ಯೋಗೇಶ್ ಕುಮಾರ್ ಸಭರವಾಲ್

ಯೋಗೇಶ್ ಕುಮಾರ್ ಸಭರವಾಲ್ (ಜನವರಿ 14, 1942 ರಂದು ಜನನ) ಅವರು 36 ನೆಯ ಭಾರತದ ಮುಖ್ಯ ನಾಯಾಧೀಶರಾಗಿದ್ದಾರೆ.

Yogesh Kumar Sabharwal
Justice Y K Sabharwal

ಅಧಿಕಾರ ಅವಧಿ
November 1, 2005 – January 14, 2007
Nominated by none (per convention as he was the senior most judge)
Appointed by Abdul Kalam
ಪೂರ್ವಾಧಿಕಾರಿ R.C. Lahoti
ಉತ್ತರಾಧಿಕಾರಿ K.G. Balakrishnan

ವೃತ್ತಿಜೀವನ

ಬದಲಾಯಿಸಿ

ಸಭರವಾಲ್ ಅವರು 1961 ರಿಂದ 1981 ರವರೆಗೆ ಭಾರತೀಯ ರೈಲ್ವೇಯ ವಕೀಲರಾಗಿ, 1973 ರಿಂದ 1976-1977 ರವರೆಗೆ ದೆಹಲಿ ಸರ್ಕಾರದ ವಕೀಲರಾಗಿ, ನಂತರ ಹೆಚ್ಚುವರಿ ಸ್ಟ್ಯಾಂಡಿಂಗ್ ಕೌನ್ಸಿಲ್ ಆಗಿ ಹಾಗೂ ನಂತರ ಸ್ಟಾಂಡಿಂಗ್ ಕೌನ್ಸಿಲ್ ಆಗಿ ಕಾರ್ಯನಿರ್ವಹಿಸಿದರು. ಅವರು 1980 ರಿಂದ 1986 ರವರೆಗೆ ಕೇಂದ್ರ ಸರ್ಕಾರದ ಕೌನ್ಸಿಲ್ ಆಗಿಯೂ ಕಾರ್ಯನಿರ್ವಹಿಸಿದರು. 1969 ರಿಂದ 1973 ರವರೆಗೆ ಅವರು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ದೆಹಲಿ ಪ್ರತಿನಿಧಿಯಾಗಿದ್ದರು.

ಸಭರವಾಲ್ ಅವರು 1986 ರ ನವೆಂಬರ್ 17 ರಂದು ದೆಹಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾದರು ಮತ್ತು ಶೀಘ್ರದಲ್ಲೇ ನ್ಯಾಯಾಧೀಶರಾದರು.

1999 ರ ಫೆಬ್ರವರಿ 3 ರಂದು ಅವರನ್ನು ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ಒಂದು ವರ್ಷದೊಳಗೆ, ಅವರನ್ನು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು.

ಆ ಸಮಯದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯದ ಅತೀ ಹಿರಿಯ ನ್ಯಾಯಾಧೀಶರಾಗಿದ್ದ ಸಭರವಾಲ್ ಅವರನ್ನು 2005 ರ ಅಕ್ಟೋಬರ್ 31 ರಂದು ನಿವೃತ್ತರಾಗಲಿದ್ದ ಆರ್.ಸಿ. ಲಾಹೋಟಿ ಅವರ ನಂತರದ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು.[] 2005 ರ ನವೆಂಬರ್ 1 ರಂದು ಸಭರಲಾಲ್ ಅವರನ್ನು ಭಾರತದ ರಾಷ್ಟ್ರಪತಿಗಳಾಗಿದ್ದ, ಎ ಪಿ ಜೆ ಅಬ್ದುಲ್ ಕಲಾಮ್ ಅವರು ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಬೋಧಿಸಿದರು, ಅವರು 2007 ರ ಜುಲೈ 14 ರಂದು ಮುಖ್ಯ ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸಾದ 65 ವರ್ಷವನ್ನು ಪೂರ್ಣಗೊಳಿಸುವುದರಿಂದ ಅಲ್ಲಿಯವರೆಗೆ ಅವರ ಕಾಲಾವಧಿಯು 14 ತಿಂಗಳುಗಳಾಗಿತ್ತು.

ಪ್ರಮುಖ ತೀರ್ಪುಗಳು

ಬದಲಾಯಿಸಿ

ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ, ಅವರು ಸಾಂವಿಧಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ತೀರ್ಪುಗಳನ್ನು ನೀಡಿದರು.

