ರಾಮನ್ ಕಲ್ಯಾಣ್
ರಾಮನ್ ಕಲ್ಯಾಣ್, ಇವರನ್ನು ವಿ.ಕೆ ರಾಮನ್ ಮತ್ತು ಕೊಳಲು ವಾದಕ ರಾಮನ್ ಎಂದು ಕರೆಯುತ್ತಾರೆ. ಹಾಗೂ ಇವರು ಭಾರತೀಯ ಕರ್ನಾಟಕದ
ಕೊಳಲು ವಾದಕರು.
ರಾಮನ್ ಕಲ್ಯಾಣ್ | |
---|---|
Born | ಕರ್ನಾಟಕ |
Occupation(s) | ಕೊಳಲು ವಾದ್ಯರು, ಸಂಗೀತ ನಿರ್ದೇಶಕರು |
ಜೀವನ
ಬದಲಾಯಿಸಿರಾಮನ್ ಕಲ್ಯಾಣ್ ರವರು ತಮ್ಮ 9 ವಯಸ್ಸಿನಲ್ಲಿ ಕೊಳಲು ವಾದ್ಯವನ್ನು ಎ.ವಿ ಪ್ರಕಾಶ್ ರವರ ಬಳಿಯಲ್ಲಿ ಕಲಿಯಲು ಪ್ರಾರಂಭಿಸಿದರು. ತಮ್ಮ 15ನೇ ವಯಸ್ಸಿನಲ್ಲೇ ಮೊದಲ ಬಾರಿಗೆ ಕೊಳಲು ವಾದ್ಯದ ಪ್ರದರ್ಶನವನ್ನು ಮೈಸೂರಿನಲ್ಲಿ ನೀಡಿದರು. ನಂತರ ಸುಧಾರಿತ ತರಭೇತಿಯನ್ನು ಡಾ.ಎನ್ ರಮಣಿ ಅವರಲ್ಲಿ ಪಡೆದುಕೊಂಡುರು. ಡಾ.ಎನ್ ರಮಣಿ ಅವರೊಂದಿಗೆ ಹಲವಾರು ಪ್ರದರ್ಶನಗಳನ್ನು ನೀಡಿದ್ದರೆ.
ಪ್ರದರ್ಶನಗಳು
ಬದಲಾಯಿಸಿರಾಮನ್ ಅವರ ಸಂಗೀತವು ಕೊಳಲಿನಲ್ಲಿ ಆಧುನಿಕ ತಂತ್ರಜ್ಞಾನದ ಜೊತೆಗೆ ಕರ್ನಾಟಕ ಸಂಪ್ರದಾಯದ ಶೈಲಿಯಲ್ಲಿ ಸಂಯೋಜಿಸುತ್ತಾರೆ. ರಾಮನ್ ಅವರ ಸುಮಧುರ ಚಿತ್ರಣ, ಟಿಪ್ಪಣಿಗಳ ಪರಿಶುದ್ಧತೆ, ನಾದದ ಶುದ್ಧತೆಯೊಂದಿಗೆ ರಾಗಗಳನ್ನು ಅನನ್ಯಾವಾಗಿ ಸ್ಪಷ್ಟ ಪಡಿಸುದು ಮತ್ತು ಪ್ರಪಂಚದ್ಯಾದಂತ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನ ನೀಡಿದಕ್ಕಾಗಿ ರಾಮನ್ ಅವರನ್ನು ಮೆಚ್ಚಿದ್ದಾರೆ. ಅವರು ಪ್ರತಿಷ್ಟಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ಇಂಡಿಯನ್ ಎರಡು ಬಾರಿ ಅತ್ಯುತ್ತಮ ಫ್ಲೂಟಿಸ್ಟ್ ನಂತಹ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಭೋದನೆ
ಬದಲಾಯಿಸಿರಾಮನ್ ಇತರರಿಗೆ ಕಲೆಯನ್ನು ಕಲಿಸುವ ಬಗ್ಗೆ ಉತ್ಸಾಹಿಯಾಗಿದ್ದರು. ಇವರು ಶಾಸ್ತ್ರೀಯ ಸಂಗೀತದ ಇಂಡೋ-ಅಮೇರಿಕನ್ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ (ಐ.ಎ.ಎ.ಸಿ.ಎಮ್). ಯುಎಸ್ಎ ಮತ್ತು ಕೆನಡಾದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಉತ್ತೇಜಿಸಲು ಐ.ಎ.ಎ.ಸಿ.ಎಮ್ ಮೀಸಲಾಗಿರುತ್ತದೆ. ಭಾರತದ ಹೆಸರಾಂತ ಸಂಗೀತಗಾರರಿಂದ ಸಂಗೀತ ಕಛೇರಿಗಳನ್ನು ಆಯೋಜಿಸುವ ಮೂಲಕ ನೃತ್ಯ ಪ್ರದರ್ಶನಗಳಿಗೆ ವಾದ್ಯ ವೃಂದದ ಬೆಂಬಲವನ್ನು ನೀಡುವ ಮೂಲಕ ಮತ್ತು ಆರಂಭಿಕ ಮತ್ತು ಮುಂದುವರಿದ ವಿದ್ಯಾರ್ಥಿಗಳಿಗೆ ವಾದ್ಯ ಮತ್ತು ಗಾಯನ ತರಬೇತಿಯನ್ನು ನಡೆಸುತ್ತಾರೆ.[೧]
ಸಹಯೋಗ
ಬದಲಾಯಿಸಿಜುಗಲ್ಬಂದಿ ಪ್ರಮುಖ ಹಿಂದೂಸ್ಥಾನೀ ಕಲಾವಿದರಾದ ಗ್ಯ್ರಾಮಿ ವಿಜೇತ ಪಂಡಿತ್ ವಿಶ್ವಮೋಹನ್ ಭಟ್, ಉಸ್ತಾದ್ ಶಾಹಿದ್ ಪೆರೆಜ್, ಪಂಡಿತ್ ದೇಬಿ ಪ್ರಸಾದ್ ಚಟರ್ಜಿ, ಪಂಡಿತ್ ನಯನ್ ಘೋಫ್, ನಂದ ಕಿಶೋರ್, ಗೌರವ್ ಮಜುಂಬಾರ್, ಅನುಪಮ ಭಾಗವತ್ ಅವರೊಂದಿಗೆ ರಾಮನ್ ಅವರು ಜುಗಲ್ಬಂದಿ ಸಂಗೀತವನ್ನು ಪ್ರದರ್ಶನ ನೀಡಿದ್ದಾರೆ.
