ರಿಕಿ ಕೇಜ್ ಭಾರತ ಮೂಲದ,ಬೆಂಗಳೂರಿನಲ್ಲಿ ನೆಲೆಸಿರುವ ಒಬ್ಬ ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕ.೨೦೧೫ರ ೫೭ನೆಯ ಗ್ರಾಮ್ಮಿ ಪ್ರಶಸ್ತಿಯನ್ನು ತನ್ನ "ವಿಂಡ್ಸ್ ಆಫ್ ಸಂಸಾರ" ದ್ವನಿ ಸುರುಳಿಗೆ ಪಡೆದು ಪ್ರಸಿದ್ಧರಾದರು.ಈ ಸಾಧನೆಯನ್ನು ದಕ್ಷಿಣ ಆಫ್ರಿಕದ ಕೊಳಲು ವಾದಕ ವೂಟರ್ ಕೆಲ್ಲರ್‍ಮನ್ ಎಂಬವರ ಜತೆಗೂಡಿ ಮಾಡಿದರು.ಇದಕ್ಕೆ ಮೊದಲು ಡಿಸೆಂಬರ್ ೫,೨೦೧೪ರಂದು "ಬೆಸ್ಟ್ ನ್ಯೂ ಏಜ್ ಆಲ್ಬಂ" ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದರು.[೧] ಕೇಜ್ ಈ ಮೊದಲು ಕನ್ನಡ ಭಾಷೆಯ ಐದು ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದು,ಸುಮಾರು ೩೦೦೦ ಜಾಹೀರಾತು ಚುಟುಕುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ೧೭ ಫೆಬ್ರವರಿ ೨೦೧೧ರಂದು ಡಾಕ್ಕಾದಲ್ಲಿ ಜರುಗಿದ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭಕ್ಕೆ ಸಂಗೀತ ಸಂಯೋಜಿಸಿದ ಕೀರ್ತಿಯೂ ಇವರದು[೨] .ಇವರು ಅಮೆರಿಕದ ಪ್ರಜೆ.[೩]

ರಿಕಿ ಕೇಜ್
ರಿಕಿ ಕೇಜ್
ಹಿನ್ನೆಲೆ ಮಾಹಿತಿ
ಜನ್ಮನಾಮರಿಕಿ ಕೇಜ್
ಜನನ(೧೯೮೧-೦೮-೦೫)೫ ಆಗಸ್ಟ್ ೧೯೮೧
ಉತ್ತರ ಕರೊಲಿನಾ, US
ಸಕ್ರಿಯ ವರ್ಷಗಳು2000–present
ಅಧೀಕೃತ ಜಾಲತಾಣrickykej.com