  • 2005 ರ ಅಕ್ಟೋಬರ್‌ನಲ್ಲಿ ನ್ಯಾಯಮೂರ್ತಿ ಸಭರವಾಲ್ ಅವರ ನೇತೃತ್ವದ ಸಾಂವಿಧಾನಿಕ ಪೀಠವು ಪ್ರಮುಖ ತೀರ್ಮಾನವೊಂದರಲ್ಲಿ ರಾಜ್ಯಪಾಲರಾದ ಬೂಟಾ ಸಿಂಗ್ ಅವರ ವರದಿಯ ಆಧಾರದ ಮೇಲೆ ಬಿಹಾರ ವಿಧಾಸಭೆಯ ವಿಸರ್ಜನೆಯನ್ನು ಸಂವಿಧಾನಬಾಹಿರವೆಂದು ತೀರ್ಪು ನೀಡಿತು, ಆದರೆ ಕ್ರಮವನ್ನು ಪೂರ್ವಸ್ಥಿತಿಗೆ ಹಿಂತಿರುಗಿಸಲು ಪೀಠವು ನಿರಾಕರಿಸಿತು, ಈ ಮೂಲಕ ಅದು ಹೊಸ ಚುನಾವಣೆಗಳಿಗೆ ಕಾರಣವಾಯಿತು.
  • ದೆಹಲಿಯಾದ್ಯಂತ ಸಾವಿರಾರು ಕಟ್ಟಡಗಳನ್ನು ನೆಲಸಮ ಮಾಡಿದ 2006 ದೆಹಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ಪರಿಹಾರವನ್ನು ನೀಡಲು ನಿರಾಕರಿಸಿತು. ಇವರ ಇಬ್ಬರು ಪುತ್ರರು ದೆಹಲಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದೊಂದಿಗೆ ಸಂರ್ಪರ್ಕ ಹೊಂದಿರುವುದಾಗಿ ನಂತರದ ದಿನಗಳಲ್ಲಿ ಕಂಡುಬಂದ ನಂತರ ಈ ತೀರ್ಪು ವಿವಾದಾಸ್ಪದವಾಯಿತು.
  • 1973 ರ ಏಪ್ರಿಲ್ 24 ರ ನಂತರ ಒಂಬತ್ತನೇ ಅನುಚ್ಛೇದದ ಅಡಿಯ ವ್ಯಾಪ್ತಿಗೆ ಸೇರಲ್ಪಟ್ಟ ಎಲ್ಲಾ ಕಾನೂನುಗಳು ಒಂದು ವೇಳೆ ಸಂವಿಧಾನದ 14, 19, 20 ಮತ್ತು 21 ರ ನಿಬಂಧನೆಯ ಅಡಿಯಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ಅವುಗಳನ್ನು ಪ್ರಶ್ನಿಸಬಹುದಾಗಿದೆ ಎಂದು ತೀರ್ಪು ನೀಡಿದ ಒಂಬತ್ತು ನ್ಯಾಯಾಧೀಶರ ಪೀಠದ ನೇತೃತ್ವ ವಹಿಸಿದ್ದರು. ಈ ತೀರ್ಪನ್ನು ತಮಿಳುನಾಡು ಮೀಸಲಾತಿ ಕಾಯಿದೆ, 1994ಯನ್ನು ಒಳಗೊಂಡು ಹಲವು ಕಾನೂನುಗಳ ಕುರಿತಂತೆ ಪ್ರಶ್ನಿಸಲಾಗಿದ್ದ ಹಲವಾರು ಅಹವಾಲುಗಳಿಗೆ ಪ್ರತಿಯಾಗಿ ನೀಡಲಾಗಿತ್ತು.
ಚಿತ್ರ:Sabharwal midday sab-chalta-hai 07jun26 sml.jpg
ನ್ಯಾಯಮೂರ್ತಿ ಸಭರವಾಲ್ ಅವರ ಪುತ್ರರು ಪ್ರವರ್ತಿಸಿರುವ ಪವನ್ ಇಂಪೆಕ್ಸ್ ಅವರಿಂದ ನಿರ್ಮಾಣಗೊಳ್ಳುತ್ತಿರುವ ಐಟಿ ಮಾಲ್ ಅನ್ನು ತೋರಿಸಿರುವ ಮಿಡ್-ಡೇ (2007-06-26) ಮುಖಪುಟ. ಶಾಪಿಂಗ್ ಮಾಲ್ ಬೃಹತ್ ಕಂಪನಿ ಬಿಪಿಟಿಪಿನೊಂದಿಗೆ ಜಂಟಿಯಾಗಿ ನೋಯಿಡಾದಲ್ಲಿ ನಿರ್ಮಾಣ ಮಾಡುತ್ತಿರುವ ರೂ 560 ಮಿಲಿಯನ್ ವೆಚ್ಚದ ಎಂಟು ಮಹಡಿಗಳ ಮಾಲ್, ಪವನ್ ಇಂಪೆಕ್ಸ್ ಇದರ ಶೇರು ಬಂಡವಾಳವು ರೂ. 0.1 ಮಿಲಿಯನ್ ಇತ್ತು.<ಉಲ್ಲೇಖ ಹೆಸರು=ಮಿಡ್-ಡೇ/>

ಇವರ ಪುತ್ರರ ರಿಯಲ್ ಎಸ್ಟೇಟ್ ವಹಿವಾಟುಗಳ ಬಗೆಗಿನ ಆರೋಪಗಳು

ಬದಲಾಯಿಸಿ

2006 ದೆಹಲಿ ಅನಧಿಕೃತ ಕಟ್ಟಡಗಳ ತೆರವು ಸಂದರ್ಭದಲ್ಲಿ, ಸಭರವಾಲ್ ನೇತೃತ್ವದ ಸರ್ವೋಚ್ಛ ನ್ಯಾಯಾಲಯದ ಪೀಠವು, ನಾಗರೀಕ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ದೊಡ್ಡ ಪ್ರಮಾಣದ ವಾಣಿಜ್ಯ ಕಟ್ಟಡಗಳನ್ನು ನೆಲಸಮ ಮಾಡುವ ತೀರ್ಮಾನದಲ್ಲಿ ಭಾರಿ ಉತ್ಸಾಹವನ್ನು ಪ್ರದರ್ಶಿಸಿತು. ಆಗ ಪ್ರತಿದಿನವೂ ಭಾರಿ ಪ್ರಮಾಣದ ಪ್ರತಿಭಟನೆಗಳು ಜರುಗಿದವು ಮತ್ತು ಸಾಕಷ್ಟು ರಾಜಕೀಯ ಒತ್ತಡವೂ ಇತ್ತು, ಈ ಕಾರಣದಿಂದ ನೆಲಸಮಗೊಳಿಸುವ ಪ್ರಕ್ರಿಯೆಗೆ ಆಗಾಗ್ಗೆ ಅಡೆತಡೆಗಳು ಒದಗಿ ಬಂದವು. ನ್ಯಾಯಾಲಯವು ನೆಲಸಮ ಪ್ರಕ್ರಿಯೆಯ ಉಸ್ತುವಾರಿಯನ್ನು ಕೈಗೊಂಡಿತು ಮತ್ತು ಈ ಕಾರ್ಯದಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ನ ವಿಳಂಬ ಕ್ರಿಯೆಗೆ ದಂಡನೆಯನ್ನು ವಿಧಿಸಿತು. ಬೃಹತ್ ಪ್ರಮಾಣದಲ್ಲಿ ಕಟ್ಟಡಗಳ, ಹೊಸ ಶಾಪಿಂಗ್ ಮಾಲ್ಗಳಂತಹ ಕಾನೂನುಬದ್ಧ ವಾಣಿಜ್ಯಿಕ ಆಸ್ತಿಪಾಸ್ತಿಗಳ ದರದಲ್ಲಿ ಗಣನೀಯ ಏರಿಕೆಯುಂಟಾಯಿತು.[] ನಿರ್ದಿಷ್ಟವಾಗಿ, ಐಷಾರಾಮಿ ಅಂಗಡಿ ಮಾಲೀಕರುಗಳು ಮತ್ತು ಇತರ ಮೇಲ್ಮಟ್ಟದ ವ್ಯಾಪಾರಿಗಳು ಸೀಮಿತವಾದ ಮಾಲ್ ಮಹಡಿ ಜಾಗಕ್ಕೆ ಬರಲು ಆಸಕ್ತರಾಗಿದ್ದರು.

