ಮೌನಿ ರಾಯ್
ಮೌನಿ ರಾಯ್ ಭಾರತೀಯ ಕಿರುತರೆ ನಟಿ, ಮತ್ತು ರೂಪದರ್ಶಿ. ಇವರು ೨೮ ಸೆಪ್ಟೆಂಬರ್ ೧೯೮೫ ರಂದು ಜನಿಸಿದರು. [೩] ೨೦೦೬ ರಲ್ಲಿ ಇವರು ಕ್ಯುಂ ಕಿ ಸಾಸ್ ಭಿ ಕಭಿ ಬಹು ಥೀ ಎಂಬ ಧಾರವಾಹಿಯಲ್ಲಿ ಕೃಷ್ಣತುಳಸಿ ಎಂಬ ಪಾತ್ರವನ್ನು ನಿರ್ವಹಿಸಿದರು, ಪೌರಾಣಿಕ ಸರಣಿ ' ದೇವೋಂ ಕೆ ದೇವ್ ಮಹಾದೇವ್ ' ಎಂಬ ಧಾರವಾಹಿಯಲ್ಲಿ ಸತಿ ಎಂಬ ಪಾತ್ರವನ್ನು ಹಾಗೂ ಏಕ್ತ ಕಪೂರ್‌ರವರ ನಾಗಿನ್ ಎಂಬ ಧಾರವಾಹಿಯಲ್ಲಿ ಶಿವನ್ಯ ಮತ್ತು ಅದರ ಎರಡನೇ ಭಾಗದಲ್ಲಿ ಶಿವಾಂಗಿ ಎಂಬ ಪಾತ್ರವನ್ನು ಕೂಡಾ ನಿರ್ವಹಿಸಿದರು . ಅವರು ಜುನೂನ್ ಎಂಬ ಧಾರವಾಹಿಯಲ್ಲಿ ಮೀರಾ ಎಂಬ ಪಾತ್ರವನ್ನು ವಹಿಸಿದ್ದರು ಹಾಗೂ 'ಯೈಸಿ ನಫ್ರತ್ ತೊ ಕೈಸಾ ಇಷ್ಕ್' ನಲ್ಲಿ ಕೂಡಾ ಅಭಿನಯಿಸಿದರು. ೨೦೧೪ ರಲ್ಲಿ ಅವರು 'ಝಲಕ್ ದಿಖ್ಲಾ ಜಾ' ಎಂಬ ನೃತ್ಯ ಪ್ರದರ್ಶನದಲ್ಲಿ ಸ್ಪರ್ಧಿಯಾಗಿದ್ದರು ಹಾಗೂ ಅದರ ಫೈನಲಿಸ್ಟ್ ಆಗಿ ಕೂಡಾ ಆಯ್ಕೆಯಾಗಿದ್ದರು. ಅವರು ತರಬೇತಿ ಪಡೆದ ಕಥಕ್ ನರ್ತಕಿ ಕೂಡಾ ಆಗಿದ್ದಾರೆ.[೪] ಅವರು ತಮ್ಮ ಬಾಲಿವುಡ್ ವೃತ್ತಿ ಜೀವನವನ್ನು ಮೊಟ್ಟ ಮೊದಲು ಗೋಲ್ಡ್ ಸಿನೆಮಾದಿಂದ ಅಕ್ಷಯ್ ಕುಮಾರ್ ರವರ ಜೊತೆ ಶುರು ಮಾಡಿದರು. [೫]ನಾಗಿನ್ ಸೀಸನ್ ೩ ರ ಅಂತಿಮ ಸರಣಿಯಲ್ಲಿ ಅವರು ಮಹಾ ನಾಗ್ರಾಣಿ ಶಿವಾಂಗಿ ಮತ್ತು ಶಿವನ್ಯಾ ಎಂಬ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ ೨೦೧೯ ರಲ್ಲಿ ರಾಜ್‌ಕುಮಾರ್ ರಾವ್ ಅವರೊಂದಿಗೆ ಮೇಡ್ ಇನ್ ಚೀನಾ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು.[೬][೭]
ಮೌನಿ ರಾಯ್ | |
---|---|
ಜನನ | ೨೮ ಸೆಪ್ಟೆಂಬರ್ ೧೯೮೫[೧] ಕೋಚ್‌ಬಿಹಾರ,ಪಶ್ಚಿಮ ಬಂಗಾಳ,ಭಾರತ[೨] |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಕೇಂದ್ರೀಯ ವಿದ್ಯಾಲಯ,ಕೋಚ್‌ಬಿಹಾರ ಮಿರಾಂದ ಹೌಸ್,ದೆಹಲಿ ವಿಶ್ವವಿದ್ಯಾಲಯ |
ವೃತ್ತಿ(ಗಳು) | ನಟಿ, ಮಾಡೆಲ್ |
ಸಕ್ರಿಯ ವರ್ಷಗಳು | ೨೦೦೭ – ವರ್ತಮಾನ ಕಾಲ |
ಗಮನಾರ್ಹ ಕೆಲಸಗಳು | ನಾಗಿನ್(೨೦೧೫ ರ ಸರಣಿ) |
