರುವ ನೀರನ್ನು ಎಷ್ಟು ಸಾಧ್ಯವೋ ಅಷ್ಟು ತೆಳುಗೊಳಿಸಲು ಮೂಲ ಪದಾರ್ಥವಾಗಿ ಬಳಸಿಕೊಳ್ಳಲಾಗುತ್ತದೆ("ತೆಳು ಕಣಕ" ಎಂದು ಕರೆಯಲ್ಪಡುವ ಕೇಕ್ ಗಳನ್ನು ತಯಾರಿಸುವ ಸಂದರ್ಭದಲ್ಲಿ[೨]), ಇದು ಗುಳ್ಳೆಗಳೇಳಲು ಕಾರಣವಾಗುತ್ತದೆ – ಇದು ಕೇಕ್ ನ ಮೃದುತ್ವಕ್ಕೆ ಕಾರಣವಾಗುತ್ತದೆ – ಹಾಗು ಕೇಕ್ ಉತ್ತಮವಾಗಿ ಮೂಡಿ ಬರುತ್ತದೆ. ಕುಕಿಯಲ್ಲಿ, ಒಟ್ಟುಗೂಡುವ ಕಾರಕವು ಕೆಲ ರೂಪದಲ್ಲಿ ಎಣ್ಣೆಯಾಗಿ ಮಾರ್ಪಾಡಾಗುತ್ತದೆ. ಎಣ್ಣೆಗಳು, ಬೆಣ್ಣೆ, ಮೊಟ್ಟೆಯ ಲೋಳೆಗಳು, ವೆಜಿಟೆಬಲ್ ಎಣ್ಣೆಗಳು ಅಥವಾ ತುಪ್ಪ ನೀರಿಗಿಂತ ಹೆಚ್ಚು ಅಂಟು ಅಂಟಾಗಿರುತ್ತದೆ ಹಾಗು ನೀರಿಗಿನ ಹೆಚ್ಚು ತಾಪಮಾನದಲ್ಲಿ ಮುಕ್ತವಾಗಿ ಆವಿಯಾಗುತ್ತದೆ. ಈ ರೀತಿಯಾಗಿ ನೀರಿನ ಬದಲಿಗೆ ಬೆಣ್ಣೆ ಅಥವಾ ಮೊಟ್ಟೆಗಳಿಂದ ತಯಾರಾದ ಕೇಕ್ ಓವನ್ ನಿಂದ ತೆಗೆದ ನಂತರ ಬಹಳ ಸಾಂದ್ರವಾಗಿರುತ್ತದೆ.
ಬೇಯಿಸಿದ ಕೇಕ್ ಗಳಲ್ಲಿರುವ ಎಣ್ಣೆಗಳು, ಸೋಡಾದ ಮಾದರಿ ಅಂತಿಮವಾದ ಫಲಿತಾಂಶವನ್ನು ನೀಡುವುದಿಲ್ಲ. ಮಿಶ್ರಣವನ್ನು ಆವಿಗೊಳಿಸಲು ಹಾಗು ಗಟ್ಟಿಗೊಳ್ಳುವ ಬದಲಾಗಿ, ಬಿಡುಗಡೆಯಾಗುವ ಅನಿಲಗಳ ಸಂಪೂರಿತ ಗುಳ್ಳೆಗಳು, ಮೊಟ್ಟೆಗಳಲ್ಲಿರುವ ಸ್ವಲ್ಪ ಮಟ್ಟಿಗಿನ ನೀರಿನಿಂದ ಉಂಟಾಗಬಹುದು, ಹಾಗು ಬೇಕಿಂಗ್ ಪೌಡರ್ ನ್ನು ಬೇಯಿಸಿದಾಗ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಈ ಸಂಪೂರಣವು ಕುಕಿಯ ಅತ್ಯಂತ ರಾಚನಿಕವಾದ ಆಕರ್ಷಕ ಲಕ್ಷಣವನ್ನು ಉಂಟುಮಾಡುತ್ತದೆ, ಹಾಗು ವಾಸ್ತವವಾಗಿ ಎಲ್ಲ ಕರಿದ ಪದಾರ್ಥಗಳು: ಗರಿ ಗರಿಯಾಗಿರುವುದು ಆರ್ದ್ರತೆಯೊಂದಿಗೆ ಸಂಪೂರಿತವಾಗುತ್ತದೆ (ಉದಾಹರಣೆಗೆ ಎಣ್ಣೆ), ಇದು ಎಣ್ಣೆಯೊಂದಿಗೆ ಬೆರೆಯುವುದಿಲ್ಲ.