2007 ರ ಮೇನಲ್ಲಿ, ಸಭರವಾಲ್ ಅವರು ಪೀಠದಿಂದ ನಿವೃತ್ತರಾದ ಐದು ತಿಂಗಳ ನಂತರ, ಮಿಡ್-ಡೇ ಮಧ್ಯಾಹ್ನದ ಸುದ್ದಿಪತ್ರಿಕೆಯು ವೈ.ಕೆ.ಸಭರವಾಲ್ ಅವರ ಪುತ್ರರಾದ ಚೇತನ್ ಮತ್ತು ನಿತಿನ್ ಸಭರವಾಲ್ ಅವರುಗಳು ಕನಿಷ್ಠ ನಾಲ್ಕು ಉದ್ಯಮಗಳನ್ನು ಹೊಂದಿರುವುದನ್ನು, ಅವುಗಳಲ್ಲಿ ಹೆಚ್ಚಿನವುಗಳು ಬಟ್ಟೆಯ ರಫ್ತು ಕಾರ್ಯದಲ್ಲಿ ಮತ್ತು ಒಂದು ನಿರ್ಮಾಣ ಕ್ಷೇತ್ರದಲ್ಲಿರುವುದನ್ನು ಸಾಬೀತುಪಾಡಿಸುವ ದಾಖಲೆಗಳನ್ನು ಪ್ರಸ್ತುತಪಡಿಸುವ ಲೇಖನಗಳ ಸರಣಿಯನ್ನು ಪ್ರಕಟಿಸಿತು. ಸಭರವಾಲ್ ಅವರು ಮುಖ್ಯ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಈ ಮೇಲಿನವುಗಳಲ್ಲಿ ಎರಡು ಕಂಪನಿಗಳು ಏಕಾಏಕೀ ಶಾಪಿಂಗ್ ಮಾಲ್ ಉದ್ಯಮದಲ್ಲಿ ಬೃಹತ್ ವೃತ್ತಿಪರರನ್ನು ಆಕರ್ಷಿಸಿತು.

ಪವನ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಮೊದಲನೆಯ ಕಂಪನಿಯು ಕೆಲವು ಸಮಯದ ಕಾಲ ನ್ಯಾಯಮೂರ್ತಿ ಸಭರವಾಲ್ ಅವರ ದೆಹಲಿಯ ಹೃದಯ ಭಾಗದ ಅಧಿಕೃತ ನಿವಾಸದ ಹೆಸರಿನಲ್ಲಿ ನಂತರ ಅವರ ಖಾಸಗಿ ನಿವಾಸದ ಹೆಸರಿನಲ್ಲಿ ನೋಂದಣಿಯಾಗಿತ್ತು. ಅವರ ಸರ್ಕಾರಿ -ಮನೆಯ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದು ಅನಧಿಕೃತವಾಗಿತ್ತು.[] 2007 ರ ಸೆಪ್ಟೆಂಬರ್ 2 ರ ಸುದ್ದಿ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ವರದಿಯಾದಂತೆ, ಸಭರವಾಲ್ ಅವರು ಈ ವಿಷಯ ತಿಳಿದ ತಕ್ಷಣ ತಮ್ಮ ಪುತ್ರರಿಗೆ ನೋಂದಾಯಿತ ವಿಳಾಸವನ್ನು ಸ್ಥಳಾಂತರಗೊಳಿಸಲು ಹೇಳಿದ್ದರು,[] ಆದರೆ ಏಪ್ರಿಲ್ 2007 ರ ಮಿಡ್-ಡೇ ಪತ್ರಿಕೆಯ ಜೊತೆಯ ಸಂದರ್ಶನವೊಂದರಲ್ಲಿ, ಸ್ಥಳಾಂತರದ ನಂತರ ಅವರು ವಿಷಯದ ಕುರಿತಂತೆ ಸಂಪೂರ್ಣ ಅಜ್ಞಾನವನ್ನು ಪ್ರದರ್ಶಿಸಿದ್ದರು.[]

