ರಾಷ್ಟ್ರೀಯ ಕೇಂದ್ರೀಯ ವಿಶ್ವವಿದ್ಯಾಲಯ

ರಾಷ್ಟ್ರೀಯ ಕೇಂದ್ರೀಯ ವಿಶ್ವವಿದ್ಯಾಲಯ (ಎನ್‌ಸಿಯು) ಇದು ತೈವಾನ್ ಮೂಲದ ರಿಪಬ್ಲಿಕ್ ಆಫ್ ಚೀನಾದ ದೀರ್ಘಕಾಲೀನ ಸಂಪ್ರದಾಯಗಳನ್ನು ಹೊಂದಿರುವ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಇದನ್ನು ೧೯೦೨ ರಲ್ಲಿ, ಸ್ಥಾಪಿಸಲಾಯಿತು ಮತ್ತು ೧೯೧೫ ರಲ್ಲಿ ಮರುನಾಮಕರಣ ಮಾಡಲಾಯಿತು. ಈ ಶಾಲೆಯು ಮೊದಲು ತೈವಾನ್‌ಗೆ ಸ್ಥಳಾಂತರಗೊಂಡಾಗ ಆರಂಭದಲ್ಲಿ ಮಿಯಾವೊಲಿಯಲ್ಲಿತ್ತು. ಆದರೆ, ೧೯೬೨ ರಲ್ಲಿ, ಝೊಂಗ್ಲಿಗೆ ಸ್ಥಳಾಂತರಗೊಂಡಿತು ಮತ್ತು ಸಮಗ್ರ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿಗೊಂಡಿತು. ಇದು ಕೈಗಾರಿಕಾ ಅರ್ಥಶಾಸ್ತ್ರ[] ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಂಶೋಧಿಸಿದ ತೈವಾನ್‌ನ ಮೊದಲ ವಿಶ್ವವಿದ್ಯಾಲಯವಾಗಿದೆ (ತೈವಾನ್ ನ ಗ್ರಾಹಕ ವಿಶ್ವಾಸ ಸೂಚ್ಯಂಕವನ್ನು ಎನ್‌ಸಿಯು ಮಾಸಿಕವಾಗಿ ಬಿಡುಗಡೆ ಮಾಡುತ್ತದೆ).[] ಎನ್‌ಸಿಯು ಎಎಸಿಎಸ್‌ಬಿ ಸದಸ್ಯ ರಾಷ್ಟ್ರವಾಗಿದೆ.[] ಶಿಕ್ಷಣ ಸಚಿವಾಲಯವು ಆಯ್ಕೆ ಮಾಡಿದ ಸಂಶೋಧನೆಯಲ್ಲಿ ಎನ್‌ಸಿಯು ಆರು ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. [][]

ರಾಷ್ಟ್ರೀಯ ಕೇಂದ್ರೀಯ ವಿಶ್ವವಿದ್ಯಾಲಯ
ಹಿಂದಿನ ಹೆಸರು‍
  • ಸಂಜಿಯಾಂಗ್ ಅಥವಾ ಲಿಯಾಂಗ್ಜಿಯಾಂಗ್ ಸಾಮಾನ್ಯ ಕಾಲೇಜು (೧೯೦೨-೧೯೧೪)
  • ನಾಂಕಿಂಗ್ ಹೈಯರ್ ನಾರ್ಮಲ್ ಸ್ಕೂಲ್ (೧೯೧೫–೧೯೨೩)
  • ನ್ಯಾಷನಲ್ ಸೌತ್ ಈಸ್ಟರ್ನ್ ಯೂನಿವರ್ಸಿಟಿ (೧೯೨೧–೧೯೨೭)
  • ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್ (೧೯೬೨–೧೯೬೮)
  • ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (೧೯೬೮–೧೯೭೯)
ಧ್ಯೇಯ誠樸 (ಫಾಕ್-ಫಾ-ಸು: ಶಿನ್-ಫೋಕ್, ಪೆಹ್-ಓ-ಜೀ: ಸೆಂಗ್-ಫೋಕ್)[]
Motto in English
ಪ್ರಾಮಾಣಿಕತೆ ಮತ್ತು ಸರಳತೆ[]
ಪ್ರಕಾರಪಬ್ಲಿಕ್
ಸ್ಥಾಪನೆ೧೯೦೨[]
ಅಧ್ಯಕ್ಷರುಜಿಂಗ್-ಯಾಂಗ್ ಜೌ
ಶೈಕ್ಷಣಿಕ ಸಿಬ್ಬಂಧಿ
೭೪೬ (ಪೂರ್ಣ ಸಮಯ)
ಪದವಿ ಶಿಕ್ಷಣ೫,೭೪೩
ಸ್ನಾತಕೋತ್ತರ ಶಿಕ್ಷಣ೬,೦೩೭
ಸ್ಥಳಝೋಂಗ್ಲಿ, ತಾವೊವಾನ್ ನಗರ, ತೈವಾನ್
ಆವರಣಉಪನಗರ
ಮಾನ್ಯತೆಗಳುತೈವಾನ್ ವಿಶ್ವವಿದ್ಯಾಲಯ ವ್ಯವಸ್ಥೆ
ಯುಎಐಟಿ‌ಇಡಿ
ಜಾಲತಾಣwww.ncu.edu.tw

