ಯೂರಿಪ್ಟರಿಡ ಎಂಬುದು ಆರ್ತ್ರಾಪೊಡ ವಿಭಾಗದ ಅರ‍್ಯಾಕ್ನಿಡ ವರ್ಗಕ್ಕೆ ಸೇರಿದ ಗತವಂಶಿ ಜೀವಿಗಳ ಗಣ. ಸೈಲ್ಯೂರಿಯನ್ ಕಾಲದಲ್ಲಿ ಇವು ಜೀವಿಸಿದ್ದುವೆನ್ನಲಾಗಿದೆ. ತಮ್ಮ ದೇಹದಲ್ಲಿರುವ ಖಂಡಗಳ ಸಂಖ್ಯೆಯಲ್ಲೂ ಜೋಡಣೆಯಲ್ಲೂ ಇವು ಆಧುನಿಕ ಚೇಳುಗಳನ್ನು ಹೋಲುತ್ತವಾದರೂ ಚೇಳುಗಳು ನೆಲದ ಮೇಲೆ ಮತ್ತು ಒಳಗೆ ವಾಸಿಸುವಂಥವು. ಈ ಗುಂಪಿನ ಜೀವಿಗಳು ಜಲವಾಸಿಗಳಾಗಿದ್ದವು.

ಯೂರಿಪ್ಟರಿಡ
Temporal range: Darriwilian-Late Permian, 467.3–251.9 Ma Possible Jiangshanian record
ಕಾರ್ಲ್ಸ್‌ರೂಹ, ಜರ್ಮನಿಯಲ್ಲಿನ ನೈಸರ್ಗಿಕ ಇತಿಹಾಸದ ರಾಜ್ಯ ಸಂಗ್ರಹಾಲಯದಲ್ಲಿ ಇರುವ ಯೂರಿಪ್ಟೆರಸ್ ರೆಮಿಪೆಸ್‌ನ ಪಳೆಯುಳಿಕೆ ಮಾದರಿ
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಆರ್ಥ್ರೊಪೋಡಾ
ಉಪವಿಭಾಗ: ಚೆಲಿಸರೇಟಾ
ಏಕಮೂಲ ವರ್ಗ: ಸ್ಲೀರೊಫ಼ೊರೇಟಾ
ಗಣ: ಯೂರಿಪ್ಟರಿಡ
Burmeister, 1843
ಉಪಗಣಗಳು
  • †ಯೂರಿಪ್ಟೆರಿನಾ Burmeister, 1843
  • †ಸ್ಟೈಲೋನ್ಯೂರಿನಾ Diener, 1924
ತಿಳಿದಿರದ ಸಂಬಂಧ
  • ಡಾರ್ಫ಼ೊಪ್ಟೆರಸ್
  • ಮಾರ್ಸುಪೀಪ್ಟೆರಸ್
Synonyms
  • ಜೈಗ್ಯಾಂಟೊಸ್ಟ್ರಾಕಾ Haeckel, 1866
  • ಸಿರ್ಟೊಟೆನಿಡಾ Størmer & Waterston, 1968

ಈ ಗಣದಲ್ಲಿ ಯೂರಿಪ್ಟರಸ್, ಟೆರಿಗೋಟಸ್, ಸ್ಲಿಮೋನಿಯ ಮತ್ತು ಸೈಲನ್ಯೂರ ಎಂಬ ಮುಖ್ಯ ಜಾತಿಗಳುಂಟು. ಆರ್ತ್ರಾಪೊಡ ಗುಂಪಿನ ಇತರ ಪ್ರಾಣಿಗಳಿಗೆ ಹೋಲಿಸಿದರೆ ಈ ಗಣದ ಸದಸ್ಯಗಳೇ ಅತ್ಯಂತ ದೊಡ್ಡ ಗಾತ್ರವೆನ್ನಲಾಗಿದೆ. ಟೆರಿಗೋಟಸ್ ಸು 2 ಮೀ ಉದ್ದವಿತ್ತಲೆನ್ನಲಾಗಿದೆ.

ದೇಹರಚನೆ

ಬದಲಾಯಿಸಿ

ದೇಹ ಅನೇಕ ಉಂಗುರ/ಖಂಡಗಳಿಂದ ರಚಿತವಾಗಿದ್ದು ಪ್ರೋಸೋಮ (ತಲೆ), ಮೀಸೊಸೋಮಾ (ಎದೆ) ಮತ್ತು ಮೆಟಸೋಮ (ಕಿಬ್ಬೊಟ್ಟೆ) ಎಂಬ ಮೂರು ಪ್ರಧಾನ ಭಾಗಗಳನ್ನು ಪಡೆದಿದೆ.[][] ತಲೆಯಲ್ಲಿ ಬಾಯಿ, ಸಂಯುಕ್ತ ಹಾಗೂ ಸರಳ ರೀತಿಯ ಕಣ್ಣು, ಆಹಾರವನ್ನು ಹಿಡಿಯಲು ಅನುಕೂಲವಾಗುವ ಚೆಲಿಸೆರಿ, ಕಾಲುಗಳು ಮತ್ತು ಈಜಲು ಅನುಕೂಲವಾಗಿರುವ ದೋಣಿ ಹುಟ್ಟಿನಂಥ ರಚನೆಗಳಿವೆ.[] ಎದೆ ಭಾಗದಲ್ಲಿ ಜನನೇಂದ್ರಿಯ ಮತ್ತು ಎಲೆಯಾಕಾರದ ಕಿವಿರುಗಳಿವೆ.

ಕಿಬ್ಬೊಟ್ಟೆ ಉದ್ದಬಾಲದಂತೆ ಇದ್ದು ತುದಿಯಲ್ಲಿ ಟೆಲ್ಸನ್ ಎಂಬ ಕೊಂಡಿಯನ್ನು ಪಡೆದಿದೆ. ಯೂರಿಪ್ಟರಿಸ್ ಮತ್ತು ಟೆರಿಗೋಟಸ್ ಜಾತಿಯ ಪ್ರಾಣಿಗಳಲ್ಲಿ ಟೆಲ್ಸನ್ ಈಜುವುದಕ್ಕೂ ಸಮುದ್ರ ತಳದ ಮಣ್ಣನ್ನು ಕೊರೆಯುವುದಕ್ಕೂ ಸಹಾಯಕವಾಗಿತ್ತು.

ಈ ಗುಂಪಿನ ಪ್ರಾಣಿಗಳು ಚೇಳುಗಳ ಪೂರ್ವಜಗಳಾಗಿದ್ದು ಇವುಗಳಿಂದ ಚೇಳುಗಳು ವಿಕಾಸಗೊಂಡವೆನ್ನಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Størmer 1955, p. 23.
  2. ೨.೦ ೨.೧ Braddy & Dunlop 1997, pp. 437–439.


ಹೊರಗಿನ ಕೊಂಡಿಗಳು

ಬದಲಾಯಿಸಿ