ಹೆಚ್ಚು ಕಳಂಕ ತರುವ ವಿಷಯವೆಂದರೆ 2002 ರಲ್ಲಿ ಒಟ್ಟು 0.1 ಮಿಲಿಯನ್ ರೂ. ಬಂಡವಾಳದೊಂದಿಗೆ ನಡೆದುಕೊಂಡು ಬಂದ ಪವನ್ ಕಾಂಪ್ಲೆಕ್ಸ್ ಕಂಪನಿಯು ಏಕಾಏಕಿಯಾಗಿ ಕಾಬೂಲ್ ಮತ್ತು ಅಂಜಲಿ ಚಾವ್ಲಾ ಅವರ ಗಮನ ಸೆಳೆದಿತ್ತು, ಇವರುಗಳು ಪಾರ್ಕ್ ಸೆಂಟ್ರಾ (ಗುರಗಾಂವ್), ನೆಕ್ಸ್ಟ್ ಡೋರ್ (ಫರಿದಾಬಾದ್), ಮತ್ತು ಪಾರ್ಕ್‌ಲ್ಯಾಂಡ್ಸ್ ಶಾಪ್-ಇನ್ ಪಾರ್ಕ್ (ಉತ್ತರ ದೆಹಲಿ) ಯಲ್ಲಿನ ಬೃಹತ್ ಮಾಲ್‌ಗಳನ್ನು ಪ್ರವರ್ತನೆಗೊಳಿಸಿದ ಬೃಹತ್ ಮತ್ತು ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಕಂಪನಿ ಬ್ಯುಸಿನೆಸ್ ಪಾರ್ಕ್ ಟೌನ್ ಪ್ಲಾನರ್ಸ್ (ಬಿಡಿಟಿಪಿ)[] ಯ ಮಾಲೀಕರಾಗಿದ್ದರು. 2006 ರ ಜೂನ್‌ನಲ್ಲಿ 2006 ದೆಹಲಿ ಅನಧಿಕೃತ ಕಟ್ಟಡಗಳ ತೆರವು ಕುರಿತಂತೆ ಸರ್ವೋಚ್ಛ ನ್ಯಾಯಾಲಯವು ತೀರಾ ಆಸಕ್ತಿಯನ್ನು ವಹಿಸಿದಂತಹ ಸಂದರ್ಭದಲ್ಲಿ, ಚಾವ್ಲಾ ಅವರುಗಳು ಪಾರ್ಕ್ ಇಂಪೆಕ್ಸ್‌ನಲ್ಲಿ ಬಂಡವಾಳ ಹೂಡಿಕೆ ಮಾಡಿ ಅಲ್ಲಿ ಶೇರು ಬಂಡವಾಳವನ್ನು 300 ಪಟ್ಟು ಅಂದರೆ ರೂ 30 ಮಿಲಿಯನ್‌ಗಳಿಗೆ ಹೆಚ್ಚಿಗೆ ಮಾಡಿದ್ದರು, ಅಲ್ಲಿ ಮೂಲ ಪ್ರವರ್ತಕರು ಮತ್ತು ಚಾವ್ಲಾಗಳ ನಡುವೆ ಸಮಾನ ಪ್ರಮಾಣದ ಶೇರುಗಳಿದ್ದವು.[][] ಎರಡು ತಿಂಗಳ ನಂತರ, ಆಗಸ್ಟ್‌ನಲ್ಲಿ ಕಂಪನಿಯು ಬ್ಯಾಂಕಿನಿಂದ ರೂ 280 ಮಿಲಿಯನ್‌ನಷ್ಟು ಸಾಲವನ್ನು ಪಡೆದಿತ್ತು ಮತ್ತು ಅದು ಬಿಪಿಟಿಪಿ ಒಡೆತನದ ಬಾಡಿಗೆದಾರರರಾಗಿತ್ತು. ಈ ಆರೋಪಗಳನ್ನು ನ್ಯಾಯ ವ್ಯವಸ್ಥೆಯ ಹೊಣೆಗಾರಿಕೆಕೋಸ್ಕರ ಕ್ಯಾಂಪೇನ್ ವ್ಯವಸ್ಥಿತವಾಗಿ ಕಾಗದ ಪತ್ರಗಳ ಮೂಲಕ ದಾಖಲಿಸಲಾಗಿದ್ದನ್ನು ಬಿಡುಗಡೆ ಮಾಡಿತ್ತು[] ಮತ್ತು ಇವುಗಳನ್ನು ಸಭರವಾಲ್ ಅವರು ತಮ್ಮ ಪುತ್ರರು ಐಟಿ ಮಾಲ್ ಅನ್ನು ನಿರ್ಮಿಸುತ್ತಿದ್ದಾರೆಂದು ಹೇಳಿದ್ದರಾದರೂ ಅವರ ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಸಂಭೋದಿಸಲಾಗಿರಲಿಲ್ಲ. ಬಿಪಿಟಿಪಿಯೊಂದಿಗೆ ಪಾಲುದಾರಿಕೆಯ ನಂತರ ಜೂನ್ 2007 ರಲ್ಲಿ ಪವನ್ ಇಂಪೆಕ್ಸ್ ಕಂಪನಿಯು ನೋಯಿಡಾದಲ್ಲಿ 4 acres (16,000 m2) ರಷ್ಟು ಭೂಮಿಯನ್ನು ಖರೀದಿಸಿತು ಮತ್ತು ಅಲ್ಲಿ ಐಟಿ ಮಾಲ್ ಅನ್ನು ನಿರ್ಮಿಸಲಾಗುತ್ತಿತ್ತು; ಮಿಡ್-ಡೇ ಪತ್ರಿಕೆಯು ವರದಿ ಮಾಡಿದಂತೆ ಇದು 300,000 sq ft (28,000 m2) ರಷ್ಟು ವಿಕ್ರಯಯೋಗ್ಯ ಮಹಡಿ ಪ್ರದೇಶದೊಂದಿಗೆ ರೂ 560 ಮಿಲಿಯನ್ ಯೋಜನೆಯಾಗಿತ್ತು.[]

ಎರಡನೆಯ ಕಂಪನಿಯಾದ ಅಷ್ಟೇನು ಹೆಸರುವಾಸಿಯಾಗಿಲ್ಲದ ಹರ್‌ಪವನ್ ಕನ್‌ಸ್ಟಕ್ಟರ್ಸ್ ಅನ್ನೂ ಸಹ ಸಹೋದರರು ಪ್ರವರ್ತನೆ ಮಾಡಿದ್ದರು. 2005 ರ ಅಕ್ಟೋಬರ್‌ನಲ್ಲಿ, 2007 ನೇ ಹಣಕಾಸು ವರ್ಷದಲ್ಲಿ ರೂ 3 ಬಿಲಿಯನ್‌ನಷ್ಟು ವಹಿವಾಟು ಇದ್ದ ಪಾಲಿಸ್ಟರ್ ನೂಲು ಕಂಪನಿಯಾದ ಫಿಲಾಟೆಕ್ಸ್ ಇಂಡಿಯಾದ ಪ್ರವರ್ತಕರು ಮತ್ತು ರಿಯಲ್ ಎಸ್ಟೇಟ್ ಕಂಪನಿ ಫಾರ್ಟೋ ಎಸ್ಟೇಟ್ಸ್‌ನ ಮಾಲೀಕರಾದ ಪುರುಷೋತ್ತಮ್ ಮತ್ತು ಮಧು ಸೂದನ್ ಭಾಗೇರಿಯಾ ಅವರೂ ಸಹ ಹರ್‌ಪವನ್‌ನಲ್ಲಿ ಹೂಡಿಕೆಯನ್ನು ಮಾಡಿದರು. ತರುವಾಯು, ಭಾಗೇರಿಯಾರವರು ದೆಹಲಿಯಲ್ಲಿ ಐಷಾರಾಮಿ ಬ್ರಾಂಡ್‌ಗಳಿಗ ಮೀಸಲಾದ ಮಾಲ್ ಆದ ಸ್ವೇರ್ ಒನ್ ಅನ್ನು ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಘೋಷಿಸಿದರು. ಪುರುಷುತ್ತೋಮ್ ಭಾಗೇರಿಯಾ ಅವರು ತಮ್ಮ ಪುತ್ರರ ಬಾಲ್ಯ ಸ್ನೇಹಿತರೆಂದು ಮತ್ತು ಹೆಸರಿನ ಹೊರತಾಗಿಯೂ ಹರ್‌ಪವನ್ ಕನ್‌ಸ್ಟ್ರಕ್ಷನ್ ಎನ್ನುವುದು ಯಾವುದೇ ರಿಯಲ್ ಎಸ್ಟೇಟ್ ಅಥವಾ ಇತರ ಹೂಡಿಕೆಗಳನ್ನು ಮಾಡಿಲ್ಲ ಎಂದು ನ್ಯಾಯಮೂರ್ತಿ ಸಭರ್‌ವಾಲ್ ಅವರು ಹೇಳಿದರು.[]

