ರೊಸ್ ಅಮಿ ಫಿಲ್ಮನ್ ರವರು ಓರ್ವ ಆಂಗ್ಲ ಬರಹಗಾರ್ತಿ ಹಾಗು ಕವಯತ್ರಿಯಾಗಿದ್ದರು. ಫಿಲ್ಮನ್ ರವರು, "ದೆರ್ ಆರ್ ಫೆರೀಸ್ ಅಟ್ ದಿ ಬೊಟಮ್ ಆಫ್ ಅವರ್ ಗಾರ್ಡನ್" ಎಂಬ ಕವಿತೆಯನ್ನು ರಚಿಸಿದರು[].ಇದಕ್ಕೆ ಲಿಜ಼ ಲೆಹ್ಮನ್ ಎಂಬ ಸಂಯೋಜಕರು ಸಂಗೀತ ನಿರ್ದೇಶನ ಮಾಡಿದರು. ಫ್ರೆಂಚ್ ಕ್ಯಾರೋಲ್ ರಾಗಕ್ಕೆ ಹೊಂದಿಸಲಾದ "ಲಿಫ್ಟ್ ಯುವರ್ ಹಿಡನ್ ಫೇಸಸ್" ಎಂಬ ಅವರ ಕ್ರಿಸ್ಮಸ್ ಕ್ಯಾರೋಲ್ ಅನ್ನು "ಆಂಗ್ಲಿಕನ್ ಹಿಮ್ನಲ್ ಸಾಂಗ್ಸ್ ಆಫ್ ಪ್ರೇಸ್" ಹಾಗು "ಹುಟ್ಟೇರಿಯನ್ ಬ್ರದರ್ ಹುಡ್ಸ್ ಸಾಂಗ್ಸ್ ಆಫ್ ಲೈಟ್" ಗಳಲ್ಲಿ ಸೇರಿಸಲಗಿತ್ತು.

ದಿ ಯಿಯರ್ಸ್ ಆಫ್ ದಿ ಸ್ಪ್ರಿಂಗ್; ಆನ್ ಆನ್ತೋಲಜಿ ಆಫ್ ರೀಸೆಂಟ್ ಪೊಯಟ್ರಿ

ಜೀವನ ಮತ್ತು ಕೆಲಸಗಳು

ಬದಲಾಯಿಸಿ

ಜಾನ್ ಫಿಲ್ಮನ್ ಮತ್ತು ಎಮಿಲಿ ದಂಪತಿಗಳಿಗೆ ಮೂರನೆ ಮಗುವಾಗಿ ರೊಸ್ ಫಿಲ್ಮನ್ ರವರು ಜನಿಸಿದರು[].ಫಿಲ್ಮನ್ ರವರು ಒಂದು ಖಾಸಗಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು. ಅವರು ೯ ನೇ ವಯಸ್ಸಿನಲ್ಲಿ ಇದ್ದಾಗ, ಮೊದಲ ಬಾರಿಗೆ ಅವರ ಬರವಣಿಗೆಯು ಸ್ಥಳೀಯ ವ್ರತ್ತಪತ್ರಿಕೆಯಲ್ಲಿ ಪ್ರಕಟವಾಯಿತು. ಅವರು, ನೊಟಿಂಘಮ್ ನ ಯುನಿವರ್ಸಿಟಿ ಕಾಲೇಜಿನಲ್ಲಿ ಸೇರಿದರೂ,ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಕಾರಣ,ಅವರ ಶಿಕ್ಷಕಿಯಾಗುವ ಕನಸು ಕನಸಾಗಿಯೇ ಉಳಿಯಿತು.ಇದನ್ನು ಹೊರತುಪಡಿಸಿ,ಅವರಿಗೆ ಸುಮಧುರವಾದ ಕಂಠವಿದ್ದ ಕಾರಣ ಅವರು ಸಂಗೀತ ಕಲಿಯಲು ನಿರ್ಧರಿಸಿದರು.ಅವರು ಪ್ಯಾರಿಸ್,ಬರ್ಲಿನ್ ನಲ್ಲಿ ಸಂಗೀತಾಭ್ಯಾಸ ಮಾಡಿ,ನಂತರ ರಾಯಲ್ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಸಂಗೀತ ಡಿಪ್ಲೊಮಾ ಮುಗಿಸಿದರು[]. ಅವರ ೪೦ನೇ ವಯಸ್ಸಿನಲ್ಲಿ ಅವರ ಕವನಗಳನ್ನು 'ಪಂಚ್' ಮ್ಯಾಗಜ಼ಿನ್ ಗೆ ಕಳುಹಿಸಿದರು.ಅವರ ಮೊದಲ ಪಬ್ಲಿಕೇಷನ್ ಆದ "ಫೇರೀಸ್ ಅಟ್ ದಿ ಬಾಟಮ್ ಆಫ್ ಅವರ್ ಗಾರ್ಡನ್' ಮೇ ೧೯೧೭ರಲ್ಲಿ ಪ್ರಕಟವಾಯಿತು[]. ಪ್ರಕಾಶಕರಿಂದ ಬಂದ ಅಪಾರ ಪ್ರತಿಕ್ರಿಯೆಯಿಂದ ಫಿಲ್ಮನ್ ರವರಿಗೆ ಇನ್ನಷ್ಟು ಕವಿತೆಗಳನ್ನು ನೀಡಲು ಪ್ರೇರೇಪಣೆ ದೊರೆಯಿತು. ಓದುಗರಿಗೆ ಅವರ ಪದ್ಯಗಳು ಬಹಳ ಇಷ್ಟವಾದವು. ಮುಂದಿನ ದಶಕಗಳಲ್ಲಿ,ಅವರ ಮೊದಲ ಸಂಗ್ರಹವಾದ "ಫೇರೀಸ್ ಆಂಡ್ ಚಿಮ್ನೀಸ್" ಇಪ್ಪತ್ತಕ್ಕೂ ಹೆಚ್ಚು ಬಾರಿ ಮರುಪ್ರಕಟಣೆಗೊಂಡಿತು. ೧೯೨೦ ಹಾಗು ೧೯೩೦ರ ದಶಕದ ಆರಂಭದಲ್ಲಿ ಫಿಲ್ಮನ್ ರವರು ಅನೇಕ ಪದ್ಯ ಸಂಗ್ರಹಗಳನ್ನು ಪ್ರಕಟಿಸಿದರು.ಮಕ್ಕಳ ನಾಟಕ ಬರೆದರು. ಮುಂದಿನ ಎರಡು ವರ್ಷಗಳವರೆಗೆ ಮಕ್ಕಳ ಪತ್ರಿಕೆಯಾದ "ಮೆರ್ರಿ-ಗೋ-ರೌಂಡ್"ಅನ್ನು ಸಂಪಾದಿಸಿದರು[]. ಫಿಲ್ಮನ್ ರವರು ಓರ್ವ ನುರಿತ ಭಾಷಾಶಾಸ್ತ್ರಜ್ಞೆಯಾಗಿದ್ದು, ಅವರು ಜರ್ಮನ್,ಫ್ರೆಂಚ್ ಮತ್ತು ಇಟಾಲಿಯನ್ ಪುಸ್ತಕಗಳನ್ನು ಭಾಷಾಂತರಿಸಿದ್ದಾರೆ.ಇಷ್ಟಲ್ಲದೆ ಅವರು ಶಿಕ್ಷಕಿ, ಅನುವಾದಕಿ, ಸಂಪಾದಕಿ, ಗಾಯಕಿ ಮತ್ತು ಉಪನ್ಯಾಸಕಿಯಾಗಿದ್ದರು[]

