ರಂಗಾಯಣ ರಘು
ಕೊಟ್ಟುರು ಚಿಕರಂಗಪ್ಪ ರಘುನಾಥ್ (ಜನನ: ೧೭ ಏಪ್ರಿಲ್ ೧೯೬೫), ಅವರ ಹೆಸರು ರಂಗಾಯಣ ರಘು ಎಂದು ಪ್ರಸಿದ್ಧವಾಗಿದೆ, ಇವರು ಭಾರತೀಯ ಚಲನಚಿತ್ರ ಮತ್ತು ರಂಗಭೂಮಿ ನಟ, ಸಿನಿಮಾದಲ್ಲಿ ಇವರು ಹೆಚ್ಚಾಗಿ ತಮಾಷೆ ಮತ್ತು ನಕಾರಾತ್ಮಕ ಪಾತ್ರಗಳಲ್ಲಿ ನಟಿಸಿರುವ ಇವರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ, ೧೯೮೮ ರಿಂದ ೧೯೯೯ ರವರೆಗೆ ಅವರು ಬಿ. ವಿ. ಕಾರಂತ್ ಅವರ ರಂಗಭೂಮಿ ಗುಂಪಿನಲ್ಲಿ ವೇದಿಕೆಯ ನಟನಾಗಿ ಕೆಲಸ ಮಾಡಿದರು.೧೯೯೫ ರಲ್ಲಿ ಸುಗ್ಗಿ ಚಿತ್ರದಲ್ಲಿ ಅಭಿನಯಿಸಿದರು. ೨೦೦೭ ರ ದುನಿಯಾ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಅವರ ಎರಡನೇ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಇತರ ಗಮನಾರ್ಹ ಪಾತ್ರಗಳು ಸೈನೈಡ್ (೨೦೦೬), ರಾಮ್ (೨೦೦೯), ಮತ್ತು ಜಯಮ್ಮಾನ ಮಗ (೨೦೧೩) .
ಆರಂಭಿಕ ಜೀವನ ಮತ್ತು ವೃತ್ತಿಜೀವನ
ಬದಲಾಯಿಸಿಕರ್ನಾಟಕ ರಾಜ್ಯ ದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೊಟ್ಟೂರು ಎಂಬ ಹಳ್ಳಿಯಲ್ಲಿರುವ ಚಿಕ್ಕರಂಗಯ್ಯ ಮತ್ತು ವೀರಮ್ಮರಿಗೆ ಒಂಬತ್ತನೆಯ ಮಗುವಾಗಿ "ಕೊಟ್ಟೂರು ಚಿಕರಂಗಪ್ಪ ರಘುನಾಥ್ " ಎಂಬ ಹೆಸರಿನಲ್ಲಿ ೧೯೬೫ ರ ಏಪ್ರಿಲ್ ೧೭ ರಂದು ಜನಿಸಿದರು. ೧೯೮೮ ರಲ್ಲಿ ಮೈಸೂರಿನ ರಂಗಾಯಣ ರಂಗಭೂಮಿ ಗುಂಪಿನಲ್ಲಿ ಸೇರಿಕೊಂಡಾಗ ರಘು ರವರು ತಮ್ಮ ನಟನಾ ವೃತ್ತಿಯನ್ನು ರಂಗಭೂಮಿ ಕಲಾವಿದನಾಗಿ ಪ್ರಾರಂಭಿಸಿದರು, ಅಲ್ಲಿ ಅವರು ತಿಂಗಳಿಗೆ ಸಂಬಳವಾಗಿ ೮೦೦ ಪಡೆಯುತ್ತಿದ್ದರು. ನಂತರ ೧೯೯೫ ರ ಕನ್ನಡ ಚಲನಚಿತ್ರ ಸುಗ್ಗಿಯಲ್ಲಿ ಅಭಿನಯಿಸಿದರು, ಆ ಚಲನಚಿತ್ರವನ್ನು ಹಂಸಲೇಖ ರವರು ನಿರ್ದೇಶಿಸಿದರು. ನಂತರ ಅವರು ೨೦೦೨ ರ ಧಮ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು, ನಂತರ ಮೇಘ ಬಂತು ಮೇಘ ಮತ್ತಿತರ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.[೧] [೨]
(ಆಯ್ದ) ಚಲನಚಿತ್ರಗಳ ಪಟ್ಟಿ
ಬದಲಾಯಿಸಿ- ಕೋತಿಗಳು ಸಾರ್ ಕೋತಿಗಳು (೨೦೦೧)
- ಧಮ್ (೨೦೦೨)
- ಶ್ರೀ ರಾಮ್ (೨೦೦೩)
- ಹೃದಯವಂತ (೨೦೦೩)
- ಧರ್ಮ (೨೦೦೪)
- ಸಾಹುಕಾರ (೨೦೦೪)
- ಭಗವಾನ್ (೨೦೦೪)
- ಓಂಕಾರ (೨೦೦೪)
- ರಾಕ್ಷಸ (೨೦೦೫)
- ವಾಲ್ಮೀಕಿ (೨೦೦೫)