ಇತಿಹಾಸ
ಬದಲಾಯಿಸಿಕುಕಿ-ಗಟ್ಟಿಯಾದ ವೆಫರ್ ಗಳ ಮಾದರಿ ಬೇಕಿಂಗ್ ನ ದಾಖಲೆಯಲ್ಲಿ ಅಸ್ತಿತ್ವದಲ್ಲಿದೆ, ಭಾಗಶಃ ಇದು ಪ್ರಯಾಣಕ್ಕೆ ಕೊಂಡೊಯ್ಯಲು ಸೂಕ್ತವಾಗಿರುವ ಕಾರಣಕ್ಕೆ ಉತ್ತಮವೆನಿಸಿದೆ, ಆದರೆ ಆಧುನಿಕ ಗುಣಮಟ್ಟಗಳ ಪ್ರಕಾರ ಕುಕಿಗಳನ್ನು ಸಾಕಷ್ಟು ಸಿಹಿಯನ್ನು ಹೊಂದಿರುವುದಿಲ್ಲವೆಂದು ಪರಿಗಣಿಸಲಾಗುತ್ತದೆ.[೩]
ಕುಕಿಗಳು, ಪರ್ಷಿಯಾದಲ್ಲಿ ೭ನೇ ಶತಮಾನದಲ್ಲಿ ತಮ್ಮ ಹುಟ್ಟನ್ನು ಪಡೆದಿರಬಹುದೆಂದು ಹೇಳಲಾಗುತ್ತದೆ, ಶೀಘ್ರವೇ ಈ ಪ್ರದೇಶದಲ್ಲಿ ಸಕ್ಕರೆಯ ಬಳಕೆಯು ಸಂಬಂಧಿತವಾಗಿ ಬಹಳ ಸಾಮಾನ್ಯವಾಯಿತು.[೪] ಇದು ಯುರೋಪ್ ಗೆ, ಸ್ಪೇನ್ ನಡೆಸಿದ ಮುಸ್ಲಿಂ ಆಕ್ರಮಣದ ಮೂಲಕ ಹರಡಿರಬಹುದು. ೧೪ನೇ ಶತಮಾನದ ಹೊತ್ತಿಗೆ, ಯುರೋಪ್ ನುದ್ದಕ್ಕೂ ಇದು ಸಮಾಜದ ಎಲ್ಲ ವರ್ಗಗಳಲ್ಲೂ ಸಾಮಾನ್ಯವಾಗಿತ್ತು, ಶ್ರೀಮಂತರಿಂದ ಹಿಡಿದು ಬೀದಿಯಲ್ಲಿ ವ್ಯಾಪಾರ ಮಾಡುವವರೆಗೆ ಜನಪ್ರಿಯವಾಗಿತ್ತು.