ಎನ್‌ಸಿಯು ಈಗ ಕಾಲೇಜ್ ಆಫ್ ಲಿಬರಲ್ ಆರ್ಟ್ಸ್, ಕಾಲೇಜ್ ಆಫ್ ಸೈನ್ಸ್, ಕಾಲೇಜ್ ಆಫ್ ಎಂಜಿನಿಯರಿಂಗ್, ಕಾಲೇಜ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಕಾಲೇಜ್ ಆಫ್ ಬಯೋಮೆಡಿಕಲ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಕಾಲೇಜ್ ಆಫ್ ಅರ್ಥ್ ಸೈನ್ಸಸ್, ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಲೇಜ್ ಆಫ್ ಹಕ್ಕಾ ಸ್ಟಡೀಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಂಟು ಕಾಲೇಜುಗಳನ್ನು ಹೊಂದಿದೆ.

ಪದವಿಪೂರ್ವ ಜನಸಂಖ್ಯೆಯನ್ನು ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿಯ ಅಸೋಸಿಯೇಟೆಡ್ ಸ್ಟೂಡೆಂಟ್ಸ್, ೧೯೯೧ ರಲ್ಲಿ ಸ್ಥಾಪಿಸಲಾಯಿತು.

ಇತಿಹಾಸ

ಬದಲಾಯಿಸಿ

೧೯೦೨ ರಲ್ಲಿ, ಸಂಜಿಯಾಂಗ್ ನಾರ್ಮಲ್ ಸ್ಕೂಲ್ ಎಂದು ಸ್ಥಾಪಿತವಾದ ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಹಲವಾರು ಹೆಸರು ಬದಲಾವಣೆಗಳಿಗೆ ಒಳಗಾಯಿತು. ಉದಾಹರಣೆಗೆ, ನಾನ್ಜಿಂಗ್ ಹೈಯರ್ ನಾರ್ಮಲ್ ಸ್ಕೂಲ್, ನ್ಯಾಷನಲ್ ಸೌತೀಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಪ್ರಸ್ತುತ, ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ. ಆದರೆ, ೧೯೪೯ ರಲ್ಲಿ, ಚೀನಾದ ಕಮ್ಯುನಿಸ್ಟ್ ಪಕ್ಷವು ಮುಖ್ಯ ಭೂಭಾಗದ ಮೇಲೆ ನಿಯಂತ್ರಣ ಸಾಧಿಸಿದ ನಂತರ, ರಾಷ್ಟ್ರೀಯ ಕೇಂದ್ರೀಯ ವಿಶ್ವವಿದ್ಯಾಲಯವನ್ನು ೧೯೬೨ ರಂದು, ತೈವಾನ್‌ನಲ್ಲಿ ಮಿಯಾವೊಲಿ ಕೌಂಟಿಯಲ್ಲಿ ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್ ಆಗಿ ಮರುಸ್ಥಾಪಿಸಲಾಯಿತು. ಕಮ್ಯುನಿಸ್ಟ್ ನಿಯಂತ್ರಣದಲ್ಲಿದ್ದ ವಿಶ್ವವಿದ್ಯಾಲಯದ ಮೂಲ ಸ್ಥಳವು ಅಂದಿನಿಂದ ನಾನ್ಜಿಂಗ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಭಾಗವಾಗಿದೆ. ೧೯೬೮ ರಲ್ಲಿ, ಎನ್‌ಸಿಯು ತೈವಾನ್‌ನ ಟಾವೊಯುವಾನ್ ಕೌಂಟಿಯ (ಈಗ ಝೊಂಗ್ಲಿ ಜಿಲ್ಲೆ, ಟಾವೊಯುವಾನ್ ನಗರ) ಝೊಂಗ್ಲಿಯ ಶುವಾಂಗ್ಲಿಯನ್ಪೊ ಜಿಲ್ಲೆಯಲ್ಲಿರುವ ತನ್ನ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಗೊಂಡಿತು ಮತ್ತು ಇದನ್ನು ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ೧೯೭೯ ರಲ್ಲಿ, ಇದನ್ನು ಅಧಿಕೃತವಾಗಿ ನ್ಯಾಷನಲ್ ಸೆಂಟ್ರಲ್ ಯೂನಿವರ್ಸಿಟಿ ಎಂಬ ಹೆಸರಿನಲ್ಲಿ ಮರುಸ್ಥಾಪಿಸಲಾಯಿತು. ೨೦೦೩ ರಲ್ಲಿ, ಎನ್‌ಸಿಯು ಮತ್ತು ಇತರ ಮೂರು ರಾಷ್ಟ್ರೀಯ ವಿಶ್ವವಿದ್ಯಾಲಯಗಳು ತೈವಾನ್ ಸಹಕಾರ ಸಹಭಾಗಿತ್ವದ ವಿಶ್ವವಿದ್ಯಾಲಯ ವ್ಯವಸ್ಥೆಯನ್ನು ಸ್ಥಾಪಿಸಿದವು. ಈಗ ಎನ್‌ಸಿಯು ಸಂಶೋಧನೆ ಆಧಾರಿತ ರಾಷ್ಟ್ರೀಯ ಸಮಗ್ರ ವಿಶ್ವವಿದ್ಯಾಲಯವಾಗಿದೆ.[]

ವಿಶ್ವವಿದ್ಯಾಲಯದ ಟಾವೊಯುವಾನ್ ಸಿಟಿ ಕ್ಯಾಂಪಸ್ ದ್ವೀಪದ ಉತ್ತರ ಭಾಗದಲ್ಲಿದೆ. ಇದು ರಾಜಧಾನಿ ತೈಪೆಯಿಂದ ಸುಮಾರು ೪೫ ನಿಮಿಷಗಳ ದೂರದಲ್ಲಿದೆ. ದೊಡ್ಡದಾದ, ಹಸಿರು ಬೆಟ್ಟದ ಮೇಲಿನ ಕ್ಯಾಂಪಸ್, ಜನನಿಬಿಡ ಡೌನ್ಟೌನ್ ಝೊಂಗ್ಲಿಯಿಂದ ಸ್ವಲ್ಪ ದೂರದಲ್ಲಿದೆ. ಎನ್‌ಸಿಯು ಕ್ಯಾಂಪಸ್ ತೈವಾನ್ ಟಾವೊಯುವಾನ್ ಇನ್‌ಟರ್‌ನ್ಯಾಷನಲ್ ಏರ್‌ಪೋರ್ಟ್ (ಟಿಪಿಇ) ನಿಂದ ಕೇವಲ ೩೦ ನಿಮಿಷಗಳ ದೂರದಲ್ಲಿದೆ. ಇದು ಅಂತರರಾಷ್ಟ್ರೀಯ ಪ್ರಯಾಣಕ್ಕೆ ತುಂಬಾ ಅನುಕೂಲಕರವಾಗಿದೆ.

ಎನ್‌ಸಿಯು ಲುಲಿನ್ ವೀಕ್ಷಣಾಲಯವು ತೈವಾನ್‌ನ ದಕ್ಷಿಣ ಭಾಗದಲ್ಲಿರುವ ಯುಶಾನ್ ರಾಷ್ಟ್ರೀಯ ಉದ್ಯಾನವನದ ಬಳಿ ಇದೆ.