ಸಂಗಾತಿ |
ಸೂರಜ್ (m. ೨೦೨೨) |
ಜನನ
ಬದಲಾಯಿಸಿಮೌನಿ ಅವರು ೧೯೮೫ನೇ ಸೆಪ್ಟೆಂಬರ್ ೨೮ ರಂದು ರಾಜ್ಬನ್ಸಿ ಎಂಬ ಕುಟುಂಬದಲ್ಲಿ ಪಶ್ಚಿಮ ಬಂಗಾಳದ ಕೋಚ್‌ಬಿಹಾರನ ಗಾಂಧಿ ವಸಾಹತು ಪ್ರದೇಶದಲ್ಲಿ ಜನಿಸಿದರು.[೮] , [೯]
ಆರಂಭಿಕ ಜೀವನ
ಬದಲಾಯಿಸಿಅವರ ಅಜ್ಜ ,ಶೇಖರ್ ಚಂದ್ರ ರಾಯ್ ರವರು ಪ್ರಸಿದ್ಧ ಜಾತ್ರಾ ರಂಗಕಲಾವಿದರಾಗಿದ್ದರು. ಅವರ ತಾಯಿ ಮುಕ್ತಿಯವರು ರಂಗಭೂಮಿ ಕಲಾವಿದರಾಗಿದ್ದು , ಆಕೆಯ ತಂದೆ ಅನಿಲ್ ರಾಯ್ ರವರು ಕೋಚ್‌ಬಿಹಾರ ನಲ್ಲಿ ಜಿಲ್ಲಾ ಪರಿಷತ್ ಕಚೇರಿಯ ಮೇಲ್ವೀಚಾರಕರಾಗಿದ್ದರು . [೧೦] ಅವರು ಕೋಚ್‌ಬಿಹಾರ ನಲ್ಲಿ ಕೇಂದ್ರೀಯ ವಿದ್ಯಾಲಯದಿಂದ ೧೨ ನೇ ತರಗತಿ ತನಕ ತಮ್ಮ ವಿದ್ಯಾಭ್ಯಾಸ ಮಾಡಿದರು .[೧೧]
ದೂರದರ್ಶನಕ್ಕೆ ಪಾದಾರ್ಪಣೆ (೨೦೦೭-೨೦೧೦)
ಬದಲಾಯಿಸಿಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಆಕೆಯ ಪೋಷಕರ ಒತ್ತಾಯದ ಸಂದರ್ಭದಲ್ಲಿ ಅವರು ಮಾಸ್ ಕಮ್ಯೂನಿಕೇಶನ್ ಅಧ್ಯಯನ ನಡೆಸಿದರು . ಅವರು ತಮ್ಮ ಕೋರ್ಸ್ ಅನ್ನು ಅರ್ಧದಲ್ಲಿಯೇ ಬಿಟ್ಟು ಮುಂಬೈಗೆ ಹೋದರು ಮತ್ತು ಸಿನೆಮಾಗಳಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಿದರು . ಅವರು ೨೦೦೪ ರ ರನ್ ಎಂಬ ಚಿತ್ರದಲ್ಲಿ ಹಿನ್ನೆಲೆ ನರ್ತಕಿಯಾಗಿ ನಹಿ ಹೋನಾ ಎಂಬ ಹಾಡಿನಲ್ಲಿ ಕಾಣಿಸಿಕೊಂಡರು . ಮೌನಿಯವರು ೨೦೦೭ ರಲ್ಲಿ ಏಕ್ತಾ ಕಪೂರ್‌ರವರ ಕ್ಯುಂಕಿ ಸಾಸ್ ಭೀ ಕಭಿ ಬಹು ಥೀ ಎಂಬ ಧಾರಾವಾಹಿಯಲ್ಲಿ ಅಭಿನಯಿಸುವುದರ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಝರ ನಚ್ ಕೆ ದಿಖಾ ಎಂಬ ನೃತ್ಯ ಪ್ರದರ್ಶನದಲ್ಲಿ ಜೆನಿಫರ್ ವಿಂಗೆಟ್ ಮತ್ತು ಕರೀಶ್ಮಾ ತನ್ನಾರವರೊಂದಿಗೆ ಭಾಗವಹಿಸಿದರು . ನಂತರ ಮೌನಿ ರಾಯ್‌ಯವರು ಕಸ್ತೂರಿ ಎಂಬ ಧಾರಾವಾಹಿಯಲ್ಲಿ ' ಶಿವಾನಿ ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು . ೨೦೦೯ ರಲ್ಲಿ ಅವರು ಪತಿ ಪತ್ನಿ ಔರ್ ವೊ ಎಂಬ ಧಾರಾವಾಹಿಯಲ್ಲಿ ಗೌರವ್ ಚೋಪ್ರಾರವರ ಜೊತೆ ಹಾಗೂ ೨೦೧೦ ರಲ್ಲಿ 'ದೊ ಸಹೇಲಿಯಾ' ಎಂಬ ಧಾರಾವಾಹಿಯಲ್ಲಿ ’ರೂಪ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು.[೧೨][೧೩]