ಆ ಸಮಯದಲ್ಲಿ ವಿಶ್ವಾದ್ಯಂತ ಪ್ರಯಾಣವು ವ್ಯಾಪಕವಾಗ ತೊಡಗಿದಂತೆ, ಕುಕಿಗಳು ಸ್ವಾಭಾವಿಕವಾಗಿ ಪ್ರಯಾಣಕ್ಕೆ ಜೊತೆಯಾದವು, ಇತಿಹಾಸದುದ್ದಕ್ಕೂ ಪ್ರಯಾಣದಲ್ಲಿ ಬಳಸಲಾಗುತ್ತಿದ್ದಂತಹ ಕೇಕ್ ಗಳು ಆಧುನಿಕ ಕೇಕ್ ಗಳಿಗೆ ಸಮಾನವಾಗಿದೆ. ಮೊದಲ ಬಾರಿಗೆ ತಯಾರಾದ ಅತ್ಯಂತ ಜನಪ್ರಿಯ ಕುಕಿಯನ್ನು ಪ್ರಯಾಣದಲ್ಲಿ ಅತ್ಯಂತ ಉತ್ತಮವಾಗಿ ಬಳಸಲಾಗುತ್ತಿತ್ತು ಹಾಗು ಇದು ಪ್ರತಿ ಖಂಡದಲ್ಲೂ ಒಂದೇ ಹೆಸರಿನಿಂದ ಪರಿಚಿತವಾಗಿತ್ತು, ಇದೆ ಜಂಬಲ್, ತುಲನಾತ್ಮಕವಾಗಿ ಬಹಳ ಗಟ್ಟಿಯಾಗಿದ್ದ ಈ ಕುಕಿಯು ಬೀಜಗಳು, ಸಿಹಿಕಾರಿಗಳು, ಹಾಗು ನೀರಿನಿಂದ ತಯಾರಾಗಿರುತ್ತದೆ.
ಕುಕಿಗಳು, ಅಮೆರಿಕಕ್ಕೆ ಇಂಗ್ಲಿಷರ ಆರಂಭಿಕ ವಸಾಹತು ನೆಲೆಯಿಂದ ಬಂದಿತು(೧೭ನೇ ಶತಮಾನ), ಆದಾಗ್ಯೂ "ಕೊಯೆಕ್ಜೆ" ಎಂಬ ಹೆಸರು ಡಚ್ ನಿಂದ ಬಂದಿದೆ. ಇದು "ಕುಕಿ" ಅಥವಾ ಕೂಕಿ ಎಂದು ಆಂಗ್ಲೀಕರಣಗೊಂಡಿದೆ. ಅಮೆರಿಕದ ಜನಪ್ರಿಯ ಕುಕಿಗಳೆಂದರೆ ಮ್ಯಾಕರೂನ್, ಜಿಂಜರ್ ಬ್ರೆಡ್ ಕುಕಿಗಳು, ಹಾಗು ನಿಸ್ಸಂದೇಹವಾಗಿ ವಿವಿಧ ಮಾದರಿಯ ಜಂಬಲ್ ಗಳು.
ಅತ್ಯಂತ ಸಾಮಾನ್ಯವಾದ ಆಧುನಿಕ ಕುಕಿ, ಬೆಣ್ಣೆ ಹಾಗು ಸಕ್ಕರೆಯಿಂದ ಕ್ರೀಮಿಂಗ್ ಮಾಡುವ ಮೂಲಕ ಹೊಸ ರೂಪವನ್ನು ನೀಡಲಾಯಿತು, ಇದು ೧೮ನೇ ಶತಮಾನದವರೆಗೂ ಸಾಮಾನ್ಯವಾಗಿರಲಿಲ್ಲ.[೫]
ಕುಕಿಗಳ ವರ್ಗಾವಣೆ
ಬದಲಾಯಿಸಿಕುಕಿಗಳನ್ನು ವ್ಯಾಪಕವಾಗಿ ಅವುಗಳ ರಚನೆಯನ್ನು ಆಧರಿಸಿ ವಿಂಗಡಿಸಲಾಗುತ್ತದೆ, ಇದರಲ್ಲಿ ಕಡೇಪಕ್ಷ ಈ ಕೆಳಕಂಡ ವರ್ಗಗಳು ಸೇರಿವೆ:
- ಡ್ರಾಪ್ ಕುಕಿಗಳು ಇದನ್ನು ತುಲನಾತ್ಮಕವಾಗಿ ಮೃದುವಾದ ಹಿಟ್ಟಿನಿಂದ ತಯಾರಾಗಿರುತ್ತದೆ, ಇದನ್ನು ಬೇಕಿಂಗ್ ಹಾಳೆಗೆ ಚಮಚಗಳಲ್ಲಿ ಹಾಕಲಾಗುತ್ತದೆ. ಬೇಯಿಸುವ ಸಮಯದಲ್ಲಿ, ಹಿಟ್ಟಿನ ರಾಶಿಯನ್ನು ಹರಡಿ, ಅದನ್ನು ಚಪ್ಪಟೆಗೊಳಿಸಲಾಗುತ್ತದೆ.
