ರೋಹಿಣಿ (ನಕ್ಷತ್ರ)
ರೋಹಿಣಿ ನಕ್ಷತ್ರವು ವೃಷಭ ರಾಶಿಯಲ್ಲಿಯ (ಟಾರಸ್) ಪ್ರಮುಖ ತಾರೆ (ಅಲ್ಡೆಬರಾನ್; ಟಾರಿ). ಇದೊಂದು ರಕ್ತದೈತ್ಯ (ಅಂದರೆ ಹೀಲಿಯಮ್ ನಕ್ಷತ್ರ). ಚಾಂದ್ರ ಕಕ್ಷೆಯ 27 ನಕ್ಷತ್ರಗಳ ಪೈಕಿ ಒಂದು. ಇದರ ವಿಷುವದಂಶ 4ಗಂ. 55ಮಿ. 55ಸೆ;[೧] ಫಂಟಾವೃತ್ತಾಂಶ 16027'58" ಉತ್ತರ. ಒಂದನೆಯ ಕಾಂತಿಮಾನದ ಕೆಂಪುಬಣ್ಣದ ನಕ್ಷತ್ರ. ವ್ಯಾಸ ಸೂರ್ಯ ವ್ಯಾಸದ ಸುಮಾರು 44 ಮಡಿ;[೨] ಉಜ್ಜ್ವಲತೆ ಸೂರ್ಯನದರ 90 ರಷ್ಟು. ಸೂರ್ಯನಿಂದ 68 ಜ್ಯೋತಿರ್ವರ್ಷ ದೂರದಲ್ಲಿದೆ. ಕ್ರಾಂತಿವೃತ್ತದ ಬಳಿಯೇ ಇರುವುದರಿಂದ ಸೂರ್ಯ ಮತ್ತು ಚಂದ್ರಗಳು ಈ ನಕ್ಷತ್ರಕ್ಕೆ ತೀರ ಸಮೀಪದಲ್ಲಿ ಹಾದುಹೋಗುತ್ತವೆ.
ಇದು ಕೃಷ್ಣನ ಜನ್ಮನಕ್ಷತ್ರವಾಗಿದೆ. ಪುರಾಣಗಳ ಪ್ರಕಾರ ರೋಹಿಣಿಯು ಚಂದ್ರನ ಪತ್ನಿ. ಚಂದ್ರನ ಎಲ್ಲ ಪತ್ನಿಯರಲ್ಲಿ ರೋಹಿಣಿಯು ಚಂದ್ರನಿಗೆ ಅಚ್ಚುಮೆಚ್ಚಿನವಳು. ಇವಳು ಒಳ್ಳೆ ಉಡುಪುಗಳು, ಪ್ರಸಾಧನಗಳು ಮತ್ತು ಅಲಂಕಾರವನ್ನು ಇಷ್ಟಪಡುವವಳು ಎಂದು ಹೇಳಲಾಗುತ್ತದೆ. ಹಸುಗಳಿಂದ ಎಳೆಯಲ್ಪಡುವ ಬಂಡಿ ಈ ನಕ್ಷತ್ರದ ಸಂಕೇತವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ Van Leeuwen, F. (2007). "Validation of the new Hipparcos reduction". Astronomy and Astrophysics. 474 (2): 653–664. arXiv:0708.1752. Bibcode:2007A&A...474..653V. doi:10.1051/0004-6361:20078357. S2CID 18759600.
- ↑ Piau, L; Kervella, P; Dib, S; Hauschildt, P (February 2011). "Surface convection and red-giant radius measurements". Astronomy and Astrophysics. 526: A100. arXiv:1010.3649. Bibcode:2011A&A...526A.100P. doi:10.1051/0004-6361/201014442. S2CID 118533297.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- "Aldebaran 2". SolStation. Archived from the original on 25 November 2005. Retrieved 14 November 2005.
- Daytime occultation of Aldebaran by the Moon (Moscow, Russia) YouTube video
- Rohini nakshatra
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: