ರಾರ್ಕ್ವಲ್
ರಾರ್ಕ್ವಲ್ ಸಿಟೇಸಿಯ ಗಣದ ಬಲೀನಾಪ್ಟಿರಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ತಿಮಿಂಗಿಲ.[೩][೪][೫] ಬಲೀನಾಪ್ಟಿರ ಜಾತಿಯ ಪೈಸೇಲಸ್, ಬೋಯಾಲಿಸ್, ಅಕ್ಯೂಟೊರಾಸ್ಟ್ರೇಟ್ ಮತ್ತು ಎಡೆನಿ ಎಂಬ ಪ್ರಭೇದಗಳಿಗೂ ಸಿಬಾಲ್ಡಸ್ ಜಾತಿಯ ಮಸ್ಕ್ಯುಲಸ್ ಪ್ರಭೇದಕ್ಕೂ ಸಾಮಾನ್ಯವಾಗಿ ಈ ಹೆಸರನ್ನು ಅನ್ವಯಿಸುವುದುಂಟು.
ರಾರ್ಕ್ವಲ್‍ಗಳು[೨] Temporal range:
| |
---|---|
ನೀಲಿ ತಿಮಿಂಗಿಲ, ಬಲೀನಾಪ್ಟೆರಾ ಮಸ್ಕ್ಯುಲಸ್ | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಕಾರ್ಡೇಟಾ |
ವರ್ಗ: | Mammalia |
ಗಣ: | ಆರ್ಟಿಯೊಡ್ಯಾಕ್ಟೈಲ |
ಕೆಳಗಣ: | ಸೆಟೇಸೀ |
ಸಣ್ಣಗಣ: | ಮಿಸ್ಟಿಸೆಟಿ |
ಮೇಲ್ಕುಟುಂಬ: | ಬಲೀನೊಪ್ಟೆರಾಯ್ಡೀ |
ಕುಟುಂಬ: | ಬಲೇನೊಪ್ಟೆರಿಡೇ Gray 1864 |
Type genus | |
Balaenoptera Lacépède, 1804
| |
Extant genera | |
Synonyms | |
Eschrichtiidae? Ellerman & Morrison-Scott 1951 |
ಶಾರೀರಿಕ ಲಕ್ಷಣಗಳು
ಬದಲಾಯಿಸಿಇವುಗಳ ಗಂಟಲು ಮತ್ತು ಎದೆಗಳ ಮೇಲೆ 2.5-5 ಸೆಂಮೀ ಆಳದ 10-1000 ಉದ್ದುದ್ದನೆಯ ಮಡಿಕೆಗಳಂಥ ತೋಡುಗಳುಂಟು. ಇದು ಇವುಗಳ ಬಲುಮುಖ್ಯ ಲಕ್ಷಣ. ಈ ಮಡಿಕೆಗಳಿಂದಲೇ ಈ ತಿಮಿಂಗಿಲಗಳಿಗೆ ರಾರ್ಕ್ವಲ್ ಎಂದು ಹೆಸರು ಬಂದಿರುವುದು. ಬಾಯಿ ತೆರೆದಾಗ ಅದರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಮಡಿಕೆಗಳು ಹೆಚ್ಚಿಸುತ್ತವೆ.[೬] ಇವುಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಮರಿಗಳು ಬೆಳೆದು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಅವುಗಳ ಬಾಯಲ್ಲಿರುವ ಹಲ್ಲುಗಳು ಉದುರಿಹೋಗಿ ಬದಲಿಗೆ ಆಹಾರವನ್ನು ಸೋಸುವ ಸಾಮರ್ಥ್ಯವುಳ್ಳ ಬಲೀನ್ ಎಂಬ ಸೋಸುಕ ರೂಪುಗೊಳ್ಳುವುದು.
ರಾರ್ಕ್ವಲ್‌ಗಳೆಲ್ಲವೂ ದೊಡ್ಡಗಾತ್ರದ ಪ್ರಾಣಿಗಳು. ದೇಹದ ಉದ್ದ ೯-೨೦ ಮೀ ಇರುತ್ತದೆ. ದೇಹದ ಆಕಾರ ಈಜಲು ಸಹಾಯಕವಾಗಿರುವಂತೆ ರೂಪಿತವಾಗಿದೆ. ಬಾಯಿಗಿಂತ ಕೊಂಚ ಹಿಂದೆ ದೇಹದ ಎರಡು ಪಾರ್ಶ್ವಗಳಲ್ಲಿ ಎರಡು ಈಜುರೆಕ್ಕೆಗಳೂ ಬೆನ್ನಮೇಲೆ ಒಂದು ಈಜುರೆಕ್ಕೆಯೂ ಇವೆ. ಈಜುವುದರಲ್ಲಿ ಬಲು ನಿಷ್ಣಾತವೆಂದು ಎನಿಸಿರುವ ಈ ತಿಮಿಂಗಿಲಗಳು ತುಂಬ ಶೀಘ್ರಗತಿಯಲ್ಲಿ ಈಜಬಲ್ಲವು; ಗಂಟೆಗೆ ೮ ಕಿಮೀ. ವೇಗದಲ್ಲಿ ಈಜುತ್ತವೆ ಎನ್ನಲಾಗಿದೆ. ಒಂಟೊಂಟಿಯಾಗಿಯೋ ದೊಡ್ಡ ಮಂದೆಗಳಲ್ಲೋ ಈಜುತ್ತ, ಬೆಳಗ್ಗೆ ಮತ್ತು ಸಾಯಂಕಾಲ ಆಹಾರವನ್ನು ಹುಡುಕುತ್ತಾ ಸಾಗುತ್ತವೆ.
