ರಂಗನ ಕೋಟೆ/ ಪ್ರಸಿದ್ಧಗಡ ಕೊಲ್ಲಾಪುರ ಜಿಲ್ಲೆಯ ಭೂದರಗಡ ತಾಲೂಕಿನಲ್ಲಿದೆ . ಈ ಕೋಟೆಯು ಈ ಜಿಲ್ಲೆಯಲ್ಲಿನ ಪ್ರಮುಖ ಕೋಟೆಗಳಲ್ಲಿ ಒಂದಾಗಿದೆ. ಈ ಕೋಟೆಯು ಸಿಂಧುದುರ್ಗ ಮತ್ತು ಕೊಲ್ಲಾಪುರ ಜಿಲ್ಲೆಯ [] ಗಡಿಯಲ್ಲಿರುವ ಸಹ್ಯಾದ್ರಿ ಪರ್ವತದ ಮೇಲೆ ನೆಲೆಗೊಂಡಿದೆ.

ಇತಿಹಾಸ

ಬದಲಾಯಿಸಿ

ಈ ಕೋಟೆಯನ್ನು ಶಿಲಾಹರ್ ರಾಜವಂಶದ ಎರಡನೇ ರಾಜ ಭೋಜನು ೧೨ ನೇ ಶತಮಾನದಲ್ಲಿ ನಿರ್ಮಿಸಿದನು. [] ೧೪೭೦ರಲ್ಲಿ ಈ ಕೋಟೆಯನ್ನು ಬಹಮನಿ ರಾಜವಂಶದ ಎಂ ಡಿ ಗವಾನ್ ವಶಪಡಿಸಿಕೊಂಡರು. ನಂತರ ಇದು ಆದಿಲ್‌ಶಾಹಿ ರಾಜವಂಶದ ಸಾವಂತ್ ಆಡಳಿತಗಾರರ ನಿಯಂತ್ರಣದಲ್ಲಿತ್ತು. ೧೬೫೮ ರಲ್ಲಿ ಆದಿಲ್‌ಶಾನ ಕಮಾಂಡರ್-ಇನ್ ಚೀಫ್ ರುಸ್ತುಮ್ ಜಮಾನ್ ಇದನ್ನು ಸಾವಂತರಿಂದ ಗೆದ್ದರು. ಜೀಜಾಬಾಯಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡರು ಮತ್ತು ೧೫.೮.೧೬೬೬ರಂದು ಕೋಟೆಯನ್ನು ವಶಪಡಿಸಿಕೊಂಡರು. ೧೮೧೮ ರಲ್ಲಿ ಬ್ರಿಟಿಷರು ತಮ್ಮ ಹಿಡಿತ ಸಾಧಿಸುವವರೆಗೂ ಈ ಕೋಟೆಯು ಕಾರ್ವೀರ ರಾಜರ ನಿಯಂತ್ರಣದಲ್ಲಿತ್ತು. [] ಡಿಸೆಂಬರ್ ೧೬೬೪ರಲ್ಲಿ ಶಿವಾಜಿಯು ಬಿಜಾಪುರ ಮತ್ತು ದೇಸಾಯಿಗಳ ಸಂಯೋಜಿತ ಪಡೆಗಳನ್ನು ಸೋಲಿಸಿ ರಂಗನ ಕೋಟೆಯನ್ನು ವಶಪಡಿಸಿಕೊಂಡರು. ಲಖಮ್ ಸಾವಂತ್ ಮತ್ತು ದೇಸಾಯಿಗಳು ಪೋರ್ಚುಗೀಸ್ ಪ್ರದೇಶಕ್ಕೆ ಓಡಿಹೋದರು. []

ನೋಡಬೇಕಾದ ಸ್ಥಳಗಳು

ಬದಲಾಯಿಸಿ

ಪಟಗಾಂನ ಗ್ರಾಮದ ದಾರಿಯಲ್ಲಿ ಮೌನಿಯ ತೀರ್ಥಯಾತ್ರಾ ಆಶ್ರಮವಿದೆ. ೧೬೭೬ರಲ್ಲಿ ಶಿವಾಜಿ ದಕ್ಷಿಣದ ವಿಜಯಕ್ಕೆ ಮುಂದುವರಿಯುವ ಮೊದಲು ಮಹಾರಾಜರಿಂದ ಆಶೀರ್ವಾದ ಪಡೆದರು. ಕೆಲವು ಮೆಟ್ಟಿಲುಗಳು ನಡೆದ ನಂತರ ಹಳೆಯ ಭದ್ರಕಾಳಿ ದೇವಸ್ಥಾನವಿದೆ. ಕೋಟೆಯ ಮೇಲೆ ಎರಡು ದ್ವಾರಗಳಿವೆ, ದೊಡ್ಡ ಸರೋವರ ಮತ್ತು ರಂಗನೈ ದೇವಿಯ ದೇವಸ್ಥಾನವಿದೆ. []

ಉಲ್ಲೇಖಗಳು

ಬದಲಾಯಿಸಿ
  1. Maharashtra Tourism Development Corporation. "Rangana Fort(Prasiddhagad)". www.maharashtratourism.gov.in. Maharashtra Tourism Development Corporation. Retrieved 3 May 2020.
  2. Wikimapia. "Fort Rangana". www.wikimapia.org. Wikimapia. Retrieved 21 December 2019.
  3. Trekshitiz. "Rangana". www.trekshitiz.com. Trekshitiz. Archived from the original on 26 ಫೆಬ್ರವರಿ 2019. Retrieved 21 December 2019.
  4. Mhamai, S. K. (1984). Sawants of Wadi: Coastal Politics in 18th and 19th Centuries (in ಇಂಗ್ಲಿಷ್). Concept Publishing Company.
  5. Trekshitiz. "Rangana". www.trekshitiz.com. Trekshitiz. Archived from the original on 26 ಫೆಬ್ರವರಿ 2019. Retrieved 21 December 2019.Trekshitiz. "Rangana" Archived 2019-02-26 ವೇಬ್ಯಾಕ್ ಮೆಷಿನ್ ನಲ್ಲಿ.. www.trekshitiz.com. Trekshitiz. Retrieved 21 December 2019.