- ಸ್ವಾಮಿ (೨೦೦೫)
- ತಂಗಿಗಾಗಿ (೨೦೦೬)
- ಪೂಜಾರಿ (೨೦೦೬)
- ಸುಂಟರಗಾಳಿ (೨೦೦೬)
- ತಿರುಪತಿ (೨೦೦೬)
- ಒಡಹುಟ್ಟಿದವಳು (೨೦೦೬)
- ಮಾತಾಡ್ ಮಾತಾಡು ಮಲ್ಲಿಗೆ (೨೦೦೭)
- ಗುಣವಂತ (೨೦೦೭)
- ಪರೋಡಿ (೨೦೦೭)
- ಸ್ನೇಹನಾ ಪ್ರೀತಿನಾ (೨೦೦೭)
- ಸಿಕ್ಸರ್ (೨೦೦೭)
- ಗೆಳೆಯ (೨೦೦೭)
- ದುನಿಯಾ (೨೦೦೭)
- ಹನಿ ಹನಿ (೨೦೦೮)
- ಗಾಳಿಪಟ (೨೦೦೮)
- ತಾಜ್ ಮಹಲ್ (೨೦೦೮)
- ಸಂಗಮ (೨೦೦೫)
- ಪ್ರೇಮ್ ಕಹಾನಿ (೨೦೦೯)
- ಮಳೆಯಲಿ ಜೊತೆಯಲಿ (೨೦೦೯)
- ರಾಮ್ (೨೦೦೯)
- ಮಿಸ್ಟರ್ ಪೇಂಟರ್ (೨೦೦೯)
- ನಂದ (೨೦೦೯)
- ಕಳ್ಳರ ಸಂತೆ (೨೦೦೯)
- ರಜನಿ (೨೦೦೯)
- ಕನ್ನಡದ ಕಿರಣ್ ಬೇಡಿ (೨೦೦೯)
- ಜೋಕಾಲಿ (೨೦೧೦)
- ಅಪು ಮತ್ತು ಪಪ್ಪು (೨೦೧೦)
- ಮೈಲಾರಿ (೨೦೧೦)
- ಜಾಕಿ(೨೦೧೦)
- ಅಲೆಮಾರಿ (೨೦೧೧)
- ದೇವದಾಸ್ (೨೦೧೧)
- ತ್ಯಾಗು (೨೦೧೧)
- ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ (೨೦೧೧)
- ಸಂಜು ವೆಡ್ಸ್ ಗೀತಾ (೨೦೧೧)
- ಪ್ರಿನ್ಸ್ (೨೦೧೧)
- ಬಾಸ್ (೨೦೧೧)
- ಪರಮಾತ್ಮ (೨೦೧೧)
- ಜರಾಸಂಧ (೨೦೧೧)
- ಶೈಲೂ (೨೦೧೧)
- ಕೋ ಕೋ (೨೦೧೧)
- ಚಿಂಗಾರಿ (೨೦೧೨)
- ಅಣ್ಣಾ ಬಾಂಡ್ (೨೦೧೨)
- ಕಡ್ಡಿಪುಡಿ (೨೦೧೩)
- ಮಹಾನದಿ (೨೦೧೩)
- ಬ್ರಹ್ಮ (೨೦೧೪)
- ದಿಲ್ ರಂಗೀಲಾ (೨೦೧೪)
- ಗಜಕೇಸರಿ (೨೦೧೪)
- ಪವರ್ (೨೦೧೪)
- ಕೃಷ್ಣ-ಲೀಲಾ (೨೦೧೫)
- ಗಂಗಾ (೨೦೧೫)
- ರಾಮ್-ಲೀಲಾ (೨೦೧೫)
- ಚಕ್ರವ್ಯೂಹ (೨೦೧೬)
- ಅಕಿರಾ (೨೦೧೬)
- ಸ್ಟೈಲ್ ಕಿಂಗ್ (೨೦೧೬)
- ದೊಡ್ಮನೆ ಹುಡ್ಗ (೨೦೧೬)
- ದನ ಕಾಯೋನು (೨೦೧೬)
- ನಾಗರಹಾವು (೨೦೧೬)
- ಸುಂದರಾಂಗ ಜಾಣ (೨೦೧೬)
- ಮುಂಬೈ (೨೦೧೭)
- ರಾಜಕುಮಾರ (೨೦೧೭)
- ಗರುಡ (೨೦೧೮)
- ಮುಗುಳು ನಗೆ (೨೦೧೭)
- ಜಾನಿ ಜಾನಿ ಯೆಸ್ ಪಪ್ಪಾ (೨೦೧೮)
- ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮)
- ಅಯೋಗ್ಯ (೨೦೧೮)
- ಆದಿ ಪುರಾಣ (೨೦೧೮)
- ಪಂಚತಂತ್ರ (೨೦೧೯)[೩]
ಪ್ರಶಸ್ತಿಗಳು
ಬದಲಾಯಿಸಿಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
- ೨೦೦೩-೦೪: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಪೋಷಕ ನಟ: ಮಣಿ