ದೂರದರ್ಶನದಲ್ಲಿ ಪ್ರಗತಿ ಮತ್ತು ಯಶಸ್ಸು
ಬದಲಾಯಿಸಿ೨೦೧೧ ರಲ್ಲಿ, ಮೌನಿ ಯವರು 'ಹೀರೋ ಹಿಟ್ಲರ್ ಇನ್ ಲವ್' ಎಂಬ ಪಂಜಾಬಿ ಚಲನಚಿತ್ರದಲ್ಲಿ ಅಭಿನಯಿಸಿದರು. ಅವರು ' ದೇವೋಂಕೆ ದೇವ್ ಮಹಾದೇವ್ ' ಎಂಬ ಪೌರಾಣಿಕ ಧಾರವಾಹಿಯಲ್ಲಿ ಸತಿ ಎಂಬ ಪಾತ್ರದಲ್ಲಿ ೨೦೧೧-೨೦೧೪ ರ ಅವಧಿಯ ತನಕ ಕಾಣಿಸಿಕೊಂಡರು .[೧೪] ಇದರ ನಂತರ ಅವರು ಹೆಚ್ಚು ಖ್ಯಾತಿ ಪಡೆದರು. ಹಾಗೂ ೨೦೧೩ ರಲ್ಲಿ ' ಜುನೂನ್-ಐಸಿ ನಫ್ರತ್ ತೊ ಕೈಸಾ ಇಷ್ಕ್ ' ಎಂಬ ಧಾರವಾಹಿಯಲ್ಲಿ ಮೀರಾ ಎಂಬ ಪಾತ್ರವನ್ನು ನಿರ್ವಹಿಸಿದರು .[೧೫] ೨೦೧೫ರಲ್ಲಿ ಮೌನಿ ಯವರು ಏಕ್ತಾ ಕಪೂರ್ ರವರ ಅಲೌಕಿಕ ಸರಣಿಯಾದ ನಾಗಿನ್ ಎಂಬ ಧಾರವಾಹಿಯಲ್ಲಿ ಶಿವನ್ಯಾ ಎಂಬ ಪಾತ್ರದಲ್ಲಿ ಅರ್ಜುನ್ ಬಿಜ್ಲಾನಿ ಮತ್ತು ಆಧಾ ಖಾನ್‌ರವರ ಜೊತೆ ಕಾಣಿಸಿಕೊಂಡರು.[೧೬] ನಾಗಿನ್ ಧಾರಾವಾಹಿಯ ಎರಡನೇ ಭಾಗದಲ್ಲಿ ಶಿವಾಂಗಿ ಎಂಬ ಪಾತ್ರವನ್ನು ನಿರ್ವಹಿಸಿದರು. ಅವರು ಬಾಕ್ಸ್ ಕ್ರಿಕೆಟ್ ಲೀಗ್‌ನಲ್ಲಿ ಅರ್ಜುನ್ ತಂಡದ ಮುಂಬೈ ಟೈಗರ್ಸ್ ಆಟಗಾರರಲ್ಲಿ ಒಬ್ಬರಾಗಿದ್ದರು . ಹಾಗೂ ಆಂಡ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನೃತ್ಯ ಪ್ರದರ್ಶನದಲ್ಲಿ ಅವರು ನಿರೂಪಕಿಯಾಗಿದ್ದರು. ೨೦೧೬ ರಲ್ಲಿ ಮಹಾಯೋಧ ರಾಮ ಎಂಬ ಆನಿಮೇಟೆಡ್ ಚಿತ್ರದಲ್ಲಿ ಸೀತಾ ಪಾತ್ರಕ್ಕಾಗಿ ಧ್ವನಿ ನೀಡಿದರು . ಅದೇ ವರ್ಷದಲ್ಲಿ ಅವರು ತುಮ್ ಬಿನ್ 2 ಎಂಬ ಚಿತ್ರದಲ್ಲಿ ಒಂದು ಐಟಂ ಹಾಡಿನಲ್ಲಿಯೂ ಸಹ ಕಾಣಿಸಿಕೊಂಡರು. ಬಾಲಿವುಡ್ ಚಿತ್ರಗಳಲ್ಲಿ ಬಿಡುವಿರದ ಕಾರಣ ನಾಗಿನ್ 3 ಯಲ್ಲಿ ಮುಖ್ಯ ಪಾತ್ರವನ್ನು ವಹಿಸಲಾಗದಿದ್ದರಿಂದ ಅವರ ಬದಲಾಗಿ ಸುರ್ಭಿ ಜ್ಯೋತಿ ಮತ್ತು ಅನಿತಾ ಹಸ್ನಂದಾನಿಯವರು ಆ ಪಾತ್ರಕ್ಕೆ ಆಯ್ಕೆಯಾದರು.[೧೭]
ಬಾಲಿವುಡ್- ವೃತ್ತಿಜೀವನ