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

ರಿಕಿ ಕೇಜ್‍ರವರು ಆಗಸ್ಟ್ ೫,೧೯೮೧ರಂದು ಅಮೇರಿಕ ಸಂಯುಕ್ತ ಸಂಸ್ಥಾನಉತ್ತರ ಕೆರೊಲಿನಾದಲ್ಲಿ ಜನಿಸಿದರು. ಹುಟ್ಟಿನಿಂದ ಅರ್ಧ ಪಂಜಾಬಿ ಮತ್ತು ಮಾರ್ವಾಡಿ ಪಂಗಡಕ್ಕೆ ಸೇರಿದ್ದಾರೆ[೪].ತಮ್ಮ ಎಂಟನೆಯ ವರ್ಷದಲ್ಲಿ ಹೆತ್ತವರೊಂದಿಗೆ ಬೆಂಗಳೂರಿಗೆ ವಲಸೆ ಬಂದು ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ[೩].ತಮ್ಮ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರ್ಣಗೊಳಿಸಿ ತರುವಾಯ ಆಕ್ಸ್‍ಫರ್ಡ್ ಡೆಂಟಲ್ ಕಾಲೇಜಿನಲ್ಲಿ ದಂತಚಿಕಿತ್ಸಾ ವ್ಯಾಸಂಗವನ್ನು ಪೂರ್ಣಗೊಳಿಸಿದರು.ಆದರೆ ತಾನು ಕಲಿತ ದಂತಚಿಕಿತ್ಸಾ ವೃತ್ತಿಯನ್ನು ಆಯ್ದುಕೊಳ್ಳದೆ ಸಂಗೀತವನ್ನು ಪೂರ್ಣಕಾಲಿಕ ಉದ್ಯೋಗವನ್ನಾಗಿ ಆಯ್ದುಕೊಂಡರು[೫]. ಕೇಜ್ ಸಂಗೀತದ ಕ್ರಮಬದ್ಧವಾದ ತರಬೇತಿಯನ್ನು ಎಂದಿಗೂ ಪಡೆದವರಲ್ಲ ಬದಲಿಗೆ ಸ್ವಯಂ ಕಲಿತರು. ಅವರೇ ಹೆಳುವಂತೆ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸೇರಿದ ಪ್ರಗತಿಶೀಲ ರಾಕ್ ಬ್ಯಾಂಡ್‍ ಇವರ ಸಂಗೀತಕ್ಕೆ ಉತ್ತಮ ತಳಹದಿಯನ್ನು ಒದಗಿಸಿತು[೪].ಕೇಜ್‍ರವರ ತಾಯಿ ಪಮ್ಮಿ ಕೇಜ್ ಹೇಳುವಂತೆ ರಿಕಿ ಕೇಜ್‍ರವರಿಗೆ ಸಂಗೀತ ತಮ್ಮ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ, ನಟರಾಗಿದ್ದ ಜಾನಕೀದಾಸ್‍ರವರಿಂದ ವಂಶವಾಹಿಯಾಗಿ ಬಂದಿದೆ[೬] .ವ್ಯಾಸಂಗದ ಅವಧಿಯಲ್ಲಿ ಕೇಜ್ ಕಾಲೇಜು ಮತ್ತು ತಮ್ಮ ಸಂಗೀತಕ್ಕಾಗಿ ಸ್ಟುಡಿಯೋ ಎರಡನ್ನೂ ಸಮತೋಲನ ಮಾಡಬೇಕಿತ್ತು.ಉನ್ನತ ಶಿಕ್ಷಣ ಪಡೆಯುತ್ತಿದ್ದ ನಾಲ್ಕು ವರ್ಷಗಳಲ್ಲಿ ಸುಮಾರು ೧೦೦೦ ಜಾಹೀರಾತು ಚುಟುಕುಗಳ ಸಂಗೀತ ನಿರ್ದೇಶನ ಮಾಡಿದ್ದರು.ಕೇಜ್ ಅಭಿಪ್ರಾಯ ಪಟ್ಟಂತೆ ಸಂಗೀತವನ್ನೇ ಪೂರ್ಣಕಾಲಿಕವಾಗಿ ಕಲಿತಿದ್ದರೆ ಈ ಕ್ಸೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಿತ್ತು.ಅವರು ತಾನು ಕಲಿತ ದಂತ ಚಿಕಿತ್ಸಾ ವೃತ್ತಿಯನ್ನು ಎಂದಿಗೂ ಬದಲಿ ಉದ್ಯೋಗವನ್ನಾಗಿ ಯೋಚಿಸಿಲ್ಲ ಏಕೆಂದರೆ ಅವರ ಅಭಿಪ್ರಾಯದಂತೆ ಎಲ್ಲಾ ವೃತ್ತಿಯಲ್ಲೂ ಏರಿಳಿತ ಇರುವುದು ಸಹಜವಾದುದರಿಂದ ಒಬ್ಬನಿಗೆ ಬದಲಿ ಉದ್ಯೋಗ ಎಂಬುದರ ಆವಶ್ಯಕತೆ ಇರುವುದಿಲ್ಲ[೫]. ಅವರ ಈ ತೀರ್ಮಾನವನ್ನು ಹೆತ್ತವರು ಒಪ್ಪಿಕೊಳ್ಳುವಂತೆ ಮಾಡುವುದು ಸುಲಭಸಾಧ್ಯವಾಗಿರಲಿಲ್ಲ.