ಚೇತನ್ ಮತ್ತು ನಿತಿನ್ ಅವರ ವ್ಯವಹಾರವು 2005 ರ ನಂತರ ಹಠಾತ್ತಾಗಿ ವಿಸ್ತರಿಸಲ್ಪಟ್ಟಿತು. ಹಲವಾರು ಗಾರ್ಮೆಂಟ್ ತಯಾರಿಕೆ ಕಾರ್ಖಾನೆಗಳನ್ನು ಸ್ಥಾಪಿಸುವುದರ ಜೊತೆಗೆ, ಅವರುಗಳು ನೋಯಿಡಾದಲ್ಲಿ ಬೃಹತ್ ರಿಯಲ್ ಎಸ್ಟೇಟ್ ಯೋಜನೆಯೊಂದನ್ನು ಪ್ರಾರಂಭಿಸಿದರು.

ನೋಯಿಡಾದಲ್ಲಿ ನಿರ್ಮಾಣವಾಗುತ್ತಿರುವ ರೂ 560 ಮಿಲಿಯನ್ ವೆಚ್ಚದ ಐಟಿ ಮಾಲ್‌ನ ಯೋಜನೆಯು ಪವನ್ ಇಂಪೆಕ್ಸ್‌‌ಗೆ ದೊರಕಿದ ಅತೀ ಬೃಹತ್ ಯೋಜನೆಯಾಗಿತ್ತು. ಈ ಮಾಲ್ ನಿರ್ಮಾಣ ಮಾಡಲು ಸಲ್ಲಿಸಿದ ಅರ್ಜಿಯಲ್ಲಿ ಅವರು ತಮ್ಮ ಕಂಪನಿಯ ವ್ಯವಹಾರ ವಹಿವಾಟಿನ ಮೊತ್ತವನ್ನು "ಸೊನ್ನೆ" ಎಂದು ನೀಡಿದ್ದರು. ಅವರ ಕಂಪನಿಯನ್ನು "ಸೊನ್ನೆ ವಹಿವಾಟು" ಮತ್ತು "ಸೊನ್ನೆ ವ್ಯಾಪಾರ" ಎಂದು ಘೋಷಿಸಿದ ಹೊರತಾಗಿಯೂ ಈ ಮಾಲ್ ಅನ್ನು ನಿರ್ಮಾಣ ಮಾಡಲು ಅವರ ಅರ್ಜಿಗೆ ನಿಗೂಢವಾಗಿ ಅನುಮೋದಿಸಲಾಗಿತ್ತು.[] ಮೊದಲಿನ ಅರ್ಜಿದಾರರಾದ ಸಾಫ್ಟ್ಎಡ್ಜ್ ಸೊಲ್ಯೂಷನ್ ಅವರ ಅರ್ಜಿಯನ್ನು ಅವರು ಈ ಮೊದಲು ಐಟಿ ಕ್ಷೇತ್ರದಲ್ಲಿ ಹಿಂದಿನ ಅನುಭವವನ್ನು ಹೊಂದಿಲ್ಲ ಮತ್ತು ಅವರ ತಾಂತ್ರಿಕ ಹೊಂದಾಣಿಕೆಯ ಆಧಾರದ ಕುರಿತಂತೆ ತೃಪ್ತಿಕರವಾಗಿ ಉತ್ತರಿಸಿಲ್ಲ ಎಂಬ ಕಾರಣವನ್ನು ನೀಡಿ ತಿರಸ್ಕರಿಸಲಾಗಿತ್ತು. ಆದರೆ ಚೇತನ್ ಸಭರವಾಲ್ ಅವರು ಪ್ರತಿನಿಧಿಸಿದ ಯಾವುದೇ ವ್ಯವಹಾರವಿರದ, ಯಾವುದೇ ಹಿಂದಿನ ಅನುಭವದ ದಾಖಲೆಯಿರದ ಮತ್ತು ಯಾವುದೇ ತಾಂತ್ರಿಕ ಹೊಂದಾಣಿಕೆಯಿರದ ಪವನ್ ಇಂಪೆಕ್ಸ್ ಕಂಪನಿಯು ಅನುಮತಿಯನ್ನು ಪಡೆದುಕೊಳ್ಳುವುದರಲ್ಲಿ ಸಫಲವಾಗಿತ್ತು.[]