ಬದಲಾಯಿಸಿ೨೦೧೮ ರಲ್ಲಿ ಮೌನಿಯವರು ರೀಮಾ ಕಾಗ್ತೀ ಯವರು ನಿರ್ದೇಶಿಸಿದ ಗೋಲ್ಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ [೧೮]ರವರೊಂದಿಗೆ ಬಾಲಿವುಡ್ ಚೊಚ್ಚಲ ಪ್ರವೇಶ ಮಾಡಿದರು. ಎಯಲ್ಟಿ ಬಾಲಾಜಿ ಯವರ ವೆಬ್-ಸರಣಿ ಮೆಹ್ರುನಿಸ್ಸಾ ಮೂಲಕ ಅವರು ಡಿಜಿಟಲ್ ಜಗತ್ತಿನಲ್ಲಿ ಪ್ರವೇಶ ಪಡೆಯಲಿದ್ದಾರೆ.ಹಾಗೂ ಅವರು ಕೆ.ಜಿ.ಎಫ್ ಚಾಪ್ಟರ್ 1 ಚಲನಚಿತ್ರದಲ್ಲಿ ಐಟಂ ಹಾಡಿನಲ್ಲಿಯೂ ಸಹ ಕಾಣಿಸಿಕೊಂಡರು.[೧೯] ೨೦೨೦ ರಲ್ಲಿ , ಇವರು ಮುಂಬರುವ ಎರಡು ಪ್ರಮುಖ ಯೋಜನೆಗಳನ್ನು ಹೊಂದಿದ್ದಾರೆ; ಅಮೀರ್ ಖಾನ್ ಎದುರು ಮೊಘಲ್ ಮತ್ತು ಅಯಾನ್ ಮುಖರ್ಜಿ ನಿರ್ದೇಶನದ ಭಾರತೀಯ ಸೂಪರ್ ಹೀರೋ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಲಿದ್ದಾರೆ .[೨೦]
ಟಿವಿ ಪ್ರದರ್ಶನಗಳು
ಬದಲಾಯಿಸಿವರ್ಷ | ತಲೆಬರಹ | ಪಾತ್ರ | ನೆಟ್ವರ್ಕ್ |
---|---|---|---|
೨೦೦೬-೨೦೦೮ | ಕ್ಯುಕಿ ಸಾಸ್ ಭಿ ಕಭಿ ಬಹು ಥೀ[೨೧] | ಕೃಷ್ಣತುಳಸಿ | ಸ್ಟಾರ್ ಪ್ಲಸ್ |
೨೦೦೮ | ಜರ ನಚ್ಕೆ ದಿಖಾ[೨೨] | ಸ್ಪರ್ಧಿ | ಸ್ಟಾರ್ ಪ್ಲಸ್ |
ಕಸ್ತೂರಿ (ಟಿವಿ ಸರಣಿ)[೨೩] | ಶಿವಾನಿ ಸಬ್ಬರ್ವಾಲ್ | ಸ್ಟಾರ್ ಪ್ಲಸ್ | |
೨೦೦೯ | ಪತಿ ಪತ್ನಿ ಔರ್ ವೊ (ಟಿವಿ ಸರಣಿ)[೨೪] | ಸ್ಪರ್ಧಿ | ಇಮೇಜಿನ್ ಟಿವಿ |
೨೦೧೦ | ದೊ ಸಹೇಲಿಯಾ[೨೫] | ರೂಪ್ | ಜೀ ಟಿವಿ |
ಶ್...ಫಿರ್ ಕೋಯಿ ಹೆ | ಕೋಯ್ನ | ಸ್ಟಾರ್ ವನ್ | |
೨೦೧೧-೨೦೧೪ | ದೇವೋಂ ಕೆ ದೇವ್...ಮಹಾದೇವ್[೨೬] | ಸತಿ | ಲೈಫ್ ಓಕೆ |
೨೦೧೨-೨೦೧೩ | ಜುನೂನ್ – ಐಸಿ ನಫ್ರತ್ ತೊ ಕೈಸಾ ಇಷ್ಕ್[೨೭] | ಮೀರಾ | ಲೈಫ್ ಓಕೆ |
೨೦೧೪ | ಝಲಕ್ ದಿಖ್ಲಾಜ(ಸೀಸನ್ ೭)[೨೮] | ಸ್ಪರ್ಧಿ | ಕಲರ್ಸ್ ಟಿವಿ |
೨೦೧೫-೨೦೧೭ | ನಾಗಿನ್ (೨೦೧೫ ಟಿವಿ ಸರಣಿ) ಮತ್ತು ನಾಗಿನ್ ೨[೨೯] | ಶಿವನ್ಯಾ ಮತ್ತು ಶಿವಾಂಗಿ | ಕಲರ್ಸ್ ಟಿವಿ |
೨೦೧೬ | ಟಶನ್ ಎ- ಇಷ್ಕ್[೩೦] | ಸ್ವತಃ | ಜೀ ಟಿವಿ |
ಏಕ್ ಥಾ ರಾಜ ಏಕ್ ಥಿ ರಾಣಿ[೩೧] | ಸ್ವತಃ | ಜೀ ಟಿವಿ | |
ಕಾಮಿಡಿ ನೈಟ್ಸ್ ಲೈವ್[೩೨] | ಸ್ವತಃ | ಕಲರ್ಸ್ ಟಿವಿ | |
ಕಾಮಿಡಿ ನೈಟ್ಸ್ ಬಚಾವೊ | ಸ್ವತಃ | ಕಲರ್ಸ್ ಟಿವಿ | |