ಸಂಗೀತ ವೃತ್ತಿ ಬದಲಾಯಿಸಿ

ಆರಂಭಿಕ ಕಾರ್ಯಗಳು (೧೯೯೦ ರಿಂದ ೨೦೦೭) ಬದಲಾಯಿಸಿ

ಕೇಜ್ ತನ್ನ ಶಿಕ್ಷಣದ ಅವಧಿಯುದ್ದಕ್ಕೂ ದೂರದರ್ಶನ ಮತ್ತು ರೇಡಿಯೋಗಳ ಚುಟುಕು ಸಂಗೀತಗಳ ನಿರ್ಮಾಣ ಮಾಡಿದರು. ೧೩ ವರ್ಷಗಳ ಕಾಲದಲ್ಲಿ ಸುಮಾರು ೩೦೦೦ ಇಂತಹ ಚುಟುಕು ಸಂಗೀತಗಳ ನಿರ್ಮಾಣ ಮಾಡಿ, ಈ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ದಾಖಲಿಸಿದರು.ಅವರ ಈ ಸಾಧನೆ ಅವರಿಗೆ ಮೈಕ್ರೋಸಾಫ್ಟ್, ಲೆವಿಸ್, ಏರ್ ಇಂಡಿಯಾ ಮುಂತಾದ ದೊಡ್ಡ ದೊಡ್ಡ ಕೆಂಪನಿಗಳ ಜಾಹೀರಾತುಗಳಲ್ಲಿ ಕೆಲಸ ಮಾಡಲು ಅವಕಾಶವೊದಗಿಸಿತು[೭]. ತನ್ನ ಜಿಂಗಲ್ ಯಶಸ್ಸಿನ ನಂತರ, 2003 ರಲ್ಲಿ ಕೇಜ್ ತನ್ನ ಮೊದಲ ಅಂತರಾಷ್ಟ್ರೀಯ ಲಾಂಜ್ ಆಲ್ಬಮ್ ಬಿಡುಗಡೆ ಮಾಡಿದರು. ಈ ಆಲ್ಬಂನ ಹಾಡುಗಳನ್ನು ಫ್ರಾನ್ಸ್, ಪೋಲೆಂಡ್, ಚೀನಾ, ತೈವಾನ್, ಭಾರತ, ಇಸ್ರೇಲ್ ಮತ್ತು ಜರ್ಮನಿಯಲ್ಲಿ ಸುಮಾರು ೨೦ ಅಂತಾರಾಷ್ಟ್ರೀಯ ಸಂಕಲನಗಳಲ್ಲಿ ಬಿಡುಗಡೆ ಮಾಡಲಾಯಿತು[೮]. ತನ್ನ ಪ್ರಥಮ ಯಶಸ್ವೀ ಅಲ್ಬಂ ನಂತರ ಕೇಜ್ "ಆಶಾವಾಲಿ ದೂಪ್" ಎಂಬ ಸಂಕಲವನ್ನು ೨೦೦೬ರಲ್ಲಿ ಬಿಡುಗಡೆ ಮಾಡಿದರು.ಭಾರತದಲ್ಲಿ ಕೇಜ್‍ರವರ ಯಶಸ್ಸು ಅಮೆರಿಕಲ್ಲಿ ಗುರುತಿಸಲ್ಪಟ್ಟು ಅಮೆರಿಕದ 'ವಾಟರ್ ಮ್ಯೂಸಿಕ್ ರೆಕಾರ್ಡ್ಸ್' ಎಂಬ ಸಂಸ್ಥೆ "ಕಾಮಸೂತ್ರ ಲೌಂಜ್ I ಮತ್ತು II" ಎಂಬ ಎರಡು ಸಂಕಲನಗಳನ್ನು ಅತ್ಯಲ್ಪ ಅವಧಿಯಲ್ಲಿ ಬಿಡುಗಡೆ ಮಾಡಿತು[೯].

