ಪರಮ ವಿಶಿಷ್ಟ ಸೇವಾ ಪದಕ
ಪರಮ ವಿಶಿಷ್ಟ ಸೇವಾ ಪದಕ (PVSM) ಭಾರತೀಯ ಸಶಸ್ತ್ರ ಪಡೆಯ ಒಂದು ಪ್ರಶಸ್ತಿಯಾಗಿದೆ. ಇದನ್ನು ೧೯೬೦ರಲ್ಲಿ ಈ ಪದಕವನ್ನು ನೀಡಲು ಪ್ರಾರಂಬಿಸಲಾಯ್ತು ಮತ್ತು ಅಂದಿನಿಂದ ಇಲ್ಲಿಯವರೆಗೆ, ಶಾಂತಿ ಸಮಯದಲ್ಲಿ ಮಾಡಿದ ವಿಶಿಷ್ಟ ಹಾಗೂ ಉನ್ನತ ಸೇವೆಯನ್ನು ಗುರುತಿಸಿ ನೀಡಲಾಗುತ್ತದೆ.[೨] ಈ ಪ್ರಶಸ್ತಿಯನ್ನು ಮರಣೋತ್ತರವಾಗಿಯೂ ನೀಡುವ ಅವಕಾಶವಿದೆ. ಪ್ರಾದೇಶಿಕ ಸೇನಾ ಪಡೆ, ಸಹಾಯಕ ಮತ್ತು ಮೀಸಲು ಪಡೆಗಳು, ನರ್ಸಿಂಗ್ ಅಧಿಕಾರಿಗಳು ಮತ್ತು ನರ್ಸಿಂಗ್ ಸೇವೆಗಳ ಇತರ ಸದಸ್ಯರು ಮತ್ತು ಇತರ ಕಾನೂನುಬದ್ಧವಾಗಿ ರಚಿಸಲಾದ ಸಶಸ್ತ್ರ ಪಡೆಗಳು ಸೇರಿದಂತೆ ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಶ್ರೇಣಿಗಳು ಪ್ರಶಸ್ತಿಗೆ ಅರ್ಹವಾಗಿವೆ.[೩]
ಪರಮ ವಿಶಿಷ್ಟ ಸೇವಾ ಪದಕ | |
---|---|
ದೇಶ | ಭಾರತ |
ವರ್ಗ | ಭಾರತೀಯ ಸೇನಾ ಪ್ರಶಸ್ತಿ |
Statistics | |
Established | ೧೯೬೦ |
Precedence | |
Next (higher) | ಪದ್ಮ ಭೂಷಣ[೧] |
Equivalent | ಸರ್ವೋತ್ತಮ ಯುದ್ಧ ಸೇವಾ ಪದಕ [೧] |
Next (lower) | ಮಹಾ ವೀರ ಚಕ್ರ[೧] |
ವಿನ್ಯಾಸ
ಬದಲಾಯಿಸಿಈ ಪದಕವು ವೃತ್ತಾಕಾರಾದಾಗಿದ್ದು, ೩೫ ಮಿಲಿಮೀಟರ್ ವ್ಯಾಸವನ್ನು ಹೊಂದಿದೆ. ಬಂಗಾರದ ಬಣ್ಣದ ಸರಿಗೆಗೆಗ ಸಿಕ್ಕಿಸಿರುವ ಈ ಪದಕದ ಒಂದು ಬದಿಯ ನಡುವಿನಲ್ಲಿ ೫ ಮೂಲೆಗಳ ನಕ್ಷತ್ರದ ವಿನ್ಯಾಸವಿದೆ. ಪದಕದ ಇನ್ನೊಂದು ಬದಿ ಭಾರತದ ರಾಷ್ಟ್ರ ಲಾಂಛನವಿದೆ. ಈ ಲಾಂಛನದ ಮೇಲೆ ಅರ್ಧವೃತ್ತಾಕಾರದಲ್ಲಿ "'ಪರಮ ವಿಶಿಷ್ಟ ಸೇವಾ ಪದಕ" ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಈ ಪದಕವು ಹಳದಿ ಬಣ್ಣದ ರಿಬ್ಬನ್ ಹೊಂದಿದ್ದು, ರಿಬ್ಬನ್ ನ ನಡುವಿನಲ್ಲಿ ನೀಲಿ ಬಣ್ಣದ ಪಟ್ಟಿ ಇದೆ.[೪]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ "Precedence Of Medals". indianarmy.nic.in/. Indian Army. Retrieved 9 September 2014.
- ↑ "ಭಾರತೀಯ ವಾಯುಸೇನೆಯ ಬಗೆಗಿನ ಲೇಖನ". Archived from the original on 2016-10-21. Retrieved 2021-12-23.
- ↑ "ಭಾರತೀಯ ನೌಕಾಸೇನೆಯ ಜಾಲತಾಣ".
- ↑ "Honour & Awards - About". indianairforce.nic.in. Archived from the original on 31 July 2012. Retrieved 2016-06-07.