ಸೊ ಯು ಥಿಂಕ್ ಯು ಕ್ಯಾನ್ ಡಾನ್ಸ್(ಭಾರತ)[೩೩] | ನಿರೂಪಕಿ | ಅಂಡ್ ಟಿವಿ | |
ಝಲಕ್ ದಿಖ್ಲಾಜ 9[೩೪] | ಸ್ಪರ್ಧಿ | ಕಲರ್ಸ್ ಟಿವಿ | |
೨೦೧೭ | ಬಿಗ್ ಬಾಸ್[೩೫] | ಸ್ವತಃ (ಅತಿಥಿ) | ಕಲರ್ಸ್ ಟಿವಿ |
ಇಂಡಿಯಾಸ್ ನೆಕ್ಸ್ಟ್ ಡೆಲ್ ೩[೩೬] | ಅತಿಥಿ | ಎಮ್‌ಟಿವಿ ಇಂಡಿಯಾ | |
ಎಂಟರ್ಟೈನ್ಮೆಂಟ್ ಕಿ ರಾತ್[೩೭] | ಅತಿಥಿ | ಕಲರ್ಸ್ ಟಿವಿ |
ಮ್ಯೂಸಿಕ್ ವೀಡಿಯೋಸ್
ಬದಲಾಯಿಸಿವರ್ಷ | ಶೀರ್ಷಿಕೆ | ಟಿಪ್ಪಣಿ | ಉಲ್ಲೇಖ |
---|---|---|---|
೨೦೨೦ | ಹೋಲಿ ಮೆ ರಂಗೀಲೆ | ವರುಣ್ ಶರ್ಮ ಮತ್ತು ಸನ್ನಿ ಸಿಂಗ್ ರವರ ಜೊತೆಗೆ | [೩೮] |
ಭೀಗಿ ಭೀಗಿ ರಾತೊಮೆ | ನಕಾಶ್ ಅಸೀಸ್ ರವರ ಜೊತೆಗೆ, ಅಜ್ನಬೀ(೧೯೭೪) ನ ಸಿನಿಮಾದ ರಿಮೇಕ್ ಹಾಡು | [೩೯] | |
೨೦೨೧ | ಪತ್ಲಿ ಕಮರಿಯಾ | ತನಿಷ್ಕ್ ಬಚ್ಗಿ , ಸುಖ್ ಇ ಮತ್ತು ಪರಂಪರ ತಂಡನ್ ಈ ಹಾಡನ್ನು ಹಾಡಿದ್ದಾರೆ | [೪೦] |
ನಾಮನಿರ್ದೇಶನ
ಬದಲಾಯಿಸಿವರ್ಷ | ಚಲನಚಿತ್ರ | ಪ್ರಶಸ್ತಿ | ವರ್ಗ | ಫಲಿತಾಂಶ | |
---|---|---|---|---|---|
೨೦೧೮ | ಗೋಲ್ಡ್ (೨೦೧೮ ರ ಸಿನಿಮಾ)[೪೧] | ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ಸ್ | ಲಕ್ಸ್ ಗೋಲ್ಡನ್ ರೋಸ್ ಉದಯೋನ್ಮಖವಾಗಲಿರುವ ಹೊಸ ವರ್ಷದ ಸೌಂದರ್ಯ | ನಾಮನಿರ್ದೇಶನ | |
೨೦೧೯ | — | ಲಯನ್ಸ್ ಗೋಲ್ಡನ್ ಅವಾರ್ಡ್ಸ್ | ಮೋಸ್ಟ್ ಸ್ಟೈಲಿಷ್ ಪರ್ಸನಾಲಿಟಿ | ಗೆಲುವು[೪೨] |
ಅಭಿನಯಿಸಿದ ಚಲನಚಿತ್ರಗಳು
ಬದಲಾಯಿಸಿವರ್ಷ | ತಲೆಬರಹ | ಪಾತ್ರ | ಟಿಪ್ಪಣಿ |
---|---|---|---|
೨೦೦೪ | ರನ್ (೨೦೦೪ ರ ಸಿನಿಮಾ)[೪೩] | ಸ್ವತಃ | ನಹಿ ಹೋನಾ ನಹಿ ಹೋನಾ ಹಾಡಿನಲ್ಲಿ ವಿಶೇಷ ಪಾತ್ರ |
೨೦೧೧ | ಹೀರೋ ಹಿಟ್ಲರ್ ಇನ್ ಲವ್ | ಸಾಹಿಬಾನ್ | ಪಂಜಾಬಿ ಸಿನಿಮಾ |
೨೦೧೬ | ಮಹಾಯೋಧ ರಾಮ[೪೪] | ಸೀತೆ (ಧ್ವನಿ ಪಾತ್ರ) | ಆನಿಮೇಟೆಡ್ ಫಿಲ್ಮ್ |
ತುಮ್ ಬಿನ್ 2[೪೫] | ಸ್ವತಃ | ನಾಚ್ನ ಆವೊಂದ ನಹಿ ಹಾಡಿನಲ್ಲಿ ವಿಶೇಷ ಪಾತ್ರ | |
೨೦೧೮ | ಗೋಲ್ಡ್ (೨೦೧೮ ರ ಸಿನಿಮಾ)[೪೬] | ಮೊನೊಬಿನಾ ದಾಸ್ | |