೨೦೦೮ ರಿಂದ ೨೦೧೧ ರ ಅವಧಿ ಬದಲಾಯಿಸಿ

ಕೇಜ್‍ರವರ ೩ನೆಯ ಧ್ವನಿಸುರುಳಿಯ ನಂತರ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದವು.೨೦೦೮ರಲ್ಲಿ ಇವರಿಗೆ ಉತ್ತಮ ಜಾಹೀರಾತಿಗಾಗಿ "ಕ್ಲಿಯೋ" ಪ್ರಶಸ್ತಿ ದೊರೆತಿದೆ.ಒಂದು ವರ್ಷದ ನಂತರ ಜಾಹೀರಾತು ಕ್ಷೇತ್ರದಲ್ಲಿ ಇವರಿಗೆ "ಅಡ್‍ಫೆಸ್ಟ್ ಏಷಿಯಾ" ಪ್ರಶಸ್ತಿ ದೊರೆಯಿತು. ಇವರ ಪ್ರಥಮ ಮೂರು ಧ್ವನಿಸುರುಳಿಗಳ ಯಶಸ್ಸು ಇವರನ್ನು ಚಲನಚಿತ್ರ ಸಂಗೀತ ಕ್ಷೇತ್ರದತ್ತ ಸೆಳೆಯಿತು.೨೦೦೮ರಲ್ಲಿ ಇವರು ಕನ್ನಡ ಭಾಷಯ ಅಕ್ಸಿಡೆಂಟ್ ಚಿತ್ರಕ್ಕೆ ಪ್ರಥಮವಾಗಿ ಸಂಗೀತ ನಿರ್ದೇಶಿಸಿದರು.೨೦೧೦ರಲ್ಲಿ ಇನ್ನೊಂದು ಚಿತ್ರ ವೆಂಕಟ ಇನ್ ಸಂಕಟಕ್ಕೆ ಸಂಗೀತ ನಿರ್ದೇಶನ ನೀಡಿದರು.ಇವರಿಗೆ ಜಾಹೀರಾತು ಕ್ಷೇತ್ರದಲ್ಲಿ ಸಾಧಿಸಿದ ಶ್ರೇಷ್ಥತೆಗಾಗಿ "ಒನ್ ಶೋ" ಎಂಬ ಪ್ರಶಸ್ತಿ ದೊರೆತರೆ,ಕ್ಯಾನೆ ಉತ್ಸವದಲ್ಲಿ ನೈಕ್ ಕೆಂಪನಿಯ ಚುಟುಕು ಸಂಗೀತಕ್ಕಾಗಿ ವಿಶೇಷ ಪ್ರಶಸ್ತಿ ದೊರೆಯಿತು.

ಈ ಅವಧಿಯಲ್ಲಿ ಇವರು ಬಾಲಿವುಡ್ ರಿಮಿಕ್ಸ್‍ಡ್" ಮತ್ತು "ಡಾನ್ಸ್ ದಿ ಗೋಲ್ಡನ್ ಇಯರ್ಸ್" ಎಂಬ ಎರಡು ಧ್ವನಿಸುರುಳಿ ಹೊರತಂದರು. ೧೭ ಫೆಬ್ರವರಿ ೨೦೧೧ರಂದು ಡಾಕ್ಕಾದಲ್ಲಿ ಜರುಗಿದ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭಕ್ಕೆ ಸಂಗೀತ ಸಂಯೋಜಿಸಿದರು.ಈ ಸಮಾರಂಭವು ಪ್ರಪಂಚದಾದ್ಯಂತ ೨೦೦ ದೇಶಗಳಲ್ಲಿ ಪ್ರಸಾರವಾಗಿ ಪ್ರಪಂಚದ ಪ್ರಮುಖ ಮಾಧ್ಯಮಗಳ ಪ್ರಶಂಸೆಗೆ ಪಾತ್ರವಾಯಿತು. ಇದೇ ವರ್ಷದಲ್ಲಿ ಇವರು ಕೊಳಲು ಮತ್ತು ಸಂತೂರ್ ವಾದ್ಯಗಳನ್ನು ಬಳಸಿ ತಯಾರಿಸ "ಫೈರಿ ಡ್ರಮ್ಸ್-೧" ಮತ್ತು "ಫೈರಿ ಡ್ರಮ್ಸ್-೨" ಎಂಬ ಎರಡು ಅಲ್ಬಂಗಳನ್ನೂ ಹೊರತಂದರು.

೨೦೧೨ ರಿಂದ ಪ್ರಸ್ತುತ ಬದಲಾಯಿಸಿ

೨೦೧೨ರಲ್ಲಿ ಕೇಜ್‍ರವರ "ಅರೇಬಿಯನ್ ಸೀ" ಎಂಬ ವಿಡಿಯೋ ಅಮೇರಿಕದ ಕೇಬಲ್ ವಾಹಿನಿ " VH1"ರಲ್ಲಿ ಪದೇ ಪದೇ ಪ್ರಸಾರವಾಗಿ ಬಹಳಷ್ಟು ಜನಪ್ರಿಯತೆಯನ್ನು ಪಡೆಯಿತು.ಇದೇ ವೇಳೆ ಕೇಜ್ ಹಲವಾರು ಫ್ರೆಂಚ್ ಭಾಷೆಯ ಆಲ್ಬಂಗಳಿಗೆ ಸಂಗೀತ ನೀಡಿದರು.ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಗೀತೆ "ಜೈ ಹೋ"ದ ಅಧಿಕೃತ ರೀಮಿಕ್ಸ್‍ನ್ನು ಇವರು ತಯಾರಿಸಿ ಅಮೇರಿಕದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರು.

