ರೂಪೇಶ್ ಶೆಟ್ಟಿ
ರೂಪೇಶ್ ಶೆಟ್ಟಿ ಇವರು ಕನ್ನಡ, ತುಳು ಚಿತ್ರರಂಗದ ನಟ .[೧] ಅವರು ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕೀ ಮತ್ತು ಮಾಡೆಲ್ . ಅವರು ಕನ್ನಡ , ತುಳು ಮತ್ತು ಕೊಂಕಣಿ ಯಂತಹ ೩ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.
ರೂಪೇಶ್ ಶೆಟ್ಟಿ | |
---|---|
ಜನನ | ೧೫ ಆಗಸ್ಟ್ ೧೯೯೧ |
ವೃತ್ತಿ(ಗಳು) | ನಟ, ಗಾಯಕ, ಮಾಡೆಲ್, ಸಂಗೀತ ನಿರ್ದೇಶಕ ಮತ್ತು ಮಂಗಳೂರಿನಲ್ಲಿ ಆರ್‌ಜೆ |
ಜನನ ಮತ್ತು ವೃತ್ತಿ
ಬದಲಾಯಿಸಿರೂಪೇಶ್ ಇವರು ೧೫ ಆಗಸ್ಟ್ ೧೯೯೧ ರಂದು ಕಾಸರಗೋಡಿನ ಉಪ್ಪಳದಲ್ಲಿ ಜನಿಸಿದರು .[೨] ರೂಪೇಶ್ ಶೆಟ್ಟಿಯವರು ಮೊದಲಿಗೆ ನಮ್ಮಟಿವಿ ಚಾನೆಲ್ ನಲ್ಲಿ ನಿರೂಪಕನಾಗಿ ಕಾಣಿಸಿಕೊಂಡರು ಹಾಗೂ ಮಂಗಳೂರಿನಲ್ಲಿ ಆರ್ಜೆಯಾಗಿ ಜನಪ್ರಿಯತೆ ಗಳಿಸಿದರು . ಅವರು ತಮ್ಮ ವೃತ್ತಿಜೀವನವನ್ನು ದಿಬ್ಬಣ ಎಂಬ ತುಳು ಚಿತ್ರದಲ್ಲಿ ಕಿರು ಪಾತ್ರದಲ್ಲಿ ನಟಿಸುವ ಮೂಲಕ ಪ್ರಾರಂಭಿಸಿದರು ಹಾಗೂ ೨೦೧೫ ರ ಡೇಂಜರ್ ಜ಼ೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಪ್ರಾಮುಖ್ಯತೆಯನ್ನು ಪಡೆದರು .[೩] ಇವರು ತಮಿಳಿನ ಅತ್ಯಂತ ಪ್ರಸಿದ್ಧಿ ಹೊಂದಿರುವ ಕೊಲವೆರಿ ಡಿ ಎಂಬ ಹಾಡನ್ನು ಪುನರ್ ನಿರ್ದೇಶಿಸಿ ಹಾಡಿದ್ದಾರೆ .[೪] ೨೦೧೬ ರಲ್ಲಿ ಇವರು ಐಸ್ ಕ್ರೀಮ್ ಎಂಬ ತುಳು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು . ನಂತರ ೨೦೧೭ ರಲ್ಲಿ ಪಿಶಾಚಿ ೨ , ನಿಶಬ್ಧ ೨ ಮತ್ತು ಸ್ಮೈಲ್ ಪ್ಲೀಜ್ ಎಂಬ ಕನ್ನಡ ಚಲನಚಿತ್ರಗಳಲ್ಲಿ ಕಿರು ಪಾತ್ರವನ್ನು ವಹಿಸಿದರು . ಹಾಗೂ ಇವರು ೨೦೧೭ ರ , ಕೃಷ್ಣಪ್ರಸಾದ್ ಉಪ್ಪಿನಕೋಟೆ ನಿರ್ದೇಶಿಸಿರುವ ರಂಗ್ ರಂಗ್ ದ ದಿಬ್ಬಣ ಎಂಬ ಚಿತ್ರದಲ್ಲೂ ನಟಿಸಿದರು ಮತ್ತು ೨೦೧೮ ರ ಅಮ್ಮೆರ್ ಪೋಲಿಸಾ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ವಹಿಸಿ ನಟಿಸಿದ್ದಾರೆ .