ಆಹಾರ
ಬದಲಾಯಿಸಿಮುಖ್ಯವಾಗಿ ಸೀಗಡಿ, ಕೋಪಿಪೋಡ, ಮುಂತಾದ ಸಣ್ಣಗಾತ್ರದ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಕೆಲವು ಬಗೆಯವು ಮೀನು, ಷಾರ್ಕ್, ಸ್ಕ್ವಿಡ್ಡು ಮುಂತಾದವನ್ನೂ ಕಬಳಿಸುತ್ತವೆ.
ಸಂತಾನೋತ್ಪತ್ತಿ
ಬದಲಾಯಿಸಿಇವುಗಳ ಸಂತಾನವೃದ್ಧಿಯ ಕಾಲ ಚಳಿಗಾಲ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದೇ ಒಂದು ಮರಿ ಹುಟ್ಟುತ್ತದೆ. ಅಪೂರ್ವವಾಗಿ ಅವಳಿಗಳು ಹುಟ್ಟುವುದೂ ಉಂಟು. ಗರ್ಭಾವಸ್ಥೆಯ ಅವಧಿ ೧೦-೧೨ ತಿಂಗಳು; ೩ ೧/೨ - ೪ ವರ್ಷಗಳಲ್ಲಿ ಮರಿಗಳು ಪ್ರೌಢಾವಸ್ಥೆ ತಲುಪುತ್ತವೆ.
ನೀಲಿ ತಿಮಿಂಗಿಲ
ಬದಲಾಯಿಸಿ೧)ಸಿಬಾಲ್ಡಸ್' ಜಾತಿಯ ರಾರ್ಕ್ವಲ್ ತಿಮಿಂಗಿಲಕ್ಕೆ ನೀಲಿ ತಿಮಿಂಗಿಲ ಎಂಬ ಹೆಸರೂ ಇದೆ. ಅತ್ಯಂತ ದೊಡ್ಡ ಗಾತ್ರದ ತಿಮಿಂಗಿಲ ಇದು; ಲಭ್ಯ ಮಾಹಿತಿಯ ಪ್ರಕಾರ ಇದೇ ಅತ್ಯಂತ ಭಾರಿಗಾತ್ರದ ಸ್ತನಿ. ವಯಸ್ಕ ತಿಮಿಂಗಿಲ ಸುಮಾರು ೩೦ಮೀ. ಉದ್ದವೂ ೧೧೦ ಟನ್ ಭಾರವೂ ಇರುತ್ತದೆ.
೨) ನೀಲಿ ತಿಮಿಂಗಿಲ ಇದು ಒಂದು ಸಸ್ತನಿ ಪ್ರಾಣಿ ಆಗಿದ್ದು, ಇದರ ಹುಟ್ಟು ಸರಿ ಸುಮಾರು 150 ಮಿಲಿಯನ್ ವರ್ಷದ ಹಿಂದೆ ಬಂದಿರುವ ಸಾಧ್ಯತೆಗಳಿರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "Family Balaenopteridae Gray 1864 (rorqual)". Fossilworks. Archived from the original on 26 ಮೇ 2022. Retrieved 9 April 2018.
- ↑ Mead, J. G.; Brownell, R. L., Jr. (2005). "Order Cetacea". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. pp. 723–743. ISBN 978-0-8018-8221-0. OCLC 62265494.
{{cite book}}
: Invalid|ref=harv
(help)CS1 maint: multiple names: authors list (link) - ↑ Britannica, The Editors of Encyclopaedia. "rorqual". Encyclopedia Britannica, 5 Oct. 2018, https://www.britannica.com/animal/rorqual. Accessed 13 October 2023.
- ↑ "Rorquals (Balaenopteridae) ." Grzimek's Animal Life Encyclopedia. . Encyclopedia.com. 19 Sep. 2023 <https://www.encyclopedia.com>.
- ↑ https://eol.org/pages/7660
- ↑ Minasian, Stanley M.; Balcomb, Kenneth C.; Foster, Larry, eds. (1984). The World's Whales: The Complete Illustrated Guide. New York: The Smithsonian Institution. p. 18. ISBN 978-0-89599-014-3.
ಹೊರಗಿನ ಕೊಂಡಿಗಳು
ಬದಲಾಯಿಸಿ- . Encyclopædia Britannica (11th ed.). 1911.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)