ಆಸಕ್ತಿಯ ಸಂಘರ್ಷದ ಆರೋಪಗಳು

ಬದಲಾಯಿಸಿ

ಮೊಕದ್ದಮೆಯ ವಿಷಯಗಳು ಯಾವುದೇ ಆಗಿರಲಿ, ಸಭರವಾಲ್ ಅವರು ಪುತ್ರರು ದೆಹಲಿಯ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಒಂದಿಷ್ಟೂ ಭಾಗಿಯಾಗಿದ್ದರೂ ಅಂತಹ ನಿರ್ಧಾರಗಳಲ್ಲಿ ನ್ಯಾಯಮೂರ್ತಿ ಸಭರವಾಲ್ ಅವರು ಸಕ್ರಿಯರಾಗಿದ್ದರು ಎಂದು ಮತ್ತು ಅವರು ಅಂತಹ ಮೊಕದ್ದಮೆಗಳಿಂದ ಹೊರಗುಳಿಯಬಹುದಾಗಿತ್ತು ಎಂದು ವ್ಯಾಪಕವಾಗಿ ಭಾವಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ಔಟ್‌ಲುಕ್ (ನಿಯತಕಾಲಿಕ)ವು ವರದಿಯೊಂದನ್ನು ಮುದ್ರಿಸಿತು ಮತ್ತು ಅದರ ಪ್ರಕಾರ ಸಭರವಾಲ್ ಅವರು "ತಮಗೆ ನಿಗದಿಪಡಿಸಲಾಗಿಲ್ಲದಿದ್ದರೂ ಮಾರ್ಚ್ 2005 ರಲ್ಲಿ ವಾಣಿಜ್ಯಿಕ ಆಸ್ತಿಯ ತೆರವು ಕುರಿತ ಮೊಕದ್ದಮೆಯನ್ನು ನಿರ್ವಹಿಸಲು ಕೋರಿಕೊಂಡು ಅದನ್ನು ನಿರ್ವಹಿಸಿದರು.[]

"ಶಾಪಿಂಗ್ ಮಾಲ್‌ಗಳು ಮತ್ತು ವಾಣಿಜ್ಯ ಕಾಂಪ್ಲೆಕ್ಸ್‌ಗಳ ಅಭಿವೃದ್ಧಿಪಡಿಸುವವರೊಂದಿಗೆ ಪಾಲುದಾರಿಕೆಯ ಭಾಗವಾಗಿದ್ದ ತಮ್ಮ ಪುತ್ರರಿಗೆ ಲಾಭ ಮಾಡಿಕೊಡುವ ಪ್ರಯತ್ನವು" ಅನುಚಿತವಾದದ್ದು ಮತ್ತು ಕೆಟ್ಟತನದಿಂದ ಕೂಡಿದ್ದು ಎಂದು ಈ ಕ್ರಮವನ್ನು ಖಂಡಿಸಲಾಯಿತು.[೧೦] ಮಾಜಿ ಸಾಲಿಸಿಟರ್ ಜನರಲ್ ಆದ ಕೆ.ಕೆ. ಸೂದ್ ಅವರು ಸಭರ್‌ವಾಲ್ ಅವರ ನಡವಳಿಕೆಯನ್ನು "ಅವಿವೇಕದ ಪರಮಾವಧಿ" ಎಂದು ಬಣ್ಣಿಸಿದರು.[೧೧]

ಆರೋಪಗಳ ವಾಸ್ತವಾಂಶಗಳಿಗೆ ಸಂಬಂಧಿಸಿದಂತೆ, ಹೆಚ್ಚು ಹಾನಿಕರವಾದ ಅಂಶವು ಶಾಪಿಂಗ್ ಮಾಲ್ ನಿರ್ಮಾಣ ದೈತ್ಯರಾದ ಬಿಪಿಟಿಪಿಯವರು ಸಭರವಾಲ್ ಅವರ ಪುತ್ರರ ರಫ್ತು-ಆಮದು ವ್ಯವಹಾರದಲ್ಲಿ ಭಾಗವಹಿಸಿದ್ದಾಗಿತ್ತು. ಸಭರವಾಲ್ ಅವರು ಕಟ್ಟಡ ನಿರ್ಮೂಲಗೊಳಿಸುವಿಕೆ ಕಾರ್ಯಾಚರಣೆಯ ಮೊಕದ್ದಮೆಯಲ್ಲಿ ಆಸಕ್ತಿ ವಹಿಸಿದ ಅದೇ ಸಮಯದಲ್ಲಿ ಇಬ್ಬರೂ ಚಾವ್ಲಾಗಳು 2005 ರ ಮೊದಲ ಭಾಗದಲ್ಲಿ ಕಂಪನಿಯ ಆಡಳಿತ ಮಂಡಳಿಯಲ್ಲಿದ್ದರು. ಆಶ್ಚರ್ಯಕರವಾದ ಸಂಗತಿಯೆಂದರೆ ನ್ಯಾಯಮೂರ್ತಿ ಸಭರವಾಲ್ ಅವರು ತಮ್ಮ ನ್ಯಾಯವ್ಯಾಪ್ತಿಯಲ್ಲಿ [] ಈ ವಿಷಯಕ್ಕೆ ಸಂಬಂಧಿಸಿದಂತೆಯೇ ಇತರ ಎರಡು (ಕಡಿಮೆ ಪ್ರಮಾಣದ) ಆರೋಪಗಳ ಮೊಕದ್ದಮೆಯ ವಿಚಾರಣೆ ನಡೆಸಿದರೂ ಅವರು ಬಿಪಿಟಿಪಿ ಸಂಪರ್ಕಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾಗಿ ನಿರ್ಲಿಪ್ತರಾಗಿದ್ದರು.