ವಿನ್ನಿಪಿಗ್ ಬಗ್ಗೆ ಕವಿತೆ

ಬದಲಾಯಿಸಿ

೧೯೨೯ ರ ಡಿಸೆಂಬರ್ ನಲ್ಲಿ,ಕೆನಡದ ವಿನ್ನಿಪಿಗ್ ನ ಒಂದೆರೆಡು ಮ್ಹಿಳಾ ಕ್ಲಬ್ ಗಳಲ್ಲಿ ಅತಿಥಿ ಸ್ಪೀಕರ್ ಆಗಿ ರೊಸೆ ಫಿಲ್ಮನ್ ರವರನ್ನು ಆಹ್ವಾನಿಸಲಾಯಿತು. ಬ್ರಾಡ್ವೆ ಅವೆನ್ಯುನಲ್ಲಿನ ಮ್ಯಾನಿಟೋಬಾ ಪಾರ್ಲಿಮೆಂಟ್ ಕಟ್ಟಡದ ಸಮೀಪದಲ್ಲಿರುವ ಪೋರ್ಟ್ ಗ್ಯಾರಿ ಹೊಟೆಲಿನಲ್ಲಿ ನೆಲೆಸಿದ್ದರು. ಒಂದು ಸಂಜೆ,ಪಾರ್ಲಿಮೆಂಟಿನ ಎದುರಿನ ಹುಲ್ಲಿನಹಾಸಿನಲ್ಲಿರುವ ಕ್ವೀನ್ ವಿಕ್ಟೋರಿಯಾ ಪ್ರತಿಮೆಯನ್ನು ವೀಕ್ಷಿಸಲು ಫಿಲ್ಮನ್ ಮತ್ತು ಒಂದು ಕ್ಲಬ್ ನ ಅಧ್ಯಕ್ಷರು ಹೋದರು. ಅದು ಎಂಥ ಸುಂದರವಾದ ಚಳಿಗಾಲದ ಸಂಜೆಯಾಗಿತ್ತು ಎಂದರೆ,ಹೊಟೆಲಿಗೆ ಮರಳಿದ ತಕ್ಷಣ ಫಿಲ್ಮನ್ ರವರಿಗೆ "ಇನ್ ವಿನಿಪಿಗ್ ಅಟ್ ಕ್ರಿಸ್ಮಸ್" ಎಂಬ ಕವಿತೆಯನ್ನು ಬರೆಯಲು ಪ್ರೇರೇಪಣೆಯಾಯಿತು[].

ಉಲ್ಲೇಖಗಳು

ಬದಲಾಯಿಸಿ