- ೨೦೦೬-೦೭: ಅತ್ಯುತ್ತಮ ಪೋಷಕ ನಟನಿಗಾಗಿರುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ: ದುನಿಯಾ
ದಕ್ಷಿಣದ ಫಿಲ್ಮ್ಫೇರ್ ಪ್ರಶಸ್ತಿಗಳು
- ೨೦೦೬: ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ಸೈನೈಡ್
- ೨೦೦೯: ನಾಮನಿರ್ದೇಶಿತ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ರಾಮ್
- ೨೦೧೦: ನಾಮನಿರ್ದೇಶಿತ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ಮೊದಲಾಸಲ
- ೨೦೧೧: ನಾಮನಿರ್ದೇಶಿತ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ಓಲವೆ ಮಂದಾರ
- ೨೦೧೩: ನಾಮನಿರ್ದೇಶಿತ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ - ಕನ್ನಡ: ಜಯಮ್ಮನ ಮಗ
ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು(ಸೈಮಾ)
- ೨೦೧೧: ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ (ಕನ್ನಡ): ಸಂಜು ವೆಡ್ಸ್ ಗೀತಾ
- ೨೦೧೨: ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಕನ್ನಡ): ರೋಮಿಯೋ
- ೨೦೧೨: ನಾಮನಿರ್ದೇಶಿತ, ಅತ್ಯುತ್ತಮ ಹಾಸ್ಯನಟ (ಕನ್ನಡ): ಶಿವ
- ೨೦೧೩: ನಾಮನಿರ್ದೇಶಿತ, ಅತ್ಯುತ್ತಮ ಹಾಸ್ಯನಟ (ಕನ್ನಡ): ಜಯಮ್ಮನ ಮಗ
- ೨೦೧೫: ನಾಮಕರಣಗೊಂಡ, ಅತ್ಯುತ್ತಮ ಹಾಸ್ಯನಟ (ಕನ್ನಡ): ಪವರ್
ಉದಯ ಚಲನಚಿತ್ರ ಪ್ರಶಸ್ತಿಗಳು
- ೨೦೧೦: ಅತ್ಯುತ್ತಮ ಪೋಷಕ ನಟ
ಸುವರ್ಣ ಚಲನಚಿತ್ರ ಪ್ರಶಸ್ತಿಗಳು
- ೨೦೦೭: ಅತ್ಯುತ್ತಮ ಪೋಷಕ ನಟ: ದುನಿಯಾ
ನವೀನ ಚಲನಚಿತ್ರ ಪ್ರಶಸ್ತಿಗಳು ೨೦೧೦: ಅತ್ಯುತ್ತಮ ಪೋಷಕ ನಟ[೪]
ಉಲ್ಲೇಖಗಳು
ಬದಲಾಯಿಸಿ- ↑ https://www.thehindu.com/todays-paper/tp-national/tp-karnataka/a-dialogue-with-greed/article4774246.ece
- ↑ https://www.nowrunning.com/movie/3782/kannada/duniya/1072/review.htm
- ↑ https://www.filmibeat.com/kannada/movies/panchatantra.html
- ↑ https://web.archive.org/web/20131220193929/http://chitratara.com/show-content.php?id=1884&ptype=News&title=INNOVATIVE%20FILM%20AWARDS%20%3FSTAR%20STUDDED%20STAR%20ORIENTED%21