ಫಿಲ್ಮೋಗ್ರಾಫಿ
ಬದಲಾಯಿಸಿನಟನಾಗಿ
ಬದಲಾಯಿಸಿಸಿನಿಮಾ | ಭಾಷೆ | ಟಿಪ್ಪಣಿ |
---|---|---|
ದಿಬ್ಬಣ | ತುಳು | ಪೋಷಕ ಪಾತ್ರ[೫] |
ಐಸ್ ಕ್ರೀಮ್ | ತುಳು | ಮುಖ್ಯ ಪಾತ್ರ[೬] |
ಡೇಂಜರ್ ಜ಼ೋನ್ | ಕನ್ನಡ | ಮುಖ್ಯ ಪಾತ್ರ[೭] |
ಅಶೆಂ ಜ಼ಲೆಂ ಕಶೆಂ | ಕೊಂಕಣಿ | ಮುಖ್ಯ ಪಾತ್ರ[೮] |
ಸ್ಮೈಲ್ ಪ್ಲೀಜ್ | ಕನ್ನಡ | ಕಿರು ಪಾತ್ರ [೯] |
ನಿಶಬ್ಧ ೨ | ಕನ್ನಡ | ಮುಖ್ಯ ಪಾತ್ರ[೧೦] |
ಅಮ್ಮೆರ್ ಪೋಲಿಸಾ | ತುಳು | ಮುಖ್ಯ ಪಾತ್ರ [೧೧] |
ಲಾಸ್ಟ್ ಬೆಂಚ್ | ತುಳು | ಮುಂಬರುವ ಚಿತ್ರ |
ಅನುಷ್ಕಾ | ಕನ್ನಡ | ಮುಂಬರುವ ಚಿತ್ರ[೧೨] |
ಗೋಲ್ ಮಾಲ್ ಬ್ರದರ್ಸ್ | ಕನ್ನಡ | ಮುಂಬರುವ ಚಿತ್ರ[೧೩] |
ಲೈಫ್ ಈಸ್ ಗಿರ್ಗಿಟ್ | ತುಳು | ಮುಂಬರುವ ಚಿತ್ರ[೧೪]
(ನಿರ್ದೇಶನ - ರೂಪೇಶ್ ಶೆಟ್ಟಿ) |
ಮಂಕು ಭಾಯಿ ಫಾಕ್ಸಿ ರಾಣಿ | ಕನ್ನಡ | ಮುಂಬರುವ ಚಿತ್ರ[೧೫] |
ಗಾಯಕನಾಗಿ
ಬದಲಾಯಿಸಿ- ಈ ಸಲ ಕಪ್ ನಮ್ಮದೇ - ಮೂಲ , ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಹಾಡಿದ ಹಾಡು .[೧೬]
ಉಲ್ಲೇಖಗಳು
ಬದಲಾಯಿಸಿ- ↑ imbd.com
- ↑ ಜನನ[ಶಾಶ್ವತವಾಗಿ ಮಡಿದ ಕೊಂಡಿ]
- ↑ ಟೈಮ್ಸ್ ಆಫ್ ಇಂಡಿಯಾ Updated: Sep 22, 2016, 05.52 PM IST
- ↑ "ಮಂಗಳೂರಿನ ರಾಕ್‌ಸ್ಟಾರ್". Archived from the original on 2019-06-09. Retrieved 2019-06-09.
- ↑ ದಿಬ್ಬಣ ಚಲನಚಿತ್ರದಲ್ಲಿ ರೂಪೇಶ್ ಶೆಟ್ಟಿ[ಶಾಶ್ವತವಾಗಿ ಮಡಿದ ಕೊಂಡಿ]
- ↑ ಐಸ್ ಕ್ರೀಮ್ (೨೦೧೫)
- ↑ ಡೇಂಜರ್ ಜ಼ೋನ್
- ↑ ಅಶೆಂ ಜ಼ಲೆಂ ಕಶೆಂ -ತುಳು ಸಿನಿಮಾದಲ್ಲಿ ರೂಪೇಶ್ ಶೆಟ್ಟಿ
- ↑ [೧]
- ↑ ಕನ್ನಡದ ನಿಶಬ್ಧ ೨ ಚಿತ್ರದಲ್ಲಿ ಅಭಿನಯಿಸಿದ ರೂಪೇಶ್ ಶೆಟ್ಟಿ
- ↑ ಟೈಮ್ಸ್ ಆಫ್ ಇಂಡಿಯಾ
- ↑ ಅನುಷ್ಕಾ -ಕನ್ನಡ ಚಲನಚಿತ್ರ
- ↑ "ನಮ್ಮಟಿವಿ". Archived from the original on 2019-10-26. Retrieved 2019-06-09.
- ↑ Tulucinema.com
- ↑ ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಚಿತ್ರ
- ↑ ರೋಹಿತ್ ಶೆಟ್ಟಿ ಯವರಿಂದ - ಈ ಸಲ ಕಪ್ ನಮ್ಮದೇ