ಚಾಕೊಲೆಟ್ ಚಿಪ್ ಕುಕಿಸ್ (ಟಾಲ್ ಹೌಸ್ ಕುಕಿಸ್), ಓಟ್ ಮೀಲ್(ಅಥವಾ ಓಟ್ ಮೀಲ್ ಒಣದ್ರಾಕ್ಷಿ) ಕುಕಿಗಳು ಹಾಗು ರಾಕ್ ಕೇಕ್, ಡ್ರಾಪ್ ಕುಕಿಗಳ ಜನಪ್ರಿಯ ಉದಾಹರಣೆಗಳಾಗಿವೆ.
- ಶೈತ್ಯೀಕರಿಸಿದ ಕುಕಿಗಳು (ಇದು ಐಸ್ ಬಾಕ್ಸ್ ಕುಕಿಸ್ ಗಳು ಎಂದೂ ಪರಿಚಿತವಾಗಿವೆ) ಗಟ್ಟಿಯಾದ ಹಿಟ್ಟಿನಿಂದ ತಯಾರಾಗುತ್ತದೆ, ಈ ಹಿಟ್ಟನ್ನು ಶೈತ್ಯೀಕರಿಸಿ ಮತ್ತಷ್ಟು ಗಟ್ಟಿ ಮಾಡಲಾಗುತ್ತದೆ. ಹಿಟ್ಟನ್ನು ಮಾದರಿಯಾಗಿ ಸಿಲಿಂಡರಾಕಾರದಲ್ಲಿ ಆಕಾರ ಮಾಡಲಾಗುತ್ತದೆ, ಇದನ್ನು ಬೇಯಿಸುವ ಮೊದಲು ಗುಂಡಗೆ ಕುಕಿಗಳ ಆಕಾರದಲ್ಲಿ ಕತ್ತರಿಸಲಾಗುತ್ತದೆ.
- ಮೊಲ್ಡೆಡ್ ಕುಕಿಗಳು ಸಹ ಗಟ್ಟಿಯಾದ ಹಿಟ್ಟಿನಿಂದ ತಯಾರಾಗಿರುತ್ತವೆ, ಇದನ್ನು ಬೇಯಿಸುವ ಮೊದಲು ಉಂಡೆಗಳಾಗಿ ಅಥವಾ ಕುಕಿಗಳ ಆಕಾರದಲ್ಲಿ ಕೈನಿಂದ ತಯಾರಿಸಲಾಗುತ್ತದೆ. ಸ್ನಿಕರ್ ಡೂಡಲ್ ಗಳು ಹಾಗು ಕಡಲೇಕಾಯಿ ಬೆಣ್ಣೆ ಕುಕಿಗಳು ಮೊಲ್ಡೆಡ್ ಕುಕಿಗಳ ಉದಾಹರಣೆಗಳಾಗಿವೆ.
- ರೋಲ್ಡ್ ಕುಕೀಗಳು ಗಟ್ಟಿಯಾದ ಹಿಟ್ಟಿನಿಂದ ತಯಾರಾಗಿರುತ್ತವೆ, ಇದನ್ನು ಸುರುಳಿಯಾಗಿ ಸುತ್ತಿ, ಕುಕಿಕಟ್ಟರ್ ನಿಂದ ಕತ್ತರಿಸಿ ಆಕಾರಕ್ಕೆ ತರಲಾಗುತ್ತದೆ. ಇದರ ಉತ್ತಮ ಉದಾಹರಣೆಯೆಂದರೆ ಜಿಂಜರ್ ಬ್ರೆಡ್ ಮೆನ್.