೨೦೧೨ರಲ್ಲಿ ಕೇಜ್ "ಜಯ ಹೇ ಕನ್ನಡ ತಾಯೆ" ಎಂಬ ಗೀತೆಯನ್ನು ಕರ್ನಾಟಕದ ಮೇಲಿನ ಗೌರವದಿಂದ ಸೃಜಿಸಿದರು. ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರು ಮತ್ತು ವನ್ಯಜೀವಿ ಸಂರಕ್ಷಕರ ಜತೆಗೂಡಿ "ವೈಲ್ಡ್ ಲೈಫ್ ಮ್ಯೂಸಿಕ್ ವಿಡಿಯೋ" ಎಂಬ ವಿಡೀಯೋವನ್ನು ಹೊರತಂದರು. ಇದನ್ನು ಪೂರ್ಣವಾಗಿ ಪಶ್ಚಿಮ ಘಟ್ಟಗಳ ಅರಣ್ಯಗಳಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ಕರ್ನಾಟಕದ ಹಲವಾರು ಅಪರೂಪದ ಪ್ರಭೇದಗಳ ವನ್ಯಜೀವಿಗಳನ್ನು ಚಿತ್ರೀಕರಿಸಲಾಗಿದ್ದು ಹಲವಾರು ಬಾರಿ ವಾಹಿನಿಗಳಲ್ಲಿ ಪ್ರಸಾರವಾಗಿ ಸಾರ್ವತ್ರಿಕ ಪ್ರಶಂಸೆಗಳಿಸಿದೆ.

೨೦೧೩ರಲ್ಲಿ ತನ್ನದೇ ಸ್ವಂತ ಸ್ಟುಡಿಯೋ "ರೆವೆಲ್ಯೂಷನ್ ಸ್ಟುಡಿಯೋ"ದಲ್ಲಿ ತಯಾರಿಸಿದ "ಶಾಂತಿ ಅರ್ಕೆಸ್ಟ್ರಾ", "ಬ್ಯಾಲೆಡ್ ಅಫ್ ಮಾಯಾ" ಮುಂತಾದವುಗಳನ್ನು ಬಿಡುಗಡೆಗೊಳಿಸಿದರು.

೨೦೧೩ರ ನವೆಂಬರ್‍ನಲ್ಲಿ ರಿಕಿಯ ಶಾಂತಿ ಆರ್ಕೆಸ್ಟ್ರಾ ಆಲ್ಬಂ‍ನ "ಫಾರೆವರ್" ಹಾಡು "ಹಾಲಿವುಡ್ ಮ್ಯೂಸಿಕ್ ಇನ್ ಮೀಡಿಯಾ ಪ್ರಶಸ್ತಿ" ಗೆ ನಾಮನಿರ್ದೇಶನಗೊಂಡಿತು.

ಪ್ರಶಸ್ತಿಗಳು ಬದಲಾಯಿಸಿ

 1. ಕ್ಲಿಯೋ ಪ್ರಶಸ್ತಿ- ಜಾಹೀರಾತು (೨೦೦೮)
 2. ಆಡ್‍ಫೆಸ್ಟ್ ಪ್ರಶಸ್ತಿ- ಜಾಹೀರಾತು (೨೦೦೯)
 3. ೫೭ನೆಯ ವಾರ್ಷಿಕ ಗ್ರಾಮೀ ಪ್ರಶಸ್ತಿ- ೨೦೧೫

ಇತರೆ ಕೆಲಸಗಳು ಬದಲಾಯಿಸಿ

ರಿಕಿ ಕೇಜ್ ಸಂಗೀತ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು,ಹಲವಾರು ವಾಹಿನಿಗಳ ರಿಯಾಲಿಟಿ ಪ್ರದರ್ಶನಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.ಸಂಗೀತ ಶಿಕ್ಷಣ, ಪ್ರಾಣಿಗಳ ಹಕ್ಕು ಹೋರಾಟ ಇವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಸಂಗೀತದ ಶಿಕ್ಷಣದ ಉನ್ನತೀಕರಣ,ಅಶಕ್ತ ಕಲಾವಿದರ ಮಾಸಾಶನಕ್ಕಾಗಿ ಧನಸಂಗ್ರಹವನ್ನು ಮೂಲ ಉದ್ದೇಶವನ್ನಾಗಿಟ್ಟುಕೊಂಡು ಪ್ರಾರಂಭವಾಗಿರುವ ಸಂಸ್ಥೆ "ಮಜೊಲ್ಲಿ ಮ್ಯೂಸಿಕ್ ಟ್ರಸ್ಟ್" ಇದರ ಸ್ಥಾಪಕ ಸದಸ್ಯರೊಲ್ಲೊಬ್ಬರು.

