ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ಅವರು ಭಾರತೀಯ ಸೇನೆ[] [] ಮಾಜಿ ಪ್ರಧಾನ ಅಧಿಕಾರಿ ಮತ್ತು ಆರ್ಮಿ ಸ್ಟಾಫ್‌ನ ಮಾಜಿ ಉಪ ಮುಖ್ಯಸ್ಥರಾಗಿದ್ದರು. ಇವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ಸೇವಾ ಪದಕವನ್ನು ಪಡೆದಿದ್ದಾರೆ.

ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ
ಜನನಹಲಗಲಿ, ಮುಧೋಳ, ಬಾಗಲಕೋಟೆ, ಕರ್ನಾಟಕ, ಭಾರತ
ವ್ಯಾಪ್ತಿಪ್ರದೇಶ ಭಾರತ
ಶಾಖೆ ಭಾರತೀಯ ಭೂಸೇನೆ
ಸೇವಾವಧಿಡಿಸೆಂಬರ್,‌೧೯೭೨–೨೦೧೨
ಶ್ರೇಣಿ(ದರ್ಜೆ)ಲೆಫ್ಟಿನೆಂಟ್ ಜನರಲ್
ಅಧೀನ ಕಮಾಂಡ್ಮಿಲಿಟರಿ ತರಬೇತಿಯ ಮಹಾನಿರ್ದೇಶಕರು,
ಪದಾತಿದಳದ ಕಮಾಂಡರ್
ಪ್ರಶಸ್ತಿ(ಗಳು)ಪರಮ ವಿಶಿಷ್ಟ ಸೇವಾ ಪದಕ
ಅತಿ ವಿಶಿಷ್ಟ ಸೇವಾ ಪದಕ
ಸೇವಾ ಪದಕ

ಹಲಗಲಿಯವರು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದವರು. ಅವರು ಕರ್ನಾಟಕದ ಬಿಜಾಪುರ ಜಿಲ್ಲೆಯ ಬಿಜಾಪುರದ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ಹಲಗಲಿ ಅವರನ್ನು ಡಿಸೆಂಬರ್, ೧೯೭೨ ರಲ್ಲಿ ಸಿಖ್ ಲೈಟ್ ಪದಾತಿದಳಕ್ಕೆ ನಿಯೋಜಿಸಲಾಯಿತು. ಅವರು ೧೧ ಫೆಬ್ರವರಿ ೨೦೧೨ ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಳ್ಳುವವರೆಗೂ ಮಿಲಿಟರಿ ತರಬೇತಿ ವಿಭಾಗದ ಮಹಾನಿರ್ದೇಶಕರಾಗಿದ್ದರು. [] ಲೆಫ್ಟಿನೆಂಟ್ ಜನರಲ್ ಹಲಗಲಿಯವರು, ೨೦೦೯ರಲ್ಲಿ ಪಶ್ಚಿಮ ಬಂಗಾಳದ ೭೦ ಎಕರೆ ಸುಕ್ನಾ ಮಿಲಿಟರಿ ಸ್ಟೇಷನ್ ಭೂ ಹಗರಣದಲ್ಲಿ ವಿಸಿಲ್ ಬ್ಲೋವರ್ ಆಗಿದ್ದರು.

ಉಲ್ಲೇಖಗಳು

ಬದಲಾಯಿಸಿ
  1. Halgali was former deputy chief of Indian Army
  2. "Bagalkot Man is now deputy chief of Indian Army". Archived from the original on 2020-09-30. Retrieved 2024-04-10.
  3. Ramesh Halagali takes over as the deputy chief