- ಪ್ರೆಷರ್ಡ್ ಕುಕಿಗಳು ಮೃದುವಾದ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದನ್ನು ಬೇಯಿಸುವ ಮುನ್ನ ಕುಕಿ ಪ್ರೆಸ್ ನಿಂದ ಬೇಕಾದ ಆಕಾರಕ್ಕೆ ನಿಸ್ಸರಿಸಲಾಗುತ್ತದೆ. ಸ್ಪ್ರಿಟ್ಜೆಬ್ಯಾಕ್ ಪ್ರೆಸ್ಡ್ ಕುಕೀಯ ಒಂದು ಉತ್ತಮ ಉದಾಹರಣೆಯಾಗಿದೆ.
- ಬಾರ್ ಕುಕಿಗಳು , ಪ್ಯಾನ್ ಗೆ ಸುರಿಯಲಾದಂತಹ ಅಥವಾ ಒತ್ತಿ ಹಾಕಲಾದಂತಹ ಇತರ ಪದಾರ್ಥಗಳು ಅಥವಾ ತೆಳು ಕಣಕವನ್ನು ಒಳಗೊಂಡಿರುತ್ತದೆ(ಕೆಲವೊಂದು ಬಾರಿ ಹಲವಾರು ಪದರಗಳು), ಹಾಗು ಬೇಯಿಸಿದ ನಂತರ ಕುಕಿ-ಆಕಾರದ ತುಂಡುಗಳಾಗಿ ಕತ್ತರಿಸಲಾಗುತ್ತದೆ. ಬ್ರೌನಿಗಳು, ತೆಳು ಕಣಕ-ಮಾದರಿಯ ಬಾರ್ ಕುಕಿಯ ಉದಾಹರಣೆಯಾಗಿದೆ, ರೈಸ್ ಕ್ರಿಸ್ಪಿ ಟ್ರೀಟ್ ಗಳು ಬಾರ್ ಕುಕಿಯಾಗಿದ್ದು ಇದನ್ನು ಬೇಯಿಸುವ ಅಗತ್ಯವಿರುವುದಿಲ್ಲ, ಬಹುಶಃ ಇದು ಏಕದಳ ಧಾನ್ಯದ ಬಾರ್ ಗೆ ಸದೃಶವಾಗಿದೆ. ಬ್ರಿಟಿಶ್ ಇಂಗ್ಲಿಷ್ ನಲ್ಲಿ, ಬಾರ್ ಕುಕಿಗಳನ್ನು "ಟ್ರೇ ಬೇಕ್ಸ್" ಎಂದು ಕರೆಯಲಾಗುತ್ತದೆ.
- ಸ್ಯಾಂಡ್ವಿಚ್ ಕುಕಿಗಳು ಸುತ್ತಲಾದ ಅಥವಾ ತಟ್ಟಲಾದ ಕುಕಿಗಳಾಗಿರುತ್ತವೆ, ಇದಕ್ಕೆ ಸಿಹಿಯನ್ನು ಭರ್ತಿ ಮಾಡಿ ಸ್ಯಾಂಡ್ವಿಚ್ ನ ಮಾದರಿ ನೀಡಲಾಗುತ್ತದೆ. ಇದಕ್ಕೆ ಮಾರ್ಷ್ಮ್ಯಾಲೋ, ಜ್ಯಾಮ್, ಅಥವಾ ಐಸಿಂಗ್ ನಿಂದ ಭರ್ತಿ ಮಾಡಲಾಗುತ್ತದೆ. ವೆನಿಲ್ಲಾ ಐಸ್ ಫಿಲ್ಲಿಂಗ್ ನೊಂದಿಗೆ ಎರಡು ಚಾಕೊಲೆಟ್ ಕುಕಿಗಳಿಂದ ತಯಾರಾದ ಒರೆಯೋ ಕುಕಿ, ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಕುಕಿಗಳನ್ನು ಐಸಿಂಗ್ ನೊಂದಿಗೂ ಸಹ ಅಲಂಕರಿಸಬಹುದು, ವಿಶೇಷವಾಗಿ ಚಾಕೊಲೆಟ್ ನಿಂದ ತಯಾರಿಸಬಹುದು, ಇದು ಮಿಠಾಯಿಯ ಮಾದರಿಯನ್ನು ಸಮೀಪದಲ್ಲಿ ಹೋಲುತ್ತದೆ.