ಧ್ವನಿಮುದ್ರಿಕೆ ಪಟ್ಟಿ ಬದಲಾಯಿಸಿ

ಆಲ್ಬ್ಂಗಳು ಬದಲಾಯಿಸಿ

 1. ಕಮ್ಯುನಿಕೇಟಿವ್ ಆರ್ಟ್ (೨೦೦೪)
 2. ಕಾಮಸೂತ್ರ ಲೌಂಜ್ (೨೦೦೭)
 3. ಕಾಮಸೂತ್ರ ಲೌಂಜ್-೨ (೨೦೦೮)
 4. ಮೆಸ್ಮರೈಸಿಂಗ್ ಪ್ಲೂಟ್ (೨೦೧೧)
 5. ಅರ್ಬನ್ ಗ್ರೂವ್ಸ್ ಸೌತ್ ಇಂಡಿಯಾ (೨೦೧೧)
 6. ಫೈರಿ ಡ್ರಮ್ಸ್ ವಾಲ್ಯೂಮ್-೧ (೨೦೧೧)
 7. ಮೆಸ್ಮರೈಸಿಂಗ್ ಸಂತೂರ್ (೨೦೧೨)
 8. ಪಂಜಾಬಿ ಇನ್ ದಿ ಕ್ಲಬ್ (೨೦೧೨)
 9. ಬಾಲಿವುಡ್ ಇನ್ ದಿ ಕ್ಲಬ್ (೨೦೧೨)
 10. ಕಾಮಸೂತ್ರ ಲೌಂಜ್-ದಿ ಡಿಲಕ್ಸ್ ಎಡಿಶನ್ (೨೦೧೩)
 11. ಶಾಂತಿ ಆರ್ಕೆಸ್ಟ್ರಾ - (೨೦೧೩)
 12. ಫೈರಿ ಡ್ರಮ್ಸ್ ವಾಲ್ಯೂಮ್ -೨ (೨೦೧೩)
 13. ಬ್ಯಾಲಡ್ ಆಫ್ ಮಾಯಾ (೨೦೧೩)

ಕನ್ನಡ ಚಿತ್ರ ಸಂಗೀತ ಬದಲಾಯಿಸಿ

 1. ಅಕ್ಸಿಡೆಂಟ್
 2. ವೆಂಕಟ ಇನ್ ಸಂಕಟ
 3. ಕ್ರೇಜಿ ಕುಟುಂಬ
 4. ಒಂದು ರುಪಾಯಲ್ಲಿ ಎರಡು ಪ್ರೀತಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

 1. "57th Annual Grammy Award Nominees". GRAMMY.com. December 2014. Retrieved 6 Dec 2014.
 2. Parsons, Kathy. "Ricky Kej". MainlyPiano. Retrieved 27 November 2014.
 3. ೩.೦ ೩.೧ D G, Supriya. "Topping Charts the Kej Way". NRI Pulse. Retrieved 27 November 2014.
 4. ೪.೦ ೪.೧ Ghose, Priyanjali (November 2009). "Bangalore to Mumbai". Mid-Day. Retrieved 28 November 2014.
 5. ೫.೦ ೫.೧ Choudhury, Prerna (December 2009). "Tuned to Pefection". The New Indian Express. Archived from the original on 30 ನವೆಂಬರ್ 2014. Retrieved 27 November 2014.
 6. Rodgers, Debbie (August 2004). "Young on the console". The Hindu. Archived from the original on 30 ನವೆಂಬರ್ 2014. Retrieved 27 November 2014.
 7. "I will continue to strive: Ricky Kej – Bangalore – DNA". Dnaindia.com. 16 December 2011. Retrieved 15 September 2012.
 8. "Film Harvest 2012 – The Team behind the Festival". Filmharvest.in. 16 March 2012. Archived from the original on 14 ಆಗಸ್ಟ್ 2012. Retrieved 15 September 2012.
 9. "Water Music Records". Water Music Records. Archived from the original on 26 ಆಗಸ್ಟ್ 2014. Retrieved 15 September 2012.