ಮೋಹನ ಚಂದ್ರಗುತ್ತಿ


ಮೋಹನ ಚಂದ್ರಗುತ್ತಿ, ಚಂದ್ರಗುತ್ತಿ ಕನ್ನಡದ ವಿಮರ್ಶಕ ಮತ್ತು ಚಿಂತಕರಾಗಿದ್ದಾರೆ. ಜಾನಪದ ಮತ್ತು ಸಾಂಸ್ಕೃತಿಕ ಅಧ್ಯಯನವು ಇವರ ಕಾರ್ಯಕ್ಷೇತ್ರವಾಗಿದೆ.

ಮೋಹನ ಚಂದ್ರಗುತ್ತಿ
ಡಾ. ಮೋಹನ ಚಂದ್ರಗುತ್ತಿ
ಜನನಚಂದ್ರಗುತ್ತಿ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಕಾವ್ಯನಾಮಮೋಹನ ಚಂದ್ರಗುತ್ತಿ
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ, ಚಿಂತಕರು
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಕುವೆಂಪು ವಿಶ್ವವಿದ್ಯಾನಿಲಯ
ಕಾಲ೨೧ನೆಯ ಶತಮಾನ
ಪ್ರಕಾರ/ಶೈಲಿವಿಮರ್ಶೆ
ವಿಷಯಜಾನಪದ ಮತ್ತು ಸಾಂಸ್ಕೃತಿಕ ಅಧ್ಯಯನ
ಪ್ರಮುಖ ಪ್ರಶಸ್ತಿ(ಗಳು)ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ, ರಾಜ್ಯದ ಅತ್ಯುತ್ತಮ ಅಧಿಕಾರಿ ಪ್ರಶಸ್ತಿ
ಬಾಳ ಸಂಗಾತಿಸುಮಿತ್ರಾ
ಮಕ್ಕಳುಹರ್ಷ ವರ್ಧನ, ಶಿಶಿರವರ್ಷ

ಶಿಕ್ಷಣ

ಬದಲಾಯಿಸಿ

ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಚಂದ್ರಗುತ್ತಿಯಲ್ಲಿ ಮುಗಿಸಿ, ಸೊರಬದಲ್ಲಿ ಪಿಯುಸಿ, ಲಾಲ್ ಬಹದ್ದೂರ್ ಕಾಲೇಜು, ಸಾಗರದಲ್ಲಿ ಪದವಿ, ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯ. ಶಂಕರಘಟ್ಟದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಗಳಿಸಿದ್ದಾರೆ.

ವೃತ್ತಿಜೀವನ

ಬದಲಾಯಿಸಿ

ಈಗ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 09 ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದಿದ್ದು, ಪ್ರಸ್ತುತ 06 ವಿದ್ಯಾರ್ಥಿಗಳು ಸಂಶೋಧನೆ ಮಾಡುತ್ತಿದ್ದಾರೆ, ಇದುವರೆಗೂ ಇವರ 60 ಪ್ರಬಂಧಗಳು ಪ್ರಕಟವಾಗಿವೆ, 30ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ಟೀಯ ವಿಚಾರಸಂಕಿರಣದಲ್ಲಿ ಮಂಡಿಸಿದ್ದಾರೆ, ರಾಜ್ಯದ ಹಲವು ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗಿದೆ, ರಾಷ್ಟ್ರೀಯ, ರಾಜ್ಯ ಮಟ್ಟದ ಹಲವು ಕಮ್ಮಟಗಳನ್ನು ಸಂಘಟಿಸಿದ್ದಾರೆ. ನಾಡಿನಾದ್ಯಂತ ಸಾವಿರಾರು ವಿಚಾರ ಪ್ರಚೋದಕ ಉಪನ್ಯಾಸಗಳನ್ನು ನೀಡಿದ್ದಾರೆ.

ಕೃತಿಗಳು

ಬದಲಾಯಿಸಿ
  1. ದೀವರ ಮಕ್ಕಳು
  2. ದೇವರಾಜ ಅರಸು
  3. ಮುಕ್ರಿಗಳು
  4. ಸಮಪಾಲು
  5. ಸುರಗಿದಂಡೆ
  6. ಕುಲಕಥನ
  7. ಹಸೆ ಚಿತ್ತಾರ
  8. ಜೇಡಜಾಲ
  9. ಡೊಳ್ಳಿನ ಪದಗಳು
  10. ಬೆಳಕು ಬೆಳದ ಕಥನ
  11. ಚಂದ್ರಗುತ್ತಿ ಜಾತ್ರೆ
  12. ನೆಲದ ತವಕ
  13. ಪಂಚಪಾತ್ರೆಯ ಹುಡುಗಿ ಮತ್ತು ಇತರ ಕಥೆಗಳು
  14. ನಾರಾಯಣ ಗುರುಗಳು

ಹೊರಗಿನ ಸಂಪರ್ಕಗಳು

ಬದಲಾಯಿಸಿ