೨೦೧೮ | ಕೆ. ಜಿ. ಎಫ್. ಅಧ್ಯಾಯ ೧[೪೭] | ಲೂಸಿ | ಗಲಿ ಗಲಿ ಹಾಡಿನಲ್ಲಿ ವಿಶೇಷ ಪಾತ್ರ |
೨೦೧೯ | ರೋಮಿಯೊ ಅಕ್ಬರ್ ವಾಲ್ಟರ್ | ಶ್ರದ್ದಾ ಶರ್ಮಾ/ ಪಾರುಲ್ | ಪತ್ತೆದಾರಿಯಾ ಪಾತ್ರ; ರವೀಂದ್ರ ಕೌಶಿಕ್ ರವರ ಕಥೆಯನ್ನು ಆಧರಿಸಿ |
ಮೇಡ್ ಇನ್ ಚೈನಾ | ರುಕ್ಮಿಣಿ ಮೆಹ್ತಾ | ||
೨೦೨೦ | ಲಂಡನ್ ಕಾನ್ಫಿಡೆನ್ಶಿಯಲ್ | ಉಮಾ ಕುಲ್ಕರ್ಣಿ | ZEE5 ರಿಲೀಸ್ |
೨೦೨೧ | ಬ್ರಹ್ಮಾಸ್ತ್ರ | ದಯಮಂತಿ | ಚಿತ್ರೀಕರಣ |
ಗ್ಯಾಲರಿ
ಬದಲಾಯಿಸಿ-
ಮೌನಿ ರಾಯ್ ಯವರು ೨೦೧೮ ರಲ್ಲಿ ಮನೀಷ್ ಮಲ್ಹೊತ್ರಾ ರವರ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು
-
ಲೈಫ್ ಓಕೆಯ ಜುನೂನ್ ಐಸಿ ನಫ್ರತ್ ನಲ್ಲಿ ಮೌನಿ ರಾಯ್
-
೨೫ ನೇ SOL ಲಯನ್ಸ್ ಗೋಲ್ಡ್ ಅವಾರ್ಡ್ಸ್ ನಲ್ಲಿ ಮೌನಿ ರಾಯ್ ೨೦೧೮
ಅಭಿನಯಿಸಲಿರುವ ಚಲನಚಿತ್ರಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Mouni Roy's birthday celebration". Lehren. Times of India. 29 September 2015. Retrieved 3 March 2016.
- ↑ Agarwal, Stuti (3 September 2013). "Mouni Roy and approached for Nach Baliye 6". Times of India. Retrieved 13 November 2013.[ಶಾಶ್ವತವಾಗಿ ಮಡಿದ ಕೊಂಡಿ]
- ↑ https://wikibio.in/mouni-roy/
- ↑ Mouni Roy,ಟೈಮ್ಸ್ ಆಫ್ ಇಂಡಿಯಾ
- ↑ https://m.imdb.com/name/nm4655028/
- ↑ "'Made in China' first look: Rajkummar Rao and Mouni Roy don a desi avatar for a polaroid picture - Fresh on-screen pairs to look forward to". The Times of India. Retrieved 18 March 2020.
- ↑ DelhiOctober 24, Vibha Maru New; October 28, Vibha Maru New; Ist, Vibha Maru New. "Made In China Movie Review: Rajkummar Rao shines in a hearty made-in-India film". India Today (in ಇಂಗ್ಲಿಷ್). Retrieved 18 March 2020.