ನೃತ್ಯ
ಬದಲಾಯಿಸಿರಾಮನ್ ಕಲ್ಯಾಣ್ ರವರು ಪ್ರಮುಖ ನೃತ್ಯ ಗುರುಗಳು ಮತ್ತು ಧನಂಜಯ್ ನವರು ಸೇರಿದಂತೆ ಸಿ.ವಿ.ಚಂದ್ರಶೇಖರ್, ಆಡಾಯರ್ ಕೆ. ಲಕ್ಷ್ಮಣ್ ಮತ್ತು ಮಂಜು ಭಾರ್ಗವಿ ರವರು ಕಲಾವಿದರೊಂದಿಗೆ ಸಹಕರಿಸಿದ್ದಾರೆ. ಇವರು ಪ್ರತಿ ವರ್ಷ ಹಲವಾರು ಯುವ ನೃತ್ಯಗಾರರ ಚೊಚ್ಚಲ ಸಂಗೀತಗಾರರೋಂದಿಗೆ ಆರ್ಕೆಸ್ಟ್ರಾ ತಂಡಗಳನ್ನು ಸಹ ರಚಿಸುತ್ತಾರೆ.
ಜಾಝ್
ಬದಲಾಯಿಸಿರಾಮನ್ ವಿಶ್ವ ಸಂಗೀತ ಮತ್ತು ಗ್ರ್ಯಾಮಿ ವಿಜೇತ ಬೆವ್ ಲೈಬ್ಮನ್ ಸೇರಿದಂತೆ ಜಾಝ್ ಸಂಗೀತ ಗಾರರೊಂದಿಗೆ ಸುಬ್ರಹ್ಮಣ್ಯಂ, ಲೂಯಿಸ್ ಬ್ಯಾಂಕ್ಸ್, ಜಾನ್ ಬೀಸ್ಲೆ, ಡ್ಯಾರಿಲ್ ಜೋನ್ಸ್, ನಿಕೋಲಸ್ ಪೇಟನ್, ಆಡಮ್ ಹೊಲ್ಜ್ಮನ್, ರುದ್ರೇಶ್ ಮಹಂತಪ್ಪ, ಎನ್ಡುಗು ಚಾನ್ಕ್ಲರ್ ಮತ್ತು ಲೆನ್ನಿ ವೈಟ್ ರವರು ಸಹಕರಿಸಿದ್ದಾರೆ. ರಾಮನ್ ಇಂಡಿಯಾ ಬ್ಯಾಂಡ್ ನಿಂದ ಮೈಲಿಗಳವರೆಗೆ ಕಲಾವಿದರಾಗಿ ಪ್ರದರ್ಶನ ನೀಡಿದ್ದಾರೆ.[೨]
ಚಲನಚಿತ್ರಗಳು
ಬದಲಾಯಿಸಿರಾಮನ್ ಸ್ವಲ್ಪ ಸಮಯದವರೆಗೆ ಕನ್ನಡ ಚಿತ್ರರಂಗಕ್ಕಾಗಿ ಪ್ರದರ್ಶನ ನೀಡಿದ್ದಾರೆ.
ಧ್ವನಿ ಮುದ್ರಕೆ
ಬದಲಾಯಿಸಿರಾಮನ್ ೫೦ ಕ್ಕೂ ಹೆಚ್ಚು ಆಲ್ಬಮ್ಗಳನ್ನು ಬಿಡುಗಡೆ ಮಾಡಿದ್ದಾರೆ[೩]. ಕೆಲವು ಆಲ್ಬಮ್ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
- ಮೋಹನ ರಾಗ
- ಸ್ವರ ರಾಗ ಸುಧಾ
- ಮ್ಯಾಜಿಕ್ ಬ್ಯಾಂಬೊ
- ದೆವಿನ್ ಮೆಲೋಡಿಸ್
- ಸುರ್ ಮಿಲನ್
- ಸುರ್ ಸಂಗಮ್
- ಕ್ಲಾಸಿಕಲ್ ಇಂಡಿಯನ್ ಫ್ಲೂಟ್
- ಕಾನ್ಫ್ಲುಯೆನ್ಸ್
- ನವರಸ-ಶಾಶ್ವತ ಭಾವನೆಗಳು.