ಯಕ್ಕ
ಯಕ್ಕ ಅಮೆರಿಕ ಸಂಯುಕ್ತ ಸಂಸ್ಥಾನಗಳ ನೈಋತ್ಯ ಭಾಗ ಮತ್ತು ಮೆಕ್ಸಿಕೋ ಪ್ರದೇಶಗಳಲ್ಲಿ ಕಾಣದೊರೆಯುವ ಉಪಯುಕ್ತ ಸಸ್ಯಜಾತಿ.[೨][೩] ಲಿಲಿಯೇಸೀ ಕುಟುಂಬಕ್ಕೆ ಸೇರಿದ ಇದರಲ್ಲಿ ಸುಮಾರು 49 ಪ್ರಭೇದಗಳು ಮತ್ತು 24 ಉಪಪ್ರಭೇದಗಳಿವೆ. ಇವುಗಳ ಪೈಕಿಯ ಯಕ್ಕ ಅಲಾಯ್‌ಫೋಲಿಯ (ಸ್ಪ್ಯಾನಿಷ್ ಬಾಯನೆಟ್-ಆಲವೀ ಯಕ್ಕ), ಯ. ಫಿಲಿಮೆಂಟೋಸ (ಆಡಮ್ಸ ನೀಡಲ್-ಕರಡಿ ಹುಲ್ಲು-ರೇಷ್ಮೆ ಹುಲ್ಲು), ಯ. ಗ್ಲೋರಿಯೋಸ, ಯ. ಬ್ರೆವಿಪೋಲಿಯ (ಜೋಷುವ ಟ್ರೀ), ಯ. ಶಿಡಿಗೆರ (ಮೊಹೇವ್ ಯುಕ್ಕ) ಮುಂತಾದವು ಪ್ರಸಿದ್ಧವಾಗಿವೆ. ಇವು ಸ್ವಾಭಾವಿಕವಾಗಿ ಮರುಭೂಮಿಗಳಲ್ಲಿ, ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಇಲ್ಲವೆ ಬೇಸಾಯ ಮಾಡದಿರುವ ಪಾಳುನೆಲಗಳಲ್ಲಿ ಬೆಳೆಯುತ್ತವೆ. ಇವು ಕಾಡುಗಿಡಗಳಾದರೂ ಸುಂದರವಾಗಿರುವುದರಿಂದ ಕೆಲವನ್ನು ತೋಟಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದುಂಟು.
ಯಕ್ಕ | |
---|---|
Yucca filamentosa naturalized in New Zealand | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಏಕದಳ ಸಸ್ಯ |
ಗಣ: | ಆಸ್ಪರಾಗೇಲ್ಸ್ |
ಕುಟುಂಬ: | ಆಸ್ಪರಗೇಸೀ |
ಉಪಕುಟುಂಬ: | ಅಗೇವಾಯ್ಡೀ |
ಕುಲ: | ಯಕ್ಕ L. |
Species | |
See text | |
Synonyms | |
ಸಸ್ಯ ವಿವರಣೆ
ಬದಲಾಯಿಸಿಇವುಗಳಲ್ಲಿ ಕೆಲವು ಪ್ರಭೇದಗಳು ನೋಡಲು ಕತ್ತಾಳೆ ಗಿಡದಂತೆ ಕಾಣುತ್ತವೆ. ನೆಲದಿಂದ ಮೇಲಕ್ಕೆ ಕಾಂಡವೇ ಕಾಣುವಂತಿದ್ದು ನೆಲಮಟ್ಟದಿಂದಲೇ ಅನೇಕ ಎಲೆಗಳು ಹುಟ್ಟಿಕೊಂಡಿರುತ್ತವೆ. ಇನ್ನು ಕೆಲವಲ್ಲಿ ಸುಮಾರು 3-15 ಮೀ ಎತ್ತರದ ಪ್ರಧಾನ ಕಾಂಡವಿದ್ದು ಅದರ ತುದಿಯಲ್ಲಿ ಗುಂಪಾಗಿ ಎಲೆಗಳು ಮೂಡಿಬರುತ್ತದೆ. ಎರಡು ಬಗೆಯಲ್ಲೂ ಎಲೆಗಳು ಚೂಪು ತುದಿಯ ಕತ್ತಿಗಳ ಆಕಾರದಲ್ಲಿವೆ.