ಕಾಲೇಜುಗಳು ಮತ್ತು ಇಲಾಖೆಗಳು

ಬದಲಾಯಿಸಿ
 
ರಾಷ್ಟ್ರೀಯ ಕೇಂದ್ರೀಯ ವಿಶ್ವವಿದ್ಯಾಲಯ
 
ಗ್ರಂಥಾಲಯ

ಎನ್‌ಸಿಯು ಎಂಟು ಕಾಲೇಜುಗಳನ್ನು ಒಳಗೊಂಡಿದೆ: ಅರ್ಥ್ ಸೈನ್ಸ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಎಂಜಿನಿಯರಿಂಗ್, ಹಕ್ಕಾ ಸ್ಟಡೀಸ್, ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ, ಲಿಬರಲ್ ಆರ್ಟ್ಸ್, ಸೈನ್ಸ್ ಮತ್ತು ಮ್ಯಾನೇಜ್‌ಮೆಂಟ್. ಪ್ರತಿ ಕಾಲೇಜು ಬಾಹ್ಯಾಕಾಶ ಮತ್ತು ದೂರ ಸಂವೇದಿ ಸಂಶೋಧನಾ ಕೇಂದ್ರ, ಅಪಾಯ ತಗ್ಗಿಸುವಿಕೆ ಮತ್ತು ತಡೆಗಟ್ಟುವಿಕೆ, ತೈವಾನ್ ಆರ್ಥಿಕ ಅಭಿವೃದ್ಧಿ, ಜೈವಿಕ ತಂತ್ರಜ್ಞಾನ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ಮತ್ತು ಹಲವಾರು ಬೊಟಿಕ್ ಶೈಲಿಯ ಮಾನವಿಕ ಕೇಂದ್ರಗಳಂತಹ ಹಲವಾರು ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಒಟ್ಟಾರೆಯಾಗಿ, ಎಂಟು ಕಾಲೇಜುಗಳು ೧೯ ಪದವಿಪೂರ್ವ ವಿಭಾಗಗಳು, ೪೮ ಪದವಿ ಸಂಸ್ಥೆಗಳು ಮತ್ತು ೩೮ ಸಂಶೋಧನಾ ಕೇಂದ್ರಗಳನ್ನು ಹೊಂದಿವೆ.

ಅಂತರರಾಷ್ಟ್ರೀಯ ಕಾರ್ಯಕ್ರಮಗಳು

ಬದಲಾಯಿಸಿ

ತೈವಾನ್‌ನ ಪ್ರಮುಖ ಶೈಕ್ಷಣಿಕ ಸಂಶೋಧನಾ ಸಂಸ್ಥೆಯಾದ ಅಕಾಡೆಮಿಯಾ ಸಿನಿಕಾದ ಅರ್ಥ್ ಸಿಸ್ಟಮ್ ಸೈನ್ಸ್‌ನಲ್ಲಿ ತೈವಾನ್ ಇಂಟರ್ನ್ಯಾಷನಲ್ ಗ್ರಾಜುಯೇಟ್ ಪ್ರೋಗ್ರಾಂನಲ್ಲಿ ಎನ್‌ಸಿಯು ಭಾಗವಹಿಸುತ್ತದೆ.

ಗಮನಾರ್ಹ ಹಳೆಯ ವಿದ್ಯಾರ್ಥಿಗಳು ಮತ್ತು ಬೋಧಕವರ್ಗ

ಬದಲಾಯಿಸಿ

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "關於中央大學﹣校徽/校訓/校歌 (Chinese)". Nat'l Central U. Retrieved August 21, 2014.
  2. "NCU Motto: Sincerity and Simplicity". Nat'l Central U. Retrieved August 14, 2014.
  3. According to The History Evolution of National Central University (R.O.C. 26, 1937 CE) (《國立中央大學沿革史》 中華民國二十六年), it was founded in the winter of the first year of Yong'an reign (258 CE) during the era of Three Kingdoms. Since it was founded in CE 258, it had evolved and adopted different names in each dynasty or period in ancient China. It became a modern institution of higher learning in 1902 during Qing dynasty. Liangjiang Higher Normal School was closed in 1911 when the Qing dynasty was overthrown. In 1915 after the Republic of China was founded, Nanking Higher Normal School was established to replace the Liangjing Normal School. In 1949 when the Republic of China was replaced by the People's Republic of China in mainland, its name was changed from National Central University to Nanjing University, while the ROC reinstated the National Central University in 1962 in Taipei.
  4. "國立中央大學產業經濟研究所". ie.mgt.ncu.edu.tw. Archived from the original on 2010-10-21.
  5. "歡迎光臨--台灣經濟發展研究中心資料網". Archived from the original on 2017-10-27. Retrieved 2017-10-27.
  6. "Search Accredited Schools | AACSB".
  7. Huang, Muxuan (黃慕萱) (2004). 書目計量與學術評鑑—國內七所研究型大學論文發表概況分析。引文分析與學術評鑑研討會論文集. Taipei. p. 135–152.{{cite book}}: CS1 maint: location missing publisher (link)
  8. The list is: NTU, NTHU, NYCU, NCKU, NCU, and NSYSU.
  9. *《The History Evolution of National Central University》, (1937 CE) (《國立中央大學沿革史》 中華民國二十六年) *"Chinese Encyclopedia" {中華百科全書} Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ.
  10. Peiyu, Liu (20 November 2020). "台灣閱讀教育重要推手 前國教院長柯華葳過世 享壽67歲" [Former Dean of National Education, Ke Hwawei, an important promoter of reading education in Taiwan, died at 67 years old] (in ಚೈನೀಸ್). SET News. Retrieved 4 October 2021.

ಬಾಹ್ಯ ಕೊಂಡಿ

ಬದಲಾಯಿಸಿ