{{cite news}}
: CS1 maint: numeric names: authors list (link) - ↑ Mouni Roy, ಟೈಮ್ಸ್ ಆಫ್ ಇಂಡಿಯಾ
- ↑ "Mouni Roy, ViralVilla". Archived from the original on 2019-06-02. Retrieved 2019-07-24.
- ↑ "Mouni Roy".
{{cite web}}
: Cite has empty unknown parameter:|1=
(help) - ↑ https://www.savasher.com/celebrity-actress/mouni-roy-family-wiki-husband-movie/
- ↑ Naagin (2015– ), TV Series, Drama, Fantasy, Mystery, IMDB
- ↑ DelhiOctober 21, Indo-Asian News Service New; October 21, Indo-Asian News Service New; Ist, Indo-Asian News Service New. "Mouni Roy: Made In China is a special piece of my heart". India Today (in ಇಂಗ್ಲಿಷ್). Retrieved 18 March 2020.
{{cite news}}
: CS1 maint: numeric names: authors list (link) - ↑ "Mouni Roy and Mohit Raina from Devon Ke Dev Mahadev - TV celebs who are rumored to be dating in real life". The Times of India. Retrieved 18 December 2019.
- ↑ "junoon aisi nafrat toh kaisa ishq: Latest News, Videos and Photos of junoon aisi nafrat toh kaisa ishq | Times of India". The Times of India. Retrieved 18 December 2019.
- ↑ September 8, India Today Web Desk; September 8, India Today Web Desk; Ist, India Today Web Desk. "Shivanya and Shivangi: Mouni Roy to play both mother and daughter in Naagin 2?". India Today (in ಇಂಗ್ಲಿಷ್). Retrieved 18 December 2019.