ಪರಾಗಸ್ಪರ್ಶಕ್ರಿಯೆ
ಬದಲಾಯಿಸಿಯಕ್ಕ ಗಿಡದ ಪರಾಗಸ್ಪರ್ಶಕ್ರಿಯೆ ಕೊಂಚ ಸ್ವಾರಸ್ಯಕರವಾದ್ದು ಇದು ಯಕ್ಕ ಅಥವಾ ಪ್ರೋನೋಬ ಪತಂಗದ ಸಹಾಯದಿಂದ ಜರುಗುತ್ತದೆ. ಒಂದೊಂದು ಬಗೆಯ ಪತಂಗಗಳುಂಟು. ಯಕ್ಕದ ಹೂಗಳು ರಾತ್ರಿವೇಳೆ ಮಾತ್ರ ಅರಳುವುವು; ಹೀಗೆ ಅರಳಿದಾಗ ಒಂದು ಬಗೆಯ ಸುವಾಸನೆ ಹೊರಸೂಸುತ್ತದೆ. ಇದರಿಂದ ಆಕರ್ಷಿತಗೊಳ್ಳುವ ನಿರ್ದಿಷ್ಟ ಬಗೆಯ ಹೆಣ್ಣು ಪತಂಗ ಹೂವಿನ ಮಕರಂದ ಹೀರಲು ಬಂದು, ಕೇವಲ ಮಕರಂದ ಹೀರುವುದಲ್ಲದೆ ತನ್ನ ವಿಶೇಷವಾದ ಉದ್ದನೆಯ ಸೂಜಿಯಂಥ ಅಂಡವಿಕ್ಷೇಪಕವನ್ನು (ಓನಿಪಾಸಿಟರ್) ಹೂವಿನ ಅಂಡಾಶಯದೊಳಗೆ ಚುಚ್ಚಿ ತನ್ನ ಮೊಟ್ಟೆಗಳನ್ನೂ ಇಡುತ್ತದೆ. ಹೀಗೆ ಮಾಡುವಾಗ ಪತಂಗದ ತಲೆ ಹೂವಿನ ಕೇಸರಗಳ ಸಂಪರ್ಕಕ್ಕೆ ಬರುವುದರಿಂದ ಅದಕ್ಕೆ ಪರಾಗ ಅಂಟಿಕೊಳ್ಳುತ್ತದೆ. ಇದೇ ಪತಂಗ ಸ್ವಜಾತಿಯ ಬೇರೊಂದು ಯಕ್ಕ ಗಿಡದ ಹೂವನ್ನು ಸಂದರ್ಶಿಸಿದಾಗ ಇದರ ತಲೆಗೆ ಅಂಟಿರುವ ಪರಾಗ ಆ ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆಗೊಳ್ಳುತ್ತದೆ. ಈ ರೀತಿ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ. ಅಲ್ಲದೆ ಹೂವಿನ ಅಂಡಾಶಯದೊಳಕ್ಕೆ ಇರಿಸಲಾದ ಮೊಟ್ಟೆಗಳಿಂದ ಹೊರಬರುವ ಮರಿಗಳು ಅಂಡಕಗಳಲ್ಲಿ ಕೆಲವನ್ನು ತಿಂದು ಬೆಳೆಯುತ್ತವೆ. ಹೀಗೆ ಪತಂಗದಿಂದ ಯಕ್ಕ ಸಸ್ಯದ ಪರಾಗಸ್ಪರ್ಶ ಕ್ರಿಯೆ ನಡೆದು ಸಸ್ಯಕ್ಕೆ ಸಹಾಯವಾಗುವುದು ಒಂದು ಕಾರ್ಯವಾದರೆ, ಪತಂಗದ ಮರಿಗಳಿಗೆ ಹೂವಿನ ಅಂಡಕಗಳ ಆಹಾರ ದೊರೆತು ಅವು ಬೆಳೆಯಲು ಅನುಕೂಲವಾಗುವುದು ಇನ್ನೊಂದು ಕಾರ್ಯ.
ಉಪಯೋಗಗಳು
ಬದಲಾಯಿಸಿಯಕ್ಕ ಸಸ್ಯದಿಂದ ಹಲವಾರು ಉಪಯೋಗಗಳಿವೆ. ಇದರ ಕಾಂಡ ಮತ್ತು ಎಲೆಗಳಿಂದ ನಾರನ್ನು ಪಡೆಯಬಹದು. ಕೆಲವು ಪ್ರಭೇದದ ಬೇರಿನಲ್ಲಿ ಸ್ಯಾಪೊನಿನ್ ಎಂಬ ಅಂಶವಿದ್ದು ಇದನ್ನು ಸಾಬೂನಿಗೆ ಬದಲಾಗಿ ಉಪಯೋಗಿಸುವುದಿದೆ. ಇದರಿಂದ ಈ ಪ್ರಭೇದಕ್ಕೆ ಸೋಪ್‌ವೀಡ್ ಎಂಬ ಹೆಸರೂ ಇದೆ.
ಛಾಯಾಂಕಣ
ಬದಲಾಯಿಸಿ-
Unknown species near Orosí, Costa Rica
-
Yucca near Carlsbad Caverns National Park in New Mexico
-
Yucca harrimaniae also known as Harriman's yucca
ಉಲ್ಲೇಖಗಳು
ಬದಲಾಯಿಸಿ- ↑ "Yucca L." Germplasm Resources Information Network. United States Department of Agriculture. 2010-01-19. Archived from the original on 2010-05-30. Retrieved 2010-06-07.
- ↑ Wells, Ken; Frey, Rebecca "Yucca ." Gale Encyclopedia of Alternative Medicine. . Encyclopedia.com. 25 May. 2023 <https://www.encyclopedia.com>.
- ↑ https://eol.org/pages/23768875
ಹೊರಗಿನ ಕೊಂಡಿಗಳು
ಬದಲಾಯಿಸಿ- Yucca species and their Common names - Fritz Hochstätter
- New Mexico Statutes and Court Rules: State Flower Archived 2013-10-22 ವೇಬ್ಯಾಕ್ ಮೆಷಿನ್ ನಲ್ಲಿ.
- . Encyclopædia Britannica (11th ed.). 1911.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)