ಯುನೈಟೆಡ್ ಕಿಂಗ್ಡಮ್ ನಲ್ಲಿ ಬಿಸ್ಕತ್ತುಗಳು(ಕುಕಿಗಳು)
ಬದಲಾಯಿಸಿಒಂದು ಸಾಧಾರಣ ಬಿಸ್ಕೆಟ್ ಗೆ(ಕುಕಿ) ಹಿಟ್ಟು, ಶಾರ್ಟೆನಿಂಗ್(ಹಿಟ್ಟಿನ ಭಕ್ಷ್ಯಗಳನ್ನು ಮಾಡಲು ಬಳಸುವ ಕೊಬ್ಬು)(ಸಾಮಾನ್ಯವಾಗಿ ತುಪ್ಪ, ಬೇಕಿಂಗ್ ಪೌಡರ್ ಅಥವಾ ಸೋಡಾ, ಹಾಲು, ಮಜ್ಜಿಗೆ ಅಥವಾ ಸಿಹಿ ಹಾಲು) ಹಾಗು ಸಕ್ಕರೆಯನ್ನು ಹಾಕಲಾಗುತ್ತದೆ. ಸಾಮಾನ್ಯವಾದ ಖಾರದ ಭಕ್ಷ್ಯಗಳನ್ನು ವಿಭಿನ್ನವಾಗಿ ತಯಾರಿಸಲು ಸಕ್ಕರೆಯೊಂದಿಗೆ ಬೆಣ್ಣೆ ಅಥವಾ ಇತರ ಡೈರಿ ಉತ್ಪನ್ನಗಳನ್ನು ಪರ್ಯಾಯವಾಗಿ ಬಳಸಲಾಗುತ್ತದೆ. ಗರಿ ಗರಿ ಬಿಸ್ಕತ್ತು UKಯ ಅತ್ಯಂತ ಜನಪ್ರಿಯ ಬಿಸ್ಕತ್ತಾಗಿದೆ.
ಇವನ್ನೂ ಗಮನಿಸಿ
ಬದಲಾಯಿಸಿಕುಕಿ ಮಾದರಿಗಳುಬದಲಾಯಿಸಿ
|
|
ಸಂಬಂಧಿತ ಕುಕಿಗಳುಬದಲಾಯಿಸಿ
|
ಸದೃಶವಾದ ಸಿಹಿತಿನಿಸುಗಳು
ಬದಲಾಯಿಸಿ- ಕೇಕ್
- ಪೇಸ್ಟ್ರಿ
- ರೊಸೆಟ್ಟೆ
- ಏಂಜಲ್ ವಿಂಗ್ಸ್ (ಚ್ರುಸ್ಸಿಕಿ)
- ಫನ್ನಲ್ ಕೇಕ್
ಟಿಪ್ಪಣಿಗಳು
ಬದಲಾಯಿಸಿ- ↑ ಕುಕಿ -ಬ್ರಿಟಾನಿಕಾ ಆನ್ಲೈನ್ ಎನ್ಸೈಕ್ಲೋಪೀಡಿಯಾ
- ↑ ಮೆರಿಯಮ್-ವೆಬ್ಸ್ಟರ್'ಸ್ ಕಾಲೇಜಿಯೇಟ್ ಡಿಕ್ಷನರಿ , ಹತ್ತನೇ ಆವೃತ್ತಿ. ಮೆರಿಯಮ್-ವೆಬ್ಸ್ಟರ್, Inc.: ೧೯೯೯.
- ↑ http://www.foodtimeline.org/foodcookies.html Foodtimeline.org
- ↑ http://whatscookingamerica.net/History/CookieHistory.htm Whatscookingamerica.net
- ↑ http://www.ochef.com/25.htm Archived 2008-03-02 ವೇಬ್ಯಾಕ್ ಮೆಷಿನ್ ನಲ್ಲಿ. Ochef.com