{{cite news}}
: CS1 maint: numeric names: authors list (link) - ↑ Mouni Roy Is Major 'Missing' Her Dubai Vacation, Shares Throwback Pics[ಶಾಶ್ವತವಾಗಿ ಮಡಿದ ಕೊಂಡಿ], NDTV, Updated : January 14, 2019
- ↑ "ಕೆಜಿಎಫ್ ಚಿತ್ರದ ನಟಿ ಮೌನಿ ರಾಯ್ ಕಾರಿನ ಮೇಲೆ ಬಿದ್ದ ಕಲ್ಲು, ಆತಂಕಗೊಂಡ ನಟಿ ಮೆಟ್ರೋ ವಿರುದ್ಧ ಹೌಹಾರಿದ್ದೇಕೆ?". Kannadaprabha. Retrieved 18 December 2019.
- ↑ https://m.imdb.com/title/tt6173990/
- ↑ "Mouni Roy on when her 'Brahmastra' look will be out - 'Brahmastra': Interesting facts about the Ranbir Kapoor-Alia Bhatt-Amitabh Bachchan film". The Times of India. Retrieved 18 March 2020.
- ↑ Times of India
- ↑ [merinews Archived 2017-11-14 ವೇಬ್ಯಾಕ್ ಮೆಷಿನ್ ನಲ್ಲಿ.
- ↑ https://www.imdb.com/title/tt6829194/fullcredits/
- ↑ https://www.filmibeat.com/television/news/2009/mouni-roy-debina-fight-290909.html
- ↑ https://indianexpress.com/article/cities/delhi/talkiang-point-with-mouni-roy/
- ↑ https://indianexpress.com/article/entertainment/play/mouni-roy-returns-as-sati-on-devon-ke-dev-mahadev/
- ↑ junoon-aisi-nafrat-toh-kaisa-ishq
- ↑ Times Of India
- ↑ "ಆರ್ಕೈವ್ ನಕಲು". Archived from the original on 2022-11-28. Retrieved 2019-02-26.
- ↑ Telly Chakkar
- ↑ Mouni Roy to perform in Ek Tha Raja Ek Thi Rani
- ↑ Comedy Nights Live
- ↑ So you think you can dance
- ↑ [೧]
- ↑ Bigg Boss 9
- ↑ iwmbuzz
- ↑ indiatoday
- ↑ "Holi Mein Rangeele". www.youtube.com. BLive Music. Retrieved 10 March 2020.
- ↑ Shekhar, Mimansa (6 February 2020). "Top Bollywood songs of February 5: Thappad's Ek Tukda Dhoop, Mouni Roy's Bheegi Bheegi and more". The Indian Express (in ಇಂಗ್ಲಿಷ್). Retrieved 11 March 2021.
- ↑ Panchal, Kinjal (11 March 2021). "Mouni Roy reveals poster of new music video 'Patli Kamariya', says 'get ready to groove'". Republic World (in ಇಂಗ್ಲಿಷ್). Retrieved 11 March 2021.
- ↑ https://indianexpress.com/article/entertainment/bollywood/gold-mouni-roy-audience-reaction-5312991/
- ↑ https://www.filmibeat.com/television/news/2019/lions-gold-awards-winners-list-harshad-chopda-jennifer-winget-surbhi-chandna-sree-others-bag-awards-281672.html
- ↑ Mouni Roy in film Run
- ↑ Mouni Roy has lent her voice to 2D animation film, Mahayoddha Rama
- ↑ Mouni Roy made her Bollywood debut with item song "Nachna Aaonda Nahin" in Tum Bin 2
- ↑ Mouni Roy in Gold Film
- ↑ Moni Roy, ಟೈಮ್ಸ್ ಆಫ್ ಇಂಡಿಯಾ
- ↑ https://www.ndtv.com/entertainment/john-abraham-and-mouni-roys-romeo-akbar-walter-gets-a-release-date-details-here-1976737 NDTV,Updated: January 12, 2019 15:32 IST
- ↑ https://www.ndtv.com/entertainment/brahmastra-mouni-roy-is-the-only-villian-of-ranbir-kapoor-and-alia-bhatts-film-1893654 NDTV,Updated: August 01, 2018 21:04 IST
- ↑ https://timesofindia.indiatimes.com/entertainment/hindi/bollywood/photo-features/fresh-on-screen-pairs-to-look-forward-to/Mouni-Roy-to-star-opposite-Rajkummar-Rao-in-Made-In-China/photostory/64718622.cms Mouni Roy,ಟೈಮ್ಸ್ ಆಫ್ ಇಂಡಿಯಾ
- ↑ https://gangbuzzz.com/mouni-roy-upcoming-movies/[ಶಾಶ್ವತವಾಗಿ ಮಡಿದ ಕೊಂಡಿ] Moni Roy,Gangbuzz