ಇಬ್ಬರು ಪತ್ರಕರ್ತರು, ವ್ಯಂಗಚಿತ್ರಕಾರ, ಪ್ರಕಾಶಕರಿಗೆ ಜೈಲು ಶಿಕ್ಷೆ

ಬದಲಾಯಿಸಿ

2007 ರ ಸೆಪ್ಟೆಂಬರ್‌ನಲ್ಲಿ, ನಾಲ್ಕು ಮಿಡ್-ಡೇ ಪತ್ರಕರ್ತರನ್ನು ನ್ಯಾಯಾಲಯ ನಿಂದನೆಯ ಆರೋಪದ ಮೇಲೆ (ಮಾಜಿ ನ್ಯಾಯಮೂರ್ತಿಯವರ ಮೇಲೆ ಅಂತಹ ಆರೋಪಗಳನ್ನು ಮಾಡುವುದು) ದೆಹಲಿ ಹೈಕೋರ್ಟ್ ಜೈಲು ಶಿಕ್ಷೆಗೆ ಗುರಿಪಡಿಸಿತು.[೧೨] ಪತ್ರಕರ್ತರು "ನಮ್ಮ ವರದಿಯಲ್ಲಿ ನಾವು ವಾಸ್ತವಾಂಶಗಳನ್ನು ತಿಳಿಸಿ ಹೇಳಿದ್ದೇವೆ (ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ವೈ ಕೆ ಸಭರವಾಲ್‌ ಅವರಿಗೆ ಸಂಬಂಧಿಸಿದ ವರದಿಯಲ್ಲಿ) ಮತ್ತು ಆ ಕಾರಣದಿಂದ ನಮ್ಮನ್ನು ನಿಂದನೆಯ ಆರೋಪದಲ್ಲಿ ವಿಚಾರಣೆಗೆ ಗುರಿಪಡಿಸಬಾರದು. ದೇಶದಲ್ಲಿನ ಕಾನೂನುಗಳು ಹಳತಾಗಿವೆ" ಎಂದು ಹೇಳಿದರು. ಭಾರತದಲ್ಲಿನ ನಿಂದನೆಯ ಕಾನೂನುಗಳು ನಿಂದನೆಯನ್ನು ನಿರ್ಣಯಿಸುವಲ್ಲಿ ಮೂಲಭೂತ ಶೋಧನೆಯಾದ ಸತ್ಯದ ಮೇಲೆ ಅವಲಂಬಿತವಾಗಿಲ್ಲ. ಅಂಕಣಗಳು ಸಹ ಅಪಹಾಸ್ಯದ ದಾಟಿಯಲ್ಲಿದ್ದು, ಅವುಗಳ ಜೊತೆಗೆ ವ್ಯಂಗ್ಯಚಿತ್ರಗಳನ್ನು (ವ್ಯಂಗ್ಯಚಿತ್ರಕಾರನಿಗೂ ಸಹ ನಾಲ್ಕು ತಿಂಗಳ ಜೈಲುವಾಸದ ಶಿಕ್ಷೆ ವಿಧಿಸಲಾಯಿತು) ಒಳಗೊಂಡಿದ್ದವು.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಜಸ್ಟಿಸ್ ಆರ್.ಎಸ್ ಸೋಧಿ ಮತ್ತು ಜಸ್ಟಿಸ್ ಬಿ ಎನ್ ಚತುರ್ವೇದಿ ಅವರುಗಳು ತಮ್ಮ ತೀರ್ಪಿನಲ್ಲಿ "ಈ ವಿಶಿಷ್ಟ ಮೊಕದ್ದಮೆಯಲ್ಲಿ, ಜರೆದವರು ಮೇಲ್ಮಟ್ಟದ ನ್ಯಾಯಾಲಯದ ಘನತೆಗೆ ಮಸಿ ಬಳೆದಿದ್ದಾರೆ ಮತ್ತು ನಾಲ್ಕು ತಿಂಗಳ ಜೈಲು ವಾಸದ ಶಿಕ್ಷೆಯು ನ್ಯಾಯವನ್ನು ಒದಗಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದರು. ಹಿರಿಯ ಪತ್ರಕರ್ತರಾದ ಎಂ ಕೆ ತಯಾಲ್ ಅವರು "ನ್ಯಾಯಾಧೀಶರು ವಾದದ ವಾಸ್ತವಿಕ ಸರಿತಪ್ಪುಗಳ ಕಡೆಗೆ ಗಮನ ಹರಿಸಲಿಲ್ಲ. ಮತ್ತು ಅವರು ತೀರ್ಪನ್ನು ನೀಡುವಾಗ ತಮ್ಮ ಆಲೋಚನೆಯನ್ನು ಅನ್ವಯಿಸಲಿಲ್ಲ" ಎಂದು ನುಡಿದರು.[೧೩] "ಸರ್ವೋಚ್ಛ ನ್ಯಾಯಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಲಕ್ಷ್ಮ ಣ ರೇಖೆ ಯನ್ನು ಹಾಕಿದ್ದು, ಅದನ್ನು ಪ್ರಕಾಶಕರು ಮೀರಿದ್ದಾರೆ ಎಂದು ನಾವು ಭಾವಿಸುತ್ತೇವೆ." (ಲಕ್ಷ್ಮಣ ರೇಖೆಯು ರಾಮಾಯಣದಲ್ಲಿನ ಒಂದು ಗೆರೆಯ ಉಲ್ಲೇಖವಾಗಿದ್ದು ಅದನ್ನು ದಾಟಬಾರದು). ಆದರೆ, ಪ್ರತಿವಾದಿಗಳು ಆಗಲೇ ಪತ್ರಕರ್ತರುಗಳ ಜಾಮೀನು ಕೋರಿಕೆಯನ್ನು ಸುಪ್ರೀಂಕೋರ್ಟಿನಲ್ಲಿ ಮಂಡಿಸಿದರು ಮತ್ತು ಅವರನ್ನು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ತಯಾಲ್ ಮತ್ತು ಇತರ ಮೂವರು ಮಿಡ್ ಡೇಯೊಂದಿಗೆ ಆನಂತರ ಗುರುತಿಸಿಕೊಳ್ಳಲಿಲ್ಲ. ಸುದ್ದಿಪತ್ರಿಕೆಯ ಆಡಳಿತ ವರ್ಗವು ಸಭರವಾಲ್ ಮತ್ತು ಬಿಪಿಟಿಪಿಯೊಂದಿಗೆ ಒಪ್ಪಂದ ಮಾಡಿಕೊಂಡಂತೆ ಕಂಡುಬಂದಿತು. ಮಾಜಿ ಭಾರತೀಯ ಸೈನ್ಯ ಅಧಿಕಾರಿಯಾದ ತಯಾಲ್ ಅವರು ಮಾಜಿ ಮುಖ್ಯ ನ್ಯಾಯಮೂರ್ತಿಗಳ ಕುರಿತ ಇನ್ನಷ್ಟು ವಿವರಗಳನ್ನು ಬಹಿರಂಗಪಡಿಸದಂತೆ ದೂರ ಉಳಿದ ಮಿಡ್ ಡೇ ನೀತಿಯನ್ನು ವಿರೋಧಿಸಿದರು. ಸಭರವಾಲ್ ಅವರ ಕುರಿತಂತೆ ಇನ್ನು ಯಾವುದೇ ಬರಹವನ್ನು ಸುದ್ದಿಪತ್ರಿಕೆಯು ಪ್ರಕಟಿಸದಂತೆ ಮಿಡ್ ಡೇನ ಆಡಳಿತ ನಿರ್ದೇಶಕರಾದ ತಾರಿಕ್ ಅನ್ಸಾರಿಯವರು ಟಿಪ್ಪಣಿಯೊಂದನ್ನು ಬರೆದರು.

ತೀರ್ಪಿನ ಕುರಿತಂತೆ, ಮಾಜಿ ಕಾನೂನು ಮಂತ್ರಿಗಳಾದ ಶಾಂತಿ ಭೂಷಣ್ ಅವರು ಹೇಳುತ್ತಾ, 2006 ರಲ್ಲಿ ಪಾರ್ಲಿಮೆಂಟ್‌ನಲ್ಲಿ ನ್ಯಾಯಾಲಯದ ನಿಂದನೆ ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿದ್ದು ಅದರಂತೆ "ಒಂದು ವೇಳೆ ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳು ಸತ್ಯವೆಂದು ಕಂಡುಬಂದರೆ, ಆಗ ಅದನ್ನು ನಿಂದನೆ ಎಂದು ಪರಿಗಣಿಸಲಾಗುವುದಿಲ್ಲ." ಈ ತೀರ್ಪಿನ ಕುರಿತಂತೆ ಅವರು "ಇದು ಮಾಧ್ಯಮವನ್ನು ಭಯಭೀತಗೊಳಿಸುವ ಉದ್ದೇಶದಿಂದ ಮಾತ್ರ ಕೂಡಿದೆ ಮತ್ತು ಸತ್ಯಾಂಶವನ್ನು ನಿರ್ಬಂಧಿಸುವ ಪ್ರಯತ್ನವಾಗಿರಬಹುದು" ಎಂದು ಹೇಳಿದರು.[೧೦]

ಹೇಗಾದರೂ, ವರದಿಯ ಸುಳ್ಳು ಸ್ಥಿತಿಯನ್ನು ಪ್ರಮಾಣೀಕರಿಸದೇ ವರದಿಗಾರರಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ ತೀರ್ಮಾನವು, ವಿಷಯವನ್ನು ಇನ್ನೂ ಹೆಚ್ಚಿನ ಸಾರ್ವಜನಿಕ ವಿಮರ್ಶೆಗೆ ತಂದು ನಿಲ್ಲಿಸಿದೆ.

ಉಲ್ಲೇಖಗಳು

ಬದಲಾಯಿಸಿ
  1. "Y.K. Sabharwal appointed CJI". Chandigarh Tribune. October 18, 2005. Retrieved 2009-08-29.
  2. IANS (August 31). "Sealing, demolitions push up mall prices". Archived from the original on 2007-04-04. Retrieved 2007-09-22. {{cite news}}: Check date values in: |date= (help)
  3. ೩.೦ ೩.೧ ೩.೨ ೩.೩ ೩.೪ Prashant Bhushan (September 19, 2007). "Contempt Of Judicial Power". Outlook (magazine). Retrieved 2007-09-23.ತಮ್ಮ ಪುತ್ರರು ಕೈಗೊಂಡು ಕ್ರಮಗಳನ್ನು ಸಮರ್ಥಿಸಿಕೊಂಡು ನ್ಯಾಯಮೂರ್ತಿ ಸಭರ್‌ವಾಲ್ ಅವರು ಟೈಮ್ಸ್ ಆಫ್ ಇಂಡಿಯಾ ಬರೆದ ಅಂಕಣದ ನಿರಾಕರಣ.
  4. ೪.೦ ೪.೧ ೪.೨ Justice Y.K. Sabharwal (September 2, 2007). "A former Chief Justice of India defends his honour". ಟೈಮ್ಸ್ ಆಫ್ ಇಂಡಿಯ Delhi. Archived from the original on 2007-10-15. Retrieved 2007-09-23.
  5. http://www.bptp.com/
  6. "Lift kara de..." (PDF). Mid-Day. June 12, 2007. Archived from the original (PDF) on 2008-02-28. Retrieved 2007-09-22.
  7. "Affidavit filed by Vitusha Oberoi in Delhi High Court". judicialreforms.org. 2007. Archived from the original (DOC) on 2008-02-28. Retrieved 2007-09-22. {{cite web}}: Unknown parameter |month= ignored (help)
  8. "Judge Watch on Justice Y.K.Sabharwal: Supporting documents" (PDF). Campaign for Judicial Accountability and Reforms. Archived from the original (PDF) on 2008-02-28. Retrieved 2007-09-22.
  9. ವಿತುಶಾ ಒಬೆರಾಯ್ ಮತ್ತು ಎಂ.ಕೆ. ತಾಯಲ್, ಸಭರ್‌ವಾಲ್ಸ್ ಶಾಪ್ ಟಾಕ್, ಮಿಡ್ ಡೇ, ಜೂನ್ 26, 2007.
  10. "Shock, anger at Sabharwal's mall-aa-mall" (PDF). Mid-Day. June 12, 2007. Archived from the original (PDF) on 2008-02-28. Retrieved 2007-09-22.
  11. "We have taken truth to be our defence: Vitusha Oberoi". ದಿ ಹಿಂದೂ. September 21, 2007. Archived from the original on 2007-10-14. Retrieved 2007-09-22.
  12. "4 journos get jail term for scandalising ex-CJI". CNN-IBN. September 21, 2007. Archived from the original on 2008-02-14. Retrieved 2007-09-23.

ಬಾಹ್ಯ ಕೊಂಡಿಗಳು

ಬದಲಾಯಿಸಿ
Preceded by Chief Justice of India
November 1, 2005– January